You can edit almost every page by Creating an account and confirming your email.

Hirebelaguli History

From EverybodyWiki Bios & Wiki

ಕೋಟ್ಯಂತರ ವರ್ಷಗಳ ಹಿಂದೆ ನಭೋ ಮಂಡಲದಲ್ಲಿ ಒಂದು ಮಹಾಸ್ಪೋಟ ಉಂಟಾಗಿ ಆಕಾಶ ಕಾಯವು ಛಿದ್ರಗೊಂಡು ಆಕಾಶ, ಗಾಳಿ, ನೀರು, ಭೂಮಿ, ಸೂರ್ಯ ಎಂಬ ಪಂಚ ಭೂತಗಳು ಸೃಷ್ಟಿಯಾಗಿದೆ ಎಂದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ.ಹೀಗೆ ಪ್ರಪಂಚ ಸೃಷ್ಟಿಯಾದ ನಂತರದಲ್ಲಿ ಶಾಖ, ನೀರು, ಗಾಳಿ ಇವುಗಳ ಸಂಯೋಜನೆಯಿಂದ ಭೂಮಿಯ ಬಂಡೆಗಳ ಮೇಲೆ ‘ಪಾಚಿ ಶೀಲಾವಲ್ಕಗಳೆಂಬ’ ಜೀವ ಕೋಶಗಳು ಹುಟ್ಟಿಕೊಳುತ್ತವೆ. ಇದರಿಂದ ಪ್ರಾರಂಭವಾದ ಜೀವಿಗಳ ಪರಿವರ್ತನೆಯು ಸಾವಿರಾರು ವರ್ಷಗಳ ಕಾಲ ವಿಕಾಸ ಹೊಂದಿ ವಿವಿಧ ಜೀವಿಗಳ ಮೂಲದಿಂದ ಅಂತಿಮವಾಗಿ ಮಾನವನ ಉಗಮವಾಗಿದೆ ಎಂಬುದು ಇತಿಹಾಸ ಮೂಲಗಳಿಂದ ತಿಳಿದು ಬಂದಿರುತ್ತದೆ . ಭೂಮಿಯ ಮೇಲೆ ಆದಿ ಮಾನವನ ಜೀವನ ಕ್ರಮವು ಪ್ರಾರಂಭವಾಗುವುದಕ್ಕೂ ಮುನ್ನ ಅಲ್ಲಲ್ಲಿ ಕೆಲವು ರಾಕ್ಷಸರು ಹುಟ್ಟಿಕೊಂಡು ಮಾನವನ ಕುಲದ ವಿಕಾಸಕ್ಕೆ ಕಂಟಕ ಪ್ರಾಯವಾಗುತ್ತದೆ ಇದರಿಂದ ಭಕ್ತಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ಮನುಕುಲವು ವಿನಾಶದ ಹಾದಿ ಹಿಡಿಯುತ್ತದೆ. ಇದರಿಂದ ಆತಂಕಗೊಂಡ ಕೈಲಾಸ ಪತಿ ಯಾದ ಶ್ರೀ ವಿಷ್ಣು ಬೇರೆ ಬೇರೆ ಯುಗ ಗಳಲ್ಲಿ ವಿವಿಧ ಅವತಾರಗಳನೆತ್ತಿ ದುಷ್ಟ ಸಂಹಾರ ಮಾಡಿದ್ದನ್ನು 'ಋಷಿ' ಮುನಿಗಳಿಂದ ರಚಿತವಾಗಿರುವ ಪುರಾಣ ಕಥೆಗಳಿಂದ ತಿಳಿದು ಬಂದಿರುತ್ತದೆ: ದುಷ್ಟ ಸಂಹಾರವಾದ ನಂತರದಲ್ಲಿ ಭೂಮಿಯ ಮೇಲೆ ಮಾನವನ ಸಂತತಿಯು ಉಳಿದು ಬೆಳೆಯಲು ನಾಂದಿ ಯಾಗುತ್ತದೆ.ಮಾನವನ ವಿಕಾಸವು ಸಿಂಧು ನದಿ ಕಣಿವೆಯ ನಾಗರಿಕತೆಯಿಂದ ಪ್ರಾರಂಭವಾಗಿದ್ದರಿಂದ ಹಿಂದೂದೇಶ ವೆಂದು ರೂಪುಗೊಂಡು ಇಲ್ಲಿನ ನಿವಾಸಿಗಳು ಹಿಂದೂಗಳೆಂದು ಕರೆಯಲ್ಪಡುತ್ತಾರೆ. ಇವರುಗಳು ತಮ್ಮ ಕಷ್ಟ ತೊಂದರೆಗಳಿಗೆಲ್ಲ ಹೆಚ್ಚಾಗಿ ಶ್ರೀ ಪಾರ್ವತಿ ದೇವಿಯನ್ನು ವಿವಿಧ ರೂಪದಲ್ಲಿ ತಮ್ಮ ಶಕ್ತಿ ದೇವತೆಯಾಗಿ ನಂಬಿಕೆ ಭಕ್ತಿಯಿಂದ ಆರಾಧಿಸಿರುತ್ತಾರೆ. ಕೈಲಾಸ ಪತಿಯಿಂದ ದುಷ್ಟ ಸಂಹಾರವಾದರೂ ಸಹ ಮಾನವರಲ್ಲಿ ಹೆಚ್ಚಾಗಿ ಹಿಂದೂಗಳಲ್ಲಿ ಸಾಮೂಹಿಕ ಪಿಡುಗುಗಳಾದ ಅಧರ್ಮ, ಅಜ್ಞಾನ, ಅನಾಚಾರ, ಧರಿದ್ರ್ಯ, ಮೂಡನಂಬಿಕೆ ಮತ್ತು ಸಾಂಕ್ರಾಮಿಕ ರೋಗಗಳೆಂಬ ಧೈತ್ಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡಿರುತ್ತದೆ. ಇದರಿಂದ ದೈವದ ಮೇಲೆ ಭಕ್ತಿ ಕಡಿಮೆಯಾಗಿ ಜನರಲ್ಲಿ ಲೌಕಿಕ ವಿಕಾಸವು ನಿಂತ ನೀರಾಗುತ್ತದೆ. ಆದಕಾರಣ ಮಾನವ ಸಂತತಿಯು ವಿನಾಶದ ಹಾದಿ ಹಿಡಿದಿರುವ ಸರಿಸ್ಥಿತಿಯನ್ನು ತಿಳಿದ ಪರಶಿವನು ರಾಣಿಯಾದ ಶ್ರೀ ಪಾರ್ವತಿ ದೇವಿಯವರು ಮಾನವರಲ್ಲಿ ಈ ಜ್ವಲಂತ ಸಮಸ್ಯೆಗಳಿಗೆ ಆತಂಕಪಟ್ಟು ದೈವ ಭಕ್ತಿ, ಶಾಂತಿ, ನೆಮ್ಮದಿ, ಉತ್ಸಾಹ ದಿಂದ ಜೀವನ ಮಾಡುವ ಅವಕಾಶಗಳನ್ನು ಕಲ್ಪಿಸುವ ಸಂಕಲ್ಪ ಮಾಡಿ ತಮ್ಮ ಪರಿಚಾರಕೀಯರ ಪೈಕಿ ಅರ್ಹರಾದ 7 ಜನ ಕನ್ಯಯರಿಗೆ ಸರ್ವ ಶಕ್ತಿಯನ್ನು ಕೊಟ್ಟಿ ಸಪ್ತ ಮೂಲಕೇಯರು ಎಂದು ಸೃಷ್ಟಿ ಮಾಡಿ ನೀವುಗಳು ಭೂಲೋಕಕ್ಕೆ ಹೋಗಿ ಸ್ಥಳ, ಸನ್ನಿವೇಶ ಅಲ್ಲಿನ ಮಾನವರಲ್ಲಿರುವ ಆಚಾರ, ವಿಚಾರ, ನಂಬಿಕೆ ಪದ್ದತಿಗೆ ಅನುಸ್ಟಾರವಾಗಿ ಬೇರೆಬೇರೆ ಹೆಸರುಗಳಿಂದ ಶೀಲಾ ರೂಪದಲ್ಲಿ ನೆಲೆಯಾಗಿ, ಆರಾಧಿಸಿಕೊಳ್ಳುತ್ತಾ ಅಲ್ಲಿನ ಎಲ್ಲಾ ಸಮಸ್ಯೆ ತೊಂದರೆಗಳಿಗೆ ಸ್ಪಂದಿಸುತ್ತಿರ ಬೇಕೆಂದು ಆದೇಶ ಮಾಡಿ ಅಂಬಿಕಾ ಎಂಬ ಕನ್ಯಾ ಮಣಿಯನ್ನು ಮುಂದಿಟ್ಟು ಉಳಿದ ಆರು ಜನರನ್ನು ಈಕೆಯ ಸಂಗಡ ಕಳುಹಿಸಿಕೊಟ್ಟ ಮೇರೆಗೆ ಏಳು ಜ್ಯೋತಿ ರೂಪ ದಲ್ಲಿ ಇಹಲೋಕಾಭಿಮುಖವಾಗಿ ಹೊರಡುತ್ತಾರೆ. ಇತ್ತ ಭೂಲೋಕದ ದಕ್ಷಿಣ ಕರಾವಳಿ ತೀರದ ಕೊಂಕಣ ಸೀಮೆಯಲ್ಲಿ ಒಬ್ಬ ಬೇಡನು ಹುಟ್ಟಿಕೊಂಡು ಮೂಡ ನಂಬಿಕೆಯಿಂದ, ಸಿಕ್ಕಿದ ಜನರನ್ನು ಕೊಲ್ಲುವುದು, ಅವರಿಂದ ದೋಚಿಕೊಂಡು ತಂದು ಜೀವನ ಮಾಡುತ್ತಿರುತ್ತಾನೆ. ಈತನ ತೊಂದರೆ ಯನ್ನು ಸಹಿಸಲಾರದೆ ನಿಗ್ರಹಕ್ಕಾಗಿ ಪ್ರತಿ ದಿನವೂ ಶಕ್ತಿ ದೇವತೆಗೆ ಮೊರೆಯಿಡುತ್ತಾರೆ. ಇದೇ ಸಂಧರ್ಭದಲ್ಲಿ ಕೈಲಾಸದಿಂದ ಹೊರಟ ಸಪ್ತ ಮಾಲಿಕೆಯರುಗಳು ಮೊದಲು ಈ ಸ್ಥಳಕ್ಕೆ ಬಂದು ತಲುಪುತ್ತಾರೆ ಇಲ್ಲಿಗೆ ಬಂದ ನಂತರ ಮೊದಲು ಬೇಡನನ್ನು ಬೇಟಿಮಾಡಿದ ಅಂಬಿಕಾ ದೇವಿಯು ಬಗೆಬಗೆಯಾಗಿ ಉಪದೇಶ ಮಾಡಿ ಕ್ರಮೇಣ ಪರಮ ಭಕ್ತನನ್ನಾಗಿ ಪರಿವರ್ತಿಸಿ ಹಿಂಸಾ ಮಾರ್ಗವನ್ನು ಬಿಟ್ಟು ಮನುಷ್ಯ ನಾಗುತ್ತಾನೆ ಇದರಿಂದ ಈತನ ಆತಂಕ ತಪ್ಪುತ್ತದೆ. ಈ ಕಾರಣಕ್ಕೆ ಕೊಲ್ಲುತ್ತಿದ್ದ ಊರು ‘ಕೊಲ್ಲೂರು' ಎಂದು ಕರೆದಿರುತ್ತಾರೆ. ದುಶ್ಚಟವನ್ನು ಮೂಕ ಪ್ರೇತನನ್ನಾಗಿ ಪರಿವರ್ತನೆ ಮಾಡಿದ ಪ್ರೇರಣೆಯಿಂದ ಮೂಕ+ಅಂಬಿಕೆ = ಮೂಕಾಂಬಿಕೆ ಎಂತಲೂ ನೆಲಸಿ ಪ್ರಸಿದ್ದಿಯನ್ನು ಪಡೆದು ಇಂದು ಈ ಬಾಗದ ಜನರ, ರಾಜಕಾರಣಿಗಳ, ಕಲಾವಿದರ, ಆರಾಧ್ಯ ಧೈವವಾಗಿ ನೆಲೆಸಿರುತ್ತಾಳೆ. ಇದಾದ ನಂತರ ಉಳಿದ ಆರು ಜನ ಮಾಲಿಕೆಯರು ಕರ್ನಾಟಕದ ಆರು ದಿಕ್ಕುಗಳನ್ನು ಹಿಡಿದು ಹೊರಟು ಸ್ತ್ರೀ ಹೆಸರಿನ ಮುಖ್ಯ ನದಿ ಪಾತ್ರದ ಮುಖ ಜಾಲ ಸೀಮೆಗಳಲ್ಲಿ ನೆಲೆಯಾಗಿ ತಮ್ಮ ಶಕ್ತಿ ಪವಾಡಗಳಿಂದ ಆ ಸ್ಥಳದ ಜನರ ಎಲ್ಲಾ ತೊಂದರೆ, ಕಷ್ಟಗಳನ್ನು, ಪರಿಹಾರ ಮಾಡಿ ನಂಬಿಕೆ, ಧೈವ ಭಕ್ತಿ ನೆಲೆಯಾಗುವಂತೆ ಸಂಕಲ್ಪಮಾಡಿ ಹೊರಟವರಲ್ಲಿ ಮೂರನೇ ಮಾಲಿಕೆಯು ಅಲ್ಲಿಂದ ಉತ್ತರಾಭಿಮುಖವಾಗಿ ಹೊರಟು ಹೇಮಾವತಿ ನದಿ ತೀರದ ಈಗಿನ ಹಿರೇಬೆಳಗುಲಿ ಎಂಬ ಗ್ರಾಮಕ್ಕೆ ಆಗಮನವಾಗಿದ್ದು ಊರಿನ ಗಡಿ ಪ್ರದೇಶಕ್ಕೆ ಬಂದನಂತರ ಗ್ರಾಮದ ಒಳಕ್ಕೆ ಪ್ರವೇಶ ಮಾಡಿದ ಕ್ರಮವು ಬಹಳ ಕುತೂಹಲ ಕಾರಿಯಾಗಿರುವ ಬಗ್ಗೆ ………… ವಿವರವಾಗಿ ತಿಳಿಸಲಾಗಿರುತ್ತದೆ

ಹನ್ನೊಂದನೇ ಶತಮಾನದ ಆದಿಭಾಗದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗಲೂ ಕ್ಷಾಮ, ಅಭಾವಗಳು, ಸಾಂಕ್ರಾಮಿಕ ರೋಗಗಳು ಮನುಷ್ಯರನ್ನು ಮತ್ತು ಜಾನುವಾರುಗಳನ್ನು ಬಲಿತೆಗೆದುಕೊಳ್ಳುತ್ತಿದ್ದೆವು, ಆವತ್ತಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಮದ್ದುಗಳು ಇನ್ನೂ ಆವಿಷ್ಕಾರ ಗೊಂಡಿರಲಿಲ್ಲದ ಕಾರಣ ಜನರು ಮೂಡ ನಂಬಿಕೆಯಿಂದ ಹಾದಿ ಬೀದಿಯ ಮಾರಿ ಮಸಣಿಯರನ್ನು ಕರೆದು ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸುವುದು, ಶಾಸ್ತ್ರ ಕೇಳಿ ಪೂಜೆ ಹಾಕಿಸುವುದು ಮಾಡುತ್ತಿದ್ದರಿಂದ ತೊಂದರೆಗಳು, ರೋಗಗಳು ನಿಯಂತ್ರಣಕ್ಕೆ ಬಾರದೆ ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಸಾವಿಗೆ ತುತ್ತಾಗುತ್ತಿದ್ದವು. ಇದರಿಂದ ಪ್ರಕೃತಿಯ ಸಮತೋಲನವು ತಪ್ಪುತ್ತಾ ಬರುತ್ತದೆ.ಈ ಪರಿಸ್ಥಿತಿಯಲ್ಲಿ ಜನರಲ್ಲಿ ಭಯ, ಭೀತಿ, ಧಾರಿದ್ರ್ಯ ಹೆಚ್ಚಾಗುತ್ತದೆ ನೆಮ್ಮದಿಯಾಗಿ ಜೀವನ ಮಾಡಲು ಆಸೆ, ಉತ್ಸಾಹಗಳು ಇರುತ್ತಿರಲಿಲ್ಲವಾದ ಕಾರಣ ಕೆಲವರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗುತ್ತಿದ್ದರು ದೈರ್ಯಮಾಡಿ ಉಳಿದವರು ಕೂಲಿ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದ್ದಿತ್ತು ಆಗಿನ ಕಾಲದಲ್ಲಿ ಹತ್ತಿರದಲ್ಲಿ ಅಂಗಡಿಗಳಾಗಲಿ, ಪೇಟೆಗಳಾಗಲಿ ಇರುತ್ತಿರಲಿಲ್ಲದ ಕಾರಣ ತಾವು ಬೆಳೆದ ರಾಗಿ ನವಣೆ, ಹುರುಳಿ, ಮುಂತಾದ ಕೃಷಿ ಉತ್ಪನ್ನಗಳನ್ನು ಅಲ್ಲಲ್ಲಿ ಸೇರುತ್ತಿದ್ದ ವಾರದ ಸಂತೆಗಳಲ್ಲಿ ಸರಕು ವಿನಿಮಯ ಮಾಡಿಕೊಳ್ಳುವುದು ಸಾಗಿಕೊಂಡು ಬರುತ್ತಿತ್ತು. ಇಂದಿಗೆ ಇಪ್ಪತೊಂದನೆ ತಲೆಮಾರಿನವರಾದ ಈ ಗ್ರಾಮದ ಹಿರಿಯರಾಗಿದ್ದ ಶ್ರೀ ಹಲಗೇಗೌಡ ಎಂಬುವವರು ಇದ್ದವರ ಪೈಕಿ ಧೃದಕಾಯಾಕರು, ಧೈವ ಭಕ್ಟರು,ವ್ಯವಹಾರ ಚತುರರು ಆಗಿದ್ದರು. ಆ ಕಾಲದಲ್ಲಿ ಇಲ್ಲಿ ಬೆಳೆಯುತ್ತಿದ್ದ ರಾಗಿ, ಹುರುಳಿ, ನವಣೆ, ಅವರೇ ಮುಂತಾದ ಧಾನ್ಯಗಳನ್ನು ವ್ಯಾಪಾರ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು.ಮಾಮೂಲಿನಂತೆ ಒಂದು ಗುರುವಾರ ದಿನ, ಇಲ್ಲಿಗೆ ನಾಲ್ಕು ಮೈಲಿ ದೂರದ ಗುಡ್ಡದ ತಪ್ಪಲಿನ ಈಗಿನ ಕುಂಚೇವು ಎಂಬ ಗ್ರಾಮದ ಹತ್ತಿರ ವಿಶಾಲವಾದ ಮೈದಾನದಲ್ಲಿ ಸೇರುತ್ತಿದ್ದ ಸಂತೆಗೆ ಕಾಲುನಡಿಗೆಯಲ್ಲಿ ರಾಗಿ ಚೀಲವನ್ನು ಹೊತ್ತುಕೊಂಡು ಹೋಗುತಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿಗಳಾಗಲಿ, ಇತರೆ ವಾಹನಗಳು ಆವಿಷ್ಕಾರ ಗೊಂಡಿರಲಿಲ್ಲವಾದ್ದರಿಂದ ಕಾಲ್ನಡಿಗೆ ಅನಿವಾರ್ಯವಾಗಿತ್ತು. ಆ ದಿನದ ಸಂತೆಯಲ್ಲಿ ಗೌಡರ ಮಾಲು ಪೂರ ಖರ್ಚಾಗದೆ ಉಳಿದು ಬಿಡುತ್ತದೆ : ಉಳಿದಿದ್ದ ರಾಗಿ ಚೀಲವನ್ನು ಹೊತ್ತುಕೊಂಡು ಊರು ಕಡೆಗೆ ವಾಪಸ್ಸು ಬರಲು ಸ್ವಲ್ಪ ತಡವಾಗುತ್ತದೆ.ನಮ್ಮ ಗ್ರಾಮಕ್ಕೆ ಹತ್ತಿರದ ಈಗಿನ ಕೆರೆಕೋಡಿ ಇರುವ ಜಾಗವು ತುಂಬಾ ತಗ್ಗು ಪ್ರದೇಶಾಗಿತ್ತು ಆಗ ಕೆರೆ ಇರಲಿಲ್ಲ ಬೆಟ್ಟದ ತಪ್ಪಲಿನಿಂದ ಹುಟ್ಟಿದ ಒಂದು ನೀರಿನ ಹಳ್ಳ ಹರಿಯುತಲಿದ್ದಿತ್ತು ಈ ಜಾಗಕ್ಕೆ ಹಲಗೆ ಗೌಡರು ರಾಗಿ ಚೀಲವನ್ನು ಕೆಳಕ್ಕೆ ಇಟ್ಟು ಬಹಿರ್ದೆಶೆಗೆ ಹೋಗಿ ಬಂದು ದೇಹ ಶೌಚಮಾಡಿಕೊಂಡು ಹಳ್ಳದ ಸ್ವಲ್ಪ ಮೇಲುಭಾಗಕ್ಕೆ ಹೋಗಿ ಮುಖ ಕೈಕಾಲು ತೊಳೆದುಕೊಂಡು ನೀರನ್ನು ತಲೆಮೇಲಕ್ಕೆ ಪ್ರೋಕ್ಷಣೆ ಮಾಡಿಕೊಂಡು ಮನೆಕಡೆಗೆ ಹೊರಡುವುದು ಇವರ ಮಾಮೂಲಿ ಪದ್ದತಿಯಾಗಿತ್ತು ಈ ದಿನವೂ ಅದೇ ನಿಯಮಗಳನ್ನೆಲ್ಲ ಮಾಡಿಕೊಂಡು ಚೀಲವನ್ನು ಹೆಗಲಿಗೇರಿಸಿ ಹೊರಡಲು ಸಿದ್ದರಾದಾಗ ‘ನಾನು ಬರುತ್ತೇನೆ' ಎಂಬ ಅಶರೀರವಾಣಿಯು ಕೇಳಿ ಬರುತ್ತದೆ ಹಿಂದಿನ ವಾರಗಳಲ್ಲಿ ಈ ಜಾಗಕ್ಕೆ ಬಂದಾಗ ಈ ಅನುಭವ ಆಗಿರುವುದಿಲ್ಲ; ಈಗ ಗೌಡರು ಸ್ವಲ್ಪ ಧೈರ್ಯಗೆಡುತ್ತಾರೆ. ಸುತ್ತಲೂ ಕತ್ತಲು ಆವರಿಸಿದೆ ನರ ಸಂಚಾರವಿಲ್ಲ ಅಲ್ಲಲ್ಲಿ ಜೀರುಂಡೆಗಳ ಜೂಕರ, ನರಿಗಳು ಗುಳಿಡುವಿಕೆ, ಗೂಬೆಗಳು ಉಲಿಯುವಿಕೆ ಮರಗಳ ಮೇಲೆ ಬಾವುಲಿಗಳ ನಲಿಯುವಿಕೆ. ಇವುಗಳು ಮಾಮೂಲಿನ ಶಕುನಗಳು; ಆದರೆ ಈ ದಿನ ಈ ವಿಸ್ಮಯದಿಂದ ಭಯವುಂಟಾಗುತ್ತದೆ ಸ್ವಲ್ಪ ಕಣ್ಣು ಕವಿದಂತಾಗುತ್ತದೆ ಮೈ ಬೆವರುತ್ತದೆ, ಪುನ ಅದೇವಾಣಿಯು ಹಳ್ಳದ ಮೇಲುಭಾಗದಿಂದ ಕೇಳಿಬರುತ್ತದೆ ಇವರ ಪರಿಸ್ಥಿತಿಯನ್ನು ಅರಿತ ಆಗಂತಕರು, ಗೌಡರೇ ಹೆದರ ಬೇಡಿ ನಾನು ಒಬ್ಬ ರಕ್ಷಾದೇವತೆ ಕೊಂಕಣ ದೇಶದಿಂದ ಇಲ್ಲಿಗೆ ಬಂದಿರುತ್ತೇನೆ, ಈ ಮದ್ಯೆ ಎಲ್ಲೂ ಸರಿಯಾದ ನೆಲೆ ಸಿಗದೆ ಹೋದಕಾರಣ ಶರಣರು ಮುಟ್ಟಿದ ನಿಮ್ಮ ಗ್ರಾಮವು ಪವಿತ್ರ ತಾಣವೆಂದು ಇಲ್ಲಿಗೆ ಬಂದಿರುತ್ತೇನೆ ಹರಿಯುತ್ತಿರುವ ಹಳ್ಳದ ಬಲಭಾಗದ ನೀರಿನ ದಡದ ಮೇಲೆ ಮೂರು ರೂಪಿತ ಕಪ್ಪು ಶಿಲೆಗಳೊಳಗೆ ಜ್ಯೋತಿ ರೂಪದಲ್ಲಿ ಲೀನಳಾಗಿರುತ್ತೇನೆ ಬಹಳ ಹೊತ್ತಿನಿಂದ ಇಲ್ಲಿಗೆ ಬಂದು ಕಾದು ಕುಳಿತ್ತಿದ್ದೇನೆ, ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ ನಿಮ್ಮ ನಿಯಮಗಳಿಂದ ಆಚಾರವಂತರು, ಧೈವ ಭಕ್ತರು ಆಗಿರುವುದನ್ನು ಮನಗಂಡು ನಿಮ್ಮ ಮುಖಾಂತರ ಗ್ರಾಮದ ಒಳಗೆ ಪ್ರವೇಶಿಸಿ ನೆಲೆಯಾಗಿರಲು ಆಪೇಕ್ಷೇಪಟ್ಟು ಬಂದಿರುತ್ತೇನೆ; ನಿಮ್ಮ ಗ್ರಾಮವು ಪವಿತ್ರ ನದಿ ಉತ್ತಮ ಪರಿಸರ ಋಷಿ ಮುನಿಗಳ ತಪೋಭೂಮಿಯಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಗಿರಬಹುದು ಹಾಗೂ ಶಾಂತಿ ಪ್ರೀಯರೆಂದು ಊಹಿಸಿರುತ್ತೇನೆ; ಆದ್ದರಿಂದ ಇಲ್ಲಿ ನೆಲಸಿ ಜನ, ಜಾನುವಾರುಗಳ ನೆಮ್ಮದಿಗೆ ಮಾರಕವಾಗಿರುವ ದುಷ್ಟಮಾರಿಗಳನೆಲ್ಲ ಹೊರಕ್ಕೆ ಹಾಕಿ ದಾರಿದ್ರ್ಯವನ್ನು ದೂರ ಮಾಡಿ ಗ್ರಾಮದಲ್ಲಿ ಸುಖ, ಶಾಂತಿ ನೆಲಸುವಂತೆ ಮಾಡುವ ಸಂಕಲ್ಪದಿಂದ ಬಂದಿರುತ್ತೇನೆ; ನನ್ನ ವಿವಿಧ ಶಕ್ತಿಗಳ ಸಂಕೇತವಾಗಿರುವ ಈ ಮೂರು ಶೀಲಾಮೂರ್ತಿಗಳನ್ನು ಸಂತೆಯಿಂದ ಉಳಿದು ತಂದಿರುವ ರಾಗಿ ಚೀಲದೊಳಕ್ಕೆ ಇಟ್ಟು, ತೆಗದುಕೊಂಡು ಹೋಗಿ ನಿಮ್ಮ ಮನೆಯಲ್ಲಿ ಅದೇ ಚೀಲದ ಒಳಗಡೆ ಇಡಬೇಕು ಈ ವಿಚಾರ ರಾತ್ರಿ ಇಡೀ ಗುಪ್ತವಾಗಿರಬೇಕು. ನಂತರ ನನ್ನಲಿರುವ ಮೂರು ಶಕ್ತಿಗಳ ಮಹತ್ವವನ್ನು ತಿಳಿಸುತ್ತೇನೆ ಎಂಬ ಅಭಯವಾಣಿ ಕೇಳಿಬಂದ ಮೇಲೆ ಧೈವ ಪ್ರೇರಣೆಯಾದಂತೆ ಧೈರ್ಯ, ಭಕ್ತಿ ವುಂಟಾಗುತ್ತದೆ, ಆ ದಿನ ಜೇಷ್ಠ ಮಾಸದ ಶುಕ್ಲಪಕ್ಷ ಷಷ್ಠಿ ದಿನವಾಗಿದ್ದರಿಂದ ಚಂದ್ರನ ಹೊಂಬೆಳಕಿನೊಂದಿಗೆ ಪ್ರಕಾಶಿಸುತ್ತಿದ್ದ ನಕ್ಷತ್ರಗಳ ಕುಡಿಬೆಳಕಿನಲ್ಲಿ ಮಿಣುಕು ಹುಳಗಳ ತುಣುಕು ಬೆಳಕಿನಂತೆ ಹೊಳೆಯುತ್ತಿದ್ದ ಶಿಲಾರೂಪದಲ್ಲಿದ್ದ ದೇವಿಯ ಹತ್ತಿರಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಅಪ್ಪಣೆಯಾಗಿದ್ದಂತೆ ಮೂರು ಪ್ರತಿಮೆಗಳನ್ನು ಮೇಲಕ್ಕೆತ್ತಿ ರಾಗಿ ಚೀಲದಲ್ಲಿ ಇಟ್ಟುಕೊಂಡು ತಮ್ಮ ಮನೆಗೆ ಆಹ್ವಾನಿಸುತ್ತಾರೆ ಮತ್ತು ಬೆಳಕಾಗುವವರೆಗೂ ಈ ವಿಚಾರವನ್ನು ನಿಗುಡವಾಗಿ ಇಡುತ್ತಾರೆ. ಮನೆಗೆ ಬಂದ ನಂತರ ಶ್ರೀ ಹಲಗೇಗೌಡರಿಗೆ ಭಯ, ಆತಂಕ ಹಾಗೂ ದಿಗುಲು ಉಂಟಾಗುತ್ತದೆ; ಕಾರಣ ದಾರಿಯಲ್ಲಿ ಹೋಗುತ್ತಿದ್ದ ಯಾವನೋ (ಮಾರಿಯನ್ನು ಮನೆಗೆ ಕರೆದುಕೊಂಡು ಬಂದಿರುವುದರಿಂದ ಮುಂದೆ ಏನೋ ಎಂತೋ ? ) ಎಂಬ ಸಂಶಯ ಕಾಡುತ್ತದೆ ರಾತ್ರಿ ಊಟವನ್ನು ಮಾಡಲಿಲ್ಲ ಆವೇಶ ಬಂದವರಂತೆ ಮೌನವಹಿಸುತ್ತಾರೆ ಮಡದಿ ಶಿವಮ್ಮನಿಗೆ ಅನುಮಾನ ಬಂದು ವಿಚಾರಿಸಲಾಗಿ ನನಗೆ ಹಸಿವಿಲ್ಲ ಸಂತೆಯಲ್ಲಿ ಪಾಲಾಹಾರ ಸೇವಿಸಿ ಬಂದಿದ್ದೇನೆ ಈ ದಿನ ಒಂಟಿಯಾಗಿ ಮಲಗಲು ಬಿಡಿ ತುಂಬಾ ಆಯಾಸವಾಗಿದೆ ಎಂದು ಹೇಳಿ ತಾವು ಮಲಗುತ್ತಿದ್ದ ಕೊನೆಗೆ ಹೋಗಿ ಚಾಪೆಯ ಮೇಲೆ ಮಲಗಿ ಬಿಡುತ್ತಾರೆ; ಆದರೂ ಮನಸ್ಸಿಗೆ ಬಹಳ ದುಗುಡವುಂಟಾಗಿದ್ದರಿಂದ ನಿದ್ರೆ ಹತ್ತಲಿಲ್ಲ ಹಾಗೆ ಯೋಚಿಸುತ್ತಾ ಭಾವನಾಲೂಕದಲ್ಲಿ ಲೀನರಾಗಿದ್ದಾಗ ಸ್ವಲ್ಪ ಜೊಂಪುಬರುತ್ತದೆ. ಆಗ ಶ್ರೀ ದೇವಿಯವರು ಛಾಯಾ ರೂಪದಲ್ಲಿ ಗೌಡರ ಮನಸ್ಸಿನ ಮೇಲೆ ಬಂದು ಹೇಳಿದಂತೆ ನಾನು ಜಗನ್ಮಾತೆ ಪಾರ್ವತಿದೇವಿಯವರ ವರಕನ್ಯೆ ಧೈವ ಸಂಕೇತವಾದ ಆಕಾರಗೊಂಡಿರುವ ಮೂರು ಕಪ್ಪು ಶೀಲಾ ಪ್ರತಿಮೆ ರೂಪದಲ್ಲಿ ಈ ಗ್ರಾಮಕ್ಕೆ ನೆಲಸುವ ಆಕಾಂಕ್ಷಿಯಾಗಿ ಬಂದಿರುತ್ತೇನೆ; ನೀವು ಹಳ್ಳದ ನೀರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾಗ ಮಧ್ಯಭಾಗದಲ್ಲಿ ಹೊಳೆಯುತ್ತಿದ್ದ ದೊಡ್ಡ ಪ್ರತಿಮೆಯೊಳಗೆ ಲೀನಗೊಂಡಿರುವ ನನ್ನ ಮೂಲ ನಾಮಧೇಯ ಶ್ರೀ ಉಡಿಶೀಲಮ್ಮ ನೆಂದು ನನ್ನ ಬಲಲಭಾಗಕ್ಕೆ ಇದ್ದ ಪ್ರತಿಮೆಯೊಳಗೆ ನನ್ನ ಇಷ್ಟೊಂದು ಶಕ್ತಿ ಮಾರಿಕಾಚಿ ಎಂಬುದಾಗಿಯೂ ಮತ್ತು ನನ್ನ ಎಡಭಾಗಕ್ಕೆ ಇರುವ ಪ್ರತಿಮೆಯೊಳಗೆ ಮೂರನೆ ಶಕ್ತಿಯಾಗಿ ಶ್ರೀ ದೇವಿರಮ್ಮನೆಂತಲೂ ಜ್ಯೋತಿ ರೂಪದಲ್ಲಿ ಲೀನಗೊಂಡಿರುವ; ಈ ಮೂರು ವಿವಿಧ ಶಕ್ತಿಯನ್ನು ಹೊಂದಿದ್ದು ನಿಮ್ಮ ಗ್ರಾಮದಲ್ಲಿ ಗ್ರಾಮದೇವತೆ ಎಂಬ ನಾಮಸ್ಮರಣೆಯಿಂದ ಕರೆಸಿ ಕೊಳ್ಳುತ್ತೇನೆ. ಹಳ್ಳದ ನೀರಿನ ದಡದಲ್ಲಿ ಯಾವರೀತಿಯಲ್ಲಿ ಕುಳಿತ್ತಿದ್ದಾನೋ ಹಾಗೆ ಶ್ರೀ ಉಡಿಶೀಲಮ್ಮ ಎಂಬ ನಾಮೋಂಕಿತದ ದೊಡ್ಡದಾಗಿರುವ ಶೀಲಾ ಪ್ರತಿಮೆಯನ್ನು ಮಧ್ಯಭಾಗಕ್ಕೂ ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಅನುಕೂಲವಾಗಿರುವಹಾಗೆ ತಲೆಯಭಾಗವು ಮತ್ತವಾಗಿರುವ ನನ್ನ ಎರಡನೇ ಶಕ್ತಿ ಶೀಲಾ ಪ್ರತಿಮೆಯನ್ನು ನನ್ನ ಬಲಭಾಗಕ್ಕೂ ನನ್ನ ಕರುಣೆ ತೀಕ್ಷ್ಣ ದೃಷ್ಠಿಯ ಸಂಕೇತವಾಗಿರುವ ತಲೆಯ ಭಾಗವು ಸ್ವಲ್ಪ ನನ್ನ ಕರುಣೆ, ತೀಕ್ಷ್ಣ ದೃಷ್ಟಿಯ ಸಂಕೇತವಾಗಿ ತಲೆಯ ಭಾಗವು ಸ್ವಲ್ಪ ಮೊನಚಾಗಿರುವ ಮೂರನೇ ಶಕ್ತಿಯ ಶೀಲಾ ಪ್ರತಿಮೆಯನ್ನು ಎಡಭಾಗಕ್ಕೂ ಗ್ರಾಮದ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಬೆಳೆದು ನಿಂತಿರುವ ವಿಶಾಲವಾದ ವಟವೃಕ್ಷ (ಆಲದಮರ) ದ ಕೆಳಕ್ಕೆ ನಿಮ್ಮ ಅನುಭವದಲ್ಲಿರುವ ದೇವರ ಬನ ದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪನೆ ಮಾಡ ಬೇಕು ನಾಳೆಯಿಂದ ಜೇಷ್ಠ ಮಾಸದ ಸಪ್ತಮಿ ತಿಥಿ ರೋಹಿಣಿ ನಕ್ಷತ್ರವಿದ್ದು ಶುದ್ಧ ಶುಕ್ರವಾರ ವಿರುವುದರಿಂದ ಬಹಳ ಶುಭವಾಗಿರುತ್ತದೆ. ಈ ದಿನ ಉದಯ ವೇಳೆಯಲ್ಲಿ ಸೂರ್ಯ ದೇವನ ಹೊಂಗಿರಣಗಳು, ನನ್ನ ಪ್ರತಿಮೆಗಳ ಮೇಲೆ ಬೀಳುವುದರಿಂದ ಇನ್ನೂ ಹೆಚ್ಚಿನ ಯೋಗ ಶಕ್ತಿ ಲಬಿಸುತ್ತದೆ ಹಾಗೂ ಸೌಂದರ್ಯ ಪ್ರಭಾವಗಳು ಮೈಗೂಡಿಕೊಳ್ಳುತ್ತದೆ; ಎಂದು ಆದೇಶ ವಾಗುತ್ತದೆ. ನೀವು ಬ್ರಾಹ್ಮೀಕಾಲದಲ್ಲಿ ಎದ್ದು ನಿಮ್ಮ ನಿತ್ಯ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ನಂತರ ನನ್ನ ಶಕ್ತಿಯ ಶಿಲಾಪ್ರತಿಮೆಗಳನ್ನು ರಾಗಿ ಚೀಲದಿಂದ ಹೊರಕ್ಕೆ ತೆಗದು ಒಂದು ದೊಡ್ಡ ಹರಿವಾಣದಲ್ಲಿಟ್ಟು ಮನೆಯಲ್ಲಿರುವ ಎಳ್ಳು ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಜ್ಜನ ಮಾಡಿರಿ ಕೆಲವು ಸಮಯ ಬಿಟ್ಟು ನಿರ್ಣಾಯಕವಾಗಿ ಅಭಿಷೇಕದ ಪರಿಕರಗಳನ್ನು ಬಳಸಿ ಕಳಾನಭಿಷೇಕ ಮಾಡಿರಿ ಆಗ ನನ್ನ ಪ್ರತಿಮೆಗಳೊಳಗೆ ಚೀತ್ಕಳೆ(ಜ್ಯೋತಿ) ಕಾಣುತ್ತದೆ. ಈ ಚೀತ್ಕಳೆಯನ್ನು ತದೇಕ ಸೃಷ್ಟಿಯಿಂದ ನೋಡುತ್ತಿದ್ದರೆ ಅವರೊಳಗೆ ನನ್ನ ಸುಂದರರೂಪವು ಕಾಣುತ್ತದೆ ಕಾರಣ ಪೂಜಾ ವೇಳೆಯಲ್ಲಿ ಮಜ್ಜನ ಮಾಡಿ, ಅಭಿಷೇಕ ಮಾಡಿ ಆರಾದಿಸುವುದು ಸೂಕ್ತವಾದುದ್ದು ನಂತರ ಕುಲ ಪುರೋಹಿತರ ಮಾಂತ್ರ ಘೋಷಣೆಯೊಂದಿಗೆ ವಿಧಿ ವಿಧಾನಗಳ ಪ್ರಕಾರ ಧೈವ ಶಕ್ತಿಯನ್ನು ಪ್ರತಿಮೆಗಳಿಗೆ ಕೊಟ್ಟಿ ನಿಮ್ಮ ಮನೆಯಲ್ಲಿ ಅವು ಪೂಜೆಯನ್ನು ಮಾಡಿ ತಳಿಗೆ ಅರ್ಪಿಸಿದರೆ ತೃಪ್ತಳಾಗುತ್ತೇನೆ ಈ ಎಲ್ಲಾ ಪ್ರಕ್ರಿಯೆಗಳು ಬೆಳಗಿನ 6-30 ಘಂಟೆ ಗೊಳಗಾಗಿ ಮುಗಿಸಬೇಕು ಎಂದು ತಮ್ಮ ಸ್ಥಾಪನೆಯ ವಿಧಾನಗಳನ್ನೆಲ್ಲ ತಿಳಿಸಿದಂತಾದ ಮೇಲೆ ತನ್ನಲ್ಲಿರುವ ಮೂರು ಶಕ್ತಿ ಪ್ರಭಾವಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಪ್ರಭಾವ ಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಭಕ್ತಿ, ನಂಬಿಕೆ ಇಂದ ನನ್ನನ್ನು ಆರಾಧಿಸುತ್ತಾರೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉತ್ತಮ ದಾಂಪತ್ಯ ಭಾಗ್ಯ ಹಾಗೂ ಸಮೃದ್ದ ಜೀವನವನ್ನು ಶ್ರೀ ಉಡಿಶೀಲಮ್ಮ ಶಕ್ತಿಯಾಗಿಯೂ ನನ್ನ ಬಗ್ಗೆ ಉತ್ತಮ ಆಚಾರ, ನಿಷ್ಟೆಯಿಂದ ಸೇವೆಯನ್ನು ಮಾಡುತ್ತಾರೋ ಅಂತಹವರನ್ನು ಕಾಡುವ ದುಷ್ಟ ಪಿಡುಗುಗಳಾದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ದುಷ್ಟ ಮಾರಿಗಳನ್ನು ಹೊರ ಹಾಕುವ ಎರಡನೇ ಶಕ್ತಿ ಶ್ರೀ ಮಾರಿಕಾಂಬೆ ಯಾಗಿಯೂ ಗ್ರಾಮದಲ್ಲಿ ತಾಂಡವ ಮಾಡುತ್ತಿರುವ ಅಜ್ಞಾನ, ಧಾರಿದ್ರ್ಯ, ಮೂಡನಂಬಿಕೆ ಮತ್ತು ಅಭಾವ ಗಳನ್ನು ನಿವಾರಣೆ ಮಾಡಿ ಆರೋಗ್ಯ ಸಮೃದ್ದಿ ಸುಜ್ಞಾನವನ್ನು ಮೂರನೇ ಶಕ್ತಿಯಾಗಿ ಶ್ರೀ ದೇವೀರಮ್ಮ ನಾಗಿಯೂ ಕರ್ತವ್ಯಗಳನ್ನು ಕಾಲ ಕಾಲಕ್ಕೆ ನಿರ್ವಹಿಸುತ್ತಿರುತ್ತೇನೆ. ನನ್ನನ್ನು ನಿಮ್ಮ ಗ್ರಾಮದಲ್ಲಿ ಸ್ಥಾಪನೆಮಾಡಿದ ದಿನದಿಂದ ಪ್ರತಿ ವರ್ಷವೂ ಬಂಡಿ ಹಬ್ಬ ಎಂದು ಪರಿಷೆಯನ್ನು ಮಾಡಿ ಆ ಒಂದು ವರ್ಷದಲ್ಲಿ ಅನಧಿಕೃತವಾಗಿ ಗ್ರಾಮದ ಒಳಗಡೆಗೆ ನುಸುಳಿ ಬಂದು ಜನ, ಜಾನುವಾರುಗಳು ಕಾಡುವ ಎಲ್ಲ ದುಷ್ಟ ಮಾರಿಗಳನ್ನು ತಮಟೆ ವಾದ್ಯ ಶಬ್ದ ಗಳಿಂದ ಎಚ್ಚಿಸಿ ಅವುಗಳನೆಲ್ಲ ಊರಿನ ಹೆಬ್ಬಾಗಿಲಿಗೆ ಕರೆತಂದು ಸಿದ್ದ ಮಾಡಿದ ಬಂಡಿಯಲ್ಲಿ ತುಂಬಿ ಮಾರಿಗಳಿಗೆಪ್ರಿಯವಾದ ಬಿಳಿ ಬಣ್ಣದ ಬಟ್ಟೆಯಿಂದ ಕೆಳಕ್ಕೆ ಜಿಗಿಯದಂತೆ ಬಂದಿಸಿ ಇವುಗಳಿಗೆ ಪ್ರಿಯವಾದ ಖಂಡಾ ಹಾರದ ತದ್ರೂಪ ಶಾವಿಗೆ ಪರ್ಪನ್ನು ಎಡೆ ಇತ್ತು ಪೂಜಿಸಿ ಕೂಸ್ಮಂಡದಿಂದ ಬಂಡಿಗೆ ದಿಗ್ಬಾಂದನಮಾಡಿ ಅದನ್ನು ಬಲಿಕೊಟ್ಟು ನಂತರ ಗಾಡಿಯಲ್ಲಿ ಭದ್ರಗೊಳಿಸಿ ಹಳ್ಳಿವಾದ್ಯ ಪ್ರತಿ ಮನೆಯ ಎಡೆಯನ್ನು ಹೊತ್ತ ಭಕ್ತರು ಬಂಡಿಯನ್ನು ಸುತ್ತುವರಿದು ಎಳೆದುತಂದು ನನ್ನ ಸನ್ನಿಧಿಗೆ ಒಪ್ಪಿಸಿ; ಇವುಗಳು ನನ್ನ ಹಿಡಿತಕ್ಕೆ ಬಂದ ಮೇಲೆ ಭಕ್ತರು ತಂದ ಶಾವಿಗೆ ಪರ್ಪನ್ನು ೧೦೧ ಮಾರಿಗಳಿಗೆ ಎಡೆ ಇತ್ತು ಪೂಜಿಸಿ ನಮ್ಮ ಮನೆಯ ಕಷ್ಟಕ್ಕೆ ಬರಬೇಡ ಸುಖಕ್ಕೆ ಬಾ ಎಂದು ಪ್ರಾರ್ಥನೆಯ ಮಾಡಿ ಈ ಮಾರಿಗಳಿಗೆ ಆರ್ಫಿಸಿದರೆ; ತೃಪ್ತಗೊಳ್ಳುತ್ತಾರೆ ನಂತರ ಇವರನೆಲ್ಲ ಗ್ರಾಮದಿಂದ ಹೊರಕ್ಕೆ ಓಡಿಸಿ ಜನ, ಜಾನುವಾರುಗಳು ಆರೋಗ್ಯ ನೆಮ್ಮದಿಯಿಂದ ಇರುವಂತೆ ಬೆಂಗಾವಲಾಗಿರುತ್ತೇನೆ ಇಂದಿನ ದಿನದಿಂದ ನಿಮ್ಮ ಸಂತತಿಯವರು ಪ್ರತಿ ಶುಕ್ರವಾರ ತಪ್ಪದೆ ನನಗೆ ಪೂಜೆ, ನೈವೇದ್ಯ, ಸಲ್ಲಿಸಲು ಕ್ರಮವು ನಿರಂತರ ವಾಗಿ ನೆಡೆದುಕೊಂಡು ಬರಬೇಕು, ನನ್ನನ್ನು ಆರಾಧಿಸುವ ವಿಷಯದಲ್ಲಿ ಯಾರು ಅಲಕ್ಷ ಮಾಡುತ್ತಾರೋ ಅಂತವರನ್ನು ನಾನು ಸಹ ಅಲಕ್ಷ ಮಾಡುತ್ತೇನೆ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿ ನಾನು ಪ್ರಸ್ತುತ ಪಡಿಸಿರುವ ಎಲ್ಲ ನಿಯಮಗಳನ್ನು ಕೊಡಲೇ ಕಾರ್ಯರೂಪಕ್ಕೆ ತರಲು ಗೌಡರಿಗೆ ಶಕ್ತಿ, ಜ್ಞಾನವನ್ನು ಕೊಟ್ಟು ಅದೃಶ್ಯ ವಾದಂತೆ ಪ್ರೇರಣೆಯಾಗುತ್ತದೆ. ಆ ರಾತ್ರಿಎಲ್ಲ ಶ್ರೀ ದೇವಿಯವರು ಹಲಗೇಗೌಡರ ಕನಸಿಗೆ ಆವೇಶವಾಗಿ ಬಂದು ಎಲ್ಲ ವಿಷಯಗಳನ್ನು ತಿಳಿಸಿದ ವಿಸ್ಮಯವನ್ನು ತಿಳಿದು ಜಾಗೃತವಸ್ಥೆಗೆ ಬಂದ ಕೂಡಲೇ ಎಚ್ಚರ ಉಂಟಾಗುತ್ತದೆ; ಕೂಡಲೇ ಎದ್ದು ಹೊರಕ್ಕೆ ಬಂದು ನೋಡುತ್ತಾರೆ ಎಲ್ಲವೂ ಯಥಾಸ್ತಿತಿ ಆಗಲೇ ಮೂಡಣ ಕೆಂಪಾಗಿದ್ದು ದಿನಕರನ ಆಗಮನದ ಛಾಯೆ ಕಂಡುಬರುತ್ತದೆ ರಾತ್ರಿ ಇಡೀ ಕಂಡ ಸಂಗತಿ ಇಂದ ತುಂಬಾ ಬಾವುಕರಾಗಿ ಶ್ರದ್ದಾ ಭಕ್ತಿಯಿಂದ ಕಾರ್ಯೋನ್ಮುಖರಾಗುತ್ತಾರೆ, ತಮ್ಮ ಶುಚೊಪಚಾರಗಳನ್ನೆಲ್ಲ ಮುಗಿಸಿಕೊಂಡು ಸ್ನಾನಕ್ಕೆ ವ್ಯವಸ್ಥೆ ಮಾಡಿ ಪೂಜೆಗಾಗಿ ಬಗೆ ಬಗೆಯ ಪುಷ್ಪ ಪತ್ರೆಗಳನ್ನು ಅರಸಿ ತಂದು ಇಡುತ್ತಾರೆ, ನಂತರ ರಾಗಿ ಚೀಲದ ಒಳಗಡೆಯಿಂದ ಧೈವ ಬಿಂಬಿತ ವಿಗ್ರಹಗಳನ್ನು ಹೊರಕ್ಕೆ ತೆಗದು ದೇವಿಯವರ ಆಪೇಕ್ಷೆಯಂತೆ ದೊಡ್ಡ ಹರಿವಾಣದಲ್ಲಿ ಸ್ಥಾಪಿಸಿ ಮೊದಲು ಎಣ್ಣೆ ಮಜ್ಜನ ಮಾಡಿ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಿದ್ದತೆ ಮಾಡುತ್ತಾರೆ ನಂತರ ಸ್ನಾನ ಮಾಡಿ ಶುಚಿಭೂತರಾಗಿ ಮನೆಯವರನ್ನು ಏಳಿಸುತ್ತಾರೆ; ಈ ದಿನದಿಂದ ನಮ್ಮ ಕುಟುಂಬಕ್ಕೆ ಹೊಸ ಪರ್ವ ಆರಂಭವಾಗಿದೆ, ಎಲ್ಲರೂ ಬೇಗ ಸ್ನಾನಾದಿಕ್ರಮಗಳಿಂದ ಸಿದ್ದರಾಗಿ ಎಂಬುದಾಗಿ ತಿಳಿಸಿದಂತೆ ಕುತೂಹಲ ಸಂಶಯ ಉಂಟಾಗುತ್ತದೆ ಯಜಮಾನರ ಆದೇಶದಂತೆ ಎಲ್ಲರೂ ಸಿದ್ದರಾದ ಮೇಲೆ ತಾವು ಮಲಗಿದ್ದ ಕೋಣೆಗೆ ಕರೆದುಕೊಂಡು ಹೋಗಿ ಹರಿವಾಣದಲ್ಲಿ ಇಡಲಾಗಿದ್ದ ಲಿಂಗಾಕಾರದ ಮೂರು ಕಪ್ಪು ವಿಗ್ರಹಗಳನ್ನು ತೋರಿಸುತ್ತಾ ನಿನ್ನೆ ಸಂಜೆಯಿಂದ ರಾತ್ರಿಯಿಡೀ ಶ್ರೀ ಉಡಿ ಶೀಲಮ್ಮ ನೆಂಬ ಆವೇಶವಾಗಿ ಬಂದು ತಮ್ಮ ಶಕ್ತಿ ಪವಾಡ ಆಚರಣೆಗಳ ಬಗ್ಗೆ ತಿಳಿಸಿ ಅಂತರ್ಧಾನಳಾದ ವಿಚಾರವನ್ನು ತುಂಬಾ ಬಾವುಕರಾಗಿ ತಿಳಿಸುತ್ತಾರೆ.ಈ ವಿಸ್ಮಯವನ್ನು ಕೇಳಿದ ಮನೆಯವರಿಗೆ ನಂಬಿಕೆ ಭಕ್ತಿ ಉಂಟಾಗಿ ಮುಂದಿನ ಕಾರ್ಯಗಳಿಗೆ ಸಿದ್ಧರಾಗುತ್ತಾರೆ ಈ ವಿಚಾರವು ಕೇರಿಯವರಿಗೆಲ್ಲ ಹರಡಿ ಕುತೂಹಲ ಭರಿತರಾಗಿ ಗೌಡರ ಮನೆಗೆ ಬಂದು ಹರಿವಾಣದಲ್ಲಿ ಇಡಲಾಗಿದ್ದ ದೇವಿಯಪ್ರತಿಮೆಗಳನ್ನು ಶ್ರದ್ದೆ, ಭಕ್ತಿಯಿಂದ ದರ್ಶನ ಮಾಡಿ ಇಲ್ಲಿಗೆ ಪಾದಾರ್ಪಣೆ ಮಾಡಿದಾಗ ವಿಚಾರವನ್ನು ಗೌಡರಿಂದ ತಿಳಿದು ಉತ್ಸಾಹ, ಸಂತೋಷದಿಂದ ದೇವಿಯವರ ಸೇವೆಯನ್ನು ಮಾಡಲು ಸಿದ್ದರಾಗುತ್ತಾರೆ; ಅಪ್ಪಣೆಯಾದಂತೆ ದೇವರ ಬನವನ್ನು ಸ್ವಚ್ಛಮಾಡಿ ಕೇರಿಯಿಂದ ಬನದವರೆಗೆ ಗುಡಿಸಿ ನೀರು ಹಾಕುವುದು ತಳಿರು ತೋರಣಗಳಿಂದ ಅಲಂಕಾರ ಮಾಡುವುದು ಬನಕ್ಕೆ ಚಪ್ಪರ ಹಾಕುವುದು ಮುಂತಾದ ಕೆಲಸಗಳನ್ನು ಪರಸ್ಪರ ಸಹಕಾರದಿಂದ ಹಾಗೂ ಸಂಭ್ರಮಗಳಿಂದ ಮಾಡುತ್ತಾರೆ ಶ್ರೀ ದೇವಿಯವರ ಅಪೇಕ್ಷೆಯಂತೆ ಪುರೋಹಿತರ ಸಲಹೆಯ ಪ್ರಕಾರ ಮನೆಯಲ್ಲಿ ಸರಳವಾದ ಅಗ್ರಪೂಜೆಯನ್ನು ಮಾಡಿ ಆರತಿ ಮಾಡಿದ ನಂತರ ದೇವರು ದುಂಬಿತ ಹರಿವಾಣವನ್ನು ಈ ವ್ಯವಸ್ಥೆಗೆಲ್ಲ ಕಾರಣ ಕರ್ತರಾದ ಹಲಗೇಗೌಡರ ತಲೆಯ ಮೇಲೆ ಹೊತ್ತು ಮೂಡಣ ದಿಕ್ಕಿನತ್ತ ಹೇಮಾವತಿ ನಡಿಗೆ ಬಿಜಯಂಗೈದು; ಗಂಗಾಸ್ನಾನದಲ್ಲಿ ಪುರೋಹಿತರ ವಿಧಿ ವಿಧಾನಗಳ ಪ್ರಕಾರ ದೇವಿಯವರಿಗೆ ದೈವತ್ವವನ್ನು ಕೊಟ್ಟು ದಶಕುಂಭಗಳನ್ನು ದೇವಿ ಕಲಶವನ್ನು ಸ್ಥಾಪಿಸಿ ವನಿತೆಯರಿಗೆಲ್ಲ ಹೂವಿನ ಕಂಕಣ ಕಟ್ಟಿ, ಮುತ್ತೈದೆಯರಿಂದ ಪಂಚ ಪೂಜೆಯಾದ ಮೇಲೆ ಎಲ್ಲಾ ಮಾನಿನಿಯರಿಗೂ ಮಡಿಲನ್ನು ತುಂಬಿ, ಒಬ್ಬ ಮಾನಿನಿಯ ದೇವಿಕಲಶ ಹತ್ತು ಜನ ವನಿತೆಯರಿಂದ ಪೂರ್ಣಕುಂಭ ಹಾಗೂ ಗೌಡರಿಂದ ಪ್ರತಿ ಮೇಗಳನ್ನಿಟ್ಟು ಹರಿವಾಣ ತಲೆಯ ಮೇಲೆ ಹೊತ್ತು ದಾರಿಯುದ್ದಕ್ಕೂ ಪಕ್ಷಾಮಡಿಯ ಮೇಲೆ ಘಂಟೆಯಿಂದ ಮಂತ್ರ ಘೋಷಣೆ ಮಾಡುತ್ತಾ ಸಿದ್ದಪಡಿಸಲಾಗಿದ್ದ ದೇವರ ಬನಕೆ ತರುತ್ತಾರೆ ಶ್ರೀ ದೇವಿಯವರನ್ನು ಸ್ಥಾಪನೆ ಮಾಡುವ ಜಾಗಕ್ಕೆ ಗೋಮಯ ಪಾದೋದಕಗಳಿಂದ ದೋಷರಹಿತವನ್ನಾಗಿ ಮಾಡಿ ದೇವಿಯ ದಾನ್ಯ ಸ್ತಂಬನದ ಮುಖಾಂತರ ಬಂದಿದ್ದರಿಂದ ಚೀಲದಲ್ಲಿದ್ದ ರಾಗಿಯನ್ನು ಗದ್ದುಗೆಯಂತೆ ಹರಡಿ ಕಲಶ ಹಾಗೂ ಪೂರ್ಣ ಖೊಂಬಗಳನ್ನು ಈ ಗದ್ದುಗೆಯ ಮೇಲೆ ಸ್ಥಾಪಿಸಿ ಹರಿವಾಣವನ್ನು ಪಕ್ಷಕ್ಕೆ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಎಣ್ಣೆ ಮಜ್ಜನ ಮಾಡಿದ್ದರಿಂದ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ ಪ್ರತಿಮೆ ಗಳೊಳಗೆ ಚೀತ್ಕಲೆ ಕಾಣುವಂತೆ ಹೊಳಪು ಹೋಳಿಸಿದಾನಾಂತರ ಗದ್ದುಗೆಯ ಮೇಲೆ ಸ್ಥಾಪನೆ ಮಾಡಿದ ಮೇಲೆ ಮಧ್ಯಕ್ಕೆ ಶ್ರೀ ಉಡಿಶೀಲಮ್ಮ ಎರಡನೇ ಶಕ್ತಿ ಸಂಕೇತ ಮಾರಿಕಾಂಬೆಯನ್ನು ಬಲಭಾಗಕ್ಕೂ ಮತ್ತು ಮೂರನೇ ಶಕ್ತಿ ಸಂಕೇತ ದೇವೀರಮ್ಮನವರನ್ನು ಎಡ ಭಾಗಕ್ಕೂ ಪೂರ್ವಾಭಿಮುಖವಾಗಿ ಸ್ಥಿರಗೊಳಿಸುತ್ತಾರೆ ಎರಡು ಬದಿಗೂ ಕೈ ಎಣ್ಣೆ ದೀಪ ಹಚ್ಚಿಟ್ಟು ಪ್ರಕಾಶಮಾನ ಗೊಳಿಸಿ, ಹೊಳಪುಗೊಳಿಸಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ವ್ಯವಸ್ಥೆಯಾಗುತ್ತದೆ ಪೋರೋಹಿತರ ಮಂತ್ರೋಪದೇಶ ಗಳ ಆಗರವಾಗಿ ರುದ್ರ ಹೋಮವಾಗುತ್ತದೆ ನಂತರ ಗಣಪತಿ ಪೂಜೆ, ಕಲಶ,ಕುಂಭಗಳಿಗೆ, ಪೂಜೆಯೊಂದಿಗೆ ದೇವಿಯವರಿಗೆ ನವ ವಿಧಧ ಪುಷ್ಪಗಳಿಂದ ಅಲಂಕರಿಸಿ ದೈವ ಕಲೆಯನ್ನು ತುಂಬಿ ಪೂಜಿತರನ್ನಾಗಿ ಮಾಡಿದ ಮೇಲೆ ಮಹಾಪೂಜೆ, ಮಂಗಳಾರತಿ, ಪಂಚಾಮೃತತಗಳಿಗೆ ಅರ್ಪಣೆ ಹಣ್ಣು ಕಾಯಿ ಬೆಲ್ಲದ ನೈವೇದ್ಯ ಆದ ಮೇಲೆ ಆರು ತೋಳು ಬಲಗಳನ್ನೂ ಸರ್ವಶಕ್ತಿಯನ್ನು ಹೊಂದಿರುವ ಗ್ರಾಮದ ಅಧಿದೇವತೆ ಶ್ರೀ ಗ್ರಾಮದೇವತೆ ಎಂಬ ಒಂದೇ ಅರ್ಥದ ರೂಡಿ ನಾಮದಿಂದ ನಾಮಕರಣ ಮಾಡಲಾಯಿತು; ನೆರದಿದ್ದ ಭಕ್ತ ಸಮೂಹವು ಜನ ಮನದ ಜಯದೇವಿ ಶ್ರೀ ಗ್ರಾಮದೇವತೆ ಎಂಬುದಾಗಿ ಸಾಮೂಹಿಕವಾಗಿ ಜನ ಘೋಷಣೆಮಾಡುತ್ತಾರೆ. ಈ ಪ್ರಕ್ರಿಯೆಗಳೆಲ್ಲ ಮುಗಿದನಂತರ ಭಕ್ತರ ಮನೆ ಗಳಿಂದ ಬಂದಿದ್ದ ತಳಿಗೆ ಪದಾರ್ಥಗಳು( ಅಕ್ಕಿ ಬೆಲ್ಲ) ಬಾಳೆ ಹಣ್ಣು ತೆಂಗಿನ ಕಾಯಿ ಸೇವೆಯನ್ನು ಮಾಡಿ ಎಲ್ಲರಿಗೂ ತೀರ್ಥ, ಪ್ರಸಾದವನ್ನು ಕೊಟ್ಟು ಪುನೀತರನ್ನಾಗಿ ಮಾಡಿದ ಸಂಭಂದ ಗ್ರಾಮದಲ್ಲಿ ಇಂತಹ ಸತ್ಕಾರ್ಯವು ಅನಿರೀಕ್ಷಿತವಾಗಿ ನೆರವೇರಿದ್ದರಿಂದ ನಂಬಿಕೆ, ಭಕ್ತಿ, ಸಂತೋಷವೂ ಭಕ್ತರಲ್ಲಿ ನೆಲೆಯಾಗಿ ಉಳಿದಿದೆ. ಶ್ರೀ ದೇವಿಯವರು ಕಿರು ಧಾನ್ಯದಿಂದ ರಾಗಿಯ ಗದ್ದುಗೆಯ ಮೇಲೆ ಆಸೀನರಾಗಲು ಇಷ್ಟ ಪಟ್ಟಿದ್ದು ಬಹಳ ಮಹತ್ವವನ್ನು ಪಡೆದುಕೊಂಡಿದೆ ರಾಗಿ ಎಂಬ ಸಂಭವನೀಯ ವಾಕ್ಯವು ಭಕ್ತಿಯ ನೆಲೆಗಟ್ಟಿನ ಮೇಲೆ ಬಂದಿರಬಹುದೆಂಬ ನಂಬಿಕೆಯಾಗಿದೆ; ಹೇಗೆಂದರೆ ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರಸಾದ ಮಯವಾಗಿ ಸೇವನೆ ಮಾಡುವವರು ಶ್ರೀ ದೇವಿಯವರು ಆಶೀರ್ವಧಿಸಿದಂತೆ. ಭಕ್ತಿವಂತರಾಗಿ ನಿಷ್ಟೆಯಿಂದ ಪೂಜೆಮಾಡುವವರಿಗಾಗಿ ನಂಬಿಕೆಯುಳ್ಳವರಾಗಿ, ಜ್ಞಾನಳ್ಳವರಾಗಿ, ಶಕ್ತಿವಂತರಾಗಿ, ಆರೋಗ್ಯವಂತರಾಗಿ, ಯೋಗವಂತರಾಗಿ, ಗುರು ಹಿರಿಯರಲ್ಲಿ ನಿಷ್ಟಾವಂತರಾಗಿ, ತಂದೆ ತಾಯಿಯವರನ್ನು ಪೂಜಿಸುವವರಾಗಿ, ಹೀಗೆ ಪ್ರತಿ ಭಾವಾರ್ಥದ ಕೊನೆಯಲ್ಲಿ ರಾಗಿ ಎಂದು ಇದರ ಮಹತ್ವವನ್ನು ತಿಳಿಸಿರುವುದರಿಂದ ರಾಗಿಯ ತಳಿಗೆಯನ್ನು ದೇವಿಯವರು ಇಷ್ಟಪಡುವ ಕಾರಣದಿಂದ ಬಂಡಿ ಹಬ್ಬದ ಆಚರಣೆ ದಿನ ಎಡೆಯಾಗಿ ರಾಗಿ ಶಾವಿಗೆಯನ್ನು ತಂದು ಅರ್ಪಣೆ ಮಾಡುತ್ತಿರುವುದು ಪ್ರಸ್ತುತವೆನಿಸಿರುತ್ತೆ. ಈ ಎಲ್ಲ ಪ್ರಕ್ರಿಯೆಗಳು ನೆರೆವೆರಿದ ಮೇಲೆ ದೇವಿಯವರ ಪೂರ್ಣ ಕುಂಭ ಹಾಗೂ ಕಲಶದ ಪವಿತ್ರ ಜಲವನ್ನು ದೇವರ ಬನದ ಸುತ್ತಲೂ ಪ್ರೋಕ್ಷಿಸಿ ದಿಗ್ಬಂದನ ಮಾಡುತ್ತಾರೆ, ನಂತರ ಪ್ರತಿಮೆಗಳಿಗೆ ಅಪಾಯ ಅಪಚಾರಗಳು ಆಗಬಾರದೆಂಬ ಭಾವನೆಯಿಂದ ಕೆಲವು ಭಕ್ತರು ಸ್ವಾಧೀನದಲ್ಲಿದ್ದ ಕಲ್ಲು ಚಪ್ಪಡಿಗಳನ್ನು ತಂದು ಭದ್ರವಾದ ತಾತ್ಕಾಲಿಕ ಗುಡಿಯನ್ನು ಎಲ್ಲರ ಸಹಕಾರದಿಂದ ನಿರ್ಮಾಣ ಮಾಡುತ್ತಾರೆ ಹೀಗೆ ದೇವಿಯವರನ್ನು ಇಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಪ್ರಕ್ರಿಯೆಗಳಲ್ಲೆಲ್ಲ ಪೂರ್ಣವಾದಂತಾದ ಮೇಲೆ ಶ್ರೀ ಹಲಗೇಗೌಡರು ಪ್ರತಿ ಶುಕ್ರವಾರ ಪೂಜೆಯನ್ನು ನೆಡಸಿಕೊಂಡು ಬರುತ್ತಿದ್ದರು. ಈ ವ್ಯವಸ್ಥೆಯು ಗ್ರಾಮದಲ್ಲಿ ಆದನಂತರ ಶ್ರೀ ದೇವಿಯವರ ಮಹಿಮೆಯಿಂದ ರೋಗ ರುಜಿನಗಳು ನಿಯಂತ್ರಣಕ್ಕೆ ಬರುತ್ತವೆ; ಜನರಲ್ಲಿ ಆಚಾರ ವಿಚಾರಗಳು ಹೆಚ್ಚಾಗಿ ಬರುತ್ತವೆ, ಕಾಲ ಕಾಲಕ್ಕೆ ಮಳೆಯಾಗುತ್ತಿದ್ದರಿಂದ ಸಮೃದ್ಧಿ ವಾತಾವರಣ ಉಂಟಾಗುತ್ತದೆ ಇದರಿಂದ ನೆಮ್ಮದಿಯ ಬದುಕನ್ನು ನೆಡೆಸುತ್ತಾ ಆಶಾವಾದಿಗಳಾಗಿ ಬಾಳುತ್ತಿರುತ್ತಾರೆ; ಈ ಪ್ರಖ್ಯಾತಿಯು ಸುತ್ತ ಮುತ್ತಲು ಪ್ರದೇಶಗಳಿಗೆ ಪ್ರಚಾರವಾಗ ತೊಡಗಿದಂತೆ,,,

ಕಾಲಾನಂತರದಲ್ಲಿ

ಈ ಪ್ರಾಂತ್ಯವನ್ನು ಆಳುತ್ತಿದ್ದ ಕೆಳದಿಯ ಅಂದರೆ ಶಿವಮೊಗ್ಗದ ಪಾಳೇಗಾರರಿದ್ದ ಶ್ರೀ ಶಿವಪ್ಪ ನಾಯಕನನ್ನು ತನ್ನ ಶತ್ರುಗಳ ನೆಲೆಯನ್ನು ಅರಸುತ್ತಾ ಹಾಗೂ ತನ್ನ ಆಡಳಿತದ ಬಗ್ಗೆ ಪ್ರಜೆಗಳಲ್ಲಿರುವ ಅಭಿಪ್ರಾಯ ಅವರ ಸಮಸ್ಯೆ ತೊಂದರೆಗಳನ್ನು ತಿಳಿಯುವ ಸಂಭಂದವಾಗಿ ನದಿಪಾತ್ರದಲ್ಲಿದ್ದ ಈ ಗ್ರಾಮಕ್ಕೂ ಭೇಟಿಮಾಡುತ್ತಾರೆ: ಇಲ್ಲಿ ಜನರಲ್ಲಿ ಆಚಾರ, ವಿಚಾರ, ಭಕ್ತಿ, ಆನ್ಯೂನತೆ, ಸಮೃದ್ದಿ ಮತ್ತು ರಾಜಭಕ್ತಿ ಇವುಗಳನೆಲ್ಲ ನೋಡಿ ಸಂತೋಷ ಭರಿತನಾಗಿ ತನ್ನ ರಾಜ್ಯಾಡಳಿತದ ಬಗ್ಗೆ ಹೆಮ್ಮೆ ಪಡುತ್ತಾನೆ, ಈ ಎಲ್ಲ ಆದರ್ಶ ಹಾಗೂ ಸಂತೋಷಗಳಿಗೆ ಸಕಾರಣಗಳನ್ನು ತಿಳಿಯುವ ಆಸೆಯಾಗುತ್ತದೆ; ಊರಿನ ಪುರೋಹಿತರನ್ನು ಮತ್ತು ಮುಖಂಡರಾಗಿದ್ದ ಶ್ರೀ ಹಲಗೇಗೌಡರನ್ನು ಕರಸಿಕೊಂಡು ಯೋಗ ಕ್ಷೇಮವನ್ನು ವಿಚಾರಿಸುತ್ತಾನೆ ಮತ್ತು ಜನರಲ್ಲಿ ಕಂಡು ಬರುತ್ತಿರುವ ಈ ಮಡಿವಂತಿಕೆಗೆ ಕಾರಣಗಳನ್ನು ಕೇಳುತ್ತಾನೆ ಶ್ರೀ ಹಲಗೇಗೌಡರು ಹೇಳಿದ್ದೇನೆಂದರೆ, ಶ್ರೀ ಪಾರ್ವತಿ ದೇವಿಯವರ ಕನ್ಯೆರಾದ ಉಡಿಶಿಲಮ್ಮನವರು ಗ್ರಾಮ ದೇವತೆಯಾಗಿ ನೆಲೆಯಾಗಿರುವ ಕಾರಣ ' ಬೇಡಿದ್ದಕೆಲ್ಲ ವರ ಮುಟ್ಟಿದ್ದಕೆಲ್ಲ ಚಿನ್ನ ಎಂಬಂತೆ ಅವರ ಶಕ್ತಿ ಪವಾಡಗಳ ಬಗ್ಗೆ ಸಾಗಿಬಂದ ಸಂಗತಿಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತಾರೆ ಈ ಮಹಾತ್ಮೆಯನ್ನು ತಿಳಿದ ನಾಯಕನಿಗೂ ನಂಬಿಕೆ ಭಕ್ತಿವುಂಟಾಗಿ ದೇವಿಯವರ ದರ್ಶನ ಮಾಡುವ ಹಂಬಲ ಉಂಟಾಗುತ್ತದೆ; ಭಕ್ತರ ಸಮೇತ ಬಾಣಕ್ಕೆ ಬಂದು ಪೂಜಿಸಿದ್ದ ಪ್ರತಿಮೆಗಳಲ್ಲಿ ಏಕ ಚಿತ್ತದಿಂದ ದೃಷ್ಟಿ ಇಟ್ಟು ಕಾಣುತ್ತಿದ್ದ ಚೀತ್ಕಲೆಯ ಅಂತರಂಗದಿಂದ ಶ್ರೀ ದೇವಿಯವರ ಸುಂದರ ರೂಪವನ್ನು ಕಂಡು ಲೀನರಾಗಿ ಭಾವಪರವಶರಾಗುತ್ತಾರೆ ನಂತರ ಜಾಗೃತಗೊಂಡು ಆರಾಧಕರಿಂದ ಪೂಜೆಯನ್ನು ಮಾಡಿಸಿ ತೀರ್ಥ ಪ್ರಸಾಧವನ್ನು ತೆಗೆದುಕೊಂಡು ತನ್ನನ್ನು ಕಾಡುತ್ತಿದ್ದ ಕೊರತೆಯನ್ನು ನಿವಾರಿಸಲು ತನ್ನ ಮನಿಸ್ಸಿನಲ್ಲೇ ಪ್ರಾರ್ಥನೆ ಮಾಡಿ ಹರಕೆ ಹೊತ್ತು ನಂಬಿಕೆ ಸಂತೋಷದಿಂದ ತಮ್ಮ ಬೇಟಿಗಾಗಿ ಬಂದಿದ್ದ ಪ್ರಜೆಗಳಿಗೆ ಸಾಂತ್ವನ ಹೇಳಿ ಎಲ್ಲರಿಗೂ ಶ್ರೀ ದೇವಿಯವರು ಶ್ರೇಯಸ್ಸನ್ನು ಕೊಡಲಿ ಎಂಬುದಾಗಿ ಹಾರೈಸಿ ಅಲ್ಲಿಂದ ಬೀಳ್ಕೊಂಡು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ ದಾರಿ ಉದ್ದಕ್ಕೂ ಶುಭ ಶಕುನಗಳು ಕಂಡುಬರುತ್ತವೆ ಇದು ದೇವಿಯವರ ದರ್ಶನದ ಪಲ ಎಂಬ ನಂಬಿಕೆಯಿಂದ ತನ್ನ ಕೋಟೆಯನ್ನು ತಲುಪುತ್ತಾನೆ ಆ ಲಾಗಾಯ್ತಿನಿಂದ ಎಲ್ಲಾ ತೊಂದರೆ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೀಗಿರುತ್ತಿರುವಾಗ ನಮ್ಮ ಗ್ರಾಮಕ್ಕೆ ಭೇಟಿ ಕೊಟ್ಟು ಹರಕೆ ಹೊತ್ತುಕೊಂಡಿದ್ದರಿಂದ ಫಲವಾಗಿ ೧೩ನೇ ತಿಂಗಳಿಗೆ ಸಂತಾನಹೀನನಾಗಿದ್ದು ನಾಯಕನಿಗೆ ವಂಶೋದ್ದಾರಕನ ಆಗಮನವಾಗುತ್ತದೆ; ಕಳಂಕ ತಪ್ಪಿ ಜನ ನಿಂದನಾ ರಹಿತವಾದ ಕಾರಣ ಆನಂದ ಸಂತೋಷ ಉಂಟಾಗಿ ವಿಜಯೋತ್ಸವ ಆಚರಿಸಿ ಕೋಟೆಯವರಿಗೆಲ್ಲ ಅಣ್ಣ ವಸ್ತ್ರಧಾನ ಮಾಡಿ ಈ ಎಲ್ಲ ಉತ್ಸಾಹಕ್ಕೆ ಕೃಪೆಮಾಡಿದ ಶ್ರೀ ಉಡಿಶೀಲಮ್ಮ ಯಾ ಗ್ರಾಮದೇವತೆಯವರನ್ನು ಹಾದಿ ಹೊಗಳುತ್ತಾನೆ; ಮಗ ಹುಟ್ಟಿದ ನಂತರ ತನ್ನ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಾಣುತ್ತಾನೆ ಈ ಅದೃಷ್ಟದ ವಿಚಾರವನ್ನು ಆಗ ತನ್ನ ಪತ್ನಿಗೆ ಮನವರಿಕೆ ಮಾಡಿ ಕೊಳ್ಳುತ್ತಾನೆ ಮಗುವಿಗೆ ಒಂದು ವರ್ಷ ತುಂಬುವುದರ ಒಳಗಾಗಿ ಹರಕೆ ಮಾಡಿ ಕೊಂಡಿದ್ದರಿಂದ ಒಂದು ಶುಭ ದಿನ ಪತ್ನಿ ಪುತ್ರ ಹಾಗೂ ಪರಿವಾರ ಸಮೇತ ಕುದುರೆ ಸಾರೋಟಿನಲ್ಲಿ ಬಂದು ಇಲ್ಲಿನ ಶ್ರೀ ದೇವಿಯವರ ದರ್ಶನ ಮಾಡಿ ಪ್ರತಿಮೆಗಳಿಗೆ ಕಣ್ಮಣಿ, ಸೀರೆ, ಮುಕುಟಗಳಿಂದ ಅಲಂಕಾರ ಮಾಡಿಸಿ ಹೊವು ಹಾರಗಳನ್ನಿಟ್ಟು ಶೃಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿಸಿ ಪಂಚಾಮೃತ ತಳಿಗೆಯನ್ನು ಅರ್ಪಿಸಿ ಮಹಾ ಮಂಗಳಾರತಿ,ತೀರ್ಥ ಪ್ರಸಾದಗಳನ್ನು, ಪಡೆದುಕೊಂಡು ಕೃತಾರ್ಥರಾಗುತ್ತಾರೆ ಪೂರ್ವೋಚಿತವಾಗಿ ವ್ಯವಸ್ಥೆ ಮಾಡಿದಂತೆ ಕೇರಿಯ ಭಕ್ತ ಸಮುದಾಯಕ್ಕೆ ಪ್ರಸಾದ ವ್ಯವಸ್ಥೆ ನೆಡೆಯುತ್ತದೆ ಈ ಎಲ್ಲಾ ಕಾರ್ಯಗಳು ನೆರೆವೇರಿಸಿ ತನ್ನ ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ತನ್ನ ಕಳಂಕ ನಿವಾರಣೆ ಹಾಗು ಸಮಸ್ಯೆಗಳು ಬಗೆಹರಿದುಕೊಂಡು ಬರುತಿದ್ದುದ್ದರಿಂದ ಉತ್ಸಾಹಉಳ್ಳವನಾಗಿ ಶ್ರೀ ದೇವಿಯವರಿಗೆ ಸುಂದರ ಹಾಗೂ ಭದ್ರವಾದ ದೇವ ಮಂದಿರವನ್ನು ನಿರ್ಮಿಸಲು ತನ್ನ ಸಿಬ್ಬಂದಿಗೆ ಆದೇಶ ಮಾಡುತ್ತಾನೆ ಮತ್ತು ದೇವಿಯ ಅಭಿಷೇಕ ತಳಿಗೆ ಹಾಗೂ ಪೂಜೆ ಇವುಗಳಿಗೆ ಸರಿಯಾದ ನೀರಿನ ಸೌಕರ್ಯಗಳಿಲ್ಲದ ಕಾರಣ ದೇವಾಲಯದ ಮುಂಭಾಗ ಹಾಗೂ ಈಶಾನ್ಯ ಮೂಲೆಗೆ ಲಗತ್ತಾದಂತೆ ವಿಶಾಲವಾಗಿ ನೀರು ಸಂಗ್ರಹವಾಗುವ ರೀತಿಯಲ್ಲಿ ಹಾಲಿ ಹರಿಯುತ್ತಿದ್ದು ನೀರಿನ ಹಳ್ಳವನ್ನು ಒಳ ಸರಿಸಿ ಒಂದು ಕೆರೆಯನ್ನು ಸಹ ಮಾಡಿಸುವ ಜವಬ್ದಾರಿಯನ್ನು ತನ್ನ ಸಿಬ್ಭಂದಿಯವರಿಗೆ ಆದೇಶಕೊಟ್ಟು ಹೋದ ನಂತರದಲ್ಲಿ ಆಜ್ಞಾಪಿಸಿದ ಕಾಮಗಾರಿಗಳು ಆರು ತಿಂಗಳೊಳಗೆ ಪೂರ್ಣಗೊಂಡು ಸೇವೆಗೆ ಸಿದ್ಧವಾಗುತ್ತದೆ ಹೀಗೆ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿಸಿದ್ದರಿಂದ ದೇವಿಯವರ ಅನುಗ್ರಹವುಂಟಾಗಿ ಸುಖ ಸಂತೋಷದಿಂದ ಆಡಳಿತ ಮಾಡಿದನೆಂಬ ವಿಚಾರವು ಪ್ರಸ್ತುತವಾಗಿದೆ. ಶ್ರೀ ಗ್ರಾಮದೇವತೆಯವರು ನೆಲೆಯಾದನಂತರದ ದಿನಗಳಲ್ಲಿ ಗ್ರಾಮದಲ್ಲಿ ಸುಭಿಕ್ಷತೆ ಉಂಟಾಗಿದ್ದರು ಸಹ ಜನರಲ್ಲಿ ಮೂಡ ನಂಬಿಕೆಯ ಭದ್ರವಾಗಿ ಬೇರೊರಿದ್ದಿತ್ತು ವೀರಶೈವ ಧರ್ಮದ ಹಾಗೂ ಶರಣರ ತತ್ವ ಉಪದೇಶ ಆದರ್ಶಗಳ ಅರಿವಿಲ್ಲದೆ ಅಜ್ಞಾನ ತಮ್ಮ ಕಷ್ಟ ತೊಂದರೆಗಳ ನಿವಾರಣೆಗಾಗಿ ಪ್ರಾಣಿ ಪಕ್ಷಿಗಳ ಬಲಿಯನ್ನು ಕೊಡುವ ಅನಿಷ್ಟ ಪದ್ಧತಿಯೂ ಆಚರಣೆಯಲ್ಲಿದ್ದಿತ್ತು; ಈ ಕೃತ್ಯವು ದೈವ ಮಾನವರಾಗಿ . ಜನಿಸಿ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಂಡ ಶ್ರೀ ಜಗಜ್ಯೋತಿ ಬಸವಣ್ಣನವರ ಆದರ್ಶ ತತ್ವಗಳಿಗೆ ಕಳಂಕ ಹಾಗೂ ಮಾರಕವಾದ ಹೀನ ಕೃತ್ಯ ಈ ಹಿಂದೆ ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಬಂಡಿಹಬ್ಬವನ್ನು ಎರಡು ಜಾತಿಯವರು ಒಟ್ಟಿಗೆ ಕೂಡಿ ಮಾಡುತ್ತಿದ್ದಾಗ ಒಂದು ಘಟನೆ ನೆಡೆಯಿತು................................................

ಸುಮಾರು 70 ವರ್ಷಗಳ ಹಿಂದಿನ ಒಂದು ಪ್ರಸಂಗ ಆ ವರ್ಷ ಬಂಡಿಹಬ್ಬವನ್ನು ಮಾಡುತ್ತಿದ್ದ ಸಮಯದಲ್ಲಿ ಒಂದು ವಿಸ್ಮಯಕರ ಸಂಗತಿ ನೆಡೆಯಿತೆಂಬುದನ್ನು ನಮ್ಮ ಹಿರಿಯರಿಂದ ತಿಳಿದು ಬಂದ ವಿಷಯವೇನೆಂದರೆ 1942 ಇಸವಿಗೆ ಮೊದಲಿನಿಂದಲೂ ವಿದ್ಯುತ್‌ಶಕ್ತಿ ಇಲಾಖೆಯ 4 ಕುಟುಂಬಗಳು ಈ ಗ್ರಾಮದಲ್ಲಿರುವ ಇಲಾಖೆಯ ಬಂಗಲೆಗಳಲ್ಲಿ ವಾಸಿಸುತ್ತಿದ್ದರು, ಇವರಲ್ಲಿ 2 ಕುಟುಂಬ ವೀರಶೈವರು, 2 ಕುಟುಂಬ ವಕ್ಕಲಿಗರು.. ಆ ವರ್ಷದಲ್ಲಿ ಆಚರಣೆ ಮಾಡುತ್ತಿದ್ದ ಬಂಡಿ ಹಬ್ಬದ ವೈಭವವನ್ನು ನೋಡಲು ಹಾಗೂ ಹಣ್ಣು ಕಾಯಿ ಸೇವೆಯನ್ನು ಮಾಡಿಸಲು ಬಂದಿದ್ದರು ಜನ ಸಂದಣಿ ಸ್ವಲ್ಪ ಕಡಿಮೆಯಾದಮೇಲೆ ವಕ್ಕಲಿಗ ಕುಟುಂಬದ ಹೆಣ್ಣು ಮಗಳು ದೇವರ ದರ್ಶನವನ್ನು ಮಾಡಲು ಗುಡಿಯ ಬಾಗಿಲಿಗೆ ಬಂದು ಹಣ್ಣು, ಕಾಯಿ, ಬುತ್ತಿಯನ್ನು ಒಳಕ್ಕೆ ಕೊಟ್ಟು ಬಾಗಿಲಲ್ಲಿ ಭಕ್ತಿಯಿಂದ ಕೈಮುಗಿದುಕೊಂಡು ನಿಂತುಕೊಂಡರು; ಹಣ್ಣು ಕಾಯಿ ಅರ್ಪಣೆ ಮಾಡಿದ ಮೇಲೆ ಮಂಗಳಾರತಿಯನ್ನು ಕೊಡಲು ತಂದಾಗ ಇವರ ಹಿಂಬಾಗದಿಂದ ಕರ್ಕಶವಾದ ಜೀರಲು ಶಬ್ದ ಬರುತ್ತದೆ; ಜಯಮ್ಮನೆಂಬ ಹುಡುಗಿಯೂ ತಿರುಗಿ ನೋಡುತ್ತಾಳೆ ಹರಿಜನ ಮತದ ತಲೆಗಡುಕ ಒಂದು ಕುರಿಯ ತಲೆಯನ್ನು ಕಡಿದು ಕೆಳಕ್ಕೆ ಉರುಳಿಸುತ್ತಾನೆ. ಈ ಕರ್ತವ್ಯವೂ ದೇವರ ಎದುರಿನಲ್ಲಿ ನೆಡದಿತ್ತು ಇನ್ನೂ ನಾಲ್ಕು ಕುರಿಗಳು ವಧೆಯಾಗಲು ಬಂದಿದ್ದವು, ಕಡಿದ ಕುರಿಯ ಚೆಲ್ಲಿದ ರಕ್ತ ಅದು ಒದ್ದಾಡುತ್ತಿದ್ದ ಸ್ಥಿತಿಯನ್ನು ನೋಡಿದ ಈ ಭಕ್ತೆಯು ಮಾಂಸಾಹಾರಿಯಾಗಿದ್ದರು ಸಹ ಮತಿ ಭ್ರಮಣೆ ಯಾದಂತಾಗಿ ಶ್ರೀ ದೇವಿಯವರು ಮೈ ಮೇಲೆ ಆವೇಶವಾಗಿ ಬಂದಂತೆ, ಮೈ ಯನ್ನು ನಡುಗಿಸುತ್ತಾ ಆರ್ಭಟಿಸಿ ನನಗೆ ಕರ್ಪೂರ ಹಚ್ಚಿ ತೀರ್ಥಹಾಕು ಎಂದು ದೊಡ್ಡ ದ್ವನಿಯಲ್ಲಿ ಹೇಳಿದ್ದನ್ನು ನೋಡಿದ ಜನ ಸಮೂಹವು ಈಕೆಯ ಕೆಂಪಾದ ಕಣ್ಣು ಅದುರುತ್ತಿದ್ದ ಮೈಯನ್ನು ನೋಡಿ ಭಯದಿಂದ ಡೀಜ್ಮೂಡರಾಗುತ್ತಾರೆ; ಮತ್ತೆ ಕರ್ಪೂರ ಹಚ್ಚಲಿಲ್ಲ ಎಂದು ಘರ್ಜಿಸಿದಾಗ ಅರ್ಚಕರು ಕೂಡಲೇ ಕರ್ಪೂರದ ತಟ್ಟೆಯನ್ನು ತಂದು ತೀರ್ಥಪ್ರೋಕ್ಷಣೆ ಮಾಡುತ್ತಾರೆ ಆಗ ಹುಡುಗಿಯೂ ತಟ್ಟೆಯನ್ನು ಕೈಗೆ ತೆಗೆದುಕೊಂಡು ಅಹಹಾ ನಾನು ಹಿಂಸಾ ಮಾರ್ಗದವಳಲ್ಲ, ವೀರಶೈವ ಧರ್ಮದ ಉಪದೇಶ ಪಡೆದು ನೆಲೆಸಿರುವ ಕಾರಣ ಯಾವ ಪ್ರಾಣಿಯು ಜೀವವನ್ನು ಕೊಳ್ಳುವವಳು ಅಲ್ಲ ತೆಗೆಯುವವಳು ಅಲ್ಲ ಈ ಗ್ರಾಮದ ಪ್ರತಿಯೊಂದು ಪ್ರಾಣಿಯು ಜೀವನವನ್ನು ರಕ್ಷಿಸುವ ಉದ್ದೇಶದಿಂದ, ಇಲ್ಲಿಗೆ ಬಂದು ನೆಲೆಸಿರುತ್ತೇನೆ ಎಲ್ಲರ 'ರಕ್ಷಾ ದೇವತೆಯಾಗಿರುತ್ತೇನೆಯೇ ಹೊರತು ರಕ್ಕಸಿಯಲ್ಲ ಲಿಂಗವಂತರ ಮನೆಯಲ್ಲಿ ತಂಗಿದ್ದು ಅಹಿಂಸಾ ಧರ್ಮವನ್ನು ಆಚರಿಸಿಕೊಂಡು ಹೋಗುತ್ತಿರುವ ಲಿಂಗವಂತ ವ್ಯಕ್ತಿಯ ಮುಖಾಂತರ ಅಭಿಷೇಕ, ಹೋಮ, ಪೂಜೆಗಳಿಂದ ಸಂಸ್ಕಾರವನ್ನು ಪಡೆದು ಶರಣ ಧರ್ಮದ ಆಚರಣೆಯುಳ್ಳವಳಾಗಿದ್ದೇನೆ ಆದಕಾರಣ ವೀರಶೈವರಾಗಲಿ ಇತರೆ ಯಾವ ತಿನ್ನುಣ್ನುವ ಈ ಮೂಡ ಪದ್ಧತಿಯಿಂದ ಕಳಂಕಿತಳಾಗುತ್ತೇನೆ. ಅಸ್ಪುರ್ಷರ ಸಾಲಿನ ದುಷ್ಟ ದೇವತೆ ಎಂಬ ಭಾವನೆ ನನ್ನ ಭಕ್ತರಲ್ಲಿ ನೆಲೆಯಾಗುತ್ತದೆ, ಇಲ್ಲಿಂದ ಮುಂದಿನ ವರ್ಷಗಳಲ್ಲಿ ಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಮಾಡಿರಿ ವೀರಶೈವರು ಅಹಿಂಸಾ ದರ್ಮದವರಾಗಿರುವುದರಿಂದ ಮತ್ತೆ ೧೦೧ ಮಾರಿಗಳಿಗೆ ಶಾವಿಗೆ ಎಡೆ ಇತ್ತು ಪೂಜೆ ಸಲ್ಲಿಸಬೇಕಾಗಿರುವುದರಿಂದ, ಮೊದಲು ಆಚರಿಸಬೇಕು ನಂತರ ಪರಿಶಿಷ್ಟ ಜಾತಿಯವರು ಮುಂದಿನ ವಾರ ಆಚರಿಸುವುದು ನನಗ ಇಷ್ಟವಾಗುತ್ತದೆ ಏಕೆಂದರೆ ಅವರು ತಿನ್ನುಣ್ನುವ ಜಾತಿ ತಮ್ಮ ಉದರ ಪೋಷಣೆಗಾಗಿ ಮಾಡುವ ಹಿಂಸಾ ಕಾರ್ಯದ ಪಾಪವನ್ನು ಸ್ವಾರ್ಥತೆಯಿಂದ ದೈವದ ಮೇಲೆ ಹೊರಿಸುತ್ತಾರೆ ಇದು ಹೇಯ ಕೃತ್ಯ, ಆದರೂ ದರ್ಮದ ಅರಿವು ಪ್ರಾಣದ ಬೆಲೆಗೊತ್ತಿಲ್ಲದ ಮೌಡ್ಯತೆಯಿಂದ ಕೊಡುವ ಪಾಪದ ಬಲಿಯು ನನ್ನ ಎದುರಿನಲ್ಲಿರುವ ದ್ವಾಮವ್ವ ಎಂಬ ಚೌಡಿಯು ಒಪ್ಪಿಕೊಳ್ಳುತ್ತಾಳೆ ಆಕೆಗೆ ನಿತ್ಯದ ಪೂಜೆ ವಾರದ ಪೂಜೆಗಳಿರುವುದಿಲ್ಲ ಪ್ರಾಣಿಗಳ ಬಲಿಯಿಂದಲೇ ತೃಪ್ತಿ ಪಡುವವಳಾಗಿದ್ದಾಳೆ, ನಾನು ಮಾತ್ರ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ದ್ವೇಷಿಸುತ್ತೇನೆ ಈ ಹಿಂಸಾ ಮಾರ್ಗವನ್ನು ಕೈಬಿಟ್ಟು ನನ್ನನ್ನು ನಿತ್ಯ ಅಲಂಕರಿಸುವ ಶಾಶ್ವತ ವಸ್ತುಗಳು ಬೆಳ್ಳಿಯ ರೂಪಕಗಳು ಕಂಚು, ತಾಮ್ರದ ವಸ್ತುಗಳು ಉಡಿಗೆ ಸಾಧನಗಳು ಹೆಚ್ಚಿನದಾಗಿ ನಂಬಿಕೆ, ಭಕ್ತಿಯಿಂದ ಪೂಜಿಸಿದರೆ ತೃಪ್ತಳಾಗುತ್ತೇನೆ ಎಂಬುದಾಗಿ ದೇವಿಯವರ ಅಪ್ಪಣೆಯಾದಂತೆ ಆ ಹೆಣ್ಣು ಮಗಳ ಬಾಯಿಂದ ಹೋರಟ ಮಾತುಗಳಿಂದ ನೆರದಿದ್ದ ಭಕ್ತ ಸಮೂಹವು ನಂಬಿಕೆ, ಭಯದಿಂದ ಮೂಕ ಪ್ರೇಕ್ಷರಾಗುತ್ತಾರೆ ಎಲ್ಲರ ಸಲಹೆಯಂತೆ ಸನ್ನಿದಿಯಿಂದ ತೀರ್ಥತಂದು ಹೆಂಗಸಿನ ಮೇಲೆ ಪ್ರೋಕ್ಷಣೆ ಮಾಡಿದಾಗ ಮತ್ತು ಮಂಗಳಾರತಿ ಮಾಡಿದ ಮೇಲೆ ಆಕೆಯ ವಾಸ್ತವ ಸ್ಥಿತಿಗೆ ಬರುತ್ತಾಳೆ, ಕೋತೂಹಲಗೊಂಡ ಸಮೂಹದವರು ಯಾಕೆ ಹೀಗೆಲ್ಲ ಮಾತನಾಡಿದೆ ಎಂಬುದಾಗಿ ವಿಚಾರ ಮಾಡಿದಾಗ, ನಾನೇನು ಮಾತನಾಡಿದೆ; ಈ ಬಗ್ಗೆ ಯಾವ ಅರಿವು ಇರಲಿಲ್ಲ ಎಂಬುದಾಗಿ ಹೇಳುತ್ತಾಳೆ, ದೇವಿಯವರು ಈ ಭಕ್ತೇಯ ಮೇಲೆ ಆವೇಶವಾಗಿ ಈ ರೀತಿ ಅಪ್ಪಣೆ ಮಾಡಿದ್ದಾಳೆ ಎಂದು ನಂಬುತ್ತಾರೆ: ನಂತರ ಉಳಿದ ಕುರಿಗಳು ಪುನರ್ಜನ್ಮವನ್ನು ಪಡೆದುಕೊಳ್ಳುತ್ತದೆ; ಶ್ರೀಮತಿ ಜಯಮ್ಮನಿಗೆ ಸನ್ನಿಧಿಯಿಂದ ತಾಂಬೂಲ, ಫಲ, ಪುಷ್ಪಗಳನ್ನು ಕೊಟ್ಟು ಸನ್ಮಾನಿಸಲಾಯಿತು ಅಂದಿದಿಂದ ಆದೇಶವಾದಂತೆ ಬಂಡಿಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಆಚರಿಸಿಕೊಂಡು ಬರುವುದು ಪದ್ದತಿಯಾಗಿದೆ...........

ಚಿಕ್ಕಮ್ಮನವರ ಆಗಮನ ಈ ಗ್ರಾಮದ ಹರಿಜನ(ಪಂಗಡ) ಜಾತಿಗೆ ಸೇರಿದವನಾದ ಸುಮಾರು 14 ವರ್ಷ ವಯಸ್ಸಿನ ಕಾಳಯ್ಯನೆಂಬ ಹುಡುಗನು ತನ್ನ ಮನೆಯಲ್ಲಿನ ಬಡತನ ಹಾಗೂ ಈತನು ಸೋಮಾರಿತನದ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ಬೇಸರ ಉಂಟಾಗಿ ಕೆಲಸಕ್ಕೆ ಹೋಗು ಏನಾದರೂ ದುಡಿಮೆ ಮಾಡು ಎಂದು ದಿನವೂ ನಿಂದನೆ ಮಾಡುತ್ತಿದ್ದರು; ನಿತ್ಯವೂ ಹಂಗಿನ ಊಟಕ್ಕಾಗಿ ಬಹಳ ಬೇಸರವುಂಟಾಗಿ ಒಂದು ದಿನ ಮನೆಯನ್ನು ಬಿಟ್ಟು ಹೊರಡುತ್ತಾನೆ; ಗೊತ್ತು ಗುರಿಯಿಲ್ಲದ ದಿಕ್ಕಿನತ್ತ ಹೊರತು ದಾರಿಯಲ್ಲಿ ಸಿಕ್ಕಿದ ಗ್ರಾಮಗಳಲ್ಲಿ ಅವರಿವರ ಮನೆಗಳಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಊರಿಂದ ಊರಿಗೆ ಸವೆದ ಕಾಲುದಾರಿಯನ್ನು ಹಿಡಿದು ಆಳವಿಲ್ಲದ ನದಿ, ಕಣಿವೆಗಳನ್ನು ದಾಟಿ 60 ಮೈಲಿಗಳನ್ನು ಕ್ರಮಿಸಿ ಮಂಜ್ರಾಬಾದ್(ಸಕಲೇಶಪುರ) ಗೆ ಬರುತ್ತಾನೆ ಅಲ್ಲಿ ಸಣ್ಣ ಅಂಗಡಿ ಮುಂದೆ ಕುಳಿತುಕೊಂಡಾಗ ಅಂಗಡಿ ಮಾಲಿಕನು ವಿಚಾರಣೆ ಮಾಡುತ್ತಾನೆ, ತನ್ನ ಪರಿಸ್ಥಿತಿ ಇಲ್ಲಿಗೆ ಬಂದ ಕಾರಣಗಳನ್ನು ತಿಳಿಸುತ್ತಾನೆ. ಅಂಗಡಿಯವನಿಗೆ ಕನಿಕರ ಉಂಟಾಗಿ ತಿನ್ನಲು ಸ್ವಲ್ಪ ಕಾಳುಗಳನ್ನು ಕೊಡುತ್ತಾನೆ ಅದೇ ಸಮಯಕ್ಕೆ ಬಂದು ಕಾಫಿ ಎಸ್ಟೇಟಿನ ರೈತನೊಬ್ಬ ಅದೇ ಅಂಗಡಿಗೆ ಬರುತ್ತಾನೆ ಅವನ ಸಂಗಡ ಈ ಹುಡುಗನನ್ನು ಕಳುಹಿಸಿ ಕೊಡುತ್ತಾನೆ: ಅಲ್ಲಿಂದ ಅದೇ ತಾಲ್ಲೂಕಿಗೆ ಸೇರಿದ ಹಾನಬಾಳು ಪ್ರದೇಶದಲ್ಲಿದ್ದ ಶ್ರೀ ದಗ್ಗಪ್ಪಗೌಡರ ಒಡೆತನದ ಗಿರಿಕನ್ಯೆ ಎಂಬ ಕಾಫಿ ತೋಟಕ್ಕೆ ಬಂದು ಅಲ್ಲಿ ದಿನಗೂಲಿ ಆಳಾಗಿ ಸೇರಿಕೊಂಡು ನಂತರದ ವರ್ಷಗಳಲ್ಲಿ ಈತನ ಅನುಭವ ಕಾರ್ಯದಕ್ಷತೆಗಳ ಮೇಲೆ ಪಟ್ಟಿ ಆಳಾಗಿ ಖಾಯಂ ಗೊಳಿಸುತ್ತಾರೆ' ಈ ಸಂಭಂದ ಕೆಲವು ವರ್ಷಗಳವರೆಗೆ ನಿಯತ್ತಿನಿಂದ ಕೆಲಸ ಮಾಡಿಕೊಂಡು ತನ್ನ ಸಹುದ್ಯೋಗಿಗಳಿಗೆ ಮೆಚ್ಚಿಗೆಯಾಗುತ್ತಾನೆ. ಈ ತೋಟದಲ್ಲಿ ಕಾಳಯ್ಯ ಎಂಬ ಹೆಸರಿನವರು ಮೂರ್ನಾಲ್ಕು ಜನರಿರುತ್ತಾರೆ ಕಾರಣ ಈತನನ್ನು ಗುರುತಿಸಲು ಸಲಿಗೆಯಿಂದ 'ಮೂಡ್ಲಾ' ಎಂಬ ಅಡ್ಡ ಹೆಸರಿನಿಂದ s, ಇದರ ಅರ್ಥ ಮೂಡಣ ಸೀಮೆಯವನು ಎಂಬ ಭಾವನೆ , ದುಗ್ಗಪ್ಪ ಗೌಡರು ತಮ್ಮ ತೋಟದ ಬೆಂಗಾವಲಿಗಾಗಿ ದ್ಯಾಮವ್ವ ಎಂಬ ಚೌಡಿಯನ್ನು ಕರೆತಂದು ತೋಟದ ಮುಖ್ಯ ದ್ವಾರದ ದೇವತಾರೆ ಮರದ ಬುಡದಲ್ಲಿ ನೆಲೆಮಾಡಿರುತ್ತಾಲೆ, ಗೌಡರು ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿ ಮಾಂಸಾಹಾರಿಯಾಗಿದ್ದರಿಂದ ಸ್ವಾರ್ಥತೆಯಿಂದ ಕಾಡುಪ್ರಾಣಿ ಇಲ್ಲವೇ ಸಾಕು ಪ್ರಾಣಿಗಳನ್ನು ಈ ಚೌಡಿಗೆ ಬಲಿಕೊಟ್ಟು ನಂತರ ತಾವು ಸ್ವಾಹಾ ಮಾಡುತ್ತಿದ್ದರು, ಈ ಚೌಡಿಗೆ ಬೇರೆ ಯಾವ ಪೂಜೆ ಪುರಸ್ಕಾರಗಳು ಇರರಿಲ್ಲ . ಬಲಿಯಿಂದಲೇ ಪೋಷಣೆಯಾಗುತ್ತಿತ್ತು ಈ ಚೌಡಿ ಇದ್ದ ಸಂಕೇತ ಕಪ್ಪಾದ ಗುಂಡು ಕಲ್ಲು ಅರಿಶಿಣ, ಕುಂಕುಮ ಲೇಪನ ಮತ್ತು ಬಲಗಡೆಗೆ ಒಂದು ದ್ವಿಶೂಲ ನಿಲ್ಲಿಸಿರುವುದು ಕೆಲವಾರು ವರ್ಷಗಳಲ್ಲಿ ಶ್ರೀ ದುಗ್ಗಪ್ಪ ಗೌಡರು ತಮ್ಮ ತೋಟವನ್ನು ಕಾರಣಾಂತರಗಳಿಂದ 'ಮೆII ಪ್ರಾನ್ಸಿಸ್ ಹಾರ್ಲೆ' ಎಂಬ ಆಂಗ್ಲ ಉದ್ಯಮಿಗೆ ಮಾರಾಟ ಮಾಡುತ್ತಾರೆ ಮೇII ಹಾರ್ಲೆಯವರು ಮೂಡನಂಬಿಕೆಯಿಂದ ಮಾಡುತ್ತಿದ್ದ ಅನಾಚಾರಗಳನೆಲ್ಲ ನಿಲ್ಲಿಸಿ ಬಿಡುತ್ತಾರೆ ಇದರಿಂದ ಚೌಡಿಗೆ ಯಾವ ಪುರಸ್ಕಾರವು ಇಲ್ಲದಂತಾಗುತ್ತದೆ ಕಾರಣ ಈಕೆಗೆ ಬಳಲುವ ಪರಿಸ್ಥಿತಿ ಉಂಟಾಗುತ್ತದೆ, ಈ ಮದ್ಯೆ 'ಮೂಡ್ಲನು' ತನ್ನ ಜೊತೆಗಾರನ ಸಂಗಡ ಮಾತನಾಡುವಾಗಲೆಲ್ಲ, ನಮ್ಮ ಊರಿನ ಶ್ರೀ ಗ್ರಾಮ ದೇವತೆ ಬನದಲ್ಲಿ ನಿರಂತರ ಪ್ರಾಣಿಗಳ ಬಲಿಯು ನಡೆಯುತ್ತಿರುವ ಬಗ್ಗೆ ಹೊಗಳಿಕೆಯ ಮಾತುಗಳಿಂದ ಆಗಿಂದಾಗೆ ಹೇಳುತ್ತಿದ್ದದನ್ನು ಈ ಚೌಡಿಯು ಕೇಳಿಸಿ ಕೊಂಡಿರುತ್ತಾಳೆ ಮತ್ತು ಇಲ್ಲಿಂದ ಹೊರಡಬೇಕೆಂಬ ನೀರಿಕ್ಷೆಯಲ್ಲಿ ಸಮಯ ಕಾಯುತ್ತಿರುತ್ತಾಳೆ. ಈ ಸಮಯ 'ಮೂಡ್ಲಕಾಳನಿಗೆ' ೨೭ ವರ್ಷಗಳು ಕಳೆದಿರುತ್ತದೆ ಸಂಸಾರಿಯಾಗುವ ಹಂಬಲದಿಂದ ಊರಿಗೆ ಹೊರಡುವ ಮನಸ್ಸಾಗುತ್ತದೆ ಕೈಯಲ್ಲಿ ಸ್ವಲ್ಪ ಹಣವನ್ನು ಕೂಡಿಸಿಕೊಂಡು; ಒಂದು ಶುಭದಿನ ಬೆಳಗಿನ ೫ ಘಂಟೆಗೆ ಊರಿಗೆ ಅಭಿಮುಖವಾಗಿ ಹೊರಡುತ್ತಾನೆ. ಈ ಸಮಯವನ್ನು ಕಾಯುತ್ತಿದ್ದ ಚೌಡಿಯು ಈತನ ಬೆನ್ನುಹಿಡಿದು ಮೈತುಂಬಿ ಕೊಳ್ಳುತ್ತಾನೆ ಇದರಿಂದ ಕಾಲವು ಮೂಡ್ಲನಿಗೆ ಪ್ರಯಾಣದ ಆಯಾಸ, ಹಸಿವು, ನೀರಡಿಕೆಗಳು ಕಂಡುಬರುವುದಿಲ್ಲ, ತಾನು ಇಲ್ಲಿಗೆ ಬಂದಾಗ ಇದ್ದ ನೇರದಾರಿಯೂ ಸವೆದು ಉತ್ತಮವಾಗಿದ್ದರಿಂದ ಬಹಳ ಬೇಗ ಊರು ತಲುಪುತ್ತಾನೆ, ಇಲ್ಲಿಗೆ ಬಂದಾಗ ಪದ್ದತಿ ನಂಬಿಕೆಯಂತೆ ದೇವರಿಗೆ ಕೈ ಮುಗಿಯಲು ನಿಲ್ಲುತ್ತಾನೆ, ಈತನ ಏಕಾಂಕತೆಯನ್ನು ತಿಳಿದ ಚೌಡಿಯು ಇಳಿದು ಕೊಳ್ಳುತ್ತಾನೆ, ಈಗ ಹುಡುಗನಿಗೆ ಆಯಾಸ, ದಣಿವು, ಹಸಿವು ಎಲ್ಲವುದರ ಅನುಭವವಾಗುತ್ತದೆ ಮನೆಗೆ ಹೋದ ಮೇಲೆ ಊಟ ಮಾಡಿ ಇದಾವುದರ ಅರಿವೂ ಇಲ್ಲದೆ ನಿದ್ರೆಗೆ ಜಾರುತ್ತಾನೆ, ಸುಖ ನಿದ್ರೆ ಕಳೆದು ಬೆಳಗಿನ ಜಾವ ಅರೆ ನಿದ್ರೆಯಲ್ಲಿದ್ದಾಗ ಯಾರೋ ಕರೆದಂತಾಗುತ್ತದೆ ನಾನು 'ಹಾರ್ಲೆ' ತೋಟದ 'ದ್ಯಾಮವ್ವ(ಚೌಡಿಯು) ನಿನ್ನನ್ನು ಆಶ್ರಯಿಸಿ ಇಲ್ಲಿಗೆ ಬಂದಿದ್ದೇನೆ; ಕಾಫಿ ತೋಟದಲ್ಲಿ ನಾವಿದ್ದ ಸಂಕೇತವಾಗಿ ನಾಳೆ ಬೆಳಿಗ್ಗೆ ನದಿಯಿಂದ ಸವೆದು ಹೊಳಪಾಗಿರುವ ಗುಂಡುಕಲ್ಲಿನ ರೂಪದ ಒಂದು ಕಲ್ಲು ಶಿಲೆಯನ್ನು ತಂದು ಅರಿಶಿಣ, ಕುಂಕುಮ ಲೇಪನ ಮಾಡಿ ಒಂದು ದ್ವಿಶೂಲ ವನ್ನು ತಯಾರಿಸಿ ನನ್ನ ಬಲಕ್ಕೆ ನಿಲ್ಲಿಸಿ ಶ್ರೀ ಗ್ರಾಮದೇವತೆ ದೇವಸ್ಥಾನದ ಮುಂಭಾಗಕ್ಕೆ ದೇವಿಗೆ ಎದುರಾಗಿ ಸ್ಥಾಪನೆ ಮಾಡು ಬಂಡಿಹಬ್ಬದ ದಿನ ಪೂಜೆಯನ್ನು ಮಾಡು' ಇದು ನಿನ್ನ ವಂಶ ಪಾರಂಪರ್ಯವಾಗಿ ನೆಡೆಯಲಿ ಎಂದು ಹೇಳಿದಂತೆ ಕೆಲಸ ಬೆಳಿಗ್ಗೆ ನೆರೆವೀರಿಸಿ ಸ್ಥಾಪನೆ ಗೊಳ್ಳುತ್ತಾಳೆ ಹೀಗೆ ಚೌದಿಯು 'ಮೂಡ್ಲನ ಮೇಲಿಂದ ಇಳಿದ ತಕ್ಷಣ ಗ್ರಾಮದೇವತೆಯವರನ್ನು ದರ್ಶನ ಮಾಡಿ ತನ್ನ ಹಿಂದಿನ ಪರಿಸ್ಥಿತಿಯನ್ನೆಲ್ಲ ಹೇಳಿ ನನ್ನ ನಾಮಧೇಯ ದ್ವ್ಯಾಮವ್ವ ಎಂಬ ಚೌಡಿರೂಪಿಣಿ ನನಗೆ ಯಾವ ತರಹದ ಪೂಜೆ, ಪುರಸ್ಕಾರಗಳು ಗುಡಿ ಗೋಪುರಗಳಿಲ್ಲ ಹಾಗೂ ಇಷ್ಟವಿರುವುದಿಲ್ಲ ಕೆಂಪು ವರ್ಣ, ಅರಿಶಿನ, ಕುಂಕುಮ, ರಕ್ತ ಮಾಂಸ ಪ್ರಿಯವಾದ ವಸ್ತುಗಳು ಈ ಹಿಂದೆ ನಾಗಿದ್ದ ಕಾಫಿ ತೋಟವು ಮೆIIಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋಸಲ ಲಂಗನೆ ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೆನ್ನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಭಂದ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ. ನಾನು ಶೈವ ಧರ್ಮದ ತತ್ವ ಸಿದ್ಧಾಂತ ನಿಯಮಗಳನ್ನು ಮೈ ಗೂಡಿಸಿಕೊಂಡು ವೀರಶೈವರಿಂದ ಪೂಜಿಸಿಕೊಳ್ಳುತ್ತಾ ನೆಲೆಯಾಗಿರುತ್ತಾನೆ, ಈ ಗ್ರಾಮದ ದಲಿತ ವರ್ಗದವರು ತಮ್ಮ ಸ್ವಾರ್ಥ, ಅಜ್ಞಾನ, ಮೂಡನಂಬಿಕೆ, ಪ್ರಾಣಿ ಪಕ್ಷಿಗಳ ಬಲಿಯನ್ನು ನನ್ನ ಬನದಲ್ಲಿ ಕೊಡುತ್ತಿರುವ ಸಂಭಂದ ನನಗೆ ಕಳಂಕ ತರುತ್ತಿದ್ದಾರೆ. ಈ ಗ್ರಾಮದಲ್ಲಿನ ಎಲ್ಲ ಜೀವ ರಾಶಿಗಳ ಬಗ್ಗೆ ದಯೆ ಕರುಣೆಯನ್ನು ಹೊಂದಿರುವ ರಕ್ಷಾ ದೇವತೆಯಾಗಿ ಇಲ್ಲಿಗೆ ಬಂದು ನೆಲೆಸಿರುತ್ತೇನೆ ಅಹಿಂಸಾ ಮಾರ್ಗವನ್ನು ಆರಾಧಿಸುತ್ತಿರುವ ಕಾರಣ ಹಿಂಸೆಯ ಪ್ರಾಣಿಗಳ ಬಳಿಯೂ ಇಷ್ಟವಾಗುವುದಿಲ್ಲ ಆದ್ದರಿಂದ ನೀನು ನನ್ನ ಸಹಚಾರಳಾಗಿದ್ದು ನನ್ನ ಎದುರಿನಲ್ಲೇ ಇರಬೇಕು ಈ ಜಾಗದಲ್ಲಿ ನಿನಗೆ ಯಾವುದೇ ವಿಧವಾದ ಹಕ್ಕು ಬಾಧ್ಯತೆಗಳು ಇರುವುದಿಲ್ಲ ಹಾಗೂ ನಿನ್ನ ಇಚ್ಛೆ ಪ್ರಕಾರ ನಿತ್ಯದ ವಾರದ ಪೂಜೆ ಪುರಸ್ಕಾರಗಳಿಗೆ ಅನರ್ಹಳಾಗಿರುತ್ತಿ ಹರಿಜನ ವ್ಯಕ್ತಿಯ ಮುಖಾಂತರ ಇಲ್ಲಿಗೆ ಬಂದಿರುವುದರಿಂದ, ವರ್ಷಕ್ಕೊಮ್ಮೆ ನೆಡೆಯುವ ಬಂಡಿ ಹಬ್ಬದ ದಿನ ಮಾತ್ರ ಮೂಡ್ಲನಿಂದ ಪೂಜಿಸಿಕೊಂಡು ಅವರು ಕೊಡುವ ಪ್ರ್ರಣಿಗಳ ಬಲಿಯನ್ನು ಪೂರ್ಣವಾಗಿ ನೆನೆ ಅನುಭವಿಸು; ಮತ್ತು ನನ್ನ ಆಜ್ನದಾರಕಳಾಗಿದ್ದು ,ಭಕ್ತ ಸಮೂಹಕ್ಕೆ ಯಾವ ವಿಧವಾದ ಕಷ್ಟ ತೊಂದರೆಗಳನ್ನು ಕೊಡದೆ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು ನೀನು ಇಲ್ಲಿಗೆ ಬಂದಿದ್ದರಿಂದ ನನಗೆ ಕಳಂಕ ತಪ್ಪಿದೆ ಒಳ್ಳೆಯದೆಯಾಯಿತು ಈ ದ್ವಾರದ ಮುಖಾಂತರ ಗ್ರಾಮಕ್ಕೆ ಯಾವ ಮಾರಿಯೂ ನುಸಳದಂತೆ ಬೆಂಗಾವಲಾಗಿರು ಎಂದು ಹೇಳಿ ನೆಲಸಲು ಒಪ್ಪಿಗೆ ಕೊಟ್ಟು ಪರಿಶಿಷ್ಟರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ಸ್ವೀಕರಿಸುವ ಚಿಕ್ಕಮ್ಮ ಎಂಬ ರೂಡಿ ನಾಮದಿಂದ 'ಚೌಡಿಯು' ಶ್ರೀ ಗ್ರಾಮದೇವತೆಯವರ ಎದುರಿನಲ್ಲಿ ನೆಲೆಯಾಗಿದ್ದಾಳೆ ಈಕೆಯ ಸಂಕೇತ ಹೊಳಪಾದ ಗುಂಡುಕಲ್ಲು, ಅರಿಶಿನ ಕುಂಕುಮ, ಲೇಪಿತ ಬಲಭಾಗದಲ್ಲಿ ದ್ವಿಶೂಲ ದೇವಿಯವರು ದ್ವಾಮವ್ವ ಎಂಬ ಚೌಡಿಯನ್ನು ತನ್ನ ಎದುರಿನಲ್ಲೇ ನೆಲೆ ಮಾಡಿದ ಸಂಭಂದ ರಾತ್ರಿಯಿಡೀ ನೆಡೆದ ಸಂವಾದವು 'ಹಲಗೇಗೌಡರ' ಮಗ 'ಶಿವೇಗೌಡರ' ಸ್ವಪ್ನದಲ್ಲಿ ಎಲ್ಲಾ ಆದೇಶಗಳು ಎದುರಿನಲ್ಲಿ ನೆಡದಂತೆ ಕಾಣಿಸಿಕೊಂಡ ವಿಚಾರವನ್ನು ಬೆಳಿಗ್ಗೆ ಭಕ್ತರಿಗೆ ತಿಳಿಸುತ್ತಾರೆ. ಕಲ್ಲು ಚಪ್ಪಡಿಗಳಿಂದ ಮಂಟಪ ಇವುಗಳು ಚಿಕ್ಕಮ್ಮನ ರೂಪಕಗಳು ಹಾಗೂ ಇರುವಿಕೆಗಳು 'ಶ್ರೀ ಗ್ರಾಮದೇವತೆಯು' ನಮ್ಮ ಗ್ರಾಮದ ವಾಸ್ತು ಪ್ರದಾನವಾದ ಅಂದರೆ ಈಶಾನ್ಯ ಮೂಲೆಯಲ್ಲಿ ಪೂರ್ವಾಭಿ ಮುಖವಾಗಿ ನೆಲೆಯಾಗಿರುವುದರಿಂದ ಶಕ್ತಿ, ಯೋಗ, ಕರಣ ಹಾಗೂ ಆರು ಭುಜ ಬಲಗಳು ಇರುವುದರಿಂದ ಅಧಿಕವಾಗಿ ಕರುಣೆಯನ್ನು ಮೈಗೂಡಿಸಿ ಕೊಂಡಿರುತ್ತಾಳೆ ಎದುರಿನಲ್ಲಿ ದೇವಿಯವರ ಅಭಿಷೇಕ ಹಾಗೂ ಪ್ರಾಣಿ ಪಕ್ಷಿಗಳಿಗೆ ಜೀವನಾಧಾರವಾದ ನೀರಿನ ಕೆರೆ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಆಯಸ್ಸು ಆರೋಗ್ಯವನ್ನು ಕೊಡುವ ವಿಶಾಲವಾದ 'ಅಶ್ವಥ' ಮರ ಇರುವುದು ಮತ್ತು ಗ್ರಾಮದ ಪ್ರವೇಶ ದ್ವಾರದಲ್ಲಿರುವುದರಿಂದ, ಈ ಕ್ಷೇತ್ರವು ಕ್ಷೇತ್ರವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿರುತ್ತದೆ ತುಂಬಾ ಪುರಾತನದ್ದಾಗಿದ್ದ 'ಅಶ್ವಥ' ಮರವು ಪ್ರಕೃತಿಯ ಒತ್ತಡದಿಂದ ಬಿದ್ದು ಹೋದ ಪ್ರಯುಕ್ತ ಹಾಲಿ ಬೆಳೆದಿರುವ ಮರವನ್ನು ಗ್ರಾಮದ ಮುಖಂಡರು, ದೇವಿಯ ಪರಮ ಭಕ್ತರೂ ಆಗಿದ್ದ 'ಲಿಂII ಬಿ ಯಳ್ಳಪ್ಪನವರು ಆಚಾರವೆಂಬ ಸಸಿಯನ್ನು ನೆಟ್ಟು ಭಕ್ತಿಯೆಂಬ ನೀರನ್ನೆರೆದು ಬೆಳಸಿ ಚಿರಋಣಿಯಾಗಿದ್ದಾರೆ ಈ ಮರದ ಬುಡದ ಸುತ್ತಲೂ ಲಿಂIIಕುಂಟೇಗೌಡ ರುದ್ರಪ್ಪನವರ ಪುತ್ರ ಹಾಗೂ ಲಿಂII ಆರ.ಸಿದ್ದಲಿಂಗಪ್ಪನವರ ಪುತ್ರರು ಆದ ಶ್ರೀ ಹೆಚ್, ಎಸ್, ಶಿವಾನಂದ ಎಂಬ ಭಕ್ತನಿಗೆ ದೇವಿಯವರ ಪ್ರೇರಣೆಯಾಗಿ ಸುಂದರ ಹಾಗೂ ಸುಭದ್ರವಾದ ಅರಳೀ ಕಟ್ಟೆಯನ್ನು ಕಟ್ಟಿಸಿ ಇದ್ದನ್ನು ತ್ರಿವಿಧ ದಾಸೋಹಿಗಳು ನೆಡೆದಾಡುವ ದೇವರು ಎಂಬ ಹೆಗ್ಗಳಿಕೆಗೆ ಅರ್ಹರಾದ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಅಮೃತ ಹಸ್ತದಿಂದ ಪ್ರಾರಂಭೋತ್ಸವ ಮಾಡಿಸಿ ಗ್ರಾಮದ ಭಕ್ತ ಸಾಮೂಹಕ್ಕೆ ಸಮರ್ಪಣೆಮಾಡಿ ಕೀರ್ತಿವಂತರಾಗಿದ್ದಾರೆ ಇದೆ ಭಕ್ತರು ಅರಳಿ ಮರದ ಪಕ್ಕಕ್ಕೆ ಬೇವಿನ ಸಸಿಯನ್ನು ಬೆಳಸಿ ಕಟ್ಟೆಯ ಮೇಲೆ ನಾಗರ ಕಲ್ಲು ಮೂರ್ತಿಗಳನ್ನು ಸ್ಥಾಪನೆ ಮಾಡಿರುವುದರಿಂದ ಗ್ರಾಮದ ಭಕ್ತ ಕನ್ಯಾಮಣಿಯರ ಹಾಗೂ ಶೋಡಶಿಯರ ಮನಸ್ಸಿನ ಹಂಬಲ ಈಡೇರಿಕೆಗಳಿಗೆ ಚೈತನ್ಯ ಮಾಯವಾಗಿರುತ್ತದೆ; ಮತ್ತು ಇದೆ ಕುಟುಂಬಕ್ಕೆ ಸೇರಿದ ಆರ್. ಸಿದ್ಧಪ್ಪ ಮತ್ತು ಅವರ ಪುತ್ರರುಗಳಿಗೆ ದೇವಿಯ ಪ್ರೇರಣೆಯಾಗಿ ಗ್ರಾಮದ ಹೃದಯ ಭಾಗದಲ್ಲಿರುವ 'ಶ್ರೀ ಬಸವೇಶ್ವರ ಸ್ವಾಮಿ' ದೇವಸ್ಥಾನದ ಮುಂಭಾಗದ ಪ್ರಭಾವಳಿಯ ಮೇಲೆ ಸುಂದರವಾದ ಬೃಹತ್ ಗಾತ್ರದ ಬಸವ ವಿಗ್ರಹವನ್ನು ನಿರ್ಮಾಣ ಮಾಡಿ ಅದಕ್ಕೆ ವಿಧಿ, ವಿಧಾನಗಳ ಪ್ರಕಾರ ಕುಲ ಪುರೋಹಿತರಿಂದ ದೈವಕಳೆಯನ್ನು ತುಂಬಿ ಮುಂಗಾರು ಮಳೆಯ ಆಗಮನ ನೈರುತ್ಯ ಮೂಲೆಗೆ ದೃಷ್ಟಿಯನ್ನು ಮಾಡಿ ಈ ಗ್ರಾಮದ ಸುಭಿಕ್ಷತೆಗೆ ನಾಂದಿಯಾಗುವಂತೆ ಸಮಾಜಕ್ಕೆ ಸಮರ್ಪಣೆ ಮಾಡಿರುತ್ತಾರೆ. ಈ ಸಂಭಂದ ದಾನಿಗಳು ಹಾಗೂ ಭಕ್ತ ಮಹನೀಯರುಗಳು ಗ್ರಾಮದ ವೀರಶೈವ ಸಮಾಜವು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಈ ಎಲ್ಲ ನೈಸರ್ಗಿಕ ಸಂಪತ್ತುಗಳು ದೇವಿಯವರ ಸಮಾಚ್ಚಯದಲ್ಲಿ ಇರುವುದರಿಂದ ಈ ದೇವ ಬನವು ಪಾಪನಾಶಿನಿ ಎಂಬ ಹೆಗ್ಗಳಿಕೆಗೆ ಅರ್ಹವಾಗಿದೆ ಈ ರೀತಿ ಎಲ್ಲ ಶಕ್ತಿಗಳನ್ನು ಮೈಗೂಡಿಸಿಕೊಂಡಿರುವುದರಿಂದ ಹಾಗೂ ಗ್ರಾಮದ ಪ್ರವೇಶ ದ್ವಾರದಲ್ಲಿ ಪೂರ್ವಾಭಿಮುಖವಾಗಿ ನೆಲೆಯಾಗಿರುವ ಸಂಭಂದ ಜನರು ತಮ್ಮ ಕಾರ್ಯಾರ್ಥವಾಗಿ ಹೊರಗಡೆ ಹೋಗುವಾಗ ಮತ್ತು ಗ್ರಾಮದ ಒಳಕ್ಕೆ ಬರುವಾಗ, ದೇವಿಯವರ ದೇವಾಲಯವಿರುವ ಸ್ಥಳಕ್ಕೆ ಬಂದಾಗ ಮನಸ್ಸಿನ ಮೇಲೆ ಚೈತನ್ಯವುಂಟಾಗಿ ಕೂಡಲೇ ಜಾಗೃತರಾಗಿ ಧೃಡ ಮನಸ್ಸಿನಿಂದ ಕೈ ಮುಗಿಯುತ್ತಾರೆ, ಇಲ್ಲವೇ ಎದೆಯ ಮೇಲೆ ಕೈ ಇಟ್ಟು ಮನಸ್ಸಿನೊಳಗೆ ಭಕ್ತಿಯಿಂದ ವಂದಿಸಿ ಹೋಗುತ್ತಿರುವುದರಿಂದ ಹೋದ ಕಾರ್ಯವು ನಿರ್ವಿಘ್ನವಾಗಿ ನೆರೆªÉÃರುವುದರಿಂದ ನಂಬಿಕೆಯು ದಿನೇ ದಿನೇ ಹೆಚ್ಚಾಗುತ್ತಾ ಬಂದಿರುತ್ತದೆ ಒಂದು ವೇಳೆ ಯಾವುದಾದರೂ ಅಜಾಗರೂಕತೆಯಿಂದ ದೇವಿಯ ಸ್ಮರಣೆ ಮಾಡದೆ ಸನ್ನಿಧಿಯನ್ನು ದಾಟಿ ಹೂಡಾಗ ತಮ್ಮ ಕೆಲಸಗಳು ನೆರವೆರದೇ ತೊಂದರೆಗಳು ಕಂಡು ಬಂದಾಗ ಇದ್ದ ಜಾಗದಿಂದಲೇ ದೇವಿಯವರಿಗೆ ಮನಸ್ಸಿನಲ್ಲಿ ಸ್ಮರಿಸಿ, ಹರಿಸಿಕೊಂಡಾಗ ತೊಂದರೆಗಳು ಕೂಡಲೆ ಬಗೆಹರಿದ ಉದಾಹರಣೆಗಳು ಅನೇಕ ಭಕ್ತರಿಗೆ ಸ್ವಂತ ಅನುಭವವಾಗಿರುವುದರಿಂದ ಸಹಜವಾಗಿರುತ್ತದೆ ಇದೆ ರೀತಿಯಲ್ಲಿ ಭಕ್ತರು ತಮ್ಮ ಮನೆಗಳಲ್ಲಿ ಯಾವುದಾದರೂ ದುಷ್ಟ ಮಾರಿಗಳಿಂದ ಕಷ್ಟ, ತೊಂದರೆಗಳು ಒದಗಿ ಬಂದಾಗ ಮೊಸರನ್ನ ಅಥವಾ ಬೆಲ್ಲದ ಅನ್ನದ ತಳಿಗೆಯನ್ನು ಒಪ್ಪಿಸಿ ಸೇವೆ ಮಾಡುತ್ತೇನೆಂದಾಗಲಿ ಬೆಳ್ಳಿಯ ಮುಖವಾಡಗಳನ್ನು ಧರಿಸಿ ಸುಂದರ ರೂಪದ ಸೇವೆ ಮಾಡುತ್ತೇನೆಂದಾಗಲಿ ಅವರವರ ನಂಬಿಕೆಯಂತೆ ಮನೆಯಲ್ಲಿ ಜ್ಯೋತಿ ಹಚ್ಚಿ ಹರಸಿಕೊಂಡಂತಹ ಭಕ್ತರ ಎಲ್ಲ ಕಷ್ಟ ತೊಂದರೆಗಳಿಗೆ ಪರಿಹಾರದ ಅಪ್ಪಣೆಯಾಗುತ್ತಿರುವುದರಿಂದ; ಈ ಸಂಖ್ಯೆಯು ದಿನೇ ದಿನೇ ಬೆಳೆಯುತ್ತಾ ಬಂದಿರುತ್ತದೆ, ದನೂರ್ಮಾಸದ ಪೂಜಾದಿನಗಳಲ್ಲಿ ಗ್ರಾಮದ ಹೆಣ್ಣು ಮಕ್ಕಳು ಉಷಾ ಕಾಲದಲ್ಲಿ ಪಕ್ಕ ಮಡಿಯಿಂದ ದೇವಿಯ ಸನ್ನಿಧಿಗೆ ಬಂದು ಪ್ರದಕ್ಷಣೆ ಮಾಡಿ ಸ್ವ ಹಸ್ತದಿಂದ ಇಚ್ಛಾಪೂಜೆಯನ್ನು ಸಲ್ಲಿಸಿ ಮನೆಯಲ್ಲಿ ಮೀಸಲು ಪದ್ದತಿಯಿಂದ ತಯಾರಿಸಿದ ಪಂಚಾಮೃತ ತಳಿಗೆ ಒಪ್ಪಿಸಿ 'ಈ ಕಾಯವನ್ನು ಹಣ್ಣು ಮಾಡಿ' ಅಂದರೆ ಹಣ್ಣು ಕಾಯಿ ಪರಿಮಳ ಪುಷ್ಪಗಳನೆಲ್ಲ ಅರ್ಪಿಸಿ ನಂತರ ಮುಂಭಾಗದಲ್ಲಿ ಅಶ್ವಥ ಮರಕ್ಕೆ ಪ್ರದಕ್ಷಣೆ ಮಾಡಿ ಅಲ್ಲಿರುವ ನಾಗರಕಲ್ಲಿಗೆ ಹಾಲನ್ನೆರೆದು ಭಕ್ತಿ, ನಂಬಿಕೆಯಿಂದ ಹೆಣ್ಣುಮಕ್ಕಳಿಗೂ, ವನಿತೆಯರಿಗೂ ದೇವಿಯವರು ಬಹಳ ಬೇಗ ಒಲಿದು ಅವರ ಇಷ್ಟಾರ್ಥಗಳನೆಲ್ಲ ನೆರೆವೆರಿಸುತ್ತಿರುವ ಸಂಭಂದ ವಾರದ ದಿನಗಳ ಸಂದ್ಯಾ ಕಾಲದಲ್ಲಿ ದೇವಿಯವರನ್ನು ತಾವೇ ಸ್ವತಃ ಪೂಜಿಸಿ ತೃಪ್ತಿ ಪಡುತ್ತಿರುವ ಪದ್ದತಿಯು ತುಂಬಾ ಸುದ್ದಿಯಾಗುತ್ತಾ ಬಂದಿದೆ ಗ್ರಾಮದೇವತೆಯವರು ದೂರದೃಷ್ಟಿಹಾಗೂ ತುಂಬಾ ತೀಕ್ಷ್ಣ ಸ್ವಭಾವದ ಸಾಕಾರ ತಾಯಿಯಾಗಿರುವ ಕಾರಣ ತನ್ನ ಭಕ್ತರು ಹೊರಗಡೆ ಯಾವ ಊರಿನಲ್ಲಿರಲಿ ಅವರುಗಳಿಗೆ ತೊಂದರೆಗಳು ಎದುರಾದಾಗ ತಮ್ಮ ಮನಸ್ಸಿನಲ್ಲಿ ಧ್ಯಾನಿಸಿ ಅಲ್ಲಿಂದಲೇ ಹರಕೆ ಹೊತ್ತುಕೊಂಡಾಗ ಅವರ ತೊಂದರೆಗಳಿಗೆಲ್ಲ ಪರಿಹಾರದ ಕೃಪೆಯಾಗಿರುವ ಕಾರಣ ಈ ಭಕ್ತರು ಅಷ್ಟೈಶ್ವರ್ಯವಂತರಾಗಿ ಪ್ರಭಾವ ಶಾಲಿಗಳಾಗಿ ಬಾಳುತ್ತ ಇದ್ದಾರೆಂಬುದನ್ನು ಕೆಲವು ಉದಾಹರಣೆಗಳಿಂದ ಪ್ರಸ್ತಾಪಿಸಲು ಆಸಕ್ತಿವುಳ್ಳವನಾಗಿರುತ್ತೇನೆ. ಶ್ರೀ ದೇವಿಯವರ ಆರಾಧಕರಿಗೆ ವೀರಶೈವ ಧರ್ಮದ ತತ್ವ,ಸಿದ್ಧಾಂತ, ಆದರ್ಶಗಳ ಅರಿವಾಗ ತೊಡಗಿದ ಮೇಲೆ ಹಾಗೂ ದೇವಿಯವರ ಅಪ್ಪಣೆಯಾದಂತೆ ಅಜ್ಞಾನ, ಮೂಢತನದಿಂದ ಕೊಡುತ್ತಿದ್ದ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ನಿಲ್ಲಿಸಲಾಯಿತು, ಆದರೆ ಪರಿಶಿಷ್ಟರು ಮಾತ್ರ ಪ್ರಾಣಿಗಳ ಬಲಿಯನ್ನು ಈ ಬನದಲ್ಲಿ ತಮ್ಮ ಸ್ವಾರ್ಥ ಹಾಗೂ ಮೂಡ ನಂಬಿಕೆಯಿಂದ ಕೊಡುತ್ತಾ ಬಂದಿರುತ್ತಾರೆ ಇದನ್ನು ಸಹಚರಳಾದ ದ್ವ್ಯಾಮವ್ವ/ ಚಿಕ್ಕಮ್ಮ ಎಂಬ ಚೌಡಿಯು ಆರ್ಫಿಸಿಕೊಳ್ಳುತ್ತಾ ನೆಲೆಸಿರುತ್ತಾಳೆ. ವೀರಶೈವರಲ್ಲಿ ಅಹಿಂಸಾ ಧರ್ಮದ ಜಾಗೃತಿಯಾದ ನಂತರ ತಮ್ಮ ತೊಂದರೆ ಕಷ್ಟಗಳು ನಿವಾರಣೆಯಾದ ಸಂಧರ್ಭದಲ್ಲಿ ಹರಿಸಿ ಕೊಂಡಿದ್ದಂತೆ ದೇವಿಯವರಿಗೆ ಬೆಳ್ಳಿಯ ಕಣ್ಮಣಿಗಳು, ತಾಮ್ರದ ಬಿಂದಿಗೆ, ಕಂಚಿನ ದೀಪದ ಕಂಬಗಳು, ಬೆಳ್ಳಿಯ ಮುಖವಾಡಗಳು, ಸೀರೆ, ತಳಿಗೆಗಳನ್ನು ಒಪ್ಪಿಸಿ ಸೇವೆ ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ ಬೆಳ್ಳಿಯ ಕಣ್ಮಣಿಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಂದಿದ್ದರಿಂದ ಎಲ್ಲವನ್ನೂ ಸೇರಿಸಿ ಚಿನ್ನ-ಬೆಳ್ಳಿ ಅಂಗಡಿಗೆ ಕೊಟ್ಟು ಅವುಗಳ ತೂಕಕ್ಕೆ ಪ್ರತಿಮೆಗಳಿಗೆ ಸಧಾ ಧರಿಸುವ ಬೆಳ್ಳಿಯ ಮುಖವಾಡಗಳನ್ನು ಇತ್ತೀಚಿಗೆ ತಂದು ನಿರಂತರವಾಗಿ ಅಲಂಕರಿಸುತ್ತ ಬಂದಿದೆ. ಇದೆ ಗ್ರಾಮದ ನಂಜೇಗೌಡರ 'ಲಿಂII ಬಸಪ್ಪನವರ ಪುತ್ರ ಶ್ರೀ.. ನಾಗರಾಜಪ್ಪ ಇವರ ಪುತ್ರಿ ಶ್ರೀಮತಿ .ರೂಪ ಎಂಬ ಕನ್ಯಾಮಣಿಗೆ ಒದಗಿ ಬಂದಿದ್ದ ತೊಂದರೆಯೂ 'ಶ್ರೀ ದೇವಿಯವರ' ಕೃಪೆಯಿಂದ ನಿವಾರಣೆಯಾಗಿ ಆಕೆಗೆ ಉತ್ತಮ ದಾಂಪತ್ಯ ಜೀವನ, ಸೇವಾಭಾಗ್ಯ ಮತ್ತು ಸುಖ ಜೀವನಕ್ಕೆ ಪ್ರೇರಣೆಯಾಗಿದ್ದಕ್ಕೆ ಹರಕೆಯ ವಸ್ತುವಾಗಿ ಒಂದು ಜೊತೆ ಬೆಲೆಬಾಳುವ ಕಂಚಿನ ದೀಪದ ಕಂಭಗಳನ್ನು ಸನ್ನಿಧಿಗೆ ಒಪ್ಪಿಸಿ ದೇವಿಯ ಆನುಗ್ರಹದಿಂದ ಸುಖ ಸಂತೋಷದಿಂದ ಬಾಳುತ್ತಿದ್ದಾಳೆ; ಹಾಗೂ ದೇವಮಂದಿರಕ್ಕೆ ನೆನಪಿನ ಕಾಣಿಕೆಯಾಗಿ ಜನೋಪೋಯೋಗಿಕೆಲಸನನು ಮಾಡಿಸುವ ಇಚ್ಛೆಯನ್ನು ಹೊಂದಿರುತ್ತಾಳೆ ಇದೆ ಗ್ರಾಮದ ಮತ್ತೊಬ್ಬ ದಾನಿ ಲಿಂIIಸಿದ್ಧವೀರಪ್ಪನವರ ಪುತ್ರಿ ಶ್ರೀ .ಸಿದ್ದಲಿಂಗಪ್ಪನವರ ಪುತ್ರಿ 'ಶ್ರೀಮತಿ ಶಶಿಕಲಾಎಂಬ ಕನ್ಯಾಮಣಿಗೆ ಶ್ರೀ ದೇವಿಯವರ ಕೃಪೆಯಿಂದ ತನ್ನ ತೊಂದರೆ ಪರಿವಾರವಾದ್ದರಿಂದ ಹರಿಸಿಕೊಂಡಿದ್ದಕ್ಕೆ ಅಭಿಷೇಕಕ್ಕೆ ಬಳಸುವ ಒಂದು ತಾಮ್ರದ ಬಿಂದಿಗೆಯನ್ನು ಸನ್ನಿಧಿಗೆ ಒಪ್ಪಿಸಿ ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾಳೆ. ಇದೇ ಗ್ರಾಮದ ನಂಜೇಗೌಡರ ಲಿಂIIಬಸಪ್ಪ ಇವರ ಪೌತ್ರ ಲಿಂII ಚನ್ನವೀರಪ್ಪ ಮತ್ತು ಗೌರಮ್ಮ ಇವರ ವರ ಪುತ್ರ ಕೊಡುಗೆ ದಾನಿ ಕೋಟಿವೀರ ಶ್ರೀ. ಹೆಚ್. ಎಸ್. ಸಿದ್ದಲಿಂಗಪ್ಪ ಉ ಮೂರ್ತಿ ಎಂಬುವವರು ಶ್ರೀ ಗ್ರಾಮದೇವತೆಯನ್ನು ಧೃಡವಾಗಿ ನಂಬಿ ಪರಮ ಭಕ್ತರಾಗಿರುವ ಸಂಭಂದ ತಮ್ಮ ವೃತ್ತಿಯಲ್ಲಿ ತುಂಬಾ ಯಶಸನ್ನು ಕಂಡು ವಿದ್ಯುತ್ ಕೆಲಸಗಳಗುತ್ತಿಗೆಯಲ್ಲಿ ಹಂತಹಂತವಾಗಿ ಅಭಿವೃದ್ಧಿಯನ್ನು ಹೊಂದಿ ಈಗ ಇದೆ ಇಲಾಖೆಯ ಪ್ರಥಮ ದರ್ಜೆಗುತ್ತಿಗೆದಾರರು ಮತ್ತು ವಿದ್ಯುತ್ ಸಲಕರಣೆಗಳ ಅಂಗಡಿ ಶ್ರೀ ಶಿಸಸಾಯಿ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್; ದಾಸರಹಳ್ಳಿ -ಬೆಂಗಳೂರು ಎಂಬ ಬೃಹತ್ ಸಂಕೀರ್ಣವನ್ನು ಹೊಂದಿರುತ್ತಾರೆ ಈ ಎಲ್ಲ ವ್ಯವಸ್ಥೆಗೆ ಚೈತನ್ಯ ಹಾಗೂ ಕೃಪೆಯಾಗಿದ್ದು 'ಶ್ರೀ ಗ್ರಾಮದೇವತೆಯವರು ಎಂಬುದಾಗಿ ತಮ್ಮ ಭಕ್ತಿಯ ವಾಣಿಯಿಂದ ಸ್ಮರಿಸಿ ತಮ್ಮ ಭಕ್ತಿಯ ಕಾಣಿಕೆಯಾಗಿ 'ಒಂದು ಕೆಜಿ ತೂಕದ ಬೆಳ್ಳಿಯ ಸ್ವಚ್ಛ, ಸುಂದರ ಮುಖವಾಡಗಳನ್ನು ಸನ್ನಿಧಿಗೆ ಒಪ್ಪಿಸಿ ಅವುಗಳಿಗೆ ಪುರೋಜೀತರಿಂದ ಅಭಿಷೇಕ, ಹೋಮ ಸಂಪ್ರದಯಾಯಕ ಪೂಜೆ ಮುಂತಾದ ಪುಣ್ಯವದನ ಕಾರ್ಯವನ್ನು ಮಾಡಿಸಿ ವಿಧಿ, ವಿಧಾನಗಳ ಪ್ರಕಾರ ದೈವ ಶಕ್ತಿಯನ್ನು ತುಂಬಿ ಪ್ರತಿಮೆಗಳಿಗೆ ಧಾರಣೆ ಮಾಡಿ, ಸಾಕ್ಷಾತ್ಕರಿಸುತ್ತಾರೆ. ಈ ವೈವಸ್ಥೆಯಿಂದ ದೇವಿಯವರ ತೇಜಸ್ಸು ಹಾಗೂ ಸುಂದರವಾದ ಮುಖ ದರ್ಶನ ಭಾಗ್ಯ ಭಕ್ತರಿಗೆ ದೊರೆಯುವಂತೆ ರೂಪಗೊಳಿಸುತ್ತಾರೆ, ಇದೇ ಶುಭದಿನದಂದು ತಾ.೨೨-೦೫-೨೦೦೯, ಶುಕ್ರವಾರ ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳವರ ದಿವ್ಯ ಪಾದ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ, ಈ ಸಂಭಂದ ಎಲ್ಲ ಭಕ್ತಮಂಡಳಿಯವರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ಶ್ರೀ ಗ್ರಾಮದೇವತೆಯವರ ಹಾಗೂ ಗುರು ಹಿರಿಯರ ಶುಭ ಹಾರೈಕೆಗೆ ಅರ್ಹರಾಗಿರುತ್ತಾರೆ ಮತ್ತು ಇದೆ ದಾನಿಯು ದೇವ ಮಂದಿರವನ್ನು ವಿಶಾಲವಾಗಿ, ಸುಂದರವಾಗಿ ಹೊಸದಾಗಿ ನಿರ್ಮಿಸಲು ಮೂರು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಡಲು ಭರವಸೆ ಕೊಟ್ಟಿರುತ್ತಾರೆ, ಕಾರಣ ಈ ಭಕ್ತನು ಧಾನಶೂರ ಹಾಗೂ ಗ್ರಾಮದ ಹೆಮ್ಮೆಯ ಪುತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುತ್ತಾರೆ; ವೀರಶೈವ ಸಮಾಜವು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತದೆ; ಇಂತಹ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂದಿರುವ ಕಾರಣ ಭಕ್ತಿಯ ಕಾಣಿಕೆಗಳು ಹೆಚ್ಚಾಗಿ ದೇವರ ಹುಂಡಿಯನ್ನು ಸೇರುವ ಮುನ್ಸೋಚನೆಗಳು ಕಂಡು ಬಂದಿರುತ್ತದೆ.. ಈ ಗ್ರಾಮದ ಹರಿಜನ ಬಾಂದವರು ಸಹ ಶ್ರೀ ದೇವಿಯವರನ್ನು ಭಕ್ತಿ, ನಂಬಿಕೆಗಳಿಂದ ಆರಾಧಿಸುತ್ತಿದ್ದಾರೆ ಅವರೂ ಸಹ ತಮ್ಮ ಕಷ್ಟ ನಿವಾರಣೆಗಾಗಿ ಹರಕೆಗಳನ್ನು ಹೊತ್ತಂತೆ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದು, ಹಣ್ಣು ಕಾಯಿ, ಕರ್ಪೂರ ಕೊಟ್ಟು ಪೂಜೆ ಮಾಡಿಸುವ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಶ್ರೀ ಉಡಿಶೀಲಮ್ಮ ಅರ್ಧಾತ್ ಗ್ರಾಮದೇವತೆಯವರು ಈ ಗ್ರಾಮದಲ್ಲಿ ನೆಲೆಯಾಗಲು ಮೂಲ ಕಾರಣರಾದ ಶ್ರೀ ಹಲಗೇಗೌಡರ ಸಂತತಿಯವರಲ್ಲಿ ಹಿರಿಯ ಮಕ್ಕಳೇ ಪಾಳೇಪಟ್ಟಿನ ಸರದಿಯಂತೆ ಪೂಜಾ, ವಿಧಿಗಳನ್ನು ಮಾಡಲು ಹಕ್ಕುದಾರರಾಗಿರುತ್ತಾರೆಂಬುದು ಸಾಗಿಬಂದ ವಿಷಯವಾಗಿದೆ; ಇದೆ ಪದ್ದತಿಯಂತೆ ಹತ್ತಾರು ತಲೆಮಾರಿನವರು ಆದಮೇಲೆ ಈಗಿನ ಹಿಂದೆ ಐದನೇ ತಲೆ ಮಾರಿನ ವಂಶಸ್ಥರಾದ ಶ್ರೀ ನಿಂಗೇಗೌಡರ ಕಾಲದಲ್ಲಿ ಈ ಪೂಜಾರಿಕೆ ಪದ್ಧತಿಯು ವಿಕೇಂದ್ರೀಕರಣಗೊಳ್ಳುತ್ತದೆ, ಅಂದರೆ ಹುಟ್ಟಿದ ಎಲ್ಲ ಗಂಡು ಮಕ್ಕಳಿಗೂ ಪೂಜೆಯ ಜವಾಬ್ದಾರಿ ಬರುತ್ತದೆ, ನಿಂಗೇಗೌಡರಿಗೆ ಮೂರು ಜನ ಗಂಡು ಮಕ್ಕಳುಗಳು ಇರುತ್ತಾರೆ ಕ್ರಮವಾಗಿ 'ಶ್ರೀ ಈರೇಗೌಡ, ಸಿದ್ದೇಗೌಡ ಮತ್ತು ಪುಟ್ಟಸ್ವಾಮಿಗೌಡ ಎಲ್ಲರೂ ಅನ್ಯೋನ್ಯವಾಗಿ ಬಾಳುತ್ತಿರುತ್ತಾರೆ ನಿಂಗೇಗೌಡರು ಮೊದಲು ಇಬ್ಬರು ಮಕ್ಕಳಿಗೆ ಮದುವೆ ವಗೈರೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿ ಕೊಂಡಿರುತ್ತಾರೆ' ಆದರೆ ಅನಾರೋಗ್ಯದಿಂದ ಕೆಲವೇ ಸಮಯದಲ್ಲಿ ವಿಧಿ ವಶರಾಗುತ್ತಾರೆ ಆಗ ಸಂಸಾರದ ಜವಾಬ್ದಾರಿಯೂ 'ಈರೇಗೌಡರ' ಮೇಲೆ ಬರುತ್ತದೆ, ಇವರು ಸ್ವಲ್ಪ ಜಡ ಸ್ವಭಾವದವರು ಎಲ್ಲ ಕೆಲಸಗಳನ್ನು ಎರಡನೇ ಸಿದ್ದೇಗೌಡರು ನಿಭಾಯಿಸಿ ಕೊಂಡು ಹೋಗುತ್ತಿರುತ್ತಾರೆ ಆದರೆ ಮೂರನೇ 'ಪುಟ್ಟಸ್ವಾಮಿಗೌಡ' ಧಾರ್ಮಿಕ ವಿಚಾರದಲ್ಲಿ ತುಂಬಾ ಆಸಕ್ತರಾಗಿದ್ದು ಹೊರ ಸಂಚಾರ ಸ್ವಭಾವ ಉಳ್ಳವರು ಮನೆ ಕೆಲಸಗಳ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸುತ್ತಿರಲಿಲ್ಲ ಈ ಪರಿಸ್ಥಿತಿಯಿಂದ ಸಹೋದರರ ಮದ್ಯೆ ಮನಸ್ಥಾಪಗಳು ಹುಟ್ಟಿ ಕೊಳ್ಳುತ್ತವೆ ಕಾರಣ ಆಸ್ತಿಯನ್ನು ವಿಭಾಗ ಮಾಡಿ ಕೊಳ್ಳುವ ವಿರ್ಧಾರಕ್ಕಾಗಿ ಬರುತ್ತಾರೆ ನಿಂಗೆ ಗೌಡರ ಅನುಭವದಲ್ಲಿದ್ದ ಸ್ವಂತ ಆಸ್ತಿ ಹಾಗೂ ದೇವರ ಕೊಡುಗೆ ಜಮೀನುಗಳನ್ನು ಸಮನಾಗಿ ಮೂರು ಭಾಗಗಳನ್ನಾಗಿ ಮಾಡುತ್ತಾರೆ, ಇದರಲ್ಲಿ 'ಸಿದ್ಧೇಗೌಡರು ಮಾತ್ರ ಒಂದು ಭಾಗದ ಆಸ್ತಿಯನ್ನು ವಹಿಸಿಕೊಂಡು ತಮ್ಮ ವ್ಯವಹಾರವನ್ನು ಬೇರೆ ಮಾಡಿಕೊಳ್ಳುತ್ತಾರೆ ಹಾಗೂ ಒಂದು ವರ್ಷ ಕಾಲ ದೇವರ ಪೂಜೆ ಮಾಡಿಕೊಂಡು ಹೋಗಲು ಒಪ್ಪಿಕೊಂಡಿರುತ್ತಾರೆ ಒಂದನೇ ಈರೇಗೌಡ ಮತ್ತು ಮೂರನೇ ಪುಟ್ಟಸ್ವಾಮಿ ಒಟ್ಟಿಗೆ ಇದ್ದುಕೊಂಡು ಎರಡು ಭಾಗ ಆಸ್ತಿ ಮತ್ತು ಎರಡು ವರ್ಷ ದೇವರ ಪೂಜೆ ಮಾಡಲು ಜವಬ್ದಾರರಾಗುತ್ತಾರೆ; ಪುಟ್ಟಸ್ವಾಮಿಯವರು ಅವಿವಾಹಿತರು ಹಾಗೂ ದೈವ ಭಕ್ತಿ ಉಳ್ಳವರು ಪ್ರತಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ಗ್ರಾಮದೇವಟೆಯವರ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದ ಸಂಭಂದ ದೈವ ಪ್ರೇರಿತರಾಗಿ ಕೆಲವು ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಹಂಬಲವುಂಟಾಗಿ ಒಂದು ಶುಭದಿನದಂದು; ಅಣ್ಣನವರ ಒಪ್ಪಿಗೆ ಪಡೆದು ಪಡುವಣ ದಿಕ್ಕಿನತ್ತ ಕಾಲುನಡಿಗೆಯಲ್ಲಿ ಹೋರಾಡುತ್ತಾರೆ ದಾರಿ ಮಧ್ಯೆ ಕೆಲವು ಗ್ರಾಮಗಳಲ್ಲಿ ವಾಸ್ತವ ಮಾಡಿ ತಮ್ಮ ನಿತ್ಯದ ಕಾಯಕಗಳನ್ನು ಪ್ರಸಾದದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಹಳೇಬೀಡು, ಬೇಲೂರು ದರ್ಶನ ಮಾಡಿಕೊಂಡು ಚಿಕ್ಕಮಗಳೂರಿಗೆ ತಲುಪುತ್ತಾರೆ, ಇಲ್ಲಿ ಆಯಾಸ ಪರಿಹರಿಸಿಕೊಂಡು ಇಲ್ಲಿನ ಪುರಜನರ ಸಹಕಾರದಿಂದ ಆರು ಮೈಲಿ ದೂರದಲ್ಲಿರುವ ಶ್ರೀ ನಿರ್ಮಾಣಸ್ವಾಮಿ ಮಠ ಇರುವುದನ್ನು ತಿಳಿದು ಅಲ್ಲಿಗೆ ಪ್ರಯಾಣ ಬೆಳೆಸುತ್ತಾರೆ ಮುಸ್ಸಂಜೆ ವೇಳೆಗೆ ಮಠಕ್ಕೆ ಬಂದು ತಲುಪುತ್ತಾರೆ, ಶ್ರೀ ಮಠದ ಗುರುಗಳನ್ನು ದರ್ಶನ ಮಾಡಿ ತಮ್ಮ ಪರಿಚಯ ಮಾಡಿಕೊಂಡು ಆಶ್ರಯವನ್ನು ಪಡೆಯುತ್ತಾರೆ ನಂತರ ಶಿವ ಪೂಜೆ ಪ್ರಸಾದವಾದ ಮೇಲೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ ಮರುದಿನ ಮುಂಜಾನೆ ಎದ್ದು ಶ್ರೀಗಳವರ ಸಲಹೆಯಂತೆ ಸ್ನಾನ, ಪೂಜಾ ವ್ಯವಸ್ಥೆಗಳನ್ನೆಲ್ಲ ಮಾಡಿ ಕೊಡಲೇ ತಮ್ಮ ಸ್ನಾನ ಪೂಜೆ ಮುಗಿಸಿ ಪ್ರಸಾದದ ಸಿದ್ಧತೆಗೆ ತೊಡಗುತ್ತಾರೆ; ಗುರುಗಳವರ ಸ್ನಾನ, ಪೂಜೆ ಮುಗಿಯುವುದರೊರಳಗೆ ಪ್ರಸಾದ ಸಿದ್ಧವಾಗುತ್ತದೆ ಮೊದಲು ಗುರುಗಳಿಗೆ ಲಿಂಗಾರ್ಪಿತವಾದಾನಂತರ ತಾವು ಪ್ರಸಾದ ತೆಗೆದುಕೊಳ್ಳುತ್ತಾರೆ, ಈ ದಿನ ವ್ಯವಸ್ಥೆಯೊಂದ ಗುರುಗಳವರಿಗೆ ಅನುಕೂಲವಾಗಿರುತ್ತದೆ ಕಾರಣ ಮಠದ ಶಿಷ್ಯನಾಗಿ ಕೆಲವುದಿನ ಸೇವೆ ಮಾಡಿ ಕೊಂಡಿರಲು ಆದೇಶಿಸುತ್ತಾರೆ ಇಲ್ಲಿ ಪರಿಸರ, ಪ್ರಕೃತಿ, ಸೌಂದರ್ಯ, ಗುರುಗಳ ಶಿವಪೂಜಾವಿಧಾನ ಶಿಷ್ಯನನ್ನು ಪ್ರಭಾವಿತನನ್ನಾಗಿ ಮಾಡುತ್ತದೆ; ಈತನ ಸೇವೆಯನ್ನು ಗುರುಗಳು ಬಹಳ ಮೆಚ್ಚಿಕೊಂಡಿದ್ದರು, ಇಲ್ಲಿದ್ದ ಕೆಲವು ವರ್ಷಗಳಲ್ಲಿ ಹತ್ತಿರವಿರುವ ಪಂಚಪೀಠಗಳೊಲ್ಲೊಂದಾದ 'ಶ್ರೀ ರಂಭಾಪುರಿ' ಮಠವನ್ನು ದರ್ಶನ ಮಾಡಿ ಬರಬೇಕೆಂದು ಆಕಾಂಕ್ಷೆಯಾಗುತ್ತದೆ; ಗುರುಗಳವರಿಂದ ದಾರಿಯನ್ನು ತಿಳಿದು ಅಪ್ಪಣೆಪಡೆದು ಒಂದು ಶುಭ ದಿನ ಉದಯ ಕಾಲದಲ್ಲಿ ಹೊರಟು; ಇಲ್ಲಿಗೆ ೩೫ ಮೈಲಿ ದೂರದಲ್ಲಿರುವ ಬಾಳೆಹೊನ್ನೂರನ್ನು ಅಪರಾನ ೩ ಘಂಟೆಗೆ ತಲುಪಿ ಗುರುಗಳವಾರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಯಾಸ ಪರಿಹಾರಕ್ಕಾಗಿ ಕೆಲವು ದಿನ ಅಲ್ಲಿದ್ದು ವೀರಶೈವ ಧರ್ಮದ ತತ್ವ, ಸಿದ್ಧಾಂತ, ಶಿವಪೂಜಾ ವಿಧಾನಗಳನ್ನು ಕರಗತ ಮಾಡಿಕೊಂಡು, ಪುನಃ ಅಲ್ಲಿಂದ ಹೊರತು 'ಶ್ರೀ ನಿರ್ವಾಣ'ಸ್ವಾಮಿ ಮಠಕ್ಕೆ ಬಂದು ಅಲ್ಲಿ ಶಿಷ್ಯನಾಗಿ ತಮ್ಮ ಇಳಿವಯಸ್ಸಿನವರಿಗೂ ಸೇವೆ ಮಾಡಿ ಸ್ವಾಮಿಗಳ ಪ್ರೇರಣೆಯಂತೆ ವಿರಕ್ತಾಶ್ರಮ ಧರ್ಮವನ್ನು ಸ್ವೀಕರಿಸಿ ಅಲ್ಲಿಂದ ಬಂದು ಶಿವಲಿಂಗವನ್ನು ತೆಗೆದುಕೊಂಡು ತಾಯ್ನಾಡಿಗೆ ವಾಪಸ್ಸು ಬರುತ್ತಾರೆ ಇಲ್ಲಿಗೆ ಬಂದು ಹಿರಿಯ ಅಣ್ಣನವರಾದ ಈರೇಗೌಡರ ಜೊತೆಗೆ ಸೇರಿಕೊಂಡು ಮನೆಯಲ್ಲಿ 'ಶ್ರೀ ನೀರ್ವಾಣ' ಸ್ವಾಮಿಯವರ ಗದ್ದುಗೆಯನ್ನು ಮಾಡಿ ಮಠದಿಂದ ತಂದಿದ್ದ ನೀರ್ವಾಣ ಸ್ವ್ವಾಮಿ ಹೆಸರಿನ 'ಲಿಂಗವನ್ನು ಸ್ಥಾಪನೆ ಮಾಡಿ ನಿತ್ಯವೂ ಧೃಡ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾ ವಾರದ ದಿನಗಳಲ್ಲಿ 'ಶ್ರೀ ಗ್ರಾಮದೇವತೆಯನ್ನು' ಪೂಜಿಸುತ್ತಾ ವೈರಾಗಿಯಾಗಿ ಜೀವನವನ್ನು ಕಳೆಯುತ್ತಿರುತ್ತಾರೆ ಹೀಗಿದ್ದಾಗ ಕೆಲವು ವರ್ಷಗಳು ಕಳೆದ ಮೇಲೆ ತಮ್ಮ ಮುಕ್ತಿ ಮಾರ್ಗದ ಅಂತಿಮ ಗೀತೆಯನ್ನು ಹಾಡಿ 'ಲಿಂಗೈಕ್ಯರಾಗುತ್ತಾರೆ'; ನಂತರ ಇವರ ಅಂತಿಮ ವಿಧಿ ವಿಧಾನಗಳೆಲ್ಲಾ 'ಈರೇಗೌಡರೆ' ನಿರ್ವಹಿಸಿದ ಕಾರಣ ಎರಡು ಭಾಗದ ಆಸ್ತಿ ಮತ್ತು ಎರಡು ವರ್ಷಗಳ ದೇವರ ಪೂಜೆಗೆ ಜವಬ್ದಾರರಾಗುತ್ತಾರೆ ಈ ಸಂಭಂದ ಈರೇಗೌಡರ ಮನೆಯಲ್ಲಿ 'ಶ್ರೀ ನೀರ್ವಾಣ'ಸ್ವಾಮಿಯವರ ಮೂರ್ತಿ ಇದ್ದದ್ದು ಸತ್ಯ ಸಂಗತಿಯಾಗಿದೆ. ಶ್ರೀ ಗ್ರಾಮದೇವತೆಯನ್ನು ಈ ಗ್ರಾಮದಲ್ಲಿ ನೆಲೆ ಮಾಡಲು ಕಾರಣರಾಗಿದ್ದ 'ಹಲಗೇಗೌಡರ' ಹಕ್ಕು ಭದ್ಯತೆಗೆ ಸೇರಿದ ದೇವರ ಕೊಡುಗೆ ಜಾಮೀನು ಸರೈನಂ: 23/6 ಅಲ್ಲಿ ಒಟ್ಟೂ 1-16 ಎಕರೆ ಋಷ್ಕಿ ಇದರ ಪೈಕಿ ಪೂರ್ವ ಭಾಗಕ್ಕೆ 16 ಗುಂಟೆಯನ್ನು ದೇವರ ಬನಕ್ಕಾಗಿ ಕಾಯ್ದಿರಿಸಲಾಯಿತು ಉಳಿದ 1-00 ಎಕರೆಯನ್ನು ಇವರ ವಂಶಸ್ತರು ಮೂರು ಭಾಗಗಳಾಗಿ ವಿಂಗಡಿಸಿ ತಮ್ಮ ಮೂರು ಮಕ್ಕಳಿಗೆ ತಲಾ 13 ವರೆ ಗುಂಟೆಯಂತೆ ಹಂಚಿಕೆ ಮಾಡಿದರು ಈರೇಗೌಡರಿಗೆ 2 ಭಾಗದ ಒಟ್ಟೂ 27 ಗುಂಟೆ ಸೇರುತ್ತದೆ, ಈಗ ಅವರ ಪೀಳಿಗೆಯವರಾಗಿರುವ HS. ಸಿದ್ದಲಿಂಗಪ್ಪ ಬಿನ್ ಸಿದ್ದವೀರಪ್ಪ ಇವರಿಗೆ 7ಗುಂಟೆ ಜಮೀನು 6 ತಿಂಗಳ ಕಾಲ ದೇವರ ಪೂಜೆ HS. ಚಂದ್ರಪ್ಪ ಬಿನ್ ಸಿದ್ದಲಿಂಗಪ್ಪ ಉ. ಪುಟ್ಟಸ್ವಾಮಿ ಇವರಿಗೆ 7 ಗುಂಟೆ ಜಮೀನು 6 ತಿಂಗಳ ದೇವರ ಪೂಜೆ; HS. ಬಸವರಾಜಪ್ಪ ಉ ರಾಜ ಇವರಿಗೆ 6 ವರೆ ಗುಂಟೆ ಜಮೀನು 6 ತಿಂಗಳ ಪೂಜೆ ಮತ್ತು HV ಸಿದ್ದಲಿಂಗಪ್ಪ ಬಿನ್ ವೀರಣ್ಣ ಇವರ ಮಗ 'ಅಣ್ಣಪ್ಪ'ನಿಗೆ 6 ವರೆ ಗುಂಟೆ ಜಮೀನು 6 ತಿಂಗಳ ದೇವರ ಪೂಜೆ ಈ ವ್ಯವಸ್ಥೆಯನ್ನು ಸಹೋದರರ ಮದ್ಯೆ ಮಾಡಿಕೊಂಡಿರುವ ಒಳ ಒಪ್ಪಂದದಂತೆ ನೆಡೆದುಕೊಂಡು ಹೋಗುತ್ತಿದ್ದಾರೆ ಎರಡನೇ ಸಹೋದರರಾದ 'ಶ್ರೀ ಸಿದ್ದೇಗೌಡರ' ಪೀಳಿಗೆಯ ಶ್ರೀ HV ಸಿದ್ಧಲಿಂಗಪ್ಪ ಉ ಸ್ವಾಮಿ ಇವರಿಗೆ ೩ವರೆ ಜಮೀನು ೩ ತಿಂಗಳು ದೇವರ ಪೂಜೆ HB ಸಿದ್ದಲಿಂಗಪ್ಪ ಉ ಉದ್ದಾರಣ್ಣ ಬಿನ್ ಸಿದ್ದವೀರಪ್ಪ ಇವರಿಗೆ 3 ವರೆ ಗುಂಟೆ ಜಮೀನು 3 ತಿಂಗಳು ದೇವರ ಪೂಜೆ; ಬಿ. ಬಸಪ್ಪ a/ss ಸಿದ್ದಲಿಂಗಪ್ಪ ಇವರಿಗೆ 3 ಗುಂಟೆ ಜಮೀನು 3 ತಿಂಗಳ ದೇವರ ಸೇವೆ; ಈ ಕ್ರಮದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಅನುಸಾರವಾಗಿ ಹಾಲಿ 8 ಕುಟುಂಬದವರು ದೇವರ ಪೂಜೆಯನ್ನು ಪ್ರತಿ ಶುಕ್ರವಾರ ಸ್ವಲ್ಪವೂ ಚ್ಯುತಿಯಾಗದಂತೆ; ತಮ್ಮ ವಂಶ ಪಾರಂಪರ್ಯವಾಗಿ ನೆಡೆಸಲು ಒಪ್ಪಿಕೊಂಡಿರುವಂತೆ ಇಂದಿನ ದಿನಗಳವರೆಗೂ ಸಾರೋದ್ದಾರವಾಗಿ ನೆರವೇರುತ್ತಾ ಬಂದಿದೆ..........................................

ಕೋಟ್ಯಂತರ ವರ್ಷಗಳ ಹಿಂದೆ ನಭೋ ಮಂಡಲದಲ್ಲಿ ಒಂದು ಮಹಾಸ್ಪೋಟ ಉಂಟಾಗಿ ಆಕಾಶ ಕಾಯವು ಛಿದ್ರಗೊಂಡು ಆಕಾಶ, ಗಾಳಿ, ನೀರು, ಭೂಮಿ, ಸೂರ್ಯ ಎಂಬ ಪಂಚ ಭೂತಗಳು ಸೃಷ್ಟಿಯಾಗಿದೆ ಎಂದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ.ಹೀಗೆ ಪ್ರಪಂಚ ಸೃಷ್ಟಿಯಾದ ನಂತರದಲ್ಲಿ ಶಾಖ, ನೀರು, ಗಾಳಿ ಇವುಗಳ ಸಂಯೋಜನೆಯಿಂದ ಭೂಮಿಯ ಬಂಡೆಗಳ ಮೇಲೆ ‘ಪಾಚಿ ಶೀಲಾವಲ್ಕಗಳೆಂಬ’ ಜೀವ ಕೋಶಗಳು ಹುಟ್ಟಿಕೊಳುತ್ತವೆ. ಇದರಿಂದ ಪ್ರಾರಂಭವಾದ ಜೀವಿಗಳ ಪರಿವರ್ತನೆಯು ಸಾವಿರಾರು ವರ್ಷಗಳ ಕಾಲ ವಿಕಾಸ ಹೊಂದಿ ವಿವಿಧ ಜೀವಿಗಳ ಮೂಲದಿಂದ ಅಂತಿಮವಾಗಿ ಮಾನವನ ಉಗಮವಾಗಿದೆ ಎಂಬುದು ಇತಿಹಾಸ ಮೂಲಗಳಿಂದ ತಿಳಿದು ಬಂದಿರುತ್ತದೆ . ಭೂಮಿಯ ಮೇಲೆ ಆದಿ ಮಾನವನ ಜೀವನ ಕ್ರಮವು ಪ್ರಾರಂಭವಾಗುವುದಕ್ಕೂ ಮುನ್ನ ಅಲ್ಲಲ್ಲಿ ಕೆಲವು ರಾಕ್ಷಸರು ಹುಟ್ಟಿಕೊಂಡು ಮಾನವನ ಕುಲದ ವಿಕಾಸಕ್ಕೆ ಕಂಟಕ ಪ್ರಾಯವಾಗುತ್ತದೆ ಇದರಿಂದ ಭಕ್ತಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ಮನುಕುಲವು ವಿನಾಶದ ಹಾದಿ ಹಿಡಿಯುತ್ತದೆ. ಇದರಿಂದ ಆತಂಕಗೊಂಡ ಕೈಲಾಸ ಪತಿ ಯಾದ ಶ್ರೀ ವಿಷ್ಣು ಬೇರೆ ಬೇರೆ ಯುಗ ಗಳಲ್ಲಿ ವಿವಿಧ ಅವತಾರಗಳನೆತ್ತಿ ದುಷ್ಟ ಸಂಹಾರ ಮಾಡಿದ್ದನ್ನು 'ಋಷಿ' ಮುನಿಗಳಿಂದ ರಚಿತವಾಗಿರುವ ಪುರಾಣ ಕಥೆಗಳಿಂದ ತಿಳಿದು ಬಂದಿರುತ್ತದೆ: ದುಷ್ಟ ಸಂಹಾರವಾದ ನಂತರದಲ್ಲಿ ಭೂಮಿಯ ಮೇಲೆ ಮಾನವನ ಸಂತತಿಯು ಉಳಿದು ಬೆಳೆಯಲು ನಾಂದಿ ಯಾಗುತ್ತದೆ.ಮಾನವನ ವಿಕಾಸವು ಸಿಂಧು ನದಿ ಕಣಿವೆಯ ನಾಗರಿಕತೆಯಿಂದ ಪ್ರಾರಂಭವಾಗಿದ್ದರಿಂದ ಹಿಂದೂದೇಶ ವೆಂದು ರೂಪುಗೊಂಡು ಇಲ್ಲಿನ ನಿವಾಸಿಗಳು ಹಿಂದೂಗಳೆಂದು ಕರೆಯಲ್ಪಡುತ್ತಾರೆ. ಇವರುಗಳು ತಮ್ಮ ಕಷ್ಟ ತೊಂದರೆಗಳಿಗೆಲ್ಲ ಹೆಚ್ಚಾಗಿ ಶ್ರೀ ಪಾರ್ವತಿ ದೇವಿಯನ್ನು ವಿವಿಧ ರೂಪದಲ್ಲಿ ತಮ್ಮ ಶಕ್ತಿ ದೇವತೆಯಾಗಿ ನಂಬಿಕೆ ಭಕ್ತಿಯಿಂದ ಆರಾಧಿಸಿರುತ್ತಾರೆ. ಕೈಲಾಸ ಪತಿಯಿಂದ ದುಷ್ಟ ಸಂಹಾರವಾದರೂ ಸಹ ಮಾನವರಲ್ಲಿ ಹೆಚ್ಚಾಗಿ ಹಿಂದೂಗಳಲ್ಲಿ ಸಾಮೂಹಿಕ ಪಿಡುಗುಗಳಾದ ಅಧರ್ಮ, ಅಜ್ಞಾನ, ಅನಾಚಾರ, ಧರಿದ್ರ್ಯ, ಮೂಡನಂಬಿಕೆ ಮತ್ತು ಸಾಂಕ್ರಾಮಿಕ ರೋಗಗಳೆಂಬ ಧೈತ್ಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡಿರುತ್ತದೆ. ಇದರಿಂದ ದೈವದ ಮೇಲೆ ಭಕ್ತಿ ಕಡಿಮೆಯಾಗಿ ಜನರಲ್ಲಿ ಲೌಕಿಕ ವಿಕಾಸವು ನಿಂತ ನೀರಾಗುತ್ತದೆ. ಆದಕಾರಣ ಮಾನವ ಸಂತತಿಯು ವಿನಾಶದ ಹಾದಿ ಹಿಡಿದಿರುವ ಸರಿಸ್ಥಿತಿಯನ್ನು ತಿಳಿದ ಪರಶಿವನು ರಾಣಿಯಾದ ಶ್ರೀ ಪಾರ್ವತಿ ದೇವಿಯವರು ಮಾನವರಲ್ಲಿ ಈ ಜ್ವಲಂತ ಸಮಸ್ಯೆಗಳಿಗೆ ಆತಂಕಪಟ್ಟು ದೈವ ಭಕ್ತಿ, ಶಾಂತಿ, ನೆಮ್ಮದಿ, ಉತ್ಸಾಹ ದಿಂದ ಜೀವನ ಮಾಡುವ ಅವಕಾಶಗಳನ್ನು ಕಲ್ಪಿಸುವ ಸಂಕಲ್ಪ ಮಾಡಿ ತಮ್ಮ ಪರಿಚಾರಕೀಯರ ಪೈಕಿ ಅರ್ಹರಾದ 7 ಜನ ಕನ್ಯಯರಿಗೆ ಸರ್ವ ಶಕ್ತಿಯನ್ನು ಕೊಟ್ಟಿ ಸಪ್ತ ಮೂಲಕೇಯರು ಎಂದು ಸೃಷ್ಟಿ ಮಾಡಿ ನೀವುಗಳು ಭೂಲೋಕಕ್ಕೆ ಹೋಗಿ ಸ್ಥಳ, ಸನ್ನಿವೇಶ ಅಲ್ಲಿನ ಮಾನವರಲ್ಲಿರುವ ಆಚಾರ, ವಿಚಾರ, ನಂಬಿಕೆ ಪದ್ದತಿಗೆ ಅನುಸ್ಟಾರವಾಗಿ ಬೇರೆಬೇರೆ ಹೆಸರುಗಳಿಂದ ಶೀಲಾ ರೂಪದಲ್ಲಿ ನೆಲೆಯಾಗಿ, ಆರಾಧಿಸಿಕೊಳ್ಳುತ್ತಾ ಅಲ್ಲಿನ ಎಲ್ಲಾ ಸಮಸ್ಯೆ ತೊಂದರೆಗಳಿಗೆ ಸ್ಪಂದಿಸುತ್ತಿರ ಬೇಕೆಂದು ಆದೇಶ ಮಾಡಿ ಅಂಬಿಕಾ ಎಂಬ ಕನ್ಯಾ ಮಣಿಯನ್ನು ಮುಂದಿಟ್ಟು ಉಳಿದ ಆರು ಜನರನ್ನು ಈಕೆಯ ಸಂಗಡ ಕಳುಹಿಸಿಕೊಟ್ಟ ಮೇರೆಗೆ ಏಳು ಜ್ಯೋತಿ ರೂಪ ದಲ್ಲಿ ಇಹಲೋಕಾಭಿಮುಖವಾಗಿ ಹೊರಡುತ್ತಾರೆ. ಇತ್ತ ಭೂಲೋಕದ ದಕ್ಷಿಣ ಕರಾವಳಿ ತೀರದ ಕೊಂಕಣ ಸೀಮೆಯಲ್ಲಿ ಒಬ್ಬ ಬೇಡನು ಹುಟ್ಟಿಕೊಂಡು ಮೂಡ ನಂಬಿಕೆಯಿಂದ, ಸಿಕ್ಕಿದ ಜನರನ್ನು ಕೊಲ್ಲುವುದು, ಅವರಿಂದ ದೋಚಿಕೊಂಡು ತಂದು ಜೀವನ ಮಾಡುತ್ತಿರುತ್ತಾನೆ. ಈತನ ತೊಂದರೆ ಯನ್ನು ಸಹಿಸಲಾರದೆ ನಿಗ್ರಹಕ್ಕಾಗಿ ಪ್ರತಿ ದಿನವೂ ಶಕ್ತಿ ದೇವತೆಗೆ ಮೊರೆಯಿಡುತ್ತಾರೆ. ಇದೇ ಸಂಧರ್ಭದಲ್ಲಿ ಕೈಲಾಸದಿಂದ ಹೊರಟ ಸಪ್ತ ಮಾಲಿಕೆಯರುಗಳು ಮೊದಲು ಈ ಸ್ಥಳಕ್ಕೆ ಬಂದು ತಲುಪುತ್ತಾರೆ ಇಲ್ಲಿಗೆ ಬಂದ ನಂತರ ಮೊದಲು ಬೇಡನನ್ನು ಬೇಟಿಮಾಡಿದ ಅಂಬಿಕಾ ದೇವಿಯು ಬಗೆಬಗೆಯಾಗಿ ಉಪದೇಶ ಮಾಡಿ ಕ್ರಮೇಣ ಪರಮ ಭಕ್ತನನ್ನಾಗಿ ಪರಿವರ್ತಿಸಿ ಹಿಂಸಾ ಮಾರ್ಗವನ್ನು ಬಿಟ್ಟು ಮನುಷ್ಯ ನಾಗುತ್ತಾನೆ ಇದರಿಂದ ಈತನ ಆತಂಕ ತಪ್ಪುತ್ತದೆ. ಈ ಕಾರಣಕ್ಕೆ ಕೊಲ್ಲುತ್ತಿದ್ದ ಊರು ‘ಕೊಲ್ಲೂರು' ಎಂದು ಕರೆದಿರುತ್ತಾರೆ. ದುಶ್ಚಟವನ್ನು ಮೂಕ ಪ್ರೇತನನ್ನಾಗಿ ಪರಿವರ್ತನೆ ಮಾಡಿದ ಪ್ರೇರಣೆಯಿಂದ ಮೂಕ+ಅಂಬಿಕೆ = ಮೂಕಾಂಬಿಕೆ ಎಂತಲೂ ನೆಲಸಿ ಪ್ರಸಿದ್ದಿಯನ್ನು ಪಡೆದು ಇಂದು ಈ ಬಾಗದ ಜನರ, ರಾಜಕಾರಣಿಗಳ, ಕಲಾವಿದರ, ಆರಾಧ್ಯ ಧೈವವಾಗಿ ನೆಲೆಸಿರುತ್ತಾಳೆ. ಇದಾದ ನಂತರ ಉಳಿದ ಆರು ಜನ ಮಾಲಿಕೆಯರು ಕರ್ನಾಟಕದ ಆರು ದಿಕ್ಕುಗಳನ್ನು ಹಿಡಿದು ಹೊರಟು ಸ್ತ್ರೀ ಹೆಸರಿನ ಮುಖ್ಯ ನದಿ ಪಾತ್ರದ ಮುಖ ಜಾಲ ಸೀಮೆಗಳಲ್ಲಿ ನೆಲೆಯಾಗಿ ತಮ್ಮ ಶಕ್ತಿ ಪವಾಡಗಳಿಂದ ಆ ಸ್ಥಳದ ಜನರ ಎಲ್ಲಾ ತೊಂದರೆ, ಕಷ್ಟಗಳನ್ನು, ಪರಿಹಾರ ಮಾಡಿ ನಂಬಿಕೆ, ಧೈವ ಭಕ್ತಿ ನೆಲೆಯಾಗುವಂತೆ ಸಂಕಲ್ಪಮಾಡಿ ಹೊರಟವರಲ್ಲಿ ಮೂರನೇ ಮಾಲಿಕೆಯು ಅಲ್ಲಿಂದ ಉತ್ತರಾಭಿಮುಖವಾಗಿ ಹೊರಟು ಹೇಮಾವತಿ ನದಿ ತೀರದ ಈಗಿನ ಹಿರೇಬೆಳಗುಲಿ ಎಂಬ ಗ್ರಾಮಕ್ಕೆ ಆಗಮನವಾಗಿದ್ದು ಊರಿನ ಗಡಿ ಪ್ರದೇಶಕ್ಕೆ ಬಂದನಂತರ ಗ್ರಾಮದ ಒಳಕ್ಕೆ ಪ್ರವೇಶ ಮಾಡಿದ ಕ್ರಮವು ಬಹಳ ಕುತೂಹಲ ಕಾರಿಯಾಗಿರುವ ಬಗ್ಗೆ ………… ವಿವರವಾಗಿ ತಿಳಿಸಲಾಗಿರುತ್ತದೆ

ಹನ್ನೊಂದನೇ ಶತಮಾನದ ಆದಿಭಾಗದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗಲೂ ಕ್ಷಾಮ, ಅಭಾವಗಳು, ಸಾಂಕ್ರಾಮಿಕ ರೋಗಗಳು ಮನುಷ್ಯರನ್ನು ಮತ್ತು ಜಾನುವಾರುಗಳನ್ನು ಬಲಿತೆಗೆದುಕೊಳ್ಳುತ್ತಿದ್ದೆವು, ಆವತ್ತಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಮದ್ದುಗಳು ಇನ್ನೂ ಆವಿಷ್ಕಾರ ಗೊಂಡಿರಲಿಲ್ಲದ ಕಾರಣ ಜನರು ಮೂಡ ನಂಬಿಕೆಯಿಂದ ಹಾದಿ ಬೀದಿಯ ಮಾರಿ ಮಸಣಿಯರನ್ನು ಕರೆದು ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸುವುದು, ಶಾಸ್ತ್ರ ಕೇಳಿ ಪೂಜೆ ಹಾಕಿಸುವುದು ಮಾಡುತ್ತಿದ್ದರಿಂದ ತೊಂದರೆಗಳು, ರೋಗಗಳು ನಿಯಂತ್ರಣಕ್ಕೆ ಬಾರದೆ ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಸಾವಿಗೆ ತುತ್ತಾಗುತ್ತಿದ್ದವು. ಇದರಿಂದ ಪ್ರಕೃತಿಯ ಸಮತೋಲನವು ತಪ್ಪುತ್ತಾ ಬರುತ್ತದೆ.ಈ ಪರಿಸ್ಥಿತಿಯಲ್ಲಿ ಜನರಲ್ಲಿ ಭಯ, ಭೀತಿ, ಧಾರಿದ್ರ್ಯ ಹೆಚ್ಚಾಗುತ್ತದೆ ನೆಮ್ಮದಿಯಾಗಿ ಜೀವನ ಮಾಡಲು ಆಸೆ, ಉತ್ಸಾಹಗಳು ಇರುತ್ತಿರಲಿಲ್ಲವಾದ ಕಾರಣ ಕೆಲವರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗುತ್ತಿದ್ದರು ದೈರ್ಯಮಾಡಿ ಉಳಿದವರು ಕೂಲಿ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದ್ದಿತ್ತು ಆಗಿನ ಕಾಲದಲ್ಲಿ ಹತ್ತಿರದಲ್ಲಿ ಅಂಗಡಿಗಳಾಗಲಿ, ಪೇಟೆಗಳಾಗಲಿ ಇರುತ್ತಿರಲಿಲ್ಲದ ಕಾರಣ ತಾವು ಬೆಳೆದ ರಾಗಿ ನವಣೆ, ಹುರುಳಿ, ಮುಂತಾದ ಕೃಷಿ ಉತ್ಪನ್ನಗಳನ್ನು ಅಲ್ಲಲ್ಲಿ ಸೇರುತ್ತಿದ್ದ ವಾರದ ಸಂತೆಗಳಲ್ಲಿ ಸರಕು ವಿನಿಮಯ ಮಾಡಿಕೊಳ್ಳುವುದು ಸಾಗಿಕೊಂಡು ಬರುತ್ತಿತ್ತು. ಇಂದಿಗೆ ಇಪ್ಪತೊಂದನೆ ತಲೆಮಾರಿನವರಾದ ಈ ಗ್ರಾಮದ ಹಿರಿಯರಾಗಿದ್ದ ಶ್ರೀ ಹಲಗೇಗೌಡ ಎಂಬುವವರು ಇದ್ದವರ ಪೈಕಿ ಧೃದಕಾಯಾಕರು, ಧೈವ ಭಕ್ಟರು,ವ್ಯವಹಾರ ಚತುರರು ಆಗಿದ್ದರು. ಆ ಕಾಲದಲ್ಲಿ ಇಲ್ಲಿ ಬೆಳೆಯುತ್ತಿದ್ದ ರಾಗಿ, ಹುರುಳಿ, ನವಣೆ, ಅವರೇ ಮುಂತಾದ ಧಾನ್ಯಗಳನ್ನು ವ್ಯಾಪಾರ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು.ಮಾಮೂಲಿನಂತೆ ಒಂದು ಗುರುವಾರ ದಿನ, ಇಲ್ಲಿಗೆ ನಾಲ್ಕು ಮೈಲಿ ದೂರದ ಗುಡ್ಡದ ತಪ್ಪಲಿನ ಈಗಿನ ಕುಂಚೇವು ಎಂಬ ಗ್ರಾಮದ ಹತ್ತಿರ ವಿಶಾಲವಾದ ಮೈದಾನದಲ್ಲಿ ಸೇರುತ್ತಿದ್ದ ಸಂತೆಗೆ ಕಾಲುನಡಿಗೆಯಲ್ಲಿ ರಾಗಿ ಚೀಲವನ್ನು ಹೊತ್ತುಕೊಂಡು ಹೋಗುತಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿಗಳಾಗಲಿ, ಇತರೆ ವಾಹನಗಳು ಆವಿಷ್ಕಾರ ಗೊಂಡಿರಲಿಲ್ಲವಾದ್ದರಿಂದ ಕಾಲ್ನಡಿಗೆ ಅನಿವಾರ್ಯವಾಗಿತ್ತು. ಆ ದಿನದ ಸಂತೆಯಲ್ಲಿ ಗೌಡರ ಮಾಲು ಪೂರ ಖರ್ಚಾಗದೆ ಉಳಿದು ಬಿಡುತ್ತದೆ : ಉಳಿದಿದ್ದ ರಾಗಿ ಚೀಲವನ್ನು ಹೊತ್ತುಕೊಂಡು ಊರು ಕಡೆಗೆ ವಾಪಸ್ಸು ಬರಲು ಸ್ವಲ್ಪ ತಡವಾಗುತ್ತದೆ.ನಮ್ಮ ಗ್ರಾಮಕ್ಕೆ ಹತ್ತಿರದ ಈಗಿನ ಕೆರೆಕೋಡಿ ಇರುವ ಜಾಗವು ತುಂಬಾ ತಗ್ಗು ಪ್ರದೇಶಾಗಿತ್ತು ಆಗ ಕೆರೆ ಇರಲಿಲ್ಲ ಬೆಟ್ಟದ ತಪ್ಪಲಿನಿಂದ ಹುಟ್ಟಿದ ಒಂದು ನೀರಿನ ಹಳ್ಳ ಹರಿಯುತಲಿದ್ದಿತ್ತು ಈ ಜಾಗಕ್ಕೆ ಹಲಗೆ ಗೌಡರು ರಾಗಿ ಚೀಲವನ್ನು ಕೆಳಕ್ಕೆ ಇಟ್ಟು ಬಹಿರ್ದೆಶೆಗೆ ಹೋಗಿ ಬಂದು ದೇಹ ಶೌಚಮಾಡಿಕೊಂಡು ಹಳ್ಳದ ಸ್ವಲ್ಪ ಮೇಲುಭಾಗಕ್ಕೆ ಹೋಗಿ ಮುಖ ಕೈಕಾಲು ತೊಳೆದುಕೊಂಡು ನೀರನ್ನು ತಲೆಮೇಲಕ್ಕೆ ಪ್ರೋಕ್ಷಣೆ ಮಾಡಿಕೊಂಡು ಮನೆಕಡೆಗೆ ಹೊರಡುವುದು ಇವರ ಮಾಮೂಲಿ ಪದ್ದತಿಯಾಗಿತ್ತು ಈ ದಿನವೂ ಅದೇ ನಿಯಮಗಳನ್ನೆಲ್ಲ ಮಾಡಿಕೊಂಡು ಚೀಲವನ್ನು ಹೆಗಲಿಗೇರಿಸಿ ಹೊರಡಲು ಸಿದ್ದರಾದಾಗ ‘ನಾನು ಬರುತ್ತೇನೆ' ಎಂಬ ಅಶರೀರವಾಣಿಯು ಕೇಳಿ ಬರುತ್ತದೆ ಹಿಂದಿನ ವಾರಗಳಲ್ಲಿ ಈ ಜಾಗಕ್ಕೆ ಬಂದಾಗ ಈ ಅನುಭವ ಆಗಿರುವುದಿಲ್ಲ; ಈಗ ಗೌಡರು ಸ್ವಲ್ಪ ಧೈರ್ಯಗೆಡುತ್ತಾರೆ. ಸುತ್ತಲೂ ಕತ್ತಲು ಆವರಿಸಿದೆ ನರ ಸಂಚಾರವಿಲ್ಲ ಅಲ್ಲಲ್ಲಿ ಜೀರುಂಡೆಗಳ ಜೂಕರ, ನರಿಗಳು ಗುಳಿಡುವಿಕೆ, ಗೂಬೆಗಳು ಉಲಿಯುವಿಕೆ ಮರಗಳ ಮೇಲೆ ಬಾವುಲಿಗಳ ನಲಿಯುವಿಕೆ. ಇವುಗಳು ಮಾಮೂಲಿನ ಶಕುನಗಳು; ಆದರೆ ಈ ದಿನ ಈ ವಿಸ್ಮಯದಿಂದ ಭಯವುಂಟಾಗುತ್ತದೆ ಸ್ವಲ್ಪ ಕಣ್ಣು ಕವಿದಂತಾಗುತ್ತದೆ ಮೈ ಬೆವರುತ್ತದೆ, ಪುನ ಅದೇವಾಣಿಯು ಹಳ್ಳದ ಮೇಲುಭಾಗದಿಂದ ಕೇಳಿಬರುತ್ತದೆ ಇವರ ಪರಿಸ್ಥಿತಿಯನ್ನು ಅರಿತ ಆಗಂತಕರು, ಗೌಡರೇ ಹೆದರ ಬೇಡಿ ನಾನು ಒಬ್ಬ ರಕ್ಷಾದೇವತೆ ಕೊಂಕಣ ದೇಶದಿಂದ ಇಲ್ಲಿಗೆ ಬಂದಿರುತ್ತೇನೆ, ಈ ಮದ್ಯೆ ಎಲ್ಲೂ ಸರಿಯಾದ ನೆಲೆ ಸಿಗದೆ ಹೋದಕಾರಣ ಶರಣರು ಮುಟ್ಟಿದ ನಿಮ್ಮ ಗ್ರಾಮವು ಪವಿತ್ರ ತಾಣವೆಂದು ಇಲ್ಲಿಗೆ ಬಂದಿರುತ್ತೇನೆ ಹರಿಯುತ್ತಿರುವ ಹಳ್ಳದ ಬಲಭಾಗದ ನೀರಿನ ದಡದ ಮೇಲೆ ಮೂರು ರೂಪಿತ ಕಪ್ಪು ಶಿಲೆಗಳೊಳಗೆ ಜ್ಯೋತಿ ರೂಪದಲ್ಲಿ ಲೀನಳಾಗಿರುತ್ತೇನೆ ಬಹಳ ಹೊತ್ತಿನಿಂದ ಇಲ್ಲಿಗೆ ಬಂದು ಕಾದು ಕುಳಿತ್ತಿದ್ದೇನೆ, ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ ನಿಮ್ಮ ನಿಯಮಗಳಿಂದ ಆಚಾರವಂತರು, ಧೈವ ಭಕ್ತರು ಆಗಿರುವುದನ್ನು ಮನಗಂಡು ನಿಮ್ಮ ಮುಖಾಂತರ ಗ್ರಾಮದ ಒಳಗೆ ಪ್ರವೇಶಿಸಿ ನೆಲೆಯಾಗಿರಲು ಆಪೇಕ್ಷೇಪಟ್ಟು ಬಂದಿರುತ್ತೇನೆ; ನಿಮ್ಮ ಗ್ರಾಮವು ಪವಿತ್ರ ನದಿ ಉತ್ತಮ ಪರಿಸರ ಋಷಿ ಮುನಿಗಳ ತಪೋಭೂಮಿಯಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಗಿರಬಹುದು ಹಾಗೂ ಶಾಂತಿ ಪ್ರೀಯರೆಂದು ಊಹಿಸಿರುತ್ತೇನೆ; ಆದ್ದರಿಂದ ಇಲ್ಲಿ ನೆಲಸಿ ಜನ, ಜಾನುವಾರುಗಳ ನೆಮ್ಮದಿಗೆ ಮಾರಕವಾಗಿರುವ ದುಷ್ಟಮಾರಿಗಳನೆಲ್ಲ ಹೊರಕ್ಕೆ ಹಾಕಿ ದಾರಿದ್ರ್ಯವನ್ನು ದೂರ ಮಾಡಿ ಗ್ರಾಮದಲ್ಲಿ ಸುಖ, ಶಾಂತಿ ನೆಲಸುವಂತೆ ಮಾಡುವ ಸಂಕಲ್ಪದಿಂದ ಬಂದಿರುತ್ತೇನೆ; ನನ್ನ ವಿವಿಧ ಶಕ್ತಿಗಳ ಸಂಕೇತವಾಗಿರುವ ಈ ಮೂರು ಶೀಲಾಮೂರ್ತಿಗಳನ್ನು ಸಂತೆಯಿಂದ ಉಳಿದು ತಂದಿರುವ ರಾಗಿ ಚೀಲದೊಳಕ್ಕೆ ಇಟ್ಟು, ತೆಗದುಕೊಂಡು ಹೋಗಿ ನಿಮ್ಮ ಮನೆಯಲ್ಲಿ ಅದೇ ಚೀಲದ ಒಳಗಡೆ ಇಡಬೇಕು ಈ ವಿಚಾರ ರಾತ್ರಿ ಇಡೀ ಗುಪ್ತವಾಗಿರಬೇಕು. ನಂತರ ನನ್ನಲಿರುವ ಮೂರು ಶಕ್ತಿಗಳ ಮಹತ್ವವನ್ನು ತಿಳಿಸುತ್ತೇನೆ ಎಂಬ ಅಭಯವಾಣಿ ಕೇಳಿಬಂದ ಮೇಲೆ ಧೈವ ಪ್ರೇರಣೆಯಾದಂತೆ ಧೈರ್ಯ, ಭಕ್ತಿ ವುಂಟಾಗುತ್ತದೆ, ಆ ದಿನ ಜೇಷ್ಠ ಮಾಸದ ಶುಕ್ಲಪಕ್ಷ ಷಷ್ಠಿ ದಿನವಾಗಿದ್ದರಿಂದ ಚಂದ್ರನ ಹೊಂಬೆಳಕಿನೊಂದಿಗೆ ಪ್ರಕಾಶಿಸುತ್ತಿದ್ದ ನಕ್ಷತ್ರಗಳ ಕುಡಿಬೆಳಕಿನಲ್ಲಿ ಮಿಣುಕು ಹುಳಗಳ ತುಣುಕು ಬೆಳಕಿನಂತೆ ಹೊಳೆಯುತ್ತಿದ್ದ ಶಿಲಾರೂಪದಲ್ಲಿದ್ದ ದೇವಿಯ ಹತ್ತಿರಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಅಪ್ಪಣೆಯಾಗಿದ್ದಂತೆ ಮೂರು ಪ್ರತಿಮೆಗಳನ್ನು ಮೇಲಕ್ಕೆತ್ತಿ ರಾಗಿ ಚೀಲದಲ್ಲಿ ಇಟ್ಟುಕೊಂಡು ತಮ್ಮ ಮನೆಗೆ ಆಹ್ವಾನಿಸುತ್ತಾರೆ ಮತ್ತು ಬೆಳಕಾಗುವವರೆಗೂ ಈ ವಿಚಾರವನ್ನು ನಿಗುಡವಾಗಿ ಇಡುತ್ತಾರೆ. ಮನೆಗೆ ಬಂದ ನಂತರ ಶ್ರೀ ಹಲಗೇಗೌಡರಿಗೆ ಭಯ, ಆತಂಕ ಹಾಗೂ ದಿಗುಲು ಉಂಟಾಗುತ್ತದೆ; ಕಾರಣ ದಾರಿಯಲ್ಲಿ ಹೋಗುತ್ತಿದ್ದ ಯಾವನೋ (ಮಾರಿಯನ್ನು ಮನೆಗೆ ಕರೆದುಕೊಂಡು ಬಂದಿರುವುದರಿಂದ ಮುಂದೆ ಏನೋ ಎಂತೋ ? ) ಎಂಬ ಸಂಶಯ ಕಾಡುತ್ತದೆ ರಾತ್ರಿ ಊಟವನ್ನು ಮಾಡಲಿಲ್ಲ ಆವೇಶ ಬಂದವರಂತೆ ಮೌನವಹಿಸುತ್ತಾರೆ ಮಡದಿ ಶಿವಮ್ಮನಿಗೆ ಅನುಮಾನ ಬಂದು ವಿಚಾರಿಸಲಾಗಿ ನನಗೆ ಹಸಿವಿಲ್ಲ ಸಂತೆಯಲ್ಲಿ ಪಾಲಾಹಾರ ಸೇವಿಸಿ ಬಂದಿದ್ದೇನೆ ಈ ದಿನ ಒಂಟಿಯಾಗಿ ಮಲಗಲು ಬಿಡಿ ತುಂಬಾ ಆಯಾಸವಾಗಿದೆ ಎಂದು ಹೇಳಿ ತಾವು ಮಲಗುತ್ತಿದ್ದ ಕೊನೆಗೆ ಹೋಗಿ ಚಾಪೆಯ ಮೇಲೆ ಮಲಗಿ ಬಿಡುತ್ತಾರೆ; ಆದರೂ ಮನಸ್ಸಿಗೆ ಬಹಳ ದುಗುಡವುಂಟಾಗಿದ್ದರಿಂದ ನಿದ್ರೆ ಹತ್ತಲಿಲ್ಲ ಹಾಗೆ ಯೋಚಿಸುತ್ತಾ ಭಾವನಾಲೂಕದಲ್ಲಿ ಲೀನರಾಗಿದ್ದಾಗ ಸ್ವಲ್ಪ ಜೊಂಪುಬರುತ್ತದೆ. ಆಗ ಶ್ರೀ ದೇವಿಯವರು ಛಾಯಾ ರೂಪದಲ್ಲಿ ಗೌಡರ ಮನಸ್ಸಿನ ಮೇಲೆ ಬಂದು ಹೇಳಿದಂತೆ ನಾನು ಜಗನ್ಮಾತೆ ಪಾರ್ವತಿದೇವಿಯವರ ವರಕನ್ಯೆ ಧೈವ ಸಂಕೇತವಾದ ಆಕಾರಗೊಂಡಿರುವ ಮೂರು ಕಪ್ಪು ಶೀಲಾ ಪ್ರತಿಮೆ ರೂಪದಲ್ಲಿ ಈ ಗ್ರಾಮಕ್ಕೆ ನೆಲಸುವ ಆಕಾಂಕ್ಷಿಯಾಗಿ ಬಂದಿರುತ್ತೇನೆ; ನೀವು ಹಳ್ಳದ ನೀರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾಗ ಮಧ್ಯಭಾಗದಲ್ಲಿ ಹೊಳೆಯುತ್ತಿದ್ದ ದೊಡ್ಡ ಪ್ರತಿಮೆಯೊಳಗೆ ಲೀನಗೊಂಡಿರುವ ನನ್ನ ಮೂಲ ನಾಮಧೇಯ ಶ್ರೀ ಉಡಿಶೀಲಮ್ಮ ನೆಂದು ನನ್ನ ಬಲಲಭಾಗಕ್ಕೆ ಇದ್ದ ಪ್ರತಿಮೆಯೊಳಗೆ ನನ್ನ ಇಷ್ಟೊಂದು ಶಕ್ತಿ ಮಾರಿಕಾಚಿ ಎಂಬುದಾಗಿಯೂ ಮತ್ತು ನನ್ನ ಎಡಭಾಗಕ್ಕೆ ಇರುವ ಪ್ರತಿಮೆಯೊಳಗೆ ಮೂರನೆ ಶಕ್ತಿಯಾಗಿ ಶ್ರೀ ದೇವಿರಮ್ಮನೆಂತಲೂ ಜ್ಯೋತಿ ರೂಪದಲ್ಲಿ ಲೀನಗೊಂಡಿರುವ; ಈ ಮೂರು ವಿವಿಧ ಶಕ್ತಿಯನ್ನು ಹೊಂದಿದ್ದು ನಿಮ್ಮ ಗ್ರಾಮದಲ್ಲಿ ಗ್ರಾಮದೇವತೆ ಎಂಬ ನಾಮಸ್ಮರಣೆಯಿಂದ ಕರೆಸಿ ಕೊಳ್ಳುತ್ತೇನೆ. ಹಳ್ಳದ ನೀರಿನ ದಡದಲ್ಲಿ ಯಾವರೀತಿಯಲ್ಲಿ ಕುಳಿತ್ತಿದ್ದಾನೋ ಹಾಗೆ ಶ್ರೀ ಉಡಿಶೀಲಮ್ಮ ಎಂಬ ನಾಮೋಂಕಿತದ ದೊಡ್ಡದಾಗಿರುವ ಶೀಲಾ ಪ್ರತಿಮೆಯನ್ನು ಮಧ್ಯಭಾಗಕ್ಕೂ ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಅನುಕೂಲವಾಗಿರುವಹಾಗೆ ತಲೆಯಭಾಗವು ಮತ್ತವಾಗಿರುವ ನನ್ನ ಎರಡನೇ ಶಕ್ತಿ ಶೀಲಾ ಪ್ರತಿಮೆಯನ್ನು ನನ್ನ ಬಲಭಾಗಕ್ಕೂ ನನ್ನ ಕರುಣೆ ತೀಕ್ಷ್ಣ ದೃಷ್ಠಿಯ ಸಂಕೇತವಾಗಿರುವ ತಲೆಯ ಭಾಗವು ಸ್ವಲ್ಪ ನನ್ನ ಕರುಣೆ, ತೀಕ್ಷ್ಣ ದೃಷ್ಟಿಯ ಸಂಕೇತವಾಗಿ ತಲೆಯ ಭಾಗವು ಸ್ವಲ್ಪ ಮೊನಚಾಗಿರುವ ಮೂರನೇ ಶಕ್ತಿಯ ಶೀಲಾ ಪ್ರತಿಮೆಯನ್ನು ಎಡಭಾಗಕ್ಕೂ ಗ್ರಾಮದ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಬೆಳೆದು ನಿಂತಿರುವ ವಿಶಾಲವಾದ ವಟವೃಕ್ಷ (ಆಲದಮರ) ದ ಕೆಳಕ್ಕೆ ನಿಮ್ಮ ಅನುಭವದಲ್ಲಿರುವ ದೇವರ ಬನ ದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪನೆ ಮಾಡ ಬೇಕು ನಾಳೆಯಿಂದ ಜೇಷ್ಠ ಮಾಸದ ಸಪ್ತಮಿ ತಿಥಿ ರೋಹಿಣಿ ನಕ್ಷತ್ರವಿದ್ದು ಶುದ್ಧ ಶುಕ್ರವಾರ ವಿರುವುದರಿಂದ ಬಹಳ ಶುಭವಾಗಿರುತ್ತದೆ. ಈ ದಿನ ಉದಯ ವೇಳೆಯಲ್ಲಿ ಸೂರ್ಯ ದೇವನ ಹೊಂಗಿರಣಗಳು, ನನ್ನ ಪ್ರತಿಮೆಗಳ ಮೇಲೆ ಬೀಳುವುದರಿಂದ ಇನ್ನೂ ಹೆಚ್ಚಿನ ಯೋಗ ಶಕ್ತಿ ಲಬಿಸುತ್ತದೆ ಹಾಗೂ ಸೌಂದರ್ಯ ಪ್ರಭಾವಗಳು ಮೈಗೂಡಿಕೊಳ್ಳುತ್ತದೆ; ಎಂದು ಆದೇಶ ವಾಗುತ್ತದೆ. ನೀವು ಬ್ರಾಹ್ಮೀಕಾಲದಲ್ಲಿ ಎದ್ದು ನಿಮ್ಮ ನಿತ್ಯ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ನಂತರ ನನ್ನ ಶಕ್ತಿಯ ಶಿಲಾಪ್ರತಿಮೆಗಳನ್ನು ರಾಗಿ ಚೀಲದಿಂದ ಹೊರಕ್ಕೆ ತೆಗದು ಒಂದು ದೊಡ್ಡ ಹರಿವಾಣದಲ್ಲಿಟ್ಟು ಮನೆಯಲ್ಲಿರುವ ಎಳ್ಳು ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಜ್ಜನ ಮಾಡಿರಿ ಕೆಲವು ಸಮಯ ಬಿಟ್ಟು ನಿರ್ಣಾಯಕವಾಗಿ ಅಭಿಷೇಕದ ಪರಿಕರಗಳನ್ನು ಬಳಸಿ ಕಳಾನಭಿಷೇಕ ಮಾಡಿರಿ ಆಗ ನನ್ನ ಪ್ರತಿಮೆಗಳೊಳಗೆ ಚೀತ್ಕಳೆ(ಜ್ಯೋತಿ) ಕಾಣುತ್ತದೆ. ಈ ಚೀತ್ಕಳೆಯನ್ನು ತದೇಕ ಸೃಷ್ಟಿಯಿಂದ ನೋಡುತ್ತಿದ್ದರೆ ಅವರೊಳಗೆ ನನ್ನ ಸುಂದರರೂಪವು ಕಾಣುತ್ತದೆ ಕಾರಣ ಪೂಜಾ ವೇಳೆಯಲ್ಲಿ ಮಜ್ಜನ ಮಾಡಿ, ಅಭಿಷೇಕ ಮಾಡಿ ಆರಾದಿಸುವುದು ಸೂಕ್ತವಾದುದ್ದು ನಂತರ ಕುಲ ಪುರೋಹಿತರ ಮಾಂತ್ರ ಘೋಷಣೆಯೊಂದಿಗೆ ವಿಧಿ ವಿಧಾನಗಳ ಪ್ರಕಾರ ಧೈವ ಶಕ್ತಿಯನ್ನು ಪ್ರತಿಮೆಗಳಿಗೆ ಕೊಟ್ಟಿ ನಿಮ್ಮ ಮನೆಯಲ್ಲಿ ಅವು ಪೂಜೆಯನ್ನು ಮಾಡಿ ತಳಿಗೆ ಅರ್ಪಿಸಿದರೆ ತೃಪ್ತಳಾಗುತ್ತೇನೆ ಈ ಎಲ್ಲಾ ಪ್ರಕ್ರಿಯೆಗಳು ಬೆಳಗಿನ 6-30 ಘಂಟೆ ಗೊಳಗಾಗಿ ಮುಗಿಸಬೇಕು ಎಂದು ತಮ್ಮ ಸ್ಥಾಪನೆಯ ವಿಧಾನಗಳನ್ನೆಲ್ಲ ತಿಳಿಸಿದಂತಾದ ಮೇಲೆ ತನ್ನಲ್ಲಿರುವ ಮೂರು ಶಕ್ತಿ ಪ್ರಭಾವಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಪ್ರಭಾವ ಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಭಕ್ತಿ, ನಂಬಿಕೆ ಇಂದ ನನ್ನನ್ನು ಆರಾಧಿಸುತ್ತಾರೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉತ್ತಮ ದಾಂಪತ್ಯ ಭಾಗ್ಯ ಹಾಗೂ ಸಮೃದ್ದ ಜೀವನವನ್ನು ಶ್ರೀ ಉಡಿಶೀಲಮ್ಮ ಶಕ್ತಿಯಾಗಿಯೂ ನನ್ನ ಬಗ್ಗೆ ಉತ್ತಮ ಆಚಾರ, ನಿಷ್ಟೆಯಿಂದ ಸೇವೆಯನ್ನು ಮಾಡುತ್ತಾರೋ ಅಂತಹವರನ್ನು ಕಾಡುವ ದುಷ್ಟ ಪಿಡುಗುಗಳಾದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ದುಷ್ಟ ಮಾರಿಗಳನ್ನು ಹೊರ ಹಾಕುವ ಎರಡನೇ ಶಕ್ತಿ ಶ್ರೀ ಮಾರಿಕಾಂಬೆ ಯಾಗಿಯೂ ಗ್ರಾಮದಲ್ಲಿ ತಾಂಡವ ಮಾಡುತ್ತಿರುವ ಅಜ್ಞಾನ, ಧಾರಿದ್ರ್ಯ, ಮೂಡನಂಬಿಕೆ ಮತ್ತು ಅಭಾವ ಗಳನ್ನು ನಿವಾರಣೆ ಮಾಡಿ ಆರೋಗ್ಯ ಸಮೃದ್ದಿ ಸುಜ್ಞಾನವನ್ನು ಮೂರನೇ ಶಕ್ತಿಯಾಗಿ ಶ್ರೀ ದೇವೀರಮ್ಮ ನಾಗಿಯೂ ಕರ್ತವ್ಯಗಳನ್ನು ಕಾಲ ಕಾಲಕ್ಕೆ ನಿರ್ವಹಿಸುತ್ತಿರುತ್ತೇನೆ. ನನ್ನನ್ನು ನಿಮ್ಮ ಗ್ರಾಮದಲ್ಲಿ ಸ್ಥಾಪನೆಮಾಡಿದ ದಿನದಿಂದ ಪ್ರತಿ ವರ್ಷವೂ ಬಂಡಿ ಹಬ್ಬ ಎಂದು ಪರಿಷೆಯನ್ನು ಮಾಡಿ ಆ ಒಂದು ವರ್ಷದಲ್ಲಿ ಅನಧಿಕೃತವಾಗಿ ಗ್ರಾಮದ ಒಳಗಡೆಗೆ ನುಸುಳಿ ಬಂದು ಜನ, ಜಾನುವಾರುಗಳು ಕಾಡುವ ಎಲ್ಲ ದುಷ್ಟ ಮಾರಿಗಳನ್ನು ತಮಟೆ ವಾದ್ಯ ಶಬ್ದ ಗಳಿಂದ ಎಚ್ಚಿಸಿ ಅವುಗಳನೆಲ್ಲ ಊರಿನ ಹೆಬ್ಬಾಗಿಲಿಗೆ ಕರೆತಂದು ಸಿದ್ದ ಮಾಡಿದ ಬಂಡಿಯಲ್ಲಿ ತುಂಬಿ ಮಾರಿಗಳಿಗೆಪ್ರಿಯವಾದ ಬಿಳಿ ಬಣ್ಣದ ಬಟ್ಟೆಯಿಂದ ಕೆಳಕ್ಕೆ ಜಿಗಿಯದಂತೆ ಬಂದಿಸಿ ಇವುಗಳಿಗೆ ಪ್ರಿಯವಾದ ಖಂಡಾ ಹಾರದ ತದ್ರೂಪ ಶಾವಿಗೆ ಪರ್ಪನ್ನು ಎಡೆ ಇತ್ತು ಪೂಜಿಸಿ ಕೂಸ್ಮಂಡದಿಂದ ಬಂಡಿಗೆ ದಿಗ್ಬಾಂದನಮಾಡಿ ಅದನ್ನು ಬಲಿಕೊಟ್ಟು ನಂತರ ಗಾಡಿಯಲ್ಲಿ ಭದ್ರಗೊಳಿಸಿ ಹಳ್ಳಿವಾದ್ಯ ಪ್ರತಿ ಮನೆಯ ಎಡೆಯನ್ನು ಹೊತ್ತ ಭಕ್ತರು ಬಂಡಿಯನ್ನು ಸುತ್ತುವರಿದು ಎಳೆದುತಂದು ನನ್ನ ಸನ್ನಿಧಿಗೆ ಒಪ್ಪಿಸಿ; ಇವುಗಳು ನನ್ನ ಹಿಡಿತಕ್ಕೆ ಬಂದ ಮೇಲೆ ಭಕ್ತರು ತಂದ ಶಾವಿಗೆ ಪರ್ಪನ್ನು ೧೦೧ ಮಾರಿಗಳಿಗೆ ಎಡೆ ಇತ್ತು ಪೂಜಿಸಿ ನಮ್ಮ ಮನೆಯ ಕಷ್ಟಕ್ಕೆ ಬರಬೇಡ ಸುಖಕ್ಕೆ ಬಾ ಎಂದು ಪ್ರಾರ್ಥನೆಯ ಮಾಡಿ ಈ ಮಾರಿಗಳಿಗೆ ಆರ್ಫಿಸಿದರೆ; ತೃಪ್ತಗೊಳ್ಳುತ್ತಾರೆ ನಂತರ ಇವರನೆಲ್ಲ ಗ್ರಾಮದಿಂದ ಹೊರಕ್ಕೆ ಓಡಿಸಿ ಜನ, ಜಾನುವಾರುಗಳು ಆರೋಗ್ಯ ನೆಮ್ಮದಿಯಿಂದ ಇರುವಂತೆ ಬೆಂಗಾವಲಾಗಿರುತ್ತೇನೆ ಇಂದಿನ ದಿನದಿಂದ ನಿಮ್ಮ ಸಂತತಿಯವರು ಪ್ರತಿ ಶುಕ್ರವಾರ ತಪ್ಪದೆ ನನಗೆ ಪೂಜೆ, ನೈವೇದ್ಯ, ಸಲ್ಲಿಸಲು ಕ್ರಮವು ನಿರಂತರ ವಾಗಿ ನೆಡೆದುಕೊಂಡು ಬರಬೇಕು, ನನ್ನನ್ನು ಆರಾಧಿಸುವ ವಿಷಯದಲ್ಲಿ ಯಾರು ಅಲಕ್ಷ ಮಾಡುತ್ತಾರೋ ಅಂತವರನ್ನು ನಾನು ಸಹ ಅಲಕ್ಷ ಮಾಡುತ್ತೇನೆ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿ ನಾನು ಪ್ರಸ್ತುತ ಪಡಿಸಿರುವ ಎಲ್ಲ ನಿಯಮಗಳನ್ನು ಕೊಡಲೇ ಕಾರ್ಯರೂಪಕ್ಕೆ ತರಲು ಗೌಡರಿಗೆ ಶಕ್ತಿ, ಜ್ಞಾನವನ್ನು ಕೊಟ್ಟು ಅದೃಶ್ಯ ವಾದಂತೆ ಪ್ರೇರಣೆಯಾಗುತ್ತದೆ. ಆ ರಾತ್ರಿಎಲ್ಲ ಶ್ರೀ ದೇವಿಯವರು ಹಲಗೇಗೌಡರ ಕನಸಿಗೆ ಆವೇಶವಾಗಿ ಬಂದು ಎಲ್ಲ ವಿಷಯಗಳನ್ನು ತಿಳಿಸಿದ ವಿಸ್ಮಯವನ್ನು ತಿಳಿದು ಜಾಗೃತವಸ್ಥೆಗೆ ಬಂದ ಕೂಡಲೇ ಎಚ್ಚರ ಉಂಟಾಗುತ್ತದೆ; ಕೂಡಲೇ ಎದ್ದು ಹೊರಕ್ಕೆ ಬಂದು ನೋಡುತ್ತಾರೆ ಎಲ್ಲವೂ ಯಥಾಸ್ತಿತಿ ಆಗಲೇ ಮೂಡಣ ಕೆಂಪಾಗಿದ್ದು ದಿನಕರನ ಆಗಮನದ ಛಾಯೆ ಕಂಡುಬರುತ್ತದೆ ರಾತ್ರಿ ಇಡೀ ಕಂಡ ಸಂಗತಿ ಇಂದ ತುಂಬಾ ಬಾವುಕರಾಗಿ ಶ್ರದ್ದಾ ಭಕ್ತಿಯಿಂದ ಕಾರ್ಯೋನ್ಮುಖರಾಗುತ್ತಾರೆ, ತಮ್ಮ ಶುಚೊಪಚಾರಗಳನ್ನೆಲ್ಲ ಮುಗಿಸಿಕೊಂಡು ಸ್ನಾನಕ್ಕೆ ವ್ಯವಸ್ಥೆ ಮಾಡಿ ಪೂಜೆಗಾಗಿ ಬಗೆ ಬಗೆಯ ಪುಷ್ಪ ಪತ್ರೆಗಳನ್ನು ಅರಸಿ ತಂದು ಇಡುತ್ತಾರೆ, ನಂತರ ರಾಗಿ ಚೀಲದ ಒಳಗಡೆಯಿಂದ ಧೈವ ಬಿಂಬಿತ ವಿಗ್ರಹಗಳನ್ನು ಹೊರಕ್ಕೆ ತೆಗದು ದೇವಿಯವರ ಆಪೇಕ್ಷೆಯಂತೆ ದೊಡ್ಡ ಹರಿವಾಣದಲ್ಲಿ ಸ್ಥಾಪಿಸಿ ಮೊದಲು ಎಣ್ಣೆ ಮಜ್ಜನ ಮಾಡಿ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಿದ್ದತೆ ಮಾಡುತ್ತಾರೆ ನಂತರ ಸ್ನಾನ ಮಾಡಿ ಶುಚಿಭೂತರಾಗಿ ಮನೆಯವರನ್ನು ಏಳಿಸುತ್ತಾರೆ; ಈ ದಿನದಿಂದ ನಮ್ಮ ಕುಟುಂಬಕ್ಕೆ ಹೊಸ ಪರ್ವ ಆರಂಭವಾಗಿದೆ, ಎಲ್ಲರೂ ಬೇಗ ಸ್ನಾನಾದಿಕ್ರಮಗಳಿಂದ ಸಿದ್ದರಾಗಿ ಎಂಬುದಾಗಿ ತಿಳಿಸಿದಂತೆ ಕುತೂಹಲ ಸಂಶಯ ಉಂಟಾಗುತ್ತದೆ ಯಜಮಾನರ ಆದೇಶದಂತೆ ಎಲ್ಲರೂ ಸಿದ್ದರಾದ ಮೇಲೆ ತಾವು ಮಲಗಿದ್ದ ಕೋಣೆಗೆ ಕರೆದುಕೊಂಡು ಹೋಗಿ ಹರಿವಾಣದಲ್ಲಿ ಇಡಲಾಗಿದ್ದ ಲಿಂಗಾಕಾರದ ಮೂರು ಕಪ್ಪು ವಿಗ್ರಹಗಳನ್ನು ತೋರಿಸುತ್ತಾ ನಿನ್ನೆ ಸಂಜೆಯಿಂದ ರಾತ್ರಿಯಿಡೀ ಶ್ರೀ ಉಡಿ ಶೀಲಮ್ಮ ನೆಂಬ ಆವೇಶವಾಗಿ ಬಂದು ತಮ್ಮ ಶಕ್ತಿ ಪವಾಡ ಆಚರಣೆಗಳ ಬಗ್ಗೆ ತಿಳಿಸಿ ಅಂತರ್ಧಾನಳಾದ ವಿಚಾರವನ್ನು ತುಂಬಾ ಬಾವುಕರಾಗಿ ತಿಳಿಸುತ್ತಾರೆ.ಈ ವಿಸ್ಮಯವನ್ನು ಕೇಳಿದ ಮನೆಯವರಿಗೆ ನಂಬಿಕೆ ಭಕ್ತಿ ಉಂಟಾಗಿ ಮುಂದಿನ ಕಾರ್ಯಗಳಿಗೆ ಸಿದ್ಧರಾಗುತ್ತಾರೆ ಈ ವಿಚಾರವು ಕೇರಿಯವರಿಗೆಲ್ಲ ಹರಡಿ ಕುತೂಹಲ ಭರಿತರಾಗಿ ಗೌಡರ ಮನೆಗೆ ಬಂದು ಹರಿವಾಣದಲ್ಲಿ ಇಡಲಾಗಿದ್ದ ದೇವಿಯಪ್ರತಿಮೆಗಳನ್ನು ಶ್ರದ್ದೆ, ಭಕ್ತಿಯಿಂದ ದರ್ಶನ ಮಾಡಿ ಇಲ್ಲಿಗೆ ಪಾದಾರ್ಪಣೆ ಮಾಡಿದಾಗ ವಿಚಾರವನ್ನು ಗೌಡರಿಂದ ತಿಳಿದು ಉತ್ಸಾಹ, ಸಂತೋಷದಿಂದ ದೇವಿಯವರ ಸೇವೆಯನ್ನು ಮಾಡಲು ಸಿದ್ದರಾಗುತ್ತಾರೆ; ಅಪ್ಪಣೆಯಾದಂತೆ ದೇವರ ಬನವನ್ನು ಸ್ವಚ್ಛಮಾಡಿ ಕೇರಿಯಿಂದ ಬನದವರೆಗೆ ಗುಡಿಸಿ ನೀರು ಹಾಕುವುದು ತಳಿರು ತೋರಣಗಳಿಂದ ಅಲಂಕಾರ ಮಾಡುವುದು ಬನಕ್ಕೆ ಚಪ್ಪರ ಹಾಕುವುದು ಮುಂತಾದ ಕೆಲಸಗಳನ್ನು ಪರಸ್ಪರ ಸಹಕಾರದಿಂದ ಹಾಗೂ ಸಂಭ್ರಮಗಳಿಂದ ಮಾಡುತ್ತಾರೆ ಶ್ರೀ ದೇವಿಯವರ ಅಪೇಕ್ಷೆಯಂತೆ ಪುರೋಹಿತರ ಸಲಹೆಯ ಪ್ರಕಾರ ಮನೆಯಲ್ಲಿ ಸರಳವಾದ ಅಗ್ರಪೂಜೆಯನ್ನು ಮಾಡಿ ಆರತಿ ಮಾಡಿದ ನಂತರ ದೇವರು ದುಂಬಿತ ಹರಿವಾಣವನ್ನು ಈ ವ್ಯವಸ್ಥೆಗೆಲ್ಲ ಕಾರಣ ಕರ್ತರಾದ ಹಲಗೇಗೌಡರ ತಲೆಯ ಮೇಲೆ ಹೊತ್ತು ಮೂಡಣ ದಿಕ್ಕಿನತ್ತ ಹೇಮಾವತಿ ನಡಿಗೆ ಬಿಜಯಂಗೈದು; ಗಂಗಾಸ್ನಾನದಲ್ಲಿ ಪುರೋಹಿತರ ವಿಧಿ ವಿಧಾನಗಳ ಪ್ರಕಾರ ದೇವಿಯವರಿಗೆ ದೈವತ್ವವನ್ನು ಕೊಟ್ಟು ದಶಕುಂಭಗಳನ್ನು ದೇವಿ ಕಲಶವನ್ನು ಸ್ಥಾಪಿಸಿ ವನಿತೆಯರಿಗೆಲ್ಲ ಹೂವಿನ ಕಂಕಣ ಕಟ್ಟಿ, ಮುತ್ತೈದೆಯರಿಂದ ಪಂಚ ಪೂಜೆಯಾದ ಮೇಲೆ ಎಲ್ಲಾ ಮಾನಿನಿಯರಿಗೂ ಮಡಿಲನ್ನು ತುಂಬಿ, ಒಬ್ಬ ಮಾನಿನಿಯ ದೇವಿಕಲಶ ಹತ್ತು ಜನ ವನಿತೆಯರಿಂದ ಪೂರ್ಣಕುಂಭ ಹಾಗೂ ಗೌಡರಿಂದ ಪ್ರತಿ ಮೇಗಳನ್ನಿಟ್ಟು ಹರಿವಾಣ ತಲೆಯ ಮೇಲೆ ಹೊತ್ತು ದಾರಿಯುದ್ದಕ್ಕೂ ಪಕ್ಷಾಮಡಿಯ ಮೇಲೆ ಘಂಟೆಯಿಂದ ಮಂತ್ರ ಘೋಷಣೆ ಮಾಡುತ್ತಾ ಸಿದ್ದಪಡಿಸಲಾಗಿದ್ದ ದೇವರ ಬನಕೆ ತರುತ್ತಾರೆ ಶ್ರೀ ದೇವಿಯವರನ್ನು ಸ್ಥಾಪನೆ ಮಾಡುವ ಜಾಗಕ್ಕೆ ಗೋಮಯ ಪಾದೋದಕಗಳಿಂದ ದೋಷರಹಿತವನ್ನಾಗಿ ಮಾಡಿ ದೇವಿಯ ದಾನ್ಯ ಸ್ತಂಬನದ ಮುಖಾಂತರ ಬಂದಿದ್ದರಿಂದ ಚೀಲದಲ್ಲಿದ್ದ ರಾಗಿಯನ್ನು ಗದ್ದುಗೆಯಂತೆ ಹರಡಿ ಕಲಶ ಹಾಗೂ ಪೂರ್ಣ ಖೊಂಬಗಳನ್ನು ಈ ಗದ್ದುಗೆಯ ಮೇಲೆ ಸ್ಥಾಪಿಸಿ ಹರಿವಾಣವನ್ನು ಪಕ್ಷಕ್ಕೆ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಎಣ್ಣೆ ಮಜ್ಜನ ಮಾಡಿದ್ದರಿಂದ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ ಪ್ರತಿಮೆ ಗಳೊಳಗೆ ಚೀತ್ಕಲೆ ಕಾಣುವಂತೆ ಹೊಳಪು ಹೋಳಿಸಿದಾನಾಂತರ ಗದ್ದುಗೆಯ ಮೇಲೆ ಸ್ಥಾಪನೆ ಮಾಡಿದ ಮೇಲೆ ಮಧ್ಯಕ್ಕೆ ಶ್ರೀ ಉಡಿಶೀಲಮ್ಮ ಎರಡನೇ ಶಕ್ತಿ ಸಂಕೇತ ಮಾರಿಕಾಂಬೆಯನ್ನು ಬಲಭಾಗಕ್ಕೂ ಮತ್ತು ಮೂರನೇ ಶಕ್ತಿ ಸಂಕೇತ ದೇವೀರಮ್ಮನವರನ್ನು ಎಡ ಭಾಗಕ್ಕೂ ಪೂರ್ವಾಭಿಮುಖವಾಗಿ ಸ್ಥಿರಗೊಳಿಸುತ್ತಾರೆ ಎರಡು ಬದಿಗೂ ಕೈ ಎಣ್ಣೆ ದೀಪ ಹಚ್ಚಿಟ್ಟು ಪ್ರಕಾಶಮಾನ ಗೊಳಿಸಿ, ಹೊಳಪುಗೊಳಿಸಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ವ್ಯವಸ್ಥೆಯಾಗುತ್ತದೆ ಪೋರೋಹಿತರ ಮಂತ್ರೋಪದೇಶ ಗಳ ಆಗರವಾಗಿ ರುದ್ರ ಹೋಮವಾಗುತ್ತದೆ ನಂತರ ಗಣಪತಿ ಪೂಜೆ, ಕಲಶ,ಕುಂಭಗಳಿಗೆ, ಪೂಜೆಯೊಂದಿಗೆ ದೇವಿಯವರಿಗೆ ನವ ವಿಧಧ ಪುಷ್ಪಗಳಿಂದ ಅಲಂಕರಿಸಿ ದೈವ ಕಲೆಯನ್ನು ತುಂಬಿ ಪೂಜಿತರನ್ನಾಗಿ ಮಾಡಿದ ಮೇಲೆ ಮಹಾಪೂಜೆ, ಮಂಗಳಾರತಿ, ಪಂಚಾಮೃತತಗಳಿಗೆ ಅರ್ಪಣೆ ಹಣ್ಣು ಕಾಯಿ ಬೆಲ್ಲದ ನೈವೇದ್ಯ ಆದ ಮೇಲೆ ಆರು ತೋಳು ಬಲಗಳನ್ನೂ ಸರ್ವಶಕ್ತಿಯನ್ನು ಹೊಂದಿರುವ ಗ್ರಾಮದ ಅಧಿದೇವತೆ ಶ್ರೀ ಗ್ರಾಮದೇವತೆ ಎಂಬ ಒಂದೇ ಅರ್ಥದ ರೂಡಿ ನಾಮದಿಂದ ನಾಮಕರಣ ಮಾಡಲಾಯಿತು; ನೆರದಿದ್ದ ಭಕ್ತ ಸಮೂಹವು ಜನ ಮನದ ಜಯದೇವಿ ಶ್ರೀ ಗ್ರಾಮದೇವತೆ ಎಂಬುದಾಗಿ ಸಾಮೂಹಿಕವಾಗಿ ಜನ ಘೋಷಣೆಮಾಡುತ್ತಾರೆ. ಈ ಪ್ರಕ್ರಿಯೆಗಳೆಲ್ಲ ಮುಗಿದನಂತರ ಭಕ್ತರ ಮನೆ ಗಳಿಂದ ಬಂದಿದ್ದ ತಳಿಗೆ ಪದಾರ್ಥಗಳು( ಅಕ್ಕಿ ಬೆಲ್ಲ) ಬಾಳೆ ಹಣ್ಣು ತೆಂಗಿನ ಕಾಯಿ ಸೇವೆಯನ್ನು ಮಾಡಿ ಎಲ್ಲರಿಗೂ ತೀರ್ಥ, ಪ್ರಸಾದವನ್ನು ಕೊಟ್ಟು ಪುನೀತರನ್ನಾಗಿ ಮಾಡಿದ ಸಂಭಂದ ಗ್ರಾಮದಲ್ಲಿ ಇಂತಹ ಸತ್ಕಾರ್ಯವು ಅನಿರೀಕ್ಷಿತವಾಗಿ ನೆರವೇರಿದ್ದರಿಂದ ನಂಬಿಕೆ, ಭಕ್ತಿ, ಸಂತೋಷವೂ ಭಕ್ತರಲ್ಲಿ ನೆಲೆಯಾಗಿ ಉಳಿದಿದೆ. ಶ್ರೀ ದೇವಿಯವರು ಕಿರು ಧಾನ್ಯದಿಂದ ರಾಗಿಯ ಗದ್ದುಗೆಯ ಮೇಲೆ ಆಸೀನರಾಗಲು ಇಷ್ಟ ಪಟ್ಟಿದ್ದು ಬಹಳ ಮಹತ್ವವನ್ನು ಪಡೆದುಕೊಂಡಿದೆ ರಾಗಿ ಎಂಬ ಸಂಭವನೀಯ ವಾಕ್ಯವು ಭಕ್ತಿಯ ನೆಲೆಗಟ್ಟಿನ ಮೇಲೆ ಬಂದಿರಬಹುದೆಂಬ ನಂಬಿಕೆಯಾಗಿದೆ; ಹೇಗೆಂದರೆ ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರಸಾದ ಮಯವಾಗಿ ಸೇವನೆ ಮಾಡುವವರು ಶ್ರೀ ದೇವಿಯವರು ಆಶೀರ್ವಧಿಸಿದಂತೆ. ಭಕ್ತಿವಂತರಾಗಿ ನಿಷ್ಟೆಯಿಂದ ಪೂಜೆಮಾಡುವವರಿಗಾಗಿ ನಂಬಿಕೆಯುಳ್ಳವರಾಗಿ, ಜ್ಞಾನಳ್ಳವರಾಗಿ, ಶಕ್ತಿವಂತರಾಗಿ, ಆರೋಗ್ಯವಂತರಾಗಿ, ಯೋಗವಂತರಾಗಿ, ಗುರು ಹಿರಿಯರಲ್ಲಿ ನಿಷ್ಟಾವಂತರಾಗಿ, ತಂದೆ ತಾಯಿಯವರನ್ನು ಪೂಜಿಸುವವರಾಗಿ, ಹೀಗೆ ಪ್ರತಿ ಭಾವಾರ್ಥದ ಕೊನೆಯಲ್ಲಿ ರಾಗಿ ಎಂದು ಇದರ ಮಹತ್ವವನ್ನು ತಿಳಿಸಿರುವುದರಿಂದ ರಾಗಿಯ ತಳಿಗೆಯನ್ನು ದೇವಿಯವರು ಇಷ್ಟಪಡುವ ಕಾರಣದಿಂದ ಬಂಡಿ ಹಬ್ಬದ ಆಚರಣೆ ದಿನ ಎಡೆಯಾಗಿ ರಾಗಿ ಶಾವಿಗೆಯನ್ನು ತಂದು ಅರ್ಪಣೆ ಮಾಡುತ್ತಿರುವುದು ಪ್ರಸ್ತುತವೆನಿಸಿರುತ್ತೆ. ಈ ಎಲ್ಲ ಪ್ರಕ್ರಿಯೆಗಳು ನೆರೆವೆರಿದ ಮೇಲೆ ದೇವಿಯವರ ಪೂರ್ಣ ಕುಂಭ ಹಾಗೂ ಕಲಶದ ಪವಿತ್ರ ಜಲವನ್ನು ದೇವರ ಬನದ ಸುತ್ತಲೂ ಪ್ರೋಕ್ಷಿಸಿ ದಿಗ್ಬಂದನ ಮಾಡುತ್ತಾರೆ, ನಂತರ ಪ್ರತಿಮೆಗಳಿಗೆ ಅಪಾಯ ಅಪಚಾರಗಳು ಆಗಬಾರದೆಂಬ ಭಾವನೆಯಿಂದ ಕೆಲವು ಭಕ್ತರು ಸ್ವಾಧೀನದಲ್ಲಿದ್ದ ಕಲ್ಲು ಚಪ್ಪಡಿಗಳನ್ನು ತಂದು ಭದ್ರವಾದ ತಾತ್ಕಾಲಿಕ ಗುಡಿಯನ್ನು ಎಲ್ಲರ ಸಹಕಾರದಿಂದ ನಿರ್ಮಾಣ ಮಾಡುತ್ತಾರೆ ಹೀಗೆ ದೇವಿಯವರನ್ನು ಇಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಪ್ರಕ್ರಿಯೆಗಳಲ್ಲೆಲ್ಲ ಪೂರ್ಣವಾದಂತಾದ ಮೇಲೆ ಶ್ರೀ ಹಲಗೇಗೌಡರು ಪ್ರತಿ ಶುಕ್ರವಾರ ಪೂಜೆಯನ್ನು ನೆಡಸಿಕೊಂಡು ಬರುತ್ತಿದ್ದರು. ಈ ವ್ಯವಸ್ಥೆಯು ಗ್ರಾಮದಲ್ಲಿ ಆದನಂತರ ಶ್ರೀ ದೇವಿಯವರ ಮಹಿಮೆಯಿಂದ ರೋಗ ರುಜಿನಗಳು ನಿಯಂತ್ರಣಕ್ಕೆ ಬರುತ್ತವೆ; ಜನರಲ್ಲಿ ಆಚಾರ ವಿಚಾರಗಳು ಹೆಚ್ಚಾಗಿ ಬರುತ್ತವೆ, ಕಾಲ ಕಾಲಕ್ಕೆ ಮಳೆಯಾಗುತ್ತಿದ್ದರಿಂದ ಸಮೃದ್ಧಿ ವಾತಾವರಣ ಉಂಟಾಗುತ್ತದೆ ಇದರಿಂದ ನೆಮ್ಮದಿಯ ಬದುಕನ್ನು ನೆಡೆಸುತ್ತಾ ಆಶಾವಾದಿಗಳಾಗಿ ಬಾಳುತ್ತಿರುತ್ತಾರೆ; ಈ ಪ್ರಖ್ಯಾತಿಯು ಸುತ್ತ ಮುತ್ತಲು ಪ್ರದೇಶಗಳಿಗೆ ಪ್ರಚಾರವಾಗ ತೊಡಗಿದಂತೆ,,,

ಕಾಲಾನಂತರದಲ್ಲಿ

ಈ ಪ್ರಾಂತ್ಯವನ್ನು ಆಳುತ್ತಿದ್ದ ಕೆಳದಿಯ ಅಂದರೆ ಶಿವಮೊಗ್ಗದ ಪಾಳೇಗಾರರಿದ್ದ ಶ್ರೀ ಶಿವಪ್ಪ ನಾಯಕನನ್ನು ತನ್ನ ಶತ್ರುಗಳ ನೆಲೆಯನ್ನು ಅರಸುತ್ತಾ ಹಾಗೂ ತನ್ನ ಆಡಳಿತದ ಬಗ್ಗೆ ಪ್ರಜೆಗಳಲ್ಲಿರುವ ಅಭಿಪ್ರಾಯ ಅವರ ಸಮಸ್ಯೆ ತೊಂದರೆಗಳನ್ನು ತಿಳಿಯುವ ಸಂಭಂದವಾಗಿ ನದಿಪಾತ್ರದಲ್ಲಿದ್ದ ಈ ಗ್ರಾಮಕ್ಕೂ ಭೇಟಿಮಾಡುತ್ತಾರೆ: ಇಲ್ಲಿ ಜನರಲ್ಲಿ ಆಚಾರ, ವಿಚಾರ, ಭಕ್ತಿ, ಆನ್ಯೂನತೆ, ಸಮೃದ್ದಿ ಮತ್ತು ರಾಜಭಕ್ತಿ ಇವುಗಳನೆಲ್ಲ ನೋಡಿ ಸಂತೋಷ ಭರಿತನಾಗಿ ತನ್ನ ರಾಜ್ಯಾಡಳಿತದ ಬಗ್ಗೆ ಹೆಮ್ಮೆ ಪಡುತ್ತಾನೆ, ಈ ಎಲ್ಲ ಆದರ್ಶ ಹಾಗೂ ಸಂತೋಷಗಳಿಗೆ ಸಕಾರಣಗಳನ್ನು ತಿಳಿಯುವ ಆಸೆಯಾಗುತ್ತದೆ; ಊರಿನ ಪುರೋಹಿತರನ್ನು ಮತ್ತು ಮುಖಂಡರಾಗಿದ್ದ ಶ್ರೀ ಹಲಗೇಗೌಡರನ್ನು ಕರಸಿಕೊಂಡು ಯೋಗ ಕ್ಷೇಮವನ್ನು ವಿಚಾರಿಸುತ್ತಾನೆ ಮತ್ತು ಜನರಲ್ಲಿ ಕಂಡು ಬರುತ್ತಿರುವ ಈ ಮಡಿವಂತಿಕೆಗೆ ಕಾರಣಗಳನ್ನು ಕೇಳುತ್ತಾನೆ ಶ್ರೀ ಹಲಗೇಗೌಡರು ಹೇಳಿದ್ದೇನೆಂದರೆ, ಶ್ರೀ ಪಾರ್ವತಿ ದೇವಿಯವರ ಕನ್ಯೆರಾದ ಉಡಿಶಿಲಮ್ಮನವರು ಗ್ರಾಮ ದೇವತೆಯಾಗಿ ನೆಲೆಯಾಗಿರುವ ಕಾರಣ ' ಬೇಡಿದ್ದಕೆಲ್ಲ ವರ ಮುಟ್ಟಿದ್ದಕೆಲ್ಲ ಚಿನ್ನ ಎಂಬಂತೆ ಅವರ ಶಕ್ತಿ ಪವಾಡಗಳ ಬಗ್ಗೆ ಸಾಗಿಬಂದ ಸಂಗತಿಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತಾರೆ ಈ ಮಹಾತ್ಮೆಯನ್ನು ತಿಳಿದ ನಾಯಕನಿಗೂ ನಂಬಿಕೆ ಭಕ್ತಿವುಂಟಾಗಿ ದೇವಿಯವರ ದರ್ಶನ ಮಾಡುವ ಹಂಬಲ ಉಂಟಾಗುತ್ತದೆ; ಭಕ್ತರ ಸಮೇತ ಬಾಣಕ್ಕೆ ಬಂದು ಪೂಜಿಸಿದ್ದ ಪ್ರತಿಮೆಗಳಲ್ಲಿ ಏಕ ಚಿತ್ತದಿಂದ ದೃಷ್ಟಿ ಇಟ್ಟು ಕಾಣುತ್ತಿದ್ದ ಚೀತ್ಕಲೆಯ ಅಂತರಂಗದಿಂದ ಶ್ರೀ ದೇವಿಯವರ ಸುಂದರ ರೂಪವನ್ನು ಕಂಡು ಲೀನರಾಗಿ ಭಾವಪರವಶರಾಗುತ್ತಾರೆ ನಂತರ ಜಾಗೃತಗೊಂಡು ಆರಾಧಕರಿಂದ ಪೂಜೆಯನ್ನು ಮಾಡಿಸಿ ತೀರ್ಥ ಪ್ರಸಾಧವನ್ನು ತೆಗೆದುಕೊಂಡು ತನ್ನನ್ನು ಕಾಡುತ್ತಿದ್ದ ಕೊರತೆಯನ್ನು ನಿವಾರಿಸಲು ತನ್ನ ಮನಿಸ್ಸಿನಲ್ಲೇ ಪ್ರಾರ್ಥನೆ ಮಾಡಿ ಹರಕೆ ಹೊತ್ತು ನಂಬಿಕೆ ಸಂತೋಷದಿಂದ ತಮ್ಮ ಬೇಟಿಗಾಗಿ ಬಂದಿದ್ದ ಪ್ರಜೆಗಳಿಗೆ ಸಾಂತ್ವನ ಹೇಳಿ ಎಲ್ಲರಿಗೂ ಶ್ರೀ ದೇವಿಯವರು ಶ್ರೇಯಸ್ಸನ್ನು ಕೊಡಲಿ ಎಂಬುದಾಗಿ ಹಾರೈಸಿ ಅಲ್ಲಿಂದ ಬೀಳ್ಕೊಂಡು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ ದಾರಿ ಉದ್ದಕ್ಕೂ ಶುಭ ಶಕುನಗಳು ಕಂಡುಬರುತ್ತವೆ ಇದು ದೇವಿಯವರ ದರ್ಶನದ ಪಲ ಎಂಬ ನಂಬಿಕೆಯಿಂದ ತನ್ನ ಕೋಟೆಯನ್ನು ತಲುಪುತ್ತಾನೆ ಆ ಲಾಗಾಯ್ತಿನಿಂದ ಎಲ್ಲಾ ತೊಂದರೆ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೀಗಿರುತ್ತಿರುವಾಗ ನಮ್ಮ ಗ್ರಾಮಕ್ಕೆ ಭೇಟಿ ಕೊಟ್ಟು ಹರಕೆ ಹೊತ್ತುಕೊಂಡಿದ್ದರಿಂದ ಫಲವಾಗಿ ೧೩ನೇ ತಿಂಗಳಿಗೆ ಸಂತಾನಹೀನನಾಗಿದ್ದು ನಾಯಕನಿಗೆ ವಂಶೋದ್ದಾರಕನ ಆಗಮನವಾಗುತ್ತದೆ; ಕಳಂಕ ತಪ್ಪಿ ಜನ ನಿಂದನಾ ರಹಿತವಾದ ಕಾರಣ ಆನಂದ ಸಂತೋಷ ಉಂಟಾಗಿ ವಿಜಯೋತ್ಸವ ಆಚರಿಸಿ ಕೋಟೆಯವರಿಗೆಲ್ಲ ಅಣ್ಣ ವಸ್ತ್ರಧಾನ ಮಾಡಿ ಈ ಎಲ್ಲ ಉತ್ಸಾಹಕ್ಕೆ ಕೃಪೆಮಾಡಿದ ಶ್ರೀ ಉಡಿಶೀಲಮ್ಮ ಯಾ ಗ್ರಾಮದೇವತೆಯವರನ್ನು ಹಾದಿ ಹೊಗಳುತ್ತಾನೆ; ಮಗ ಹುಟ್ಟಿದ ನಂತರ ತನ್ನ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಾಣುತ್ತಾನೆ ಈ ಅದೃಷ್ಟದ ವಿಚಾರವನ್ನು ಆಗ ತನ್ನ ಪತ್ನಿಗೆ ಮನವರಿಕೆ ಮಾಡಿ ಕೊಳ್ಳುತ್ತಾನೆ ಮಗುವಿಗೆ ಒಂದು ವರ್ಷ ತುಂಬುವುದರ ಒಳಗಾಗಿ ಹರಕೆ ಮಾಡಿ ಕೊಂಡಿದ್ದರಿಂದ ಒಂದು ಶುಭ ದಿನ ಪತ್ನಿ ಪುತ್ರ ಹಾಗೂ ಪರಿವಾರ ಸಮೇತ ಕುದುರೆ ಸಾರೋಟಿನಲ್ಲಿ ಬಂದು ಇಲ್ಲಿನ ಶ್ರೀ ದೇವಿಯವರ ದರ್ಶನ ಮಾಡಿ ಪ್ರತಿಮೆಗಳಿಗೆ ಕಣ್ಮಣಿ, ಸೀರೆ, ಮುಕುಟಗಳಿಂದ ಅಲಂಕಾರ ಮಾಡಿಸಿ ಹೊವು ಹಾರಗಳನ್ನಿಟ್ಟು ಶೃಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿಸಿ ಪಂಚಾಮೃತ ತಳಿಗೆಯನ್ನು ಅರ್ಪಿಸಿ ಮಹಾ ಮಂಗಳಾರತಿ,ತೀರ್ಥ ಪ್ರಸಾದಗಳನ್ನು, ಪಡೆದುಕೊಂಡು ಕೃತಾರ್ಥರಾಗುತ್ತಾರೆ ಪೂರ್ವೋಚಿತವಾಗಿ ವ್ಯವಸ್ಥೆ ಮಾಡಿದಂತೆ ಕೇರಿಯ ಭಕ್ತ ಸಮುದಾಯಕ್ಕೆ ಪ್ರಸಾದ ವ್ಯವಸ್ಥೆ ನೆಡೆಯುತ್ತದೆ ಈ ಎಲ್ಲಾ ಕಾರ್ಯಗಳು ನೆರೆವೇರಿಸಿ ತನ್ನ ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ತನ್ನ ಕಳಂಕ ನಿವಾರಣೆ ಹಾಗು ಸಮಸ್ಯೆಗಳು ಬಗೆಹರಿದುಕೊಂಡು ಬರುತಿದ್ದುದ್ದರಿಂದ ಉತ್ಸಾಹಉಳ್ಳವನಾಗಿ ಶ್ರೀ ದೇವಿಯವರಿಗೆ ಸುಂದರ ಹಾಗೂ ಭದ್ರವಾದ ದೇವ ಮಂದಿರವನ್ನು ನಿರ್ಮಿಸಲು ತನ್ನ ಸಿಬ್ಬಂದಿಗೆ ಆದೇಶ ಮಾಡುತ್ತಾನೆ ಮತ್ತು ದೇವಿಯ ಅಭಿಷೇಕ ತಳಿಗೆ ಹಾಗೂ ಪೂಜೆ ಇವುಗಳಿಗೆ ಸರಿಯಾದ ನೀರಿನ ಸೌಕರ್ಯಗಳಿಲ್ಲದ ಕಾರಣ ದೇವಾಲಯದ ಮುಂಭಾಗ ಹಾಗೂ ಈಶಾನ್ಯ ಮೂಲೆಗೆ ಲಗತ್ತಾದಂತೆ ವಿಶಾಲವಾಗಿ ನೀರು ಸಂಗ್ರಹವಾಗುವ ರೀತಿಯಲ್ಲಿ ಹಾಲಿ ಹರಿಯುತ್ತಿದ್ದು ನೀರಿನ ಹಳ್ಳವನ್ನು ಒಳ ಸರಿಸಿ ಒಂದು ಕೆರೆಯನ್ನು ಸಹ ಮಾಡಿಸುವ ಜವಬ್ದಾರಿಯನ್ನು ತನ್ನ ಸಿಬ್ಭಂದಿಯವರಿಗೆ ಆದೇಶಕೊಟ್ಟು ಹೋದ ನಂತರದಲ್ಲಿ ಆಜ್ಞಾಪಿಸಿದ ಕಾಮಗಾರಿಗಳು ಆರು ತಿಂಗಳೊಳಗೆ ಪೂರ್ಣಗೊಂಡು ಸೇವೆಗೆ ಸಿದ್ಧವಾಗುತ್ತದೆ ಹೀಗೆ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿಸಿದ್ದರಿಂದ ದೇವಿಯವರ ಅನುಗ್ರಹವುಂಟಾಗಿ ಸುಖ ಸಂತೋಷದಿಂದ ಆಡಳಿತ ಮಾಡಿದನೆಂಬ ವಿಚಾರವು ಪ್ರಸ್ತುತವಾಗಿದೆ. ಶ್ರೀ ಗ್ರಾಮದೇವತೆಯವರು ನೆಲೆಯಾದನಂತರದ ದಿನಗಳಲ್ಲಿ ಗ್ರಾಮದಲ್ಲಿ ಸುಭಿಕ್ಷತೆ ಉಂಟಾಗಿದ್ದರು ಸಹ ಜನರಲ್ಲಿ ಮೂಡ ನಂಬಿಕೆಯ ಭದ್ರವಾಗಿ ಬೇರೊರಿದ್ದಿತ್ತು ವೀರಶೈವ ಧರ್ಮದ ಹಾಗೂ ಶರಣರ ತತ್ವ ಉಪದೇಶ ಆದರ್ಶಗಳ ಅರಿವಿಲ್ಲದೆ ಅಜ್ಞಾನ ತಮ್ಮ ಕಷ್ಟ ತೊಂದರೆಗಳ ನಿವಾರಣೆಗಾಗಿ ಪ್ರಾಣಿ ಪಕ್ಷಿಗಳ ಬಲಿಯನ್ನು ಕೊಡುವ ಅನಿಷ್ಟ ಪದ್ಧತಿಯೂ ಆಚರಣೆಯಲ್ಲಿದ್ದಿತ್ತು; ಈ ಕೃತ್ಯವು ದೈವ ಮಾನವರಾಗಿ . ಜನಿಸಿ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಂಡ ಶ್ರೀ ಜಗಜ್ಯೋತಿ ಬಸವಣ್ಣನವರ ಆದರ್ಶ ತತ್ವಗಳಿಗೆ ಕಳಂಕ ಹಾಗೂ ಮಾರಕವಾದ ಹೀನ ಕೃತ್ಯ ಈ ಹಿಂದೆ ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಬಂಡಿಹಬ್ಬವನ್ನು ಎರಡು ಜಾತಿಯವರು ಒಟ್ಟಿಗೆ ಕೂಡಿ ಮಾಡುತ್ತಿದ್ದಾಗ ಒಂದು ಘಟನೆ ನೆಡೆಯಿತು................................................

ಸುಮಾರು 70 ವರ್ಷಗಳ ಹಿಂದಿನ ಒಂದು ಪ್ರಸಂಗ ಆ ವರ್ಷ ಬಂಡಿಹಬ್ಬವನ್ನು ಮಾಡುತ್ತಿದ್ದ ಸಮಯದಲ್ಲಿ ಒಂದು ವಿಸ್ಮಯಕರ ಸಂಗತಿ ನೆಡೆಯಿತೆಂಬುದನ್ನು ನಮ್ಮ ಹಿರಿಯರಿಂದ ತಿಳಿದು ಬಂದ ವಿಷಯವೇನೆಂದರೆ 1942 ಇಸವಿಗೆ ಮೊದಲಿನಿಂದಲೂ ವಿದ್ಯುತ್‌ಶಕ್ತಿ ಇಲಾಖೆಯ 4 ಕುಟುಂಬಗಳು ಈ ಗ್ರಾಮದಲ್ಲಿರುವ ಇಲಾಖೆಯ ಬಂಗಲೆಗಳಲ್ಲಿ ವಾಸಿಸುತ್ತಿದ್ದರು, ಇವರಲ್ಲಿ 2 ಕುಟುಂಬ ವೀರಶೈವರು, 2 ಕುಟುಂಬ ವಕ್ಕಲಿಗರು.. ಆ ವರ್ಷದಲ್ಲಿ ಆಚರಣೆ ಮಾಡುತ್ತಿದ್ದ ಬಂಡಿ ಹಬ್ಬದ ವೈಭವವನ್ನು ನೋಡಲು ಹಾಗೂ ಹಣ್ಣು ಕಾಯಿ ಸೇವೆಯನ್ನು ಮಾಡಿಸಲು ಬಂದಿದ್ದರು ಜನ ಸಂದಣಿ ಸ್ವಲ್ಪ ಕಡಿಮೆಯಾದಮೇಲೆ ವಕ್ಕಲಿಗ ಕುಟುಂಬದ ಹೆಣ್ಣು ಮಗಳು ದೇವರ ದರ್ಶನವನ್ನು ಮಾಡಲು ಗುಡಿಯ ಬಾಗಿಲಿಗೆ ಬಂದು ಹಣ್ಣು, ಕಾಯಿ, ಬುತ್ತಿಯನ್ನು ಒಳಕ್ಕೆ ಕೊಟ್ಟು ಬಾಗಿಲಲ್ಲಿ ಭಕ್ತಿಯಿಂದ ಕೈಮುಗಿದುಕೊಂಡು ನಿಂತುಕೊಂಡರು; ಹಣ್ಣು ಕಾಯಿ ಅರ್ಪಣೆ ಮಾಡಿದ ಮೇಲೆ ಮಂಗಳಾರತಿಯನ್ನು ಕೊಡಲು ತಂದಾಗ ಇವರ ಹಿಂಬಾಗದಿಂದ ಕರ್ಕಶವಾದ ಜೀರಲು ಶಬ್ದ ಬರುತ್ತದೆ; ಜಯಮ್ಮನೆಂಬ ಹುಡುಗಿಯೂ ತಿರುಗಿ ನೋಡುತ್ತಾಳೆ ಹರಿಜನ ಮತದ ತಲೆಗಡುಕ ಒಂದು ಕುರಿಯ ತಲೆಯನ್ನು ಕಡಿದು ಕೆಳಕ್ಕೆ ಉರುಳಿಸುತ್ತಾನೆ. ಈ ಕರ್ತವ್ಯವೂ ದೇವರ ಎದುರಿನಲ್ಲಿ ನೆಡದಿತ್ತು ಇನ್ನೂ ನಾಲ್ಕು ಕುರಿಗಳು ವಧೆಯಾಗಲು ಬಂದಿದ್ದವು, ಕಡಿದ ಕುರಿಯ ಚೆಲ್ಲಿದ ರಕ್ತ ಅದು ಒದ್ದಾಡುತ್ತಿದ್ದ ಸ್ಥಿತಿಯನ್ನು ನೋಡಿದ ಈ ಭಕ್ತೆಯು ಮಾಂಸಾಹಾರಿಯಾಗಿದ್ದರು ಸಹ ಮತಿ ಭ್ರಮಣೆ ಯಾದಂತಾಗಿ ಶ್ರೀ ದೇವಿಯವರು ಮೈ ಮೇಲೆ ಆವೇಶವಾಗಿ ಬಂದಂತೆ, ಮೈ ಯನ್ನು ನಡುಗಿಸುತ್ತಾ ಆರ್ಭಟಿಸಿ ನನಗೆ ಕರ್ಪೂರ ಹಚ್ಚಿ ತೀರ್ಥಹಾಕು ಎಂದು ದೊಡ್ಡ ದ್ವನಿಯಲ್ಲಿ ಹೇಳಿದ್ದನ್ನು ನೋಡಿದ ಜನ ಸಮೂಹವು ಈಕೆಯ ಕೆಂಪಾದ ಕಣ್ಣು ಅದುರುತ್ತಿದ್ದ ಮೈಯನ್ನು ನೋಡಿ ಭಯದಿಂದ ಡೀಜ್ಮೂಡರಾಗುತ್ತಾರೆ; ಮತ್ತೆ ಕರ್ಪೂರ ಹಚ್ಚಲಿಲ್ಲ ಎಂದು ಘರ್ಜಿಸಿದಾಗ ಅರ್ಚಕರು ಕೂಡಲೇ ಕರ್ಪೂರದ ತಟ್ಟೆಯನ್ನು ತಂದು ತೀರ್ಥಪ್ರೋಕ್ಷಣೆ ಮಾಡುತ್ತಾರೆ ಆಗ ಹುಡುಗಿಯೂ ತಟ್ಟೆಯನ್ನು ಕೈಗೆ ತೆಗೆದುಕೊಂಡು ಅಹಹಾ ನಾನು ಹಿಂಸಾ ಮಾರ್ಗದವಳಲ್ಲ, ವೀರಶೈವ ಧರ್ಮದ ಉಪದೇಶ ಪಡೆದು ನೆಲೆಸಿರುವ ಕಾರಣ ಯಾವ ಪ್ರಾಣಿಯು ಜೀವವನ್ನು ಕೊಳ್ಳುವವಳು ಅಲ್ಲ ತೆಗೆಯುವವಳು ಅಲ್ಲ ಈ ಗ್ರಾಮದ ಪ್ರತಿಯೊಂದು ಪ್ರಾಣಿಯು ಜೀವನವನ್ನು ರಕ್ಷಿಸುವ ಉದ್ದೇಶದಿಂದ, ಇಲ್ಲಿಗೆ ಬಂದು ನೆಲೆಸಿರುತ್ತೇನೆ ಎಲ್ಲರ 'ರಕ್ಷಾ ದೇವತೆಯಾಗಿರುತ್ತೇನೆಯೇ ಹೊರತು ರಕ್ಕಸಿಯಲ್ಲ ಲಿಂಗವಂತರ ಮನೆಯಲ್ಲಿ ತಂಗಿದ್ದು ಅಹಿಂಸಾ ಧರ್ಮವನ್ನು ಆಚರಿಸಿಕೊಂಡು ಹೋಗುತ್ತಿರುವ ಲಿಂಗವಂತ ವ್ಯಕ್ತಿಯ ಮುಖಾಂತರ ಅಭಿಷೇಕ, ಹೋಮ, ಪೂಜೆಗಳಿಂದ ಸಂಸ್ಕಾರವನ್ನು ಪಡೆದು ಶರಣ ಧರ್ಮದ ಆಚರಣೆಯುಳ್ಳವಳಾಗಿದ್ದೇನೆ ಆದಕಾರಣ ವೀರಶೈವರಾಗಲಿ ಇತರೆ ಯಾವ ತಿನ್ನುಣ್ನುವ ಈ ಮೂಡ ಪದ್ಧತಿಯಿಂದ ಕಳಂಕಿತಳಾಗುತ್ತೇನೆ. ಅಸ್ಪುರ್ಷರ ಸಾಲಿನ ದುಷ್ಟ ದೇವತೆ ಎಂಬ ಭಾವನೆ ನನ್ನ ಭಕ್ತರಲ್ಲಿ ನೆಲೆಯಾಗುತ್ತದೆ, ಇಲ್ಲಿಂದ ಮುಂದಿನ ವರ್ಷಗಳಲ್ಲಿ ಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಮಾಡಿರಿ ವೀರಶೈವರು ಅಹಿಂಸಾ ದರ್ಮದವರಾಗಿರುವುದರಿಂದ ಮತ್ತೆ ೧೦೧ ಮಾರಿಗಳಿಗೆ ಶಾವಿಗೆ ಎಡೆ ಇತ್ತು ಪೂಜೆ ಸಲ್ಲಿಸಬೇಕಾಗಿರುವುದರಿಂದ, ಮೊದಲು ಆಚರಿಸಬೇಕು ನಂತರ ಪರಿಶಿಷ್ಟ ಜಾತಿಯವರು ಮುಂದಿನ ವಾರ ಆಚರಿಸುವುದು ನನಗ ಇಷ್ಟವಾಗುತ್ತದೆ ಏಕೆಂದರೆ ಅವರು ತಿನ್ನುಣ್ನುವ ಜಾತಿ ತಮ್ಮ ಉದರ ಪೋಷಣೆಗಾಗಿ ಮಾಡುವ ಹಿಂಸಾ ಕಾರ್ಯದ ಪಾಪವನ್ನು ಸ್ವಾರ್ಥತೆಯಿಂದ ದೈವದ ಮೇಲೆ ಹೊರಿಸುತ್ತಾರೆ ಇದು ಹೇಯ ಕೃತ್ಯ, ಆದರೂ ದರ್ಮದ ಅರಿವು ಪ್ರಾಣದ ಬೆಲೆಗೊತ್ತಿಲ್ಲದ ಮೌಡ್ಯತೆಯಿಂದ ಕೊಡುವ ಪಾಪದ ಬಲಿಯು ನನ್ನ ಎದುರಿನಲ್ಲಿರುವ ದ್ವಾಮವ್ವ ಎಂಬ ಚೌಡಿಯು ಒಪ್ಪಿಕೊಳ್ಳುತ್ತಾಳೆ ಆಕೆಗೆ ನಿತ್ಯದ ಪೂಜೆ ವಾರದ ಪೂಜೆಗಳಿರುವುದಿಲ್ಲ ಪ್ರಾಣಿಗಳ ಬಲಿಯಿಂದಲೇ ತೃಪ್ತಿ ಪಡುವವಳಾಗಿದ್ದಾಳೆ, ನಾನು ಮಾತ್ರ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ದ್ವೇಷಿಸುತ್ತೇನೆ ಈ ಹಿಂಸಾ ಮಾರ್ಗವನ್ನು ಕೈಬಿಟ್ಟು ನನ್ನನ್ನು ನಿತ್ಯ ಅಲಂಕರಿಸುವ ಶಾಶ್ವತ ವಸ್ತುಗಳು ಬೆಳ್ಳಿಯ ರೂಪಕಗಳು ಕಂಚು, ತಾಮ್ರದ ವಸ್ತುಗಳು ಉಡಿಗೆ ಸಾಧನಗಳು ಹೆಚ್ಚಿನದಾಗಿ ನಂಬಿಕೆ, ಭಕ್ತಿಯಿಂದ ಪೂಜಿಸಿದರೆ ತೃಪ್ತಳಾಗುತ್ತೇನೆ ಎಂಬುದಾಗಿ ದೇವಿಯವರ ಅಪ್ಪಣೆಯಾದಂತೆ ಆ ಹೆಣ್ಣು ಮಗಳ ಬಾಯಿಂದ ಹೋರಟ ಮಾತುಗಳಿಂದ ನೆರದಿದ್ದ ಭಕ್ತ ಸಮೂಹವು ನಂಬಿಕೆ, ಭಯದಿಂದ ಮೂಕ ಪ್ರೇಕ್ಷರಾಗುತ್ತಾರೆ ಎಲ್ಲರ ಸಲಹೆಯಂತೆ ಸನ್ನಿದಿಯಿಂದ ತೀರ್ಥತಂದು ಹೆಂಗಸಿನ ಮೇಲೆ ಪ್ರೋಕ್ಷಣೆ ಮಾಡಿದಾಗ ಮತ್ತು ಮಂಗಳಾರತಿ ಮಾಡಿದ ಮೇಲೆ ಆಕೆಯ ವಾಸ್ತವ ಸ್ಥಿತಿಗೆ ಬರುತ್ತಾಳೆ, ಕೋತೂಹಲಗೊಂಡ ಸಮೂಹದವರು ಯಾಕೆ ಹೀಗೆಲ್ಲ ಮಾತನಾಡಿದೆ ಎಂಬುದಾಗಿ ವಿಚಾರ ಮಾಡಿದಾಗ, ನಾನೇನು ಮಾತನಾಡಿದೆ; ಈ ಬಗ್ಗೆ ಯಾವ ಅರಿವು ಇರಲಿಲ್ಲ ಎಂಬುದಾಗಿ ಹೇಳುತ್ತಾಳೆ, ದೇವಿಯವರು ಈ ಭಕ್ತೇಯ ಮೇಲೆ ಆವೇಶವಾಗಿ ಈ ರೀತಿ ಅಪ್ಪಣೆ ಮಾಡಿದ್ದಾಳೆ ಎಂದು ನಂಬುತ್ತಾರೆ: ನಂತರ ಉಳಿದ ಕುರಿಗಳು ಪುನರ್ಜನ್ಮವನ್ನು ಪಡೆದುಕೊಳ್ಳುತ್ತದೆ; ಶ್ರೀಮತಿ ಜಯಮ್ಮನಿಗೆ ಸನ್ನಿಧಿಯಿಂದ ತಾಂಬೂಲ, ಫಲ, ಪುಷ್ಪಗಳನ್ನು ಕೊಟ್ಟು ಸನ್ಮಾನಿಸಲಾಯಿತು ಅಂದಿದಿಂದ ಆದೇಶವಾದಂತೆ ಬಂಡಿಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಆಚರಿಸಿಕೊಂಡು ಬರುವುದು ಪದ್ದತಿಯಾಗಿದೆ...........

ಚಿಕ್ಕಮ್ಮನವರ ಆಗಮನ ಈ ಗ್ರಾಮದ ಹರಿಜನ(ಪಂಗಡ) ಜಾತಿಗೆ ಸೇರಿದವನಾದ ಸುಮಾರು 14 ವರ್ಷ ವಯಸ್ಸಿನ ಕಾಳಯ್ಯನೆಂಬ ಹುಡುಗನು ತನ್ನ ಮನೆಯಲ್ಲಿನ ಬಡತನ ಹಾಗೂ ಈತನು ಸೋಮಾರಿತನದ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ಬೇಸರ ಉಂಟಾಗಿ ಕೆಲಸಕ್ಕೆ ಹೋಗು ಏನಾದರೂ ದುಡಿಮೆ ಮಾಡು ಎಂದು ದಿನವೂ ನಿಂದನೆ ಮಾಡುತ್ತಿದ್ದರು; ನಿತ್ಯವೂ ಹಂಗಿನ ಊಟಕ್ಕಾಗಿ ಬಹಳ ಬೇಸರವುಂಟಾಗಿ ಒಂದು ದಿನ ಮನೆಯನ್ನು ಬಿಟ್ಟು ಹೊರಡುತ್ತಾನೆ; ಗೊತ್ತು ಗುರಿಯಿಲ್ಲದ ದಿಕ್ಕಿನತ್ತ ಹೊರತು ದಾರಿಯಲ್ಲಿ ಸಿಕ್ಕಿದ ಗ್ರಾಮಗಳಲ್ಲಿ ಅವರಿವರ ಮನೆಗಳಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಊರಿಂದ ಊರಿಗೆ ಸವೆದ ಕಾಲುದಾರಿಯನ್ನು ಹಿಡಿದು ಆಳವಿಲ್ಲದ ನದಿ, ಕಣಿವೆಗಳನ್ನು ದಾಟಿ 60 ಮೈಲಿಗಳನ್ನು ಕ್ರಮಿಸಿ ಮಂಜ್ರಾಬಾದ್(ಸಕಲೇಶಪುರ) ಗೆ ಬರುತ್ತಾನೆ ಅಲ್ಲಿ ಸಣ್ಣ ಅಂಗಡಿ ಮುಂದೆ ಕುಳಿತುಕೊಂಡಾಗ ಅಂಗಡಿ ಮಾಲಿಕನು ವಿಚಾರಣೆ ಮಾಡುತ್ತಾನೆ, ತನ್ನ ಪರಿಸ್ಥಿತಿ ಇಲ್ಲಿಗೆ ಬಂದ ಕಾರಣಗಳನ್ನು ತಿಳಿಸುತ್ತಾನೆ. ಅಂಗಡಿಯವನಿಗೆ ಕನಿಕರ ಉಂಟಾಗಿ ತಿನ್ನಲು ಸ್ವಲ್ಪ ಕಾಳುಗಳನ್ನು ಕೊಡುತ್ತಾನೆ ಅದೇ ಸಮಯಕ್ಕೆ ಬಂದು ಕಾಫಿ ಎಸ್ಟೇಟಿನ ರೈತನೊಬ್ಬ ಅದೇ ಅಂಗಡಿಗೆ ಬರುತ್ತಾನೆ ಅವನ ಸಂಗಡ ಈ ಹುಡುಗನನ್ನು ಕಳುಹಿಸಿ ಕೊಡುತ್ತಾನೆ: ಅಲ್ಲಿಂದ ಅದೇ ತಾಲ್ಲೂಕಿಗೆ ಸೇರಿದ ಹಾನಬಾಳು ಪ್ರದೇಶದಲ್ಲಿದ್ದ ಶ್ರೀ ದಗ್ಗಪ್ಪಗೌಡರ ಒಡೆತನದ ಗಿರಿಕನ್ಯೆ ಎಂಬ ಕಾಫಿ ತೋಟಕ್ಕೆ ಬಂದು ಅಲ್ಲಿ ದಿನಗೂಲಿ ಆಳಾಗಿ ಸೇರಿಕೊಂಡು ನಂತರದ ವರ್ಷಗಳಲ್ಲಿ ಈತನ ಅನುಭವ ಕಾರ್ಯದಕ್ಷತೆಗಳ ಮೇಲೆ ಪಟ್ಟಿ ಆಳಾಗಿ ಖಾಯಂ ಗೊಳಿಸುತ್ತಾರೆ' ಈ ಸಂಭಂದ ಕೆಲವು ವರ್ಷಗಳವರೆಗೆ ನಿಯತ್ತಿನಿಂದ ಕೆಲಸ ಮಾಡಿಕೊಂಡು ತನ್ನ ಸಹುದ್ಯೋಗಿಗಳಿಗೆ ಮೆಚ್ಚಿಗೆಯಾಗುತ್ತಾನೆ. ಈ ತೋಟದಲ್ಲಿ ಕಾಳಯ್ಯ ಎಂಬ ಹೆಸರಿನವರು ಮೂರ್ನಾಲ್ಕು ಜನರಿರುತ್ತಾರೆ ಕಾರಣ ಈತನನ್ನು ಗುರುತಿಸಲು ಸಲಿಗೆಯಿಂದ 'ಮೂಡ್ಲಾ' ಎಂಬ ಅಡ್ಡ ಹೆಸರಿನಿಂದ s, ಇದರ ಅರ್ಥ ಮೂಡಣ ಸೀಮೆಯವನು ಎಂಬ ಭಾವನೆ , ದುಗ್ಗಪ್ಪ ಗೌಡರು ತಮ್ಮ ತೋಟದ ಬೆಂಗಾವಲಿಗಾಗಿ ದ್ಯಾಮವ್ವ ಎಂಬ ಚೌಡಿಯನ್ನು ಕರೆತಂದು ತೋಟದ ಮುಖ್ಯ ದ್ವಾರದ ದೇವತಾರೆ ಮರದ ಬುಡದಲ್ಲಿ ನೆಲೆಮಾಡಿರುತ್ತಾಲೆ, ಗೌಡರು ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿ ಮಾಂಸಾಹಾರಿಯಾಗಿದ್ದರಿಂದ ಸ್ವಾರ್ಥತೆಯಿಂದ ಕಾಡುಪ್ರಾಣಿ ಇಲ್ಲವೇ ಸಾಕು ಪ್ರಾಣಿಗಳನ್ನು ಈ ಚೌಡಿಗೆ ಬಲಿಕೊಟ್ಟು ನಂತರ ತಾವು ಸ್ವಾಹಾ ಮಾಡುತ್ತಿದ್ದರು, ಈ ಚೌಡಿಗೆ ಬೇರೆ ಯಾವ ಪೂಜೆ ಪುರಸ್ಕಾರಗಳು ಇರರಿಲ್ಲ . ಬಲಿಯಿಂದಲೇ ಪೋಷಣೆಯಾಗುತ್ತಿತ್ತು ಈ ಚೌಡಿ ಇದ್ದ ಸಂಕೇತ ಕಪ್ಪಾದ ಗುಂಡು ಕಲ್ಲು ಅರಿಶಿಣ, ಕುಂಕುಮ ಲೇಪನ ಮತ್ತು ಬಲಗಡೆಗೆ ಒಂದು ದ್ವಿಶೂಲ ನಿಲ್ಲಿಸಿರುವುದು ಕೆಲವಾರು ವರ್ಷಗಳಲ್ಲಿ ಶ್ರೀ ದುಗ್ಗಪ್ಪ ಗೌಡರು ತಮ್ಮ ತೋಟವನ್ನು ಕಾರಣಾಂತರಗಳಿಂದ 'ಮೆII ಪ್ರಾನ್ಸಿಸ್ ಹಾರ್ಲೆ' ಎಂಬ ಆಂಗ್ಲ ಉದ್ಯಮಿಗೆ ಮಾರಾಟ ಮಾಡುತ್ತಾರೆ ಮೇII ಹಾರ್ಲೆಯವರು ಮೂಡನಂಬಿಕೆಯಿಂದ ಮಾಡುತ್ತಿದ್ದ ಅನಾಚಾರಗಳನೆಲ್ಲ ನಿಲ್ಲಿಸಿ ಬಿಡುತ್ತಾರೆ ಇದರಿಂದ ಚೌಡಿಗೆ ಯಾವ ಪುರಸ್ಕಾರವು ಇಲ್ಲದಂತಾಗುತ್ತದೆ ಕಾರಣ ಈಕೆಗೆ ಬಳಲುವ ಪರಿಸ್ಥಿತಿ ಉಂಟಾಗುತ್ತದೆ, ಈ ಮದ್ಯೆ 'ಮೂಡ್ಲನು' ತನ್ನ ಜೊತೆಗಾರನ ಸಂಗಡ ಮಾತನಾಡುವಾಗಲೆಲ್ಲ, ನಮ್ಮ ಊರಿನ ಶ್ರೀ ಗ್ರಾಮ ದೇವತೆ ಬನದಲ್ಲಿ ನಿರಂತರ ಪ್ರಾಣಿಗಳ ಬಲಿಯು ನಡೆಯುತ್ತಿರುವ ಬಗ್ಗೆ ಹೊಗಳಿಕೆಯ ಮಾತುಗಳಿಂದ ಆಗಿಂದಾಗೆ ಹೇಳುತ್ತಿದ್ದದನ್ನು ಈ ಚೌಡಿಯು ಕೇಳಿಸಿ ಕೊಂಡಿರುತ್ತಾಳೆ ಮತ್ತು ಇಲ್ಲಿಂದ ಹೊರಡಬೇಕೆಂಬ ನೀರಿಕ್ಷೆಯಲ್ಲಿ ಸಮಯ ಕಾಯುತ್ತಿರುತ್ತಾಳೆ. ಈ ಸಮಯ 'ಮೂಡ್ಲಕಾಳನಿಗೆ' ೨೭ ವರ್ಷಗಳು ಕಳೆದಿರುತ್ತದೆ ಸಂಸಾರಿಯಾಗುವ ಹಂಬಲದಿಂದ ಊರಿಗೆ ಹೊರಡುವ ಮನಸ್ಸಾಗುತ್ತದೆ ಕೈಯಲ್ಲಿ ಸ್ವಲ್ಪ ಹಣವನ್ನು ಕೂಡಿಸಿಕೊಂಡು; ಒಂದು ಶುಭದಿನ ಬೆಳಗಿನ ೫ ಘಂಟೆಗೆ ಊರಿಗೆ ಅಭಿಮುಖವಾಗಿ ಹೊರಡುತ್ತಾನೆ. ಈ ಸಮಯವನ್ನು ಕಾಯುತ್ತಿದ್ದ ಚೌಡಿಯು ಈತನ ಬೆನ್ನುಹಿಡಿದು ಮೈತುಂಬಿ ಕೊಳ್ಳುತ್ತಾನೆ ಇದರಿಂದ ಕಾಲವು ಮೂಡ್ಲನಿಗೆ ಪ್ರಯಾಣದ ಆಯಾಸ, ಹಸಿವು, ನೀರಡಿಕೆಗಳು ಕಂಡುಬರುವುದಿಲ್ಲ, ತಾನು ಇಲ್ಲಿಗೆ ಬಂದಾಗ ಇದ್ದ ನೇರದಾರಿಯೂ ಸವೆದು ಉತ್ತಮವಾಗಿದ್ದರಿಂದ ಬಹಳ ಬೇಗ ಊರು ತಲುಪುತ್ತಾನೆ, ಇಲ್ಲಿಗೆ ಬಂದಾಗ ಪದ್ದತಿ ನಂಬಿಕೆಯಂತೆ ದೇವರಿಗೆ ಕೈ ಮುಗಿಯಲು ನಿಲ್ಲುತ್ತಾನೆ, ಈತನ ಏಕಾಂಕತೆಯನ್ನು ತಿಳಿದ ಚೌಡಿಯು ಇಳಿದು ಕೊಳ್ಳುತ್ತಾನೆ, ಈಗ ಹುಡುಗನಿಗೆ ಆಯಾಸ, ದಣಿವು, ಹಸಿವು ಎಲ್ಲವುದರ ಅನುಭವವಾಗುತ್ತದೆ ಮನೆಗೆ ಹೋದ ಮೇಲೆ ಊಟ ಮಾಡಿ ಇದಾವುದರ ಅರಿವೂ ಇಲ್ಲದೆ ನಿದ್ರೆಗೆ ಜಾರುತ್ತಾನೆ, ಸುಖ ನಿದ್ರೆ ಕಳೆದು ಬೆಳಗಿನ ಜಾವ ಅರೆ ನಿದ್ರೆಯಲ್ಲಿದ್ದಾಗ ಯಾರೋ ಕರೆದಂತಾಗುತ್ತದೆ ನಾನು 'ಹಾರ್ಲೆ' ತೋಟದ 'ದ್ಯಾಮವ್ವ(ಚೌಡಿಯು) ನಿನ್ನನ್ನು ಆಶ್ರಯಿಸಿ ಇಲ್ಲಿಗೆ ಬಂದಿದ್ದೇನೆ; ಕಾಫಿ ತೋಟದಲ್ಲಿ ನಾವಿದ್ದ ಸಂಕೇತವಾಗಿ ನಾಳೆ ಬೆಳಿಗ್ಗೆ ನದಿಯಿಂದ ಸವೆದು ಹೊಳಪಾಗಿರುವ ಗುಂಡುಕಲ್ಲಿನ ರೂಪದ ಒಂದು ಕಲ್ಲು ಶಿಲೆಯನ್ನು ತಂದು ಅರಿಶಿಣ, ಕುಂಕುಮ ಲೇಪನ ಮಾಡಿ ಒಂದು ದ್ವಿಶೂಲ ವನ್ನು ತಯಾರಿಸಿ ನನ್ನ ಬಲಕ್ಕೆ ನಿಲ್ಲಿಸಿ ಶ್ರೀ ಗ್ರಾಮದೇವತೆ ದೇವಸ್ಥಾನದ ಮುಂಭಾಗಕ್ಕೆ ದೇವಿಗೆ ಎದುರಾಗಿ ಸ್ಥಾಪನೆ ಮಾಡು ಬಂಡಿಹಬ್ಬದ ದಿನ ಪೂಜೆಯನ್ನು ಮಾಡು' ಇದು ನಿನ್ನ ವಂಶ ಪಾರಂಪರ್ಯವಾಗಿ ನೆಡೆಯಲಿ ಎಂದು ಹೇಳಿದಂತೆ ಕೆಲಸ ಬೆಳಿಗ್ಗೆ ನೆರೆವೀರಿಸಿ ಸ್ಥಾಪನೆ ಗೊಳ್ಳುತ್ತಾಳೆ ಹೀಗೆ ಚೌದಿಯು 'ಮೂಡ್ಲನ ಮೇಲಿಂದ ಇಳಿದ ತಕ್ಷಣ ಗ್ರಾಮದೇವತೆಯವರನ್ನು ದರ್ಶನ ಮಾಡಿ ತನ್ನ ಹಿಂದಿನ ಪರಿಸ್ಥಿತಿಯನ್ನೆಲ್ಲ ಹೇಳಿ ನನ್ನ ನಾಮಧೇಯ ದ್ವ್ಯಾಮವ್ವ ಎಂಬ ಚೌಡಿರೂಪಿಣಿ ನನಗೆ ಯಾವ ತರಹದ ಪೂಜೆ, ಪುರಸ್ಕಾರಗಳು ಗುಡಿ ಗೋಪುರಗಳಿಲ್ಲ ಹಾಗೂ ಇಷ್ಟವಿರುವುದಿಲ್ಲ ಕೆಂಪು ವರ್ಣ, ಅರಿಶಿನ, ಕುಂಕುಮ, ರಕ್ತ ಮಾಂಸ ಪ್ರಿಯವಾದ ವಸ್ತುಗಳು ಈ ಹಿಂದೆ ನಾಗಿದ್ದ ಕಾಫಿ ತೋಟವು ಮೆIIಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋಸಲ ಲಂಗನೆ ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೆನ್ನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಭಂದ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ. ನಾನು ಶೈವ ಧರ್ಮದ ತತ್ವ ಸಿದ್ಧಾಂತ ನಿಯಮಗಳನ್ನು ಮೈ ಗೂಡಿಸಿಕೊಂಡು ವೀರಶೈವರಿಂದ ಪೂಜಿಸಿಕೊಳ್ಳುತ್ತಾ ನೆಲೆಯಾಗಿರುತ್ತಾನೆ, ಈ ಗ್ರಾಮದ ದಲಿತ ವರ್ಗದವರು ತಮ್ಮ ಸ್ವಾರ್ಥ, ಅಜ್ಞಾನ, ಮೂಡನಂಬಿಕೆ, ಪ್ರಾಣಿ ಪಕ್ಷಿಗಳ ಬಲಿಯನ್ನು ನನ್ನ ಬನದಲ್ಲಿ ಕೊಡುತ್ತಿರುವ ಸಂಭಂದ ನನಗೆ ಕಳಂಕ ತರುತ್ತಿದ್ದಾರೆ. ಈ ಗ್ರಾಮದಲ್ಲಿನ ಎಲ್ಲ ಜೀವ ರಾಶಿಗಳ ಬಗ್ಗೆ ದಯೆ ಕರುಣೆಯನ್ನು ಹೊಂದಿರುವ ರಕ್ಷಾ ದೇವತೆಯಾಗಿ ಇಲ್ಲಿಗೆ ಬಂದು ನೆಲೆಸಿರುತ್ತೇನೆ ಅಹಿಂಸಾ ಮಾರ್ಗವನ್ನು ಆರಾಧಿಸುತ್ತಿರುವ ಕಾರಣ ಹಿಂಸೆಯ ಪ್ರಾಣಿಗಳ ಬಳಿಯೂ ಇಷ್ಟವಾಗುವುದಿಲ್ಲ ಆದ್ದರಿಂದ ನೀನು ನನ್ನ ಸಹಚಾರಳಾಗಿದ್ದು ನನ್ನ ಎದುರಿನಲ್ಲೇ ಇರಬೇಕು ಈ ಜಾಗದಲ್ಲಿ ನಿನಗೆ ಯಾವುದೇ ವಿಧವಾದ ಹಕ್ಕು ಬಾಧ್ಯತೆಗಳು ಇರುವುದಿಲ್ಲ ಹಾಗೂ ನಿನ್ನ ಇಚ್ಛೆ ಪ್ರಕಾರ ನಿತ್ಯದ ವಾರದ ಪೂಜೆ ಪುರಸ್ಕಾರಗಳಿಗೆ ಅನರ್ಹಳಾಗಿರುತ್ತಿ ಹರಿಜನ ವ್ಯಕ್ತಿಯ ಮುಖಾಂತರ ಇಲ್ಲಿಗೆ ಬಂದಿರುವುದರಿಂದ, ವರ್ಷಕ್ಕೊಮ್ಮೆ ನೆಡೆಯುವ ಬಂಡಿ ಹಬ್ಬದ ದಿನ ಮಾತ್ರ ಮೂಡ್ಲನಿಂದ ಪೂಜಿಸಿಕೊಂಡು ಅವರು ಕೊಡುವ ಪ್ರ್ರಣಿಗಳ ಬಲಿಯನ್ನು ಪೂರ್ಣವಾಗಿ ನೆನೆ ಅನುಭವಿಸು; ಮತ್ತು ನನ್ನ ಆಜ್ನದಾರಕಳಾಗಿದ್ದು ,ಭಕ್ತ ಸಮೂಹಕ್ಕೆ ಯಾವ ವಿಧವಾದ ಕಷ್ಟ ತೊಂದರೆಗಳನ್ನು ಕೊಡದೆ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು ನೀನು ಇಲ್ಲಿಗೆ ಬಂದಿದ್ದರಿಂದ ನನಗೆ ಕಳಂಕ ತಪ್ಪಿದೆ ಒಳ್ಳೆಯದೆಯಾಯಿತು ಈ ದ್ವಾರದ ಮುಖಾಂತರ ಗ್ರಾಮಕ್ಕೆ ಯಾವ ಮಾರಿಯೂ ನುಸಳದಂತೆ ಬೆಂಗಾವಲಾಗಿರು ಎಂದು ಹೇಳಿ ನೆಲಸಲು ಒಪ್ಪಿಗೆ ಕೊಟ್ಟು ಪರಿಶಿಷ್ಟರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ಸ್ವೀಕರಿಸುವ ಚಿಕ್ಕಮ್ಮ ಎಂಬ ರೂಡಿ ನಾಮದಿಂದ 'ಚೌಡಿಯು' ಶ್ರೀ ಗ್ರಾಮದೇವತೆಯವರ ಎದುರಿನಲ್ಲಿ ನೆಲೆಯಾಗಿದ್ದಾಳೆ ಈಕೆಯ ಸಂಕೇತ ಹೊಳಪಾದ ಗುಂಡುಕಲ್ಲು, ಅರಿಶಿನ ಕುಂಕುಮ, ಲೇಪಿತ ಬಲಭಾಗದಲ್ಲಿ ದ್ವಿಶೂಲ ದೇವಿಯವರು ದ್ವಾಮವ್ವ ಎಂಬ ಚೌಡಿಯನ್ನು ತನ್ನ ಎದುರಿನಲ್ಲೇ ನೆಲೆ ಮಾಡಿದ ಸಂಭಂದ ರಾತ್ರಿಯಿಡೀ ನೆಡೆದ ಸಂವಾದವು 'ಹಲಗೇಗೌಡರ' ಮಗ 'ಶಿವೇಗೌಡರ' ಸ್ವಪ್ನದಲ್ಲಿ ಎಲ್ಲಾ ಆದೇಶಗಳು ಎದುರಿನಲ್ಲಿ ನೆಡದಂತೆ ಕಾಣಿಸಿಕೊಂಡ ವಿಚಾರವನ್ನು ಬೆಳಿಗ್ಗೆ ಭಕ್ತರಿಗೆ ತಿಳಿಸುತ್ತಾರೆ. ಕಲ್ಲು ಚಪ್ಪಡಿಗಳಿಂದ ಮಂಟಪ ಇವುಗಳು ಚಿಕ್ಕಮ್ಮನ ರೂಪಕಗಳು ಹಾಗೂ ಇರುವಿಕೆಗಳು 'ಶ್ರೀ ಗ್ರಾಮದೇವತೆಯು' ನಮ್ಮ ಗ್ರಾಮದ ವಾಸ್ತು ಪ್ರದಾನವಾದ ಅಂದರೆ ಈಶಾನ್ಯ ಮೂಲೆಯಲ್ಲಿ ಪೂರ್ವಾಭಿ ಮುಖವಾಗಿ ನೆಲೆಯಾಗಿರುವುದರಿಂದ ಶಕ್ತಿ, ಯೋಗ, ಕರಣ ಹಾಗೂ ಆರು ಭುಜ ಬಲಗಳು ಇರುವುದರಿಂದ ಅಧಿಕವಾಗಿ ಕರುಣೆಯನ್ನು ಮೈಗೂಡಿಸಿ ಕೊಂಡಿರುತ್ತಾಳೆ ಎದುರಿನಲ್ಲಿ ದೇವಿಯವರ ಅಭಿಷೇಕ ಹಾಗೂ ಪ್ರಾಣಿ ಪಕ್ಷಿಗಳಿಗೆ ಜೀವನಾಧಾರವಾದ ನೀರಿನ ಕೆರೆ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಆಯಸ್ಸು ಆರೋಗ್ಯವನ್ನು ಕೊಡುವ ವಿಶಾಲವಾದ 'ಅಶ್ವಥ' ಮರ ಇರುವುದು ಮತ್ತು ಗ್ರಾಮದ ಪ್ರವೇಶ ದ್ವಾರದಲ್ಲಿರುವುದರಿಂದ, ಈ ಕ್ಷೇತ್ರವು ಕ್ಷೇತ್ರವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿರುತ್ತದೆ ತುಂಬಾ ಪುರಾತನದ್ದಾಗಿದ್ದ 'ಅಶ್ವಥ' ಮರವು ಪ್ರಕೃತಿಯ ಒತ್ತಡದಿಂದ ಬಿದ್ದು ಹೋದ ಪ್ರಯುಕ್ತ ಹಾಲಿ ಬೆಳೆದಿರುವ ಮರವನ್ನು ಗ್ರಾಮದ ಮುಖಂಡರು, ದೇವಿಯ ಪರಮ ಭಕ್ತರೂ ಆಗಿದ್ದ 'ಲಿಂII ಬಿ ಯಳ್ಳಪ್ಪನವರು ಆಚಾರವೆಂಬ ಸಸಿಯನ್ನು ನೆಟ್ಟು ಭಕ್ತಿಯೆಂಬ ನೀರನ್ನೆರೆದು ಬೆಳಸಿ ಚಿರಋಣಿಯಾಗಿದ್ದಾರೆ ಈ ಮರದ ಬುಡದ ಸುತ್ತಲೂ ಲಿಂIIಕುಂಟೇಗೌಡ ರುದ್ರಪ್ಪನವರ ಪುತ್ರ ಹಾಗೂ ಲಿಂII ಆರ.ಸಿದ್ದಲಿಂಗಪ್ಪನವರ ಪುತ್ರರು ಆದ ಶ್ರೀ ಹೆಚ್, ಎಸ್, ಶಿವಾನಂದ ಎಂಬ ಭಕ್ತನಿಗೆ ದೇವಿಯವರ ಪ್ರೇರಣೆಯಾಗಿ ಸುಂದರ ಹಾಗೂ ಸುಭದ್ರವಾದ ಅರಳೀ ಕಟ್ಟೆಯನ್ನು ಕಟ್ಟಿಸಿ ಇದ್ದನ್ನು ತ್ರಿವಿಧ ದಾಸೋಹಿಗಳು ನೆಡೆದಾಡುವ ದೇವರು ಎಂಬ ಹೆಗ್ಗಳಿಕೆಗೆ ಅರ್ಹರಾದ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಅಮೃತ ಹಸ್ತದಿಂದ ಪ್ರಾರಂಭೋತ್ಸವ ಮಾಡಿಸಿ ಗ್ರಾಮದ ಭಕ್ತ ಸಾಮೂಹಕ್ಕೆ ಸಮರ್ಪಣೆಮಾಡಿ ಕೀರ್ತಿವಂತರಾಗಿದ್ದಾರೆ ಇದೆ ಭಕ್ತರು ಅರಳಿ ಮರದ ಪಕ್ಕಕ್ಕೆ ಬೇವಿನ ಸಸಿಯನ್ನು ಬೆಳಸಿ ಕಟ್ಟೆಯ ಮೇಲೆ ನಾಗರ ಕಲ್ಲು ಮೂರ್ತಿಗಳನ್ನು ಸ್ಥಾಪನೆ ಮಾಡಿರುವುದರಿಂದ ಗ್ರಾಮದ ಭಕ್ತ ಕನ್ಯಾಮಣಿಯರ ಹಾಗೂ ಶೋಡಶಿಯರ ಮನಸ್ಸಿನ ಹಂಬಲ ಈಡೇರಿಕೆಗಳಿಗೆ ಚೈತನ್ಯ ಮಾಯವಾಗಿರುತ್ತದೆ; ಮತ್ತು ಇದೆ ಕುಟುಂಬಕ್ಕೆ ಸೇರಿದ ಆರ್. ಸಿದ್ಧಪ್ಪ ಮತ್ತು ಅವರ ಪುತ್ರರುಗಳಿಗೆ ದೇವಿಯ ಪ್ರೇರಣೆಯಾಗಿ ಗ್ರಾಮದ ಹೃದಯ ಭಾಗದಲ್ಲಿರುವ 'ಶ್ರೀ ಬಸವೇಶ್ವರ ಸ್ವಾಮಿ' ದೇವಸ್ಥಾನದ ಮುಂಭಾಗದ ಪ್ರಭಾವಳಿಯ ಮೇಲೆ ಸುಂದರವಾದ ಬೃಹತ್ ಗಾತ್ರದ ಬಸವ ವಿಗ್ರಹವನ್ನು ನಿರ್ಮಾಣ ಮಾಡಿ ಅದಕ್ಕೆ ವಿಧಿ, ವಿಧಾನಗಳ ಪ್ರಕಾರ ಕುಲ ಪುರೋಹಿತರಿಂದ ದೈವಕಳೆಯನ್ನು ತುಂಬಿ ಮುಂಗಾರು ಮಳೆಯ ಆಗಮನ ನೈರುತ್ಯ ಮೂಲೆಗೆ ದೃಷ್ಟಿಯನ್ನು ಮಾಡಿ ಈ ಗ್ರಾಮದ ಸುಭಿಕ್ಷತೆಗೆ ನಾಂದಿಯಾಗುವಂತೆ ಸಮಾಜಕ್ಕೆ ಸಮರ್ಪಣೆ ಮಾಡಿರುತ್ತಾರೆ. ಈ ಸಂಭಂದ ದಾನಿಗಳು ಹಾಗೂ ಭಕ್ತ ಮಹನೀಯರುಗಳು ಗ್ರಾಮದ ವೀರಶೈವ ಸಮಾಜವು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಈ ಎಲ್ಲ ನೈಸರ್ಗಿಕ ಸಂಪತ್ತುಗಳು ದೇವಿಯವರ ಸಮಾಚ್ಚಯದಲ್ಲಿ ಇರುವುದರಿಂದ ಈ ದೇವ ಬನವು ಪಾಪನಾಶಿನಿ ಎಂಬ ಹೆಗ್ಗಳಿಕೆಗೆ ಅರ್ಹವಾಗಿದೆ ಈ ರೀತಿ ಎಲ್ಲ ಶಕ್ತಿಗಳನ್ನು ಮೈಗೂಡಿಸಿಕೊಂಡಿರುವುದರಿಂದ ಹಾಗೂ ಗ್ರಾಮದ ಪ್ರವೇಶ ದ್ವಾರದಲ್ಲಿ ಪೂರ್ವಾಭಿಮುಖವಾಗಿ ನೆಲೆಯಾಗಿರುವ ಸಂಭಂದ ಜನರು ತಮ್ಮ ಕಾರ್ಯಾರ್ಥವಾಗಿ ಹೊರಗಡೆ ಹೋಗುವಾಗ ಮತ್ತು ಗ್ರಾಮದ ಒಳಕ್ಕೆ ಬರುವಾಗ, ದೇವಿಯವರ ದೇವಾಲಯವಿರುವ ಸ್ಥಳಕ್ಕೆ ಬಂದಾಗ ಮನಸ್ಸಿನ ಮೇಲೆ ಚೈತನ್ಯವುಂಟಾಗಿ ಕೂಡಲೇ ಜಾಗೃತರಾಗಿ ಧೃಡ ಮನಸ್ಸಿನಿಂದ ಕೈ ಮುಗಿಯುತ್ತಾರೆ, ಇಲ್ಲವೇ ಎದೆಯ ಮೇಲೆ ಕೈ ಇಟ್ಟು ಮನಸ್ಸಿನೊಳಗೆ ಭಕ್ತಿಯಿಂದ ವಂದಿಸಿ ಹೋಗುತ್ತಿರುವುದರಿಂದ ಹೋದ ಕಾರ್ಯವು ನಿರ್ವಿಘ್ನವಾಗಿ ನೆರೆªÉÃರುವುದರಿಂದ ನಂಬಿಕೆಯು ದಿನೇ ದಿನೇ ಹೆಚ್ಚಾಗುತ್ತಾ ಬಂದಿರುತ್ತದೆ ಒಂದು ವೇಳೆ ಯಾವುದಾದರೂ ಅಜಾಗರೂಕತೆಯಿಂದ ದೇವಿಯ ಸ್ಮರಣೆ ಮಾಡದೆ ಸನ್ನಿಧಿಯನ್ನು ದಾಟಿ ಹೂಡಾಗ ತಮ್ಮ ಕೆಲಸಗಳು ನೆರವೆರದೇ ತೊಂದರೆಗಳು ಕಂಡು ಬಂದಾಗ ಇದ್ದ ಜಾಗದಿಂದಲೇ ದೇವಿಯವರಿಗೆ ಮನಸ್ಸಿನಲ್ಲಿ ಸ್ಮರಿಸಿ, ಹರಿಸಿಕೊಂಡಾಗ ತೊಂದರೆಗಳು ಕೂಡಲೆ ಬಗೆಹರಿದ ಉದಾಹರಣೆಗಳು ಅನೇಕ ಭಕ್ತರಿಗೆ ಸ್ವಂತ ಅನುಭವವಾಗಿರುವುದರಿಂದ ಸಹಜವಾಗಿರುತ್ತದೆ ಇದೆ ರೀತಿಯಲ್ಲಿ ಭಕ್ತರು ತಮ್ಮ ಮನೆಗಳಲ್ಲಿ ಯಾವುದಾದರೂ ದುಷ್ಟ ಮಾರಿಗಳಿಂದ ಕಷ್ಟ, ತೊಂದರೆಗಳು ಒದಗಿ ಬಂದಾಗ ಮೊಸರನ್ನ ಅಥವಾ ಬೆಲ್ಲದ ಅನ್ನದ ತಳಿಗೆಯನ್ನು ಒಪ್ಪಿಸಿ ಸೇವೆ ಮಾಡುತ್ತೇನೆಂದಾಗಲಿ ಬೆಳ್ಳಿಯ ಮುಖವಾಡಗಳನ್ನು ಧರಿಸಿ ಸುಂದರ ರೂಪದ ಸೇವೆ ಮಾಡುತ್ತೇನೆಂದಾಗಲಿ ಅವರವರ ನಂಬಿಕೆಯಂತೆ ಮನೆಯಲ್ಲಿ ಜ್ಯೋತಿ ಹಚ್ಚಿ ಹರಸಿಕೊಂಡಂತಹ ಭಕ್ತರ ಎಲ್ಲ ಕಷ್ಟ ತೊಂದರೆಗಳಿಗೆ ಪರಿಹಾರದ ಅಪ್ಪಣೆಯಾಗುತ್ತಿರುವುದರಿಂದ; ಈ ಸಂಖ್ಯೆಯು ದಿನೇ ದಿನೇ ಬೆಳೆಯುತ್ತಾ ಬಂದಿರುತ್ತದೆ, ದನೂರ್ಮಾಸದ ಪೂಜಾದಿನಗಳಲ್ಲಿ ಗ್ರಾಮದ ಹೆಣ್ಣು ಮಕ್ಕಳು ಉಷಾ ಕಾಲದಲ್ಲಿ ಪಕ್ಕ ಮಡಿಯಿಂದ ದೇವಿಯ ಸನ್ನಿಧಿಗೆ ಬಂದು ಪ್ರದಕ್ಷಣೆ ಮಾಡಿ ಸ್ವ ಹಸ್ತದಿಂದ ಇಚ್ಛಾಪೂಜೆಯನ್ನು ಸಲ್ಲಿಸಿ ಮನೆಯಲ್ಲಿ ಮೀಸಲು ಪದ್ದತಿಯಿಂದ ತಯಾರಿಸಿದ ಪಂಚಾಮೃತ ತಳಿಗೆ ಒಪ್ಪಿಸಿ 'ಈ ಕಾಯವನ್ನು ಹಣ್ಣು ಮಾಡಿ' ಅಂದರೆ ಹಣ್ಣು ಕಾಯಿ ಪರಿಮಳ ಪುಷ್ಪಗಳನೆಲ್ಲ ಅರ್ಪಿಸಿ ನಂತರ ಮುಂಭಾಗದಲ್ಲಿ ಅಶ್ವಥ ಮರಕ್ಕೆ ಪ್ರದಕ್ಷಣೆ ಮಾಡಿ ಅಲ್ಲಿರುವ ನಾಗರಕಲ್ಲಿಗೆ ಹಾಲನ್ನೆರೆದು ಭಕ್ತಿ, ನಂಬಿಕೆಯಿಂದ ಹೆಣ್ಣುಮಕ್ಕಳಿಗೂ, ವನಿತೆಯರಿಗೂ ದೇವಿಯವರು ಬಹಳ ಬೇಗ ಒಲಿದು ಅವರ ಇಷ್ಟಾರ್ಥಗಳನೆಲ್ಲ ನೆರೆವೆರಿಸುತ್ತಿರುವ ಸಂಭಂದ ವಾರದ ದಿನಗಳ ಸಂದ್ಯಾ ಕಾಲದಲ್ಲಿ ದೇವಿಯವರನ್ನು ತಾವೇ ಸ್ವತಃ ಪೂಜಿಸಿ ತೃಪ್ತಿ ಪಡುತ್ತಿರುವ ಪದ್ದತಿಯು ತುಂಬಾ ಸುದ್ದಿಯಾಗುತ್ತಾ ಬಂದಿದೆ ಗ್ರಾಮದೇವತೆಯವರು ದೂರದೃಷ್ಟಿಹಾಗೂ ತುಂಬಾ ತೀಕ್ಷ್ಣ ಸ್ವಭಾವದ ಸಾಕಾರ ತಾಯಿಯಾಗಿರುವ ಕಾರಣ ತನ್ನ ಭಕ್ತರು ಹೊರಗಡೆ ಯಾವ ಊರಿನಲ್ಲಿರಲಿ ಅವರುಗಳಿಗೆ ತೊಂದರೆಗಳು ಎದುರಾದಾಗ ತಮ್ಮ ಮನಸ್ಸಿನಲ್ಲಿ ಧ್ಯಾನಿಸಿ ಅಲ್ಲಿಂದಲೇ ಹರಕೆ ಹೊತ್ತುಕೊಂಡಾಗ ಅವರ ತೊಂದರೆಗಳಿಗೆಲ್ಲ ಪರಿಹಾರದ ಕೃಪೆಯಾಗಿರುವ ಕಾರಣ ಈ ಭಕ್ತರು ಅಷ್ಟೈಶ್ವರ್ಯವಂತರಾಗಿ ಪ್ರಭಾವ ಶಾಲಿಗಳಾಗಿ ಬಾಳುತ್ತ ಇದ್ದಾರೆಂಬುದನ್ನು ಕೆಲವು ಉದಾಹರಣೆಗಳಿಂದ ಪ್ರಸ್ತಾಪಿಸಲು ಆಸಕ್ತಿವುಳ್ಳವನಾಗಿರುತ್ತೇನೆ. ಶ್ರೀ ದೇವಿಯವರ ಆರಾಧಕರಿಗೆ ವೀರಶೈವ ಧರ್ಮದ ತತ್ವ,ಸಿದ್ಧಾಂತ, ಆದರ್ಶಗಳ ಅರಿವಾಗ ತೊಡಗಿದ ಮೇಲೆ ಹಾಗೂ ದೇವಿಯವರ ಅಪ್ಪಣೆಯಾದಂತೆ ಅಜ್ಞಾನ, ಮೂಢತನದಿಂದ ಕೊಡುತ್ತಿದ್ದ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ನಿಲ್ಲಿಸಲಾಯಿತು, ಆದರೆ ಪರಿಶಿಷ್ಟರು ಮಾತ್ರ ಪ್ರಾಣಿಗಳ ಬಲಿಯನ್ನು ಈ ಬನದಲ್ಲಿ ತಮ್ಮ ಸ್ವಾರ್ಥ ಹಾಗೂ ಮೂಡ ನಂಬಿಕೆಯಿಂದ ಕೊಡುತ್ತಾ ಬಂದಿರುತ್ತಾರೆ ಇದನ್ನು ಸಹಚರಳಾದ ದ್ವ್ಯಾಮವ್ವ/ ಚಿಕ್ಕಮ್ಮ ಎಂಬ ಚೌಡಿಯು ಆರ್ಫಿಸಿಕೊಳ್ಳುತ್ತಾ ನೆಲೆಸಿರುತ್ತಾಳೆ. ವೀರಶೈವರಲ್ಲಿ ಅಹಿಂಸಾ ಧರ್ಮದ ಜಾಗೃತಿಯಾದ ನಂತರ ತಮ್ಮ ತೊಂದರೆ ಕಷ್ಟಗಳು ನಿವಾರಣೆಯಾದ ಸಂಧರ್ಭದಲ್ಲಿ ಹರಿಸಿ ಕೊಂಡಿದ್ದಂತೆ ದೇವಿಯವರಿಗೆ ಬೆಳ್ಳಿಯ ಕಣ್ಮಣಿಗಳು, ತಾಮ್ರದ ಬಿಂದಿಗೆ, ಕಂಚಿನ ದೀಪದ ಕಂಬಗಳು, ಬೆಳ್ಳಿಯ ಮುಖವಾಡಗಳು, ಸೀರೆ, ತಳಿಗೆಗಳನ್ನು ಒಪ್ಪಿಸಿ ಸೇವೆ ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ ಬೆಳ್ಳಿಯ ಕಣ್ಮಣಿಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಂದಿದ್ದರಿಂದ ಎಲ್ಲವನ್ನೂ ಸೇರಿಸಿ ಚಿನ್ನ-ಬೆಳ್ಳಿ ಅಂಗಡಿಗೆ ಕೊಟ್ಟು ಅವುಗಳ ತೂಕಕ್ಕೆ ಪ್ರತಿಮೆಗಳಿಗೆ ಸಧಾ ಧರಿಸುವ ಬೆಳ್ಳಿಯ ಮುಖವಾಡಗಳನ್ನು ಇತ್ತೀಚಿಗೆ ತಂದು ನಿರಂತರವಾಗಿ ಅಲಂಕರಿಸುತ್ತ ಬಂದಿದೆ. ಇದೆ ಗ್ರಾಮದ ನಂಜೇಗೌಡರ 'ಲಿಂII ಬಸಪ್ಪನವರ ಪುತ್ರ ಶ್ರೀ.. ನಾಗರಾಜಪ್ಪ ಇವರ ಪುತ್ರಿ ಶ್ರೀಮತಿ .ರೂಪ ಎಂಬ ಕನ್ಯಾಮಣಿಗೆ ಒದಗಿ ಬಂದಿದ್ದ ತೊಂದರೆಯೂ 'ಶ್ರೀ ದೇವಿಯವರ' ಕೃಪೆಯಿಂದ ನಿವಾರಣೆಯಾಗಿ ಆಕೆಗೆ ಉತ್ತಮ ದಾಂಪತ್ಯ ಜೀವನ, ಸೇವಾಭಾಗ್ಯ ಮತ್ತು ಸುಖ ಜೀವನಕ್ಕೆ ಪ್ರೇರಣೆಯಾಗಿದ್ದಕ್ಕೆ ಹರಕೆಯ ವಸ್ತುವಾಗಿ ಒಂದು ಜೊತೆ ಬೆಲೆಬಾಳುವ ಕಂಚಿನ ದೀಪದ ಕಂಭಗಳನ್ನು ಸನ್ನಿಧಿಗೆ ಒಪ್ಪಿಸಿ ದೇವಿಯ ಆನುಗ್ರಹದಿಂದ ಸುಖ ಸಂತೋಷದಿಂದ ಬಾಳುತ್ತಿದ್ದಾಳೆ; ಹಾಗೂ ದೇವಮಂದಿರಕ್ಕೆ ನೆನಪಿನ ಕಾಣಿಕೆಯಾಗಿ ಜನೋಪೋಯೋಗಿಕೆಲಸನನು ಮಾಡಿಸುವ ಇಚ್ಛೆಯನ್ನು ಹೊಂದಿರುತ್ತಾಳೆ ಇದೆ ಗ್ರಾಮದ ಮತ್ತೊಬ್ಬ ದಾನಿ ಲಿಂIIಸಿದ್ಧವೀರಪ್ಪನವರ ಪುತ್ರಿ ಶ್ರೀ .ಸಿದ್ದಲಿಂಗಪ್ಪನವರ ಪುತ್ರಿ 'ಶ್ರೀಮತಿ ಶಶಿಕಲಾಎಂಬ ಕನ್ಯಾಮಣಿಗೆ ಶ್ರೀ ದೇವಿಯವರ ಕೃಪೆಯಿಂದ ತನ್ನ ತೊಂದರೆ ಪರಿವಾರವಾದ್ದರಿಂದ ಹರಿಸಿಕೊಂಡಿದ್ದಕ್ಕೆ ಅಭಿಷೇಕಕ್ಕೆ ಬಳಸುವ ಒಂದು ತಾಮ್ರದ ಬಿಂದಿಗೆಯನ್ನು ಸನ್ನಿಧಿಗೆ ಒಪ್ಪಿಸಿ ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾಳೆ. ಇದೇ ಗ್ರಾಮದ ನಂಜೇಗೌಡರ ಲಿಂIIಬಸಪ್ಪ ಇವರ ಪೌತ್ರ ಲಿಂII ಚನ್ನವೀರಪ್ಪ ಮತ್ತು ಗೌರಮ್ಮ ಇವರ ವರ ಪುತ್ರ ಕೊಡುಗೆ ದಾನಿ ಕೋಟಿವೀರ ಶ್ರೀ. ಹೆಚ್. ಎಸ್. ಸಿದ್ದಲಿಂಗಪ್ಪ ಉ ಮೂರ್ತಿ ಎಂಬುವವರು ಶ್ರೀ ಗ್ರಾಮದೇವತೆಯನ್ನು ಧೃಡವಾಗಿ ನಂಬಿ ಪರಮ ಭಕ್ತರಾಗಿರುವ ಸಂಭಂದ ತಮ್ಮ ವೃತ್ತಿಯಲ್ಲಿ ತುಂಬಾ ಯಶಸನ್ನು ಕಂಡು ವಿದ್ಯುತ್ ಕೆಲಸಗಳಗುತ್ತಿಗೆಯಲ್ಲಿ ಹಂತಹಂತವಾಗಿ ಅಭಿವೃದ್ಧಿಯನ್ನು ಹೊಂದಿ ಈಗ ಇದೆ ಇಲಾಖೆಯ ಪ್ರಥಮ ದರ್ಜೆಗುತ್ತಿಗೆದಾರರು ಮತ್ತು ವಿದ್ಯುತ್ ಸಲಕರಣೆಗಳ ಅಂಗಡಿ ಶ್ರೀ ಶಿಸಸಾಯಿ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್; ದಾಸರಹಳ್ಳಿ -ಬೆಂಗಳೂರು ಎಂಬ ಬೃಹತ್ ಸಂಕೀರ್ಣವನ್ನು ಹೊಂದಿರುತ್ತಾರೆ ಈ ಎಲ್ಲ ವ್ಯವಸ್ಥೆಗೆ ಚೈತನ್ಯ ಹಾಗೂ ಕೃಪೆಯಾಗಿದ್ದು 'ಶ್ರೀ ಗ್ರಾಮದೇವತೆಯವರು ಎಂಬುದಾಗಿ ತಮ್ಮ ಭಕ್ತಿಯ ವಾಣಿಯಿಂದ ಸ್ಮರಿಸಿ ತಮ್ಮ ಭಕ್ತಿಯ ಕಾಣಿಕೆಯಾಗಿ 'ಒಂದು ಕೆಜಿ ತೂಕದ ಬೆಳ್ಳಿಯ ಸ್ವಚ್ಛ, ಸುಂದರ ಮುಖವಾಡಗಳನ್ನು ಸನ್ನಿಧಿಗೆ ಒಪ್ಪಿಸಿ ಅವುಗಳಿಗೆ ಪುರೋಜೀತರಿಂದ ಅಭಿಷೇಕ, ಹೋಮ ಸಂಪ್ರದಯಾಯಕ ಪೂಜೆ ಮುಂತಾದ ಪುಣ್ಯವದನ ಕಾರ್ಯವನ್ನು ಮಾಡಿಸಿ ವಿಧಿ, ವಿಧಾನಗಳ ಪ್ರಕಾರ ದೈವ ಶಕ್ತಿಯನ್ನು ತುಂಬಿ ಪ್ರತಿಮೆಗಳಿಗೆ ಧಾರಣೆ ಮಾಡಿ, ಸಾಕ್ಷಾತ್ಕರಿಸುತ್ತಾರೆ. ಈ ವೈವಸ್ಥೆಯಿಂದ ದೇವಿಯವರ ತೇಜಸ್ಸು ಹಾಗೂ ಸುಂದರವಾದ ಮುಖ ದರ್ಶನ ಭಾಗ್ಯ ಭಕ್ತರಿಗೆ ದೊರೆಯುವಂತೆ ರೂಪಗೊಳಿಸುತ್ತಾರೆ, ಇದೇ ಶುಭದಿನದಂದು ತಾ.೨೨-೦೫-೨೦೦೯, ಶುಕ್ರವಾರ ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳವರ ದಿವ್ಯ ಪಾದ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ, ಈ ಸಂಭಂದ ಎಲ್ಲ ಭಕ್ತಮಂಡಳಿಯವರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ಶ್ರೀ ಗ್ರಾಮದೇವತೆಯವರ ಹಾಗೂ ಗುರು ಹಿರಿಯರ ಶುಭ ಹಾರೈಕೆಗೆ ಅರ್ಹರಾಗಿರುತ್ತಾರೆ ಮತ್ತು ಇದೆ ದಾನಿಯು ದೇವ ಮಂದಿರವನ್ನು ವಿಶಾಲವಾಗಿ, ಸುಂದರವಾಗಿ ಹೊಸದಾಗಿ ನಿರ್ಮಿಸಲು ಮೂರು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಡಲು ಭರವಸೆ ಕೊಟ್ಟಿರುತ್ತಾರೆ, ಕಾರಣ ಈ ಭಕ್ತನು ಧಾನಶೂರ ಹಾಗೂ ಗ್ರಾಮದ ಹೆಮ್ಮೆಯ ಪುತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುತ್ತಾರೆ; ವೀರಶೈವ ಸಮಾಜವು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತದೆ; ಇಂತಹ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂದಿರುವ ಕಾರಣ ಭಕ್ತಿಯ ಕಾಣಿಕೆಗಳು ಹೆಚ್ಚಾಗಿ ದೇವರ ಹುಂಡಿಯನ್ನು ಸೇರುವ ಮುನ್ಸೋಚನೆಗಳು ಕಂಡು ಬಂದಿರುತ್ತದೆ.. ಈ ಗ್ರಾಮದ ಹರಿಜನ ಬಾಂದವರು ಸಹ ಶ್ರೀ ದೇವಿಯವರನ್ನು ಭಕ್ತಿ, ನಂಬಿಕೆಗಳಿಂದ ಆರಾಧಿಸುತ್ತಿದ್ದಾರೆ ಅವರೂ ಸಹ ತಮ್ಮ ಕಷ್ಟ ನಿವಾರಣೆಗಾಗಿ ಹರಕೆಗಳನ್ನು ಹೊತ್ತಂತೆ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದು, ಹಣ್ಣು ಕಾಯಿ, ಕರ್ಪೂರ ಕೊಟ್ಟು ಪೂಜೆ ಮಾಡಿಸುವ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಶ್ರೀ ಉಡಿಶೀಲಮ್ಮ ಅರ್ಧಾತ್ ಗ್ರಾಮದೇವತೆಯವರು ಈ ಗ್ರಾಮದಲ್ಲಿ ನೆಲೆಯಾಗಲು ಮೂಲ ಕಾರಣರಾದ ಶ್ರೀ ಹಲಗೇಗೌಡರ ಸಂತತಿಯವರಲ್ಲಿ ಹಿರಿಯ ಮಕ್ಕಳೇ ಪಾಳೇಪಟ್ಟಿನ ಸರದಿಯಂತೆ ಪೂಜಾ, ವಿಧಿಗಳನ್ನು ಮಾಡಲು ಹಕ್ಕುದಾರರಾಗಿರುತ್ತಾರೆಂಬುದು ಸಾಗಿಬಂದ ವಿಷಯವಾಗಿದೆ; ಇದೆ ಪದ್ದತಿಯಂತೆ ಹತ್ತಾರು ತಲೆಮಾರಿನವರು ಆದಮೇಲೆ ಈಗಿನ ಹಿಂದೆ ಐದನೇ ತಲೆ ಮಾರಿನ ವಂಶಸ್ಥರಾದ ಶ್ರೀ ನಿಂಗೇಗೌಡರ ಕಾಲದಲ್ಲಿ ಈ ಪೂಜಾರಿಕೆ ಪದ್ಧತಿಯು ವಿಕೇಂದ್ರೀಕರಣಗೊಳ್ಳುತ್ತದೆ, ಅಂದರೆ ಹುಟ್ಟಿದ ಎಲ್ಲ ಗಂಡು ಮಕ್ಕಳಿಗೂ ಪೂಜೆಯ ಜವಾಬ್ದಾರಿ ಬರುತ್ತದೆ, ನಿಂಗೇಗೌಡರಿಗೆ ಮೂರು ಜನ ಗಂಡು ಮಕ್ಕಳುಗಳು ಇರುತ್ತಾರೆ ಕ್ರಮವಾಗಿ 'ಶ್ರೀ ಈರೇಗೌಡ, ಸಿದ್ದೇಗೌಡ ಮತ್ತು ಪುಟ್ಟಸ್ವಾಮಿಗೌಡ ಎಲ್ಲರೂ ಅನ್ಯೋನ್ಯವಾಗಿ ಬಾಳುತ್ತಿರುತ್ತಾರೆ ನಿಂಗೇಗೌಡರು ಮೊದಲು ಇಬ್ಬರು ಮಕ್ಕಳಿಗೆ ಮದುವೆ ವಗೈರೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿ ಕೊಂಡಿರುತ್ತಾರೆ' ಆದರೆ ಅನಾರೋಗ್ಯದಿಂದ ಕೆಲವೇ ಸಮಯದಲ್ಲಿ ವಿಧಿ ವಶರಾಗುತ್ತಾರೆ ಆಗ ಸಂಸಾರದ ಜವಾಬ್ದಾರಿಯೂ 'ಈರೇಗೌಡರ' ಮೇಲೆ ಬರುತ್ತದೆ, ಇವರು ಸ್ವಲ್ಪ ಜಡ ಸ್ವಭಾವದವರು ಎಲ್ಲ ಕೆಲಸಗಳನ್ನು ಎರಡನೇ ಸಿದ್ದೇಗೌಡರು ನಿಭಾಯಿಸಿ ಕೊಂಡು ಹೋಗುತ್ತಿರುತ್ತಾರೆ ಆದರೆ ಮೂರನೇ 'ಪುಟ್ಟಸ್ವಾಮಿಗೌಡ' ಧಾರ್ಮಿಕ ವಿಚಾರದಲ್ಲಿ ತುಂಬಾ ಆಸಕ್ತರಾಗಿದ್ದು ಹೊರ ಸಂಚಾರ ಸ್ವಭಾವ ಉಳ್ಳವರು ಮನೆ ಕೆಲಸಗಳ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸುತ್ತಿರಲಿಲ್ಲ ಈ ಪರಿಸ್ಥಿತಿಯಿಂದ ಸಹೋದರರ ಮದ್ಯೆ ಮನಸ್ಥಾಪಗಳು ಹುಟ್ಟಿ ಕೊಳ್ಳುತ್ತವೆ ಕಾರಣ ಆಸ್ತಿಯನ್ನು ವಿಭಾಗ ಮಾಡಿ ಕೊಳ್ಳುವ ವಿರ್ಧಾರಕ್ಕಾಗಿ ಬರುತ್ತಾರೆ ನಿಂಗೆ ಗೌಡರ ಅನುಭವದಲ್ಲಿದ್ದ ಸ್ವಂತ ಆಸ್ತಿ ಹಾಗೂ ದೇವರ ಕೊಡುಗೆ ಜಮೀನುಗಳನ್ನು ಸಮನಾಗಿ ಮೂರು ಭಾಗಗಳನ್ನಾಗಿ ಮಾಡುತ್ತಾರೆ, ಇದರಲ್ಲಿ 'ಸಿದ್ಧೇಗೌಡರು ಮಾತ್ರ ಒಂದು ಭಾಗದ ಆಸ್ತಿಯನ್ನು ವಹಿಸಿಕೊಂಡು ತಮ್ಮ ವ್ಯವಹಾರವನ್ನು ಬೇರೆ ಮಾಡಿಕೊಳ್ಳುತ್ತಾರೆ ಹಾಗೂ ಒಂದು ವರ್ಷ ಕಾಲ ದೇವರ ಪೂಜೆ ಮಾಡಿಕೊಂಡು ಹೋಗಲು ಒಪ್ಪಿಕೊಂಡಿರುತ್ತಾರೆ ಒಂದನೇ ಈರೇಗೌಡ ಮತ್ತು ಮೂರನೇ ಪುಟ್ಟಸ್ವಾಮಿ ಒಟ್ಟಿಗೆ ಇದ್ದುಕೊಂಡು ಎರಡು ಭಾಗ ಆಸ್ತಿ ಮತ್ತು ಎರಡು ವರ್ಷ ದೇವರ ಪೂಜೆ ಮಾಡಲು ಜವಬ್ದಾರರಾಗುತ್ತಾರೆ; ಪುಟ್ಟಸ್ವಾಮಿಯವರು ಅವಿವಾಹಿತರು ಹಾಗೂ ದೈವ ಭಕ್ತಿ ಉಳ್ಳವರು ಪ್ರತಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ಗ್ರಾಮದೇವಟೆಯವರ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದ ಸಂಭಂದ ದೈವ ಪ್ರೇರಿತರಾಗಿ ಕೆಲವು ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಹಂಬಲವುಂಟಾಗಿ ಒಂದು ಶುಭದಿನದಂದು; ಅಣ್ಣನವರ ಒಪ್ಪಿಗೆ ಪಡೆದು ಪಡುವಣ ದಿಕ್ಕಿನತ್ತ ಕಾಲುನಡಿಗೆಯಲ್ಲಿ ಹೋರಾಡುತ್ತಾರೆ ದಾರಿ ಮಧ್ಯೆ ಕೆಲವು ಗ್ರಾಮಗಳಲ್ಲಿ ವಾಸ್ತವ ಮಾಡಿ ತಮ್ಮ ನಿತ್ಯದ ಕಾಯಕಗಳನ್ನು ಪ್ರಸಾದದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಹಳೇಬೀಡು, ಬೇಲೂರು ದರ್ಶನ ಮಾಡಿಕೊಂಡು ಚಿಕ್ಕಮಗಳೂರಿಗೆ ತಲುಪುತ್ತಾರೆ, ಇಲ್ಲಿ ಆಯಾಸ ಪರಿಹರಿಸಿಕೊಂಡು ಇಲ್ಲಿನ ಪುರಜನರ ಸಹಕಾರದಿಂದ ಆರು ಮೈಲಿ ದೂರದಲ್ಲಿರುವ ಶ್ರೀ ನಿರ್ಮಾಣಸ್ವಾಮಿ ಮಠ ಇರುವುದನ್ನು ತಿಳಿದು ಅಲ್ಲಿಗೆ ಪ್ರಯಾಣ ಬೆಳೆಸುತ್ತಾರೆ ಮುಸ್ಸಂಜೆ ವೇಳೆಗೆ ಮಠಕ್ಕೆ ಬಂದು ತಲುಪುತ್ತಾರೆ, ಶ್ರೀ ಮಠದ ಗುರುಗಳನ್ನು ದರ್ಶನ ಮಾಡಿ ತಮ್ಮ ಪರಿಚಯ ಮಾಡಿಕೊಂಡು ಆಶ್ರಯವನ್ನು ಪಡೆಯುತ್ತಾರೆ ನಂತರ ಶಿವ ಪೂಜೆ ಪ್ರಸಾದವಾದ ಮೇಲೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ ಮರುದಿನ ಮುಂಜಾನೆ ಎದ್ದು ಶ್ರೀಗಳವರ ಸಲಹೆಯಂತೆ ಸ್ನಾನ, ಪೂಜಾ ವ್ಯವಸ್ಥೆಗಳನ್ನೆಲ್ಲ ಮಾಡಿ ಕೊಡಲೇ ತಮ್ಮ ಸ್ನಾನ ಪೂಜೆ ಮುಗಿಸಿ ಪ್ರಸಾದದ ಸಿದ್ಧತೆಗೆ ತೊಡಗುತ್ತಾರೆ; ಗುರುಗಳವರ ಸ್ನಾನ, ಪೂಜೆ ಮುಗಿಯುವುದರೊರಳಗೆ ಪ್ರಸಾದ ಸಿದ್ಧವಾಗುತ್ತದೆ ಮೊದಲು ಗುರುಗಳಿಗೆ ಲಿಂಗಾರ್ಪಿತವಾದಾನಂತರ ತಾವು ಪ್ರಸಾದ ತೆಗೆದುಕೊಳ್ಳುತ್ತಾರೆ, ಈ ದಿನ ವ್ಯವಸ್ಥೆಯೊಂದ ಗುರುಗಳವರಿಗೆ ಅನುಕೂಲವಾಗಿರುತ್ತದೆ ಕಾರಣ ಮಠದ ಶಿಷ್ಯನಾಗಿ ಕೆಲವುದಿನ ಸೇವೆ ಮಾಡಿ ಕೊಂಡಿರಲು ಆದೇಶಿಸುತ್ತಾರೆ ಇಲ್ಲಿ ಪರಿಸರ, ಪ್ರಕೃತಿ, ಸೌಂದರ್ಯ, ಗುರುಗಳ ಶಿವಪೂಜಾವಿಧಾನ ಶಿಷ್ಯನನ್ನು ಪ್ರಭಾವಿತನನ್ನಾಗಿ ಮಾಡುತ್ತದೆ; ಈತನ ಸೇವೆಯನ್ನು ಗುರುಗಳು ಬಹಳ ಮೆಚ್ಚಿಕೊಂಡಿದ್ದರು, ಇಲ್ಲಿದ್ದ ಕೆಲವು ವರ್ಷಗಳಲ್ಲಿ ಹತ್ತಿರವಿರುವ ಪಂಚಪೀಠಗಳೊಲ್ಲೊಂದಾದ 'ಶ್ರೀ ರಂಭಾಪುರಿ' ಮಠವನ್ನು ದರ್ಶನ ಮಾಡಿ ಬರಬೇಕೆಂದು ಆಕಾಂಕ್ಷೆಯಾಗುತ್ತದೆ; ಗುರುಗಳವರಿಂದ ದಾರಿಯನ್ನು ತಿಳಿದು ಅಪ್ಪಣೆಪಡೆದು ಒಂದು ಶುಭ ದಿನ ಉದಯ ಕಾಲದಲ್ಲಿ ಹೊರಟು; ಇಲ್ಲಿಗೆ ೩೫ ಮೈಲಿ ದೂರದಲ್ಲಿರುವ ಬಾಳೆಹೊನ್ನೂರನ್ನು ಅಪರಾನ ೩ ಘಂಟೆಗೆ ತಲುಪಿ ಗುರುಗಳವಾರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಯಾಸ ಪರಿಹಾರಕ್ಕಾಗಿ ಕೆಲವು ದಿನ ಅಲ್ಲಿದ್ದು ವೀರಶೈವ ಧರ್ಮದ ತತ್ವ, ಸಿದ್ಧಾಂತ, ಶಿವಪೂಜಾ ವಿಧಾನಗಳನ್ನು ಕರಗತ ಮಾಡಿಕೊಂಡು, ಪುನಃ ಅಲ್ಲಿಂದ ಹೊರತು 'ಶ್ರೀ ನಿರ್ವಾಣ'ಸ್ವಾಮಿ ಮಠಕ್ಕೆ ಬಂದು ಅಲ್ಲಿ ಶಿಷ್ಯನಾಗಿ ತಮ್ಮ ಇಳಿವಯಸ್ಸಿನವರಿಗೂ ಸೇವೆ ಮಾಡಿ ಸ್ವಾಮಿಗಳ ಪ್ರೇರಣೆಯಂತೆ ವಿರಕ್ತಾಶ್ರಮ ಧರ್ಮವನ್ನು ಸ್ವೀಕರಿಸಿ ಅಲ್ಲಿಂದ ಬಂದು ಶಿವಲಿಂಗವನ್ನು ತೆಗೆದುಕೊಂಡು ತಾಯ್ನಾಡಿಗೆ ವಾಪಸ್ಸು ಬರುತ್ತಾರೆ ಇಲ್ಲಿಗೆ ಬಂದು ಹಿರಿಯ ಅಣ್ಣನವರಾದ ಈರೇಗೌಡರ ಜೊತೆಗೆ ಸೇರಿಕೊಂಡು ಮನೆಯಲ್ಲಿ 'ಶ್ರೀ ನೀರ್ವಾಣ' ಸ್ವಾಮಿಯವರ ಗದ್ದುಗೆಯನ್ನು ಮಾಡಿ ಮಠದಿಂದ ತಂದಿದ್ದ ನೀರ್ವಾಣ ಸ್ವ್ವಾಮಿ ಹೆಸರಿನ 'ಲಿಂಗವನ್ನು ಸ್ಥಾಪನೆ ಮಾಡಿ ನಿತ್ಯವೂ ಧೃಡ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾ ವಾರದ ದಿನಗಳಲ್ಲಿ 'ಶ್ರೀ ಗ್ರಾಮದೇವತೆಯನ್ನು' ಪೂಜಿಸುತ್ತಾ ವೈರಾಗಿಯಾಗಿ ಜೀವನವನ್ನು ಕಳೆಯುತ್ತಿರುತ್ತಾರೆ ಹೀಗಿದ್ದಾಗ ಕೆಲವು ವರ್ಷಗಳು ಕಳೆದ ಮೇಲೆ ತಮ್ಮ ಮುಕ್ತಿ ಮಾರ್ಗದ ಅಂತಿಮ ಗೀತೆಯನ್ನು ಹಾಡಿ 'ಲಿಂಗೈಕ್ಯರಾಗುತ್ತಾರೆ'; ನಂತರ ಇವರ ಅಂತಿಮ ವಿಧಿ ವಿಧಾನಗಳೆಲ್ಲಾ 'ಈರೇಗೌಡರೆ' ನಿರ್ವಹಿಸಿದ ಕಾರಣ ಎರಡು ಭಾಗದ ಆಸ್ತಿ ಮತ್ತು ಎರಡು ವರ್ಷಗಳ ದೇವರ ಪೂಜೆಗೆ ಜವಬ್ದಾರರಾಗುತ್ತಾರೆ ಈ ಸಂಭಂದ ಈರೇಗೌಡರ ಮನೆಯಲ್ಲಿ 'ಶ್ರೀ ನೀರ್ವಾಣ'ಸ್ವಾಮಿಯವರ ಮೂರ್ತಿ ಇದ್ದದ್ದು ಸತ್ಯ ಸಂಗತಿಯಾಗಿದೆ. ಶ್ರೀ ಗ್ರಾಮದೇವತೆಯನ್ನು ಈ ಗ್ರಾಮದಲ್ಲಿ ನೆಲೆ ಮಾಡಲು ಕಾರಣರಾಗಿದ್ದ 'ಹಲಗೇಗೌಡರ' ಹಕ್ಕು ಭದ್ಯತೆಗೆ ಸೇರಿದ ದೇವರ ಕೊಡುಗೆ ಜಾಮೀನು ಸರೈನಂ: 23/6 ಅಲ್ಲಿ ಒಟ್ಟೂ 1-16 ಎಕರೆ ಋಷ್ಕಿ ಇದರ ಪೈಕಿ ಪೂರ್ವ ಭಾಗಕ್ಕೆ 16 ಗುಂಟೆಯನ್ನು ದೇವರ ಬನಕ್ಕಾಗಿ ಕಾಯ್ದಿರಿಸಲಾಯಿತು ಉಳಿದ 1-00 ಎಕರೆಯನ್ನು ಇವರ ವಂಶಸ್ತರು ಮೂರು ಭಾಗಗಳಾಗಿ ವಿಂಗಡಿಸಿ ತಮ್ಮ ಮೂರು ಮಕ್ಕಳಿಗೆ ತಲಾ 13 ವರೆ ಗುಂಟೆಯಂತೆ ಹಂಚಿಕೆ ಮಾಡಿದರು ಈರೇಗೌಡರಿಗೆ 2 ಭಾಗದ ಒಟ್ಟೂ 27 ಗುಂಟೆ ಸೇರುತ್ತದೆ, ಈಗ ಅವರ ಪೀಳಿಗೆಯವರಾಗಿರುವ HS. ಸಿದ್ದಲಿಂಗಪ್ಪ ಬಿನ್ ಸಿದ್ದವೀರಪ್ಪ ಇವರಿಗೆ 7ಗುಂಟೆ ಜಮೀನು 6 ತಿಂಗಳ ಕಾಲ ದೇವರ ಪೂಜೆ HS. ಚಂದ್ರಪ್ಪ ಬಿನ್ ಸಿದ್ದಲಿಂಗಪ್ಪ ಉ. ಪುಟ್ಟಸ್ವಾಮಿ ಇವರಿಗೆ 7 ಗುಂಟೆ ಜಮೀನು 6 ತಿಂಗಳ ದೇವರ ಪೂಜೆ; HS. ಬಸವರಾಜಪ್ಪ ಉ ರಾಜ ಇವರಿಗೆ 6 ವರೆ ಗುಂಟೆ ಜಮೀನು 6 ತಿಂಗಳ ಪೂಜೆ ಮತ್ತು HV ಸಿದ್ದಲಿಂಗಪ್ಪ ಬಿನ್ ವೀರಣ್ಣ ಇವರ ಮಗ 'ಅಣ್ಣಪ್ಪ'ನಿಗೆ 6 ವರೆ ಗುಂಟೆ ಜಮೀನು 6 ತಿಂಗಳ ದೇವರ ಪೂಜೆ ಈ ವ್ಯವಸ್ಥೆಯನ್ನು ಸಹೋದರರ ಮದ್ಯೆ ಮಾಡಿಕೊಂಡಿರುವ ಒಳ ಒಪ್ಪಂದದಂತೆ ನೆಡೆದುಕೊಂಡು ಹೋಗುತ್ತಿದ್ದಾರೆ ಎರಡನೇ ಸಹೋದರರಾದ 'ಶ್ರೀ ಸಿದ್ದೇಗೌಡರ' ಪೀಳಿಗೆಯ ಶ್ರೀ HV ಸಿದ್ಧಲಿಂಗಪ್ಪ ಉ ಸ್ವಾಮಿ ಇವರಿಗೆ ೩ವರೆ ಜಮೀನು ೩ ತಿಂಗಳು ದೇವರ ಪೂಜೆ HB ಸಿದ್ದಲಿಂಗಪ್ಪ ಉ ಉದ್ದಾರಣ್ಣ ಬಿನ್ ಸಿದ್ದವೀರಪ್ಪ ಇವರಿಗೆ 3 ವರೆ ಗುಂಟೆ ಜಮೀನು 3 ತಿಂಗಳು ದೇವರ ಪೂಜೆ; ಬಿ. ಬಸಪ್ಪ a/ss ಸಿದ್ದಲಿಂಗಪ್ಪ ಇವರಿಗೆ 3 ಗುಂಟೆ ಜಮೀನು 3 ತಿಂಗಳ ದೇವರ ಸೇವೆ; ಈ ಕ್ರಮದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಅನುಸಾರವಾಗಿ ಹಾಲಿ 8 ಕುಟುಂಬದವರು ದೇವರ ಪೂಜೆಯನ್ನು ಪ್ರತಿ ಶುಕ್ರವಾರ ಸ್ವಲ್ಪವೂ ಚ್ಯುತಿಯಾಗದಂತೆ; ತಮ್ಮ ವಂಶ ಪಾರಂಪರ್ಯವಾಗಿ ನೆಡೆಸಲು ಒಪ್ಪಿಕೊಂಡಿರುವಂತೆ ಇಂದಿನ ದಿನಗಳವರೆಗೂ ಸಾರೋದ್ದಾರವಾಗಿ ನೆರವೇರುತ್ತಾ ಬಂದಿದೆ........................................... ಕೋಟ್ಯಂತರ ವರ್ಷಗಳ ಹಿಂದೆ ನಭೋ ಮಂಡಲದಲ್ಲಿ ಒಂದು ಮಹಾಸ್ಪೋಟ ಉಂಟಾಗಿ ಆಕಾಶ ಕಾಯವು ಛಿದ್ರಗೊಂಡು ಆಕಾಶ, ಗಾಳಿ, ನೀರು, ಭೂಮಿ, ಸೂರ್ಯ ಎಂಬ ಪಂಚ ಭೂತಗಳು ಸೃಷ್ಟಿಯಾಗಿದೆ ಎಂದು ಖಗೋಳ ವಿಜ್ಞಾನಿಗಳ ಅಭಿಪ್ರಾಯವಾಗಿದೆ.ಹೀಗೆ ಪ್ರಪಂಚ ಸೃಷ್ಟಿಯಾದ ನಂತರದಲ್ಲಿ ಶಾಖ, ನೀರು, ಗಾಳಿ ಇವುಗಳ ಸಂಯೋಜನೆಯಿಂದ ಭೂಮಿಯ ಬಂಡೆಗಳ ಮೇಲೆ ‘ಪಾಚಿ ಶೀಲಾವಲ್ಕಗಳೆಂಬ’ ಜೀವ ಕೋಶಗಳು ಹುಟ್ಟಿಕೊಳುತ್ತವೆ. ಇದರಿಂದ ಪ್ರಾರಂಭವಾದ ಜೀವಿಗಳ ಪರಿವರ್ತನೆಯು ಸಾವಿರಾರು ವರ್ಷಗಳ ಕಾಲ ವಿಕಾಸ ಹೊಂದಿ ವಿವಿಧ ಜೀವಿಗಳ ಮೂಲದಿಂದ ಅಂತಿಮವಾಗಿ ಮಾನವನ ಉಗಮವಾಗಿದೆ ಎಂಬುದು ಇತಿಹಾಸ ಮೂಲಗಳಿಂದ ತಿಳಿದು ಬಂದಿರುತ್ತದೆ . ಭೂಮಿಯ ಮೇಲೆ ಆದಿ ಮಾನವನ ಜೀವನ ಕ್ರಮವು ಪ್ರಾರಂಭವಾಗುವುದಕ್ಕೂ ಮುನ್ನ ಅಲ್ಲಲ್ಲಿ ಕೆಲವು ರಾಕ್ಷಸರು ಹುಟ್ಟಿಕೊಂಡು ಮಾನವನ ಕುಲದ ವಿಕಾಸಕ್ಕೆ ಕಂಟಕ ಪ್ರಾಯವಾಗುತ್ತದೆ ಇದರಿಂದ ಭಕ್ತಿಗೆ ನೆಲೆಯಿಲ್ಲದಂತಾಗುತ್ತದೆ ಮತ್ತು ಮನುಕುಲವು ವಿನಾಶದ ಹಾದಿ ಹಿಡಿಯುತ್ತದೆ. ಇದರಿಂದ ಆತಂಕಗೊಂಡ ಕೈಲಾಸ ಪತಿ ಯಾದ ಶ್ರೀ ವಿಷ್ಣು ಬೇರೆ ಬೇರೆ ಯುಗ ಗಳಲ್ಲಿ ವಿವಿಧ ಅವತಾರಗಳನೆತ್ತಿ ದುಷ್ಟ ಸಂಹಾರ ಮಾಡಿದ್ದನ್ನು 'ಋಷಿ' ಮುನಿಗಳಿಂದ ರಚಿತವಾಗಿರುವ ಪುರಾಣ ಕಥೆಗಳಿಂದ ತಿಳಿದು ಬಂದಿರುತ್ತದೆ: ದುಷ್ಟ ಸಂಹಾರವಾದ ನಂತರದಲ್ಲಿ ಭೂಮಿಯ ಮೇಲೆ ಮಾನವನ ಸಂತತಿಯು ಉಳಿದು ಬೆಳೆಯಲು ನಾಂದಿ ಯಾಗುತ್ತದೆ.ಮಾನವನ ವಿಕಾಸವು ಸಿಂಧು ನದಿ ಕಣಿವೆಯ ನಾಗರಿಕತೆಯಿಂದ ಪ್ರಾರಂಭವಾಗಿದ್ದರಿಂದ ಹಿಂದೂದೇಶ ವೆಂದು ರೂಪುಗೊಂಡು ಇಲ್ಲಿನ ನಿವಾಸಿಗಳು ಹಿಂದೂಗಳೆಂದು ಕರೆಯಲ್ಪಡುತ್ತಾರೆ. ಇವರುಗಳು ತಮ್ಮ ಕಷ್ಟ ತೊಂದರೆಗಳಿಗೆಲ್ಲ ಹೆಚ್ಚಾಗಿ ಶ್ರೀ ಪಾರ್ವತಿ ದೇವಿಯನ್ನು ವಿವಿಧ ರೂಪದಲ್ಲಿ ತಮ್ಮ ಶಕ್ತಿ ದೇವತೆಯಾಗಿ ನಂಬಿಕೆ ಭಕ್ತಿಯಿಂದ ಆರಾಧಿಸಿರುತ್ತಾರೆ. ಕೈಲಾಸ ಪತಿಯಿಂದ ದುಷ್ಟ ಸಂಹಾರವಾದರೂ ಸಹ ಮಾನವರಲ್ಲಿ ಹೆಚ್ಚಾಗಿ ಹಿಂದೂಗಳಲ್ಲಿ ಸಾಮೂಹಿಕ ಪಿಡುಗುಗಳಾದ ಅಧರ್ಮ, ಅಜ್ಞಾನ, ಅನಾಚಾರ, ಧರಿದ್ರ್ಯ, ಮೂಡನಂಬಿಕೆ ಮತ್ತು ಸಾಂಕ್ರಾಮಿಕ ರೋಗಗಳೆಂಬ ಧೈತ್ಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡಿರುತ್ತದೆ. ಇದರಿಂದ ದೈವದ ಮೇಲೆ ಭಕ್ತಿ ಕಡಿಮೆಯಾಗಿ ಜನರಲ್ಲಿ ಲೌಕಿಕ ವಿಕಾಸವು ನಿಂತ ನೀರಾಗುತ್ತದೆ. ಆದಕಾರಣ ಮಾನವ ಸಂತತಿಯು ವಿನಾಶದ ಹಾದಿ ಹಿಡಿದಿರುವ ಸರಿಸ್ಥಿತಿಯನ್ನು ತಿಳಿದ ಪರಶಿವನು ರಾಣಿಯಾದ ಶ್ರೀ ಪಾರ್ವತಿ ದೇವಿಯವರು ಮಾನವರಲ್ಲಿ ಈ ಜ್ವಲಂತ ಸಮಸ್ಯೆಗಳಿಗೆ ಆತಂಕಪಟ್ಟು ದೈವ ಭಕ್ತಿ, ಶಾಂತಿ, ನೆಮ್ಮದಿ, ಉತ್ಸಾಹ ದಿಂದ ಜೀವನ ಮಾಡುವ ಅವಕಾಶಗಳನ್ನು ಕಲ್ಪಿಸುವ ಸಂಕಲ್ಪ ಮಾಡಿ ತಮ್ಮ ಪರಿಚಾರಕೀಯರ ಪೈಕಿ ಅರ್ಹರಾದ 7 ಜನ ಕನ್ಯಯರಿಗೆ ಸರ್ವ ಶಕ್ತಿಯನ್ನು ಕೊಟ್ಟಿ ಸಪ್ತ ಮೂಲಕೇಯರು ಎಂದು ಸೃಷ್ಟಿ ಮಾಡಿ ನೀವುಗಳು ಭೂಲೋಕಕ್ಕೆ ಹೋಗಿ ಸ್ಥಳ, ಸನ್ನಿವೇಶ ಅಲ್ಲಿನ ಮಾನವರಲ್ಲಿರುವ ಆಚಾರ, ವಿಚಾರ, ನಂಬಿಕೆ ಪದ್ದತಿಗೆ ಅನುಸ್ಟಾರವಾಗಿ ಬೇರೆಬೇರೆ ಹೆಸರುಗಳಿಂದ ಶೀಲಾ ರೂಪದಲ್ಲಿ ನೆಲೆಯಾಗಿ, ಆರಾಧಿಸಿಕೊಳ್ಳುತ್ತಾ ಅಲ್ಲಿನ ಎಲ್ಲಾ ಸಮಸ್ಯೆ ತೊಂದರೆಗಳಿಗೆ ಸ್ಪಂದಿಸುತ್ತಿರ ಬೇಕೆಂದು ಆದೇಶ ಮಾಡಿ ಅಂಬಿಕಾ ಎಂಬ ಕನ್ಯಾ ಮಣಿಯನ್ನು ಮುಂದಿಟ್ಟು ಉಳಿದ ಆರು ಜನರನ್ನು ಈಕೆಯ ಸಂಗಡ ಕಳುಹಿಸಿಕೊಟ್ಟ ಮೇರೆಗೆ ಏಳು ಜ್ಯೋತಿ ರೂಪ ದಲ್ಲಿ ಇಹಲೋಕಾಭಿಮುಖವಾಗಿ ಹೊರಡುತ್ತಾರೆ. ಇತ್ತ ಭೂಲೋಕದ ದಕ್ಷಿಣ ಕರಾವಳಿ ತೀರದ ಕೊಂಕಣ ಸೀಮೆಯಲ್ಲಿ ಒಬ್ಬ ಬೇಡನು ಹುಟ್ಟಿಕೊಂಡು ಮೂಡ ನಂಬಿಕೆಯಿಂದ, ಸಿಕ್ಕಿದ ಜನರನ್ನು ಕೊಲ್ಲುವುದು, ಅವರಿಂದ ದೋಚಿಕೊಂಡು ತಂದು ಜೀವನ ಮಾಡುತ್ತಿರುತ್ತಾನೆ. ಈತನ ತೊಂದರೆ ಯನ್ನು ಸಹಿಸಲಾರದೆ ನಿಗ್ರಹಕ್ಕಾಗಿ ಪ್ರತಿ ದಿನವೂ ಶಕ್ತಿ ದೇವತೆಗೆ ಮೊರೆಯಿಡುತ್ತಾರೆ. ಇದೇ ಸಂಧರ್ಭದಲ್ಲಿ ಕೈಲಾಸದಿಂದ ಹೊರಟ ಸಪ್ತ ಮಾಲಿಕೆಯರುಗಳು ಮೊದಲು ಈ ಸ್ಥಳಕ್ಕೆ ಬಂದು ತಲುಪುತ್ತಾರೆ ಇಲ್ಲಿಗೆ ಬಂದ ನಂತರ ಮೊದಲು ಬೇಡನನ್ನು ಬೇಟಿಮಾಡಿದ ಅಂಬಿಕಾ ದೇವಿಯು ಬಗೆಬಗೆಯಾಗಿ ಉಪದೇಶ ಮಾಡಿ ಕ್ರಮೇಣ ಪರಮ ಭಕ್ತನನ್ನಾಗಿ ಪರಿವರ್ತಿಸಿ ಹಿಂಸಾ ಮಾರ್ಗವನ್ನು ಬಿಟ್ಟು ಮನುಷ್ಯ ನಾಗುತ್ತಾನೆ ಇದರಿಂದ ಈತನ ಆತಂಕ ತಪ್ಪುತ್ತದೆ. ಈ ಕಾರಣಕ್ಕೆ ಕೊಲ್ಲುತ್ತಿದ್ದ ಊರು ‘ಕೊಲ್ಲೂರು' ಎಂದು ಕರೆದಿರುತ್ತಾರೆ. ದುಶ್ಚಟವನ್ನು ಮೂಕ ಪ್ರೇತನನ್ನಾಗಿ ಪರಿವರ್ತನೆ ಮಾಡಿದ ಪ್ರೇರಣೆಯಿಂದ ಮೂಕ+ಅಂಬಿಕೆ = ಮೂಕಾಂಬಿಕೆ ಎಂತಲೂ ನೆಲಸಿ ಪ್ರಸಿದ್ದಿಯನ್ನು ಪಡೆದು ಇಂದು ಈ ಬಾಗದ ಜನರ, ರಾಜಕಾರಣಿಗಳ, ಕಲಾವಿದರ, ಆರಾಧ್ಯ ಧೈವವಾಗಿ ನೆಲೆಸಿರುತ್ತಾಳೆ. ಇದಾದ ನಂತರ ಉಳಿದ ಆರು ಜನ ಮಾಲಿಕೆಯರು ಕರ್ನಾಟಕದ ಆರು ದಿಕ್ಕುಗಳನ್ನು ಹಿಡಿದು ಹೊರಟು ಸ್ತ್ರೀ ಹೆಸರಿನ ಮುಖ್ಯ ನದಿ ಪಾತ್ರದ ಮುಖ ಜಾಲ ಸೀಮೆಗಳಲ್ಲಿ ನೆಲೆಯಾಗಿ ತಮ್ಮ ಶಕ್ತಿ ಪವಾಡಗಳಿಂದ ಆ ಸ್ಥಳದ ಜನರ ಎಲ್ಲಾ ತೊಂದರೆ, ಕಷ್ಟಗಳನ್ನು, ಪರಿಹಾರ ಮಾಡಿ ನಂಬಿಕೆ, ಧೈವ ಭಕ್ತಿ ನೆಲೆಯಾಗುವಂತೆ ಸಂಕಲ್ಪಮಾಡಿ ಹೊರಟವರಲ್ಲಿ ಮೂರನೇ ಮಾಲಿಕೆಯು ಅಲ್ಲಿಂದ ಉತ್ತರಾಭಿಮುಖವಾಗಿ ಹೊರಟು ಹೇಮಾವತಿ ನದಿ ತೀರದ ಈಗಿನ ಹಿರೇಬೆಳಗುಲಿ ಎಂಬ ಗ್ರಾಮಕ್ಕೆ ಆಗಮನವಾಗಿದ್ದು ಊರಿನ ಗಡಿ ಪ್ರದೇಶಕ್ಕೆ ಬಂದನಂತರ ಗ್ರಾಮದ ಒಳಕ್ಕೆ ಪ್ರವೇಶ ಮಾಡಿದ ಕ್ರಮವು ಬಹಳ ಕುತೂಹಲ ಕಾರಿಯಾಗಿರುವ ಬಗ್ಗೆ ………… ವಿವರವಾಗಿ ತಿಳಿಸಲಾಗಿರುತ್ತದೆ

ಹನ್ನೊಂದನೇ ಶತಮಾನದ ಆದಿಭಾಗದಲ್ಲಿ ನಮ್ಮ ಗ್ರಾಮಕ್ಕೆ ಯಾವಾಗಲೂ ಕ್ಷಾಮ, ಅಭಾವಗಳು, ಸಾಂಕ್ರಾಮಿಕ ರೋಗಗಳು ಮನುಷ್ಯರನ್ನು ಮತ್ತು ಜಾನುವಾರುಗಳನ್ನು ಬಲಿತೆಗೆದುಕೊಳ್ಳುತ್ತಿದ್ದೆವು, ಆವತ್ತಿನ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಮದ್ದುಗಳು ಇನ್ನೂ ಆವಿಷ್ಕಾರ ಗೊಂಡಿರಲಿಲ್ಲದ ಕಾರಣ ಜನರು ಮೂಡ ನಂಬಿಕೆಯಿಂದ ಹಾದಿ ಬೀದಿಯ ಮಾರಿ ಮಸಣಿಯರನ್ನು ಕರೆದು ಬೇವಿನ ಸೊಪ್ಪಿನಿಂದ ಮಂತ್ರ ಹಾಕಿಸುವುದು, ಶಾಸ್ತ್ರ ಕೇಳಿ ಪೂಜೆ ಹಾಕಿಸುವುದು ಮಾಡುತ್ತಿದ್ದರಿಂದ ತೊಂದರೆಗಳು, ರೋಗಗಳು ನಿಯಂತ್ರಣಕ್ಕೆ ಬಾರದೆ ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಸಾವಿಗೆ ತುತ್ತಾಗುತ್ತಿದ್ದವು. ಇದರಿಂದ ಪ್ರಕೃತಿಯ ಸಮತೋಲನವು ತಪ್ಪುತ್ತಾ ಬರುತ್ತದೆ.ಈ ಪರಿಸ್ಥಿತಿಯಲ್ಲಿ ಜನರಲ್ಲಿ ಭಯ, ಭೀತಿ, ಧಾರಿದ್ರ್ಯ ಹೆಚ್ಚಾಗುತ್ತದೆ ನೆಮ್ಮದಿಯಾಗಿ ಜೀವನ ಮಾಡಲು ಆಸೆ, ಉತ್ಸಾಹಗಳು ಇರುತ್ತಿರಲಿಲ್ಲವಾದ ಕಾರಣ ಕೆಲವರು ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ವಲಸೆ ಹೋಗುತ್ತಿದ್ದರು ದೈರ್ಯಮಾಡಿ ಉಳಿದವರು ಕೂಲಿ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿಕೊಂಡು ಜೀವನವನ್ನು ಸಾಗಿಸುವುದು ಅನಿವಾರ್ಯವಾಗಿದ್ದಿತ್ತು ಆಗಿನ ಕಾಲದಲ್ಲಿ ಹತ್ತಿರದಲ್ಲಿ ಅಂಗಡಿಗಳಾಗಲಿ, ಪೇಟೆಗಳಾಗಲಿ ಇರುತ್ತಿರಲಿಲ್ಲದ ಕಾರಣ ತಾವು ಬೆಳೆದ ರಾಗಿ ನವಣೆ, ಹುರುಳಿ, ಮುಂತಾದ ಕೃಷಿ ಉತ್ಪನ್ನಗಳನ್ನು ಅಲ್ಲಲ್ಲಿ ಸೇರುತ್ತಿದ್ದ ವಾರದ ಸಂತೆಗಳಲ್ಲಿ ಸರಕು ವಿನಿಮಯ ಮಾಡಿಕೊಳ್ಳುವುದು ಸಾಗಿಕೊಂಡು ಬರುತ್ತಿತ್ತು. ಇಂದಿಗೆ ಇಪ್ಪತೊಂದನೆ ತಲೆಮಾರಿನವರಾದ ಈ ಗ್ರಾಮದ ಹಿರಿಯರಾಗಿದ್ದ ಶ್ರೀ ಹಲಗೇಗೌಡ ಎಂಬುವವರು ಇದ್ದವರ ಪೈಕಿ ಧೃದಕಾಯಾಕರು, ಧೈವ ಭಕ್ಟರು,ವ್ಯವಹಾರ ಚತುರರು ಆಗಿದ್ದರು. ಆ ಕಾಲದಲ್ಲಿ ಇಲ್ಲಿ ಬೆಳೆಯುತ್ತಿದ್ದ ರಾಗಿ, ಹುರುಳಿ, ನವಣೆ, ಅವರೇ ಮುಂತಾದ ಧಾನ್ಯಗಳನ್ನು ವ್ಯಾಪಾರ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸುತ್ತಿದ್ದರು.ಮಾಮೂಲಿನಂತೆ ಒಂದು ಗುರುವಾರ ದಿನ, ಇಲ್ಲಿಗೆ ನಾಲ್ಕು ಮೈಲಿ ದೂರದ ಗುಡ್ಡದ ತಪ್ಪಲಿನ ಈಗಿನ ಕುಂಚೇವು ಎಂಬ ಗ್ರಾಮದ ಹತ್ತಿರ ವಿಶಾಲವಾದ ಮೈದಾನದಲ್ಲಿ ಸೇರುತ್ತಿದ್ದ ಸಂತೆಗೆ ಕಾಲುನಡಿಗೆಯಲ್ಲಿ ರಾಗಿ ಚೀಲವನ್ನು ಹೊತ್ತುಕೊಂಡು ಹೋಗುತಿದ್ದರು. ಆ ಕಾಲದಲ್ಲಿ ಎತ್ತಿನ ಗಾಡಿಗಳಾಗಲಿ, ಇತರೆ ವಾಹನಗಳು ಆವಿಷ್ಕಾರ ಗೊಂಡಿರಲಿಲ್ಲವಾದ್ದರಿಂದ ಕಾಲ್ನಡಿಗೆ ಅನಿವಾರ್ಯವಾಗಿತ್ತು. ಆ ದಿನದ ಸಂತೆಯಲ್ಲಿ ಗೌಡರ ಮಾಲು ಪೂರ ಖರ್ಚಾಗದೆ ಉಳಿದು ಬಿಡುತ್ತದೆ : ಉಳಿದಿದ್ದ ರಾಗಿ ಚೀಲವನ್ನು ಹೊತ್ತುಕೊಂಡು ಊರು ಕಡೆಗೆ ವಾಪಸ್ಸು ಬರಲು ಸ್ವಲ್ಪ ತಡವಾಗುತ್ತದೆ.ನಮ್ಮ ಗ್ರಾಮಕ್ಕೆ ಹತ್ತಿರದ ಈಗಿನ ಕೆರೆಕೋಡಿ ಇರುವ ಜಾಗವು ತುಂಬಾ ತಗ್ಗು ಪ್ರದೇಶಾಗಿತ್ತು ಆಗ ಕೆರೆ ಇರಲಿಲ್ಲ ಬೆಟ್ಟದ ತಪ್ಪಲಿನಿಂದ ಹುಟ್ಟಿದ ಒಂದು ನೀರಿನ ಹಳ್ಳ ಹರಿಯುತಲಿದ್ದಿತ್ತು ಈ ಜಾಗಕ್ಕೆ ಹಲಗೆ ಗೌಡರು ರಾಗಿ ಚೀಲವನ್ನು ಕೆಳಕ್ಕೆ ಇಟ್ಟು ಬಹಿರ್ದೆಶೆಗೆ ಹೋಗಿ ಬಂದು ದೇಹ ಶೌಚಮಾಡಿಕೊಂಡು ಹಳ್ಳದ ಸ್ವಲ್ಪ ಮೇಲುಭಾಗಕ್ಕೆ ಹೋಗಿ ಮುಖ ಕೈಕಾಲು ತೊಳೆದುಕೊಂಡು ನೀರನ್ನು ತಲೆಮೇಲಕ್ಕೆ ಪ್ರೋಕ್ಷಣೆ ಮಾಡಿಕೊಂಡು ಮನೆಕಡೆಗೆ ಹೊರಡುವುದು ಇವರ ಮಾಮೂಲಿ ಪದ್ದತಿಯಾಗಿತ್ತು ಈ ದಿನವೂ ಅದೇ ನಿಯಮಗಳನ್ನೆಲ್ಲ ಮಾಡಿಕೊಂಡು ಚೀಲವನ್ನು ಹೆಗಲಿಗೇರಿಸಿ ಹೊರಡಲು ಸಿದ್ದರಾದಾಗ ‘ನಾನು ಬರುತ್ತೇನೆ' ಎಂಬ ಅಶರೀರವಾಣಿಯು ಕೇಳಿ ಬರುತ್ತದೆ ಹಿಂದಿನ ವಾರಗಳಲ್ಲಿ ಈ ಜಾಗಕ್ಕೆ ಬಂದಾಗ ಈ ಅನುಭವ ಆಗಿರುವುದಿಲ್ಲ; ಈಗ ಗೌಡರು ಸ್ವಲ್ಪ ಧೈರ್ಯಗೆಡುತ್ತಾರೆ. ಸುತ್ತಲೂ ಕತ್ತಲು ಆವರಿಸಿದೆ ನರ ಸಂಚಾರವಿಲ್ಲ ಅಲ್ಲಲ್ಲಿ ಜೀರುಂಡೆಗಳ ಜೂಕರ, ನರಿಗಳು ಗುಳಿಡುವಿಕೆ, ಗೂಬೆಗಳು ಉಲಿಯುವಿಕೆ ಮರಗಳ ಮೇಲೆ ಬಾವುಲಿಗಳ ನಲಿಯುವಿಕೆ. ಇವುಗಳು ಮಾಮೂಲಿನ ಶಕುನಗಳು; ಆದರೆ ಈ ದಿನ ಈ ವಿಸ್ಮಯದಿಂದ ಭಯವುಂಟಾಗುತ್ತದೆ ಸ್ವಲ್ಪ ಕಣ್ಣು ಕವಿದಂತಾಗುತ್ತದೆ ಮೈ ಬೆವರುತ್ತದೆ, ಪುನ ಅದೇವಾಣಿಯು ಹಳ್ಳದ ಮೇಲುಭಾಗದಿಂದ ಕೇಳಿಬರುತ್ತದೆ ಇವರ ಪರಿಸ್ಥಿತಿಯನ್ನು ಅರಿತ ಆಗಂತಕರು, ಗೌಡರೇ ಹೆದರ ಬೇಡಿ ನಾನು ಒಬ್ಬ ರಕ್ಷಾದೇವತೆ ಕೊಂಕಣ ದೇಶದಿಂದ ಇಲ್ಲಿಗೆ ಬಂದಿರುತ್ತೇನೆ, ಈ ಮದ್ಯೆ ಎಲ್ಲೂ ಸರಿಯಾದ ನೆಲೆ ಸಿಗದೆ ಹೋದಕಾರಣ ಶರಣರು ಮುಟ್ಟಿದ ನಿಮ್ಮ ಗ್ರಾಮವು ಪವಿತ್ರ ತಾಣವೆಂದು ಇಲ್ಲಿಗೆ ಬಂದಿರುತ್ತೇನೆ ಹರಿಯುತ್ತಿರುವ ಹಳ್ಳದ ಬಲಭಾಗದ ನೀರಿನ ದಡದ ಮೇಲೆ ಮೂರು ರೂಪಿತ ಕಪ್ಪು ಶಿಲೆಗಳೊಳಗೆ ಜ್ಯೋತಿ ರೂಪದಲ್ಲಿ ಲೀನಳಾಗಿರುತ್ತೇನೆ ಬಹಳ ಹೊತ್ತಿನಿಂದ ಇಲ್ಲಿಗೆ ಬಂದು ಕಾದು ಕುಳಿತ್ತಿದ್ದೇನೆ, ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ ನಿಮ್ಮ ನಿಯಮಗಳಿಂದ ಆಚಾರವಂತರು, ಧೈವ ಭಕ್ತರು ಆಗಿರುವುದನ್ನು ಮನಗಂಡು ನಿಮ್ಮ ಮುಖಾಂತರ ಗ್ರಾಮದ ಒಳಗೆ ಪ್ರವೇಶಿಸಿ ನೆಲೆಯಾಗಿರಲು ಆಪೇಕ್ಷೇಪಟ್ಟು ಬಂದಿರುತ್ತೇನೆ; ನಿಮ್ಮ ಗ್ರಾಮವು ಪವಿತ್ರ ನದಿ ಉತ್ತಮ ಪರಿಸರ ಋಷಿ ಮುನಿಗಳ ತಪೋಭೂಮಿಯಾಗಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಗಿರಬಹುದು ಹಾಗೂ ಶಾಂತಿ ಪ್ರೀಯರೆಂದು ಊಹಿಸಿರುತ್ತೇನೆ; ಆದ್ದರಿಂದ ಇಲ್ಲಿ ನೆಲಸಿ ಜನ, ಜಾನುವಾರುಗಳ ನೆಮ್ಮದಿಗೆ ಮಾರಕವಾಗಿರುವ ದುಷ್ಟಮಾರಿಗಳನೆಲ್ಲ ಹೊರಕ್ಕೆ ಹಾಕಿ ದಾರಿದ್ರ್ಯವನ್ನು ದೂರ ಮಾಡಿ ಗ್ರಾಮದಲ್ಲಿ ಸುಖ, ಶಾಂತಿ ನೆಲಸುವಂತೆ ಮಾಡುವ ಸಂಕಲ್ಪದಿಂದ ಬಂದಿರುತ್ತೇನೆ; ನನ್ನ ವಿವಿಧ ಶಕ್ತಿಗಳ ಸಂಕೇತವಾಗಿರುವ ಈ ಮೂರು ಶೀಲಾಮೂರ್ತಿಗಳನ್ನು ಸಂತೆಯಿಂದ ಉಳಿದು ತಂದಿರುವ ರಾಗಿ ಚೀಲದೊಳಕ್ಕೆ ಇಟ್ಟು, ತೆಗದುಕೊಂಡು ಹೋಗಿ ನಿಮ್ಮ ಮನೆಯಲ್ಲಿ ಅದೇ ಚೀಲದ ಒಳಗಡೆ ಇಡಬೇಕು ಈ ವಿಚಾರ ರಾತ್ರಿ ಇಡೀ ಗುಪ್ತವಾಗಿರಬೇಕು. ನಂತರ ನನ್ನಲಿರುವ ಮೂರು ಶಕ್ತಿಗಳ ಮಹತ್ವವನ್ನು ತಿಳಿಸುತ್ತೇನೆ ಎಂಬ ಅಭಯವಾಣಿ ಕೇಳಿಬಂದ ಮೇಲೆ ಧೈವ ಪ್ರೇರಣೆಯಾದಂತೆ ಧೈರ್ಯ, ಭಕ್ತಿ ವುಂಟಾಗುತ್ತದೆ, ಆ ದಿನ ಜೇಷ್ಠ ಮಾಸದ ಶುಕ್ಲಪಕ್ಷ ಷಷ್ಠಿ ದಿನವಾಗಿದ್ದರಿಂದ ಚಂದ್ರನ ಹೊಂಬೆಳಕಿನೊಂದಿಗೆ ಪ್ರಕಾಶಿಸುತ್ತಿದ್ದ ನಕ್ಷತ್ರಗಳ ಕುಡಿಬೆಳಕಿನಲ್ಲಿ ಮಿಣುಕು ಹುಳಗಳ ತುಣುಕು ಬೆಳಕಿನಂತೆ ಹೊಳೆಯುತ್ತಿದ್ದ ಶಿಲಾರೂಪದಲ್ಲಿದ್ದ ದೇವಿಯ ಹತ್ತಿರಕ್ಕೆ ಬಂದು ಭಕ್ತಿಯಿಂದ ನಮಸ್ಕರಿಸಿ ಅಪ್ಪಣೆಯಾಗಿದ್ದಂತೆ ಮೂರು ಪ್ರತಿಮೆಗಳನ್ನು ಮೇಲಕ್ಕೆತ್ತಿ ರಾಗಿ ಚೀಲದಲ್ಲಿ ಇಟ್ಟುಕೊಂಡು ತಮ್ಮ ಮನೆಗೆ ಆಹ್ವಾನಿಸುತ್ತಾರೆ ಮತ್ತು ಬೆಳಕಾಗುವವರೆಗೂ ಈ ವಿಚಾರವನ್ನು ನಿಗುಡವಾಗಿ ಇಡುತ್ತಾರೆ. ಮನೆಗೆ ಬಂದ ನಂತರ ಶ್ರೀ ಹಲಗೇಗೌಡರಿಗೆ ಭಯ, ಆತಂಕ ಹಾಗೂ ದಿಗುಲು ಉಂಟಾಗುತ್ತದೆ; ಕಾರಣ ದಾರಿಯಲ್ಲಿ ಹೋಗುತ್ತಿದ್ದ ಯಾವನೋ (ಮಾರಿಯನ್ನು ಮನೆಗೆ ಕರೆದುಕೊಂಡು ಬಂದಿರುವುದರಿಂದ ಮುಂದೆ ಏನೋ ಎಂತೋ ? ) ಎಂಬ ಸಂಶಯ ಕಾಡುತ್ತದೆ ರಾತ್ರಿ ಊಟವನ್ನು ಮಾಡಲಿಲ್ಲ ಆವೇಶ ಬಂದವರಂತೆ ಮೌನವಹಿಸುತ್ತಾರೆ ಮಡದಿ ಶಿವಮ್ಮನಿಗೆ ಅನುಮಾನ ಬಂದು ವಿಚಾರಿಸಲಾಗಿ ನನಗೆ ಹಸಿವಿಲ್ಲ ಸಂತೆಯಲ್ಲಿ ಪಾಲಾಹಾರ ಸೇವಿಸಿ ಬಂದಿದ್ದೇನೆ ಈ ದಿನ ಒಂಟಿಯಾಗಿ ಮಲಗಲು ಬಿಡಿ ತುಂಬಾ ಆಯಾಸವಾಗಿದೆ ಎಂದು ಹೇಳಿ ತಾವು ಮಲಗುತ್ತಿದ್ದ ಕೊನೆಗೆ ಹೋಗಿ ಚಾಪೆಯ ಮೇಲೆ ಮಲಗಿ ಬಿಡುತ್ತಾರೆ; ಆದರೂ ಮನಸ್ಸಿಗೆ ಬಹಳ ದುಗುಡವುಂಟಾಗಿದ್ದರಿಂದ ನಿದ್ರೆ ಹತ್ತಲಿಲ್ಲ ಹಾಗೆ ಯೋಚಿಸುತ್ತಾ ಭಾವನಾಲೂಕದಲ್ಲಿ ಲೀನರಾಗಿದ್ದಾಗ ಸ್ವಲ್ಪ ಜೊಂಪುಬರುತ್ತದೆ. ಆಗ ಶ್ರೀ ದೇವಿಯವರು ಛಾಯಾ ರೂಪದಲ್ಲಿ ಗೌಡರ ಮನಸ್ಸಿನ ಮೇಲೆ ಬಂದು ಹೇಳಿದಂತೆ ನಾನು ಜಗನ್ಮಾತೆ ಪಾರ್ವತಿದೇವಿಯವರ ವರಕನ್ಯೆ ಧೈವ ಸಂಕೇತವಾದ ಆಕಾರಗೊಂಡಿರುವ ಮೂರು ಕಪ್ಪು ಶೀಲಾ ಪ್ರತಿಮೆ ರೂಪದಲ್ಲಿ ಈ ಗ್ರಾಮಕ್ಕೆ ನೆಲಸುವ ಆಕಾಂಕ್ಷಿಯಾಗಿ ಬಂದಿರುತ್ತೇನೆ; ನೀವು ಹಳ್ಳದ ನೀರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾಗ ಮಧ್ಯಭಾಗದಲ್ಲಿ ಹೊಳೆಯುತ್ತಿದ್ದ ದೊಡ್ಡ ಪ್ರತಿಮೆಯೊಳಗೆ ಲೀನಗೊಂಡಿರುವ ನನ್ನ ಮೂಲ ನಾಮಧೇಯ ಶ್ರೀ ಉಡಿಶೀಲಮ್ಮ ನೆಂದು ನನ್ನ ಬಲಲಭಾಗಕ್ಕೆ ಇದ್ದ ಪ್ರತಿಮೆಯೊಳಗೆ ನನ್ನ ಇಷ್ಟೊಂದು ಶಕ್ತಿ ಮಾರಿಕಾಚಿ ಎಂಬುದಾಗಿಯೂ ಮತ್ತು ನನ್ನ ಎಡಭಾಗಕ್ಕೆ ಇರುವ ಪ್ರತಿಮೆಯೊಳಗೆ ಮೂರನೆ ಶಕ್ತಿಯಾಗಿ ಶ್ರೀ ದೇವಿರಮ್ಮನೆಂತಲೂ ಜ್ಯೋತಿ ರೂಪದಲ್ಲಿ ಲೀನಗೊಂಡಿರುವ; ಈ ಮೂರು ವಿವಿಧ ಶಕ್ತಿಯನ್ನು ಹೊಂದಿದ್ದು ನಿಮ್ಮ ಗ್ರಾಮದಲ್ಲಿ ಗ್ರಾಮದೇವತೆ ಎಂಬ ನಾಮಸ್ಮರಣೆಯಿಂದ ಕರೆಸಿ ಕೊಳ್ಳುತ್ತೇನೆ. ಹಳ್ಳದ ನೀರಿನ ದಡದಲ್ಲಿ ಯಾವರೀತಿಯಲ್ಲಿ ಕುಳಿತ್ತಿದ್ದಾನೋ ಹಾಗೆ ಶ್ರೀ ಉಡಿಶೀಲಮ್ಮ ಎಂಬ ನಾಮೋಂಕಿತದ ದೊಡ್ಡದಾಗಿರುವ ಶೀಲಾ ಪ್ರತಿಮೆಯನ್ನು ಮಧ್ಯಭಾಗಕ್ಕೂ ಗ್ರಾಮದಲ್ಲಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಲು ಅನುಕೂಲವಾಗಿರುವಹಾಗೆ ತಲೆಯಭಾಗವು ಮತ್ತವಾಗಿರುವ ನನ್ನ ಎರಡನೇ ಶಕ್ತಿ ಶೀಲಾ ಪ್ರತಿಮೆಯನ್ನು ನನ್ನ ಬಲಭಾಗಕ್ಕೂ ನನ್ನ ಕರುಣೆ ತೀಕ್ಷ್ಣ ದೃಷ್ಠಿಯ ಸಂಕೇತವಾಗಿರುವ ತಲೆಯ ಭಾಗವು ಸ್ವಲ್ಪ ನನ್ನ ಕರುಣೆ, ತೀಕ್ಷ್ಣ ದೃಷ್ಟಿಯ ಸಂಕೇತವಾಗಿ ತಲೆಯ ಭಾಗವು ಸ್ವಲ್ಪ ಮೊನಚಾಗಿರುವ ಮೂರನೇ ಶಕ್ತಿಯ ಶೀಲಾ ಪ್ರತಿಮೆಯನ್ನು ಎಡಭಾಗಕ್ಕೂ ಗ್ರಾಮದ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಬೆಳೆದು ನಿಂತಿರುವ ವಿಶಾಲವಾದ ವಟವೃಕ್ಷ (ಆಲದಮರ) ದ ಕೆಳಕ್ಕೆ ನಿಮ್ಮ ಅನುಭವದಲ್ಲಿರುವ ದೇವರ ಬನ ದಲ್ಲಿ ಪೂರ್ವಾಭಿಮುಖವಾಗಿ ಸ್ಥಾಪನೆ ಮಾಡ ಬೇಕು ನಾಳೆಯಿಂದ ಜೇಷ್ಠ ಮಾಸದ ಸಪ್ತಮಿ ತಿಥಿ ರೋಹಿಣಿ ನಕ್ಷತ್ರವಿದ್ದು ಶುದ್ಧ ಶುಕ್ರವಾರ ವಿರುವುದರಿಂದ ಬಹಳ ಶುಭವಾಗಿರುತ್ತದೆ. ಈ ದಿನ ಉದಯ ವೇಳೆಯಲ್ಲಿ ಸೂರ್ಯ ದೇವನ ಹೊಂಗಿರಣಗಳು, ನನ್ನ ಪ್ರತಿಮೆಗಳ ಮೇಲೆ ಬೀಳುವುದರಿಂದ ಇನ್ನೂ ಹೆಚ್ಚಿನ ಯೋಗ ಶಕ್ತಿ ಲಬಿಸುತ್ತದೆ ಹಾಗೂ ಸೌಂದರ್ಯ ಪ್ರಭಾವಗಳು ಮೈಗೂಡಿಕೊಳ್ಳುತ್ತದೆ; ಎಂದು ಆದೇಶ ವಾಗುತ್ತದೆ. ನೀವು ಬ್ರಾಹ್ಮೀಕಾಲದಲ್ಲಿ ಎದ್ದು ನಿಮ್ಮ ನಿತ್ಯ ಕರ್ತವ್ಯಗಳನೆಲ್ಲ ಮುಗಿಸಿ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ನಂತರ ನನ್ನ ಶಕ್ತಿಯ ಶಿಲಾಪ್ರತಿಮೆಗಳನ್ನು ರಾಗಿ ಚೀಲದಿಂದ ಹೊರಕ್ಕೆ ತೆಗದು ಒಂದು ದೊಡ್ಡ ಹರಿವಾಣದಲ್ಲಿಟ್ಟು ಮನೆಯಲ್ಲಿರುವ ಎಳ್ಳು ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಜ್ಜನ ಮಾಡಿರಿ ಕೆಲವು ಸಮಯ ಬಿಟ್ಟು ನಿರ್ಣಾಯಕವಾಗಿ ಅಭಿಷೇಕದ ಪರಿಕರಗಳನ್ನು ಬಳಸಿ ಕಳಾನಭಿಷೇಕ ಮಾಡಿರಿ ಆಗ ನನ್ನ ಪ್ರತಿಮೆಗಳೊಳಗೆ ಚೀತ್ಕಳೆ(ಜ್ಯೋತಿ) ಕಾಣುತ್ತದೆ. ಈ ಚೀತ್ಕಳೆಯನ್ನು ತದೇಕ ಸೃಷ್ಟಿಯಿಂದ ನೋಡುತ್ತಿದ್ದರೆ ಅವರೊಳಗೆ ನನ್ನ ಸುಂದರರೂಪವು ಕಾಣುತ್ತದೆ ಕಾರಣ ಪೂಜಾ ವೇಳೆಯಲ್ಲಿ ಮಜ್ಜನ ಮಾಡಿ, ಅಭಿಷೇಕ ಮಾಡಿ ಆರಾದಿಸುವುದು ಸೂಕ್ತವಾದುದ್ದು ನಂತರ ಕುಲ ಪುರೋಹಿತರ ಮಾಂತ್ರ ಘೋಷಣೆಯೊಂದಿಗೆ ವಿಧಿ ವಿಧಾನಗಳ ಪ್ರಕಾರ ಧೈವ ಶಕ್ತಿಯನ್ನು ಪ್ರತಿಮೆಗಳಿಗೆ ಕೊಟ್ಟಿ ನಿಮ್ಮ ಮನೆಯಲ್ಲಿ ಅವು ಪೂಜೆಯನ್ನು ಮಾಡಿ ತಳಿಗೆ ಅರ್ಪಿಸಿದರೆ ತೃಪ್ತಳಾಗುತ್ತೇನೆ ಈ ಎಲ್ಲಾ ಪ್ರಕ್ರಿಯೆಗಳು ಬೆಳಗಿನ 6-30 ಘಂಟೆ ಗೊಳಗಾಗಿ ಮುಗಿಸಬೇಕು ಎಂದು ತಮ್ಮ ಸ್ಥಾಪನೆಯ ವಿಧಾನಗಳನ್ನೆಲ್ಲ ತಿಳಿಸಿದಂತಾದ ಮೇಲೆ ತನ್ನಲ್ಲಿರುವ ಮೂರು ಶಕ್ತಿ ಪ್ರಭಾವಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಪ್ರಭಾವ ಗಳ ಬಗ್ಗೆ ಹೇಳುತ್ತಾ ಯಾರು ಶ್ರದ್ದೆ, ಭಕ್ತಿ, ನಂಬಿಕೆ ಇಂದ ನನ್ನನ್ನು ಆರಾಧಿಸುತ್ತಾರೋ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ, ಉತ್ತಮ ದಾಂಪತ್ಯ ಭಾಗ್ಯ ಹಾಗೂ ಸಮೃದ್ದ ಜೀವನವನ್ನು ಶ್ರೀ ಉಡಿಶೀಲಮ್ಮ ಶಕ್ತಿಯಾಗಿಯೂ ನನ್ನ ಬಗ್ಗೆ ಉತ್ತಮ ಆಚಾರ, ನಿಷ್ಟೆಯಿಂದ ಸೇವೆಯನ್ನು ಮಾಡುತ್ತಾರೋ ಅಂತಹವರನ್ನು ಕಾಡುವ ದುಷ್ಟ ಪಿಡುಗುಗಳಾದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ದುಷ್ಟ ಮಾರಿಗಳನ್ನು ಹೊರ ಹಾಕುವ ಎರಡನೇ ಶಕ್ತಿ ಶ್ರೀ ಮಾರಿಕಾಂಬೆ ಯಾಗಿಯೂ ಗ್ರಾಮದಲ್ಲಿ ತಾಂಡವ ಮಾಡುತ್ತಿರುವ ಅಜ್ಞಾನ, ಧಾರಿದ್ರ್ಯ, ಮೂಡನಂಬಿಕೆ ಮತ್ತು ಅಭಾವ ಗಳನ್ನು ನಿವಾರಣೆ ಮಾಡಿ ಆರೋಗ್ಯ ಸಮೃದ್ದಿ ಸುಜ್ಞಾನವನ್ನು ಮೂರನೇ ಶಕ್ತಿಯಾಗಿ ಶ್ರೀ ದೇವೀರಮ್ಮ ನಾಗಿಯೂ ಕರ್ತವ್ಯಗಳನ್ನು ಕಾಲ ಕಾಲಕ್ಕೆ ನಿರ್ವಹಿಸುತ್ತಿರುತ್ತೇನೆ. ನನ್ನನ್ನು ನಿಮ್ಮ ಗ್ರಾಮದಲ್ಲಿ ಸ್ಥಾಪನೆಮಾಡಿದ ದಿನದಿಂದ ಪ್ರತಿ ವರ್ಷವೂ ಬಂಡಿ ಹಬ್ಬ ಎಂದು ಪರಿಷೆಯನ್ನು ಮಾಡಿ ಆ ಒಂದು ವರ್ಷದಲ್ಲಿ ಅನಧಿಕೃತವಾಗಿ ಗ್ರಾಮದ ಒಳಗಡೆಗೆ ನುಸುಳಿ ಬಂದು ಜನ, ಜಾನುವಾರುಗಳು ಕಾಡುವ ಎಲ್ಲ ದುಷ್ಟ ಮಾರಿಗಳನ್ನು ತಮಟೆ ವಾದ್ಯ ಶಬ್ದ ಗಳಿಂದ ಎಚ್ಚಿಸಿ ಅವುಗಳನೆಲ್ಲ ಊರಿನ ಹೆಬ್ಬಾಗಿಲಿಗೆ ಕರೆತಂದು ಸಿದ್ದ ಮಾಡಿದ ಬಂಡಿಯಲ್ಲಿ ತುಂಬಿ ಮಾರಿಗಳಿಗೆಪ್ರಿಯವಾದ ಬಿಳಿ ಬಣ್ಣದ ಬಟ್ಟೆಯಿಂದ ಕೆಳಕ್ಕೆ ಜಿಗಿಯದಂತೆ ಬಂದಿಸಿ ಇವುಗಳಿಗೆ ಪ್ರಿಯವಾದ ಖಂಡಾ ಹಾರದ ತದ್ರೂಪ ಶಾವಿಗೆ ಪರ್ಪನ್ನು ಎಡೆ ಇತ್ತು ಪೂಜಿಸಿ ಕೂಸ್ಮಂಡದಿಂದ ಬಂಡಿಗೆ ದಿಗ್ಬಾಂದನಮಾಡಿ ಅದನ್ನು ಬಲಿಕೊಟ್ಟು ನಂತರ ಗಾಡಿಯಲ್ಲಿ ಭದ್ರಗೊಳಿಸಿ ಹಳ್ಳಿವಾದ್ಯ ಪ್ರತಿ ಮನೆಯ ಎಡೆಯನ್ನು ಹೊತ್ತ ಭಕ್ತರು ಬಂಡಿಯನ್ನು ಸುತ್ತುವರಿದು ಎಳೆದುತಂದು ನನ್ನ ಸನ್ನಿಧಿಗೆ ಒಪ್ಪಿಸಿ; ಇವುಗಳು ನನ್ನ ಹಿಡಿತಕ್ಕೆ ಬಂದ ಮೇಲೆ ಭಕ್ತರು ತಂದ ಶಾವಿಗೆ ಪರ್ಪನ್ನು ೧೦೧ ಮಾರಿಗಳಿಗೆ ಎಡೆ ಇತ್ತು ಪೂಜಿಸಿ ನಮ್ಮ ಮನೆಯ ಕಷ್ಟಕ್ಕೆ ಬರಬೇಡ ಸುಖಕ್ಕೆ ಬಾ ಎಂದು ಪ್ರಾರ್ಥನೆಯ ಮಾಡಿ ಈ ಮಾರಿಗಳಿಗೆ ಆರ್ಫಿಸಿದರೆ; ತೃಪ್ತಗೊಳ್ಳುತ್ತಾರೆ ನಂತರ ಇವರನೆಲ್ಲ ಗ್ರಾಮದಿಂದ ಹೊರಕ್ಕೆ ಓಡಿಸಿ ಜನ, ಜಾನುವಾರುಗಳು ಆರೋಗ್ಯ ನೆಮ್ಮದಿಯಿಂದ ಇರುವಂತೆ ಬೆಂಗಾವಲಾಗಿರುತ್ತೇನೆ ಇಂದಿನ ದಿನದಿಂದ ನಿಮ್ಮ ಸಂತತಿಯವರು ಪ್ರತಿ ಶುಕ್ರವಾರ ತಪ್ಪದೆ ನನಗೆ ಪೂಜೆ, ನೈವೇದ್ಯ, ಸಲ್ಲಿಸಲು ಕ್ರಮವು ನಿರಂತರ ವಾಗಿ ನೆಡೆದುಕೊಂಡು ಬರಬೇಕು, ನನ್ನನ್ನು ಆರಾಧಿಸುವ ವಿಷಯದಲ್ಲಿ ಯಾರು ಅಲಕ್ಷ ಮಾಡುತ್ತಾರೋ ಅಂತವರನ್ನು ನಾನು ಸಹ ಅಲಕ್ಷ ಮಾಡುತ್ತೇನೆ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿ ನಾನು ಪ್ರಸ್ತುತ ಪಡಿಸಿರುವ ಎಲ್ಲ ನಿಯಮಗಳನ್ನು ಕೊಡಲೇ ಕಾರ್ಯರೂಪಕ್ಕೆ ತರಲು ಗೌಡರಿಗೆ ಶಕ್ತಿ, ಜ್ಞಾನವನ್ನು ಕೊಟ್ಟು ಅದೃಶ್ಯ ವಾದಂತೆ ಪ್ರೇರಣೆಯಾಗುತ್ತದೆ. ಆ ರಾತ್ರಿಎಲ್ಲ ಶ್ರೀ ದೇವಿಯವರು ಹಲಗೇಗೌಡರ ಕನಸಿಗೆ ಆವೇಶವಾಗಿ ಬಂದು ಎಲ್ಲ ವಿಷಯಗಳನ್ನು ತಿಳಿಸಿದ ವಿಸ್ಮಯವನ್ನು ತಿಳಿದು ಜಾಗೃತವಸ್ಥೆಗೆ ಬಂದ ಕೂಡಲೇ ಎಚ್ಚರ ಉಂಟಾಗುತ್ತದೆ; ಕೂಡಲೇ ಎದ್ದು ಹೊರಕ್ಕೆ ಬಂದು ನೋಡುತ್ತಾರೆ ಎಲ್ಲವೂ ಯಥಾಸ್ತಿತಿ ಆಗಲೇ ಮೂಡಣ ಕೆಂಪಾಗಿದ್ದು ದಿನಕರನ ಆಗಮನದ ಛಾಯೆ ಕಂಡುಬರುತ್ತದೆ ರಾತ್ರಿ ಇಡೀ ಕಂಡ ಸಂಗತಿ ಇಂದ ತುಂಬಾ ಬಾವುಕರಾಗಿ ಶ್ರದ್ದಾ ಭಕ್ತಿಯಿಂದ ಕಾರ್ಯೋನ್ಮುಖರಾಗುತ್ತಾರೆ, ತಮ್ಮ ಶುಚೊಪಚಾರಗಳನ್ನೆಲ್ಲ ಮುಗಿಸಿಕೊಂಡು ಸ್ನಾನಕ್ಕೆ ವ್ಯವಸ್ಥೆ ಮಾಡಿ ಪೂಜೆಗಾಗಿ ಬಗೆ ಬಗೆಯ ಪುಷ್ಪ ಪತ್ರೆಗಳನ್ನು ಅರಸಿ ತಂದು ಇಡುತ್ತಾರೆ, ನಂತರ ರಾಗಿ ಚೀಲದ ಒಳಗಡೆಯಿಂದ ಧೈವ ಬಿಂಬಿತ ವಿಗ್ರಹಗಳನ್ನು ಹೊರಕ್ಕೆ ತೆಗದು ದೇವಿಯವರ ಆಪೇಕ್ಷೆಯಂತೆ ದೊಡ್ಡ ಹರಿವಾಣದಲ್ಲಿ ಸ್ಥಾಪಿಸಿ ಮೊದಲು ಎಣ್ಣೆ ಮಜ್ಜನ ಮಾಡಿ ಅಗತ್ಯ ಪೂಜಾ ಸಾಮಗ್ರಿಗಳನ್ನು ಸಿದ್ದತೆ ಮಾಡುತ್ತಾರೆ ನಂತರ ಸ್ನಾನ ಮಾಡಿ ಶುಚಿಭೂತರಾಗಿ ಮನೆಯವರನ್ನು ಏಳಿಸುತ್ತಾರೆ; ಈ ದಿನದಿಂದ ನಮ್ಮ ಕುಟುಂಬಕ್ಕೆ ಹೊಸ ಪರ್ವ ಆರಂಭವಾಗಿದೆ, ಎಲ್ಲರೂ ಬೇಗ ಸ್ನಾನಾದಿಕ್ರಮಗಳಿಂದ ಸಿದ್ದರಾಗಿ ಎಂಬುದಾಗಿ ತಿಳಿಸಿದಂತೆ ಕುತೂಹಲ ಸಂಶಯ ಉಂಟಾಗುತ್ತದೆ ಯಜಮಾನರ ಆದೇಶದಂತೆ ಎಲ್ಲರೂ ಸಿದ್ದರಾದ ಮೇಲೆ ತಾವು ಮಲಗಿದ್ದ ಕೋಣೆಗೆ ಕರೆದುಕೊಂಡು ಹೋಗಿ ಹರಿವಾಣದಲ್ಲಿ ಇಡಲಾಗಿದ್ದ ಲಿಂಗಾಕಾರದ ಮೂರು ಕಪ್ಪು ವಿಗ್ರಹಗಳನ್ನು ತೋರಿಸುತ್ತಾ ನಿನ್ನೆ ಸಂಜೆಯಿಂದ ರಾತ್ರಿಯಿಡೀ ಶ್ರೀ ಉಡಿ ಶೀಲಮ್ಮ ನೆಂಬ ಆವೇಶವಾಗಿ ಬಂದು ತಮ್ಮ ಶಕ್ತಿ ಪವಾಡ ಆಚರಣೆಗಳ ಬಗ್ಗೆ ತಿಳಿಸಿ ಅಂತರ್ಧಾನಳಾದ ವಿಚಾರವನ್ನು ತುಂಬಾ ಬಾವುಕರಾಗಿ ತಿಳಿಸುತ್ತಾರೆ.ಈ ವಿಸ್ಮಯವನ್ನು ಕೇಳಿದ ಮನೆಯವರಿಗೆ ನಂಬಿಕೆ ಭಕ್ತಿ ಉಂಟಾಗಿ ಮುಂದಿನ ಕಾರ್ಯಗಳಿಗೆ ಸಿದ್ಧರಾಗುತ್ತಾರೆ ಈ ವಿಚಾರವು ಕೇರಿಯವರಿಗೆಲ್ಲ ಹರಡಿ ಕುತೂಹಲ ಭರಿತರಾಗಿ ಗೌಡರ ಮನೆಗೆ ಬಂದು ಹರಿವಾಣದಲ್ಲಿ ಇಡಲಾಗಿದ್ದ ದೇವಿಯಪ್ರತಿಮೆಗಳನ್ನು ಶ್ರದ್ದೆ, ಭಕ್ತಿಯಿಂದ ದರ್ಶನ ಮಾಡಿ ಇಲ್ಲಿಗೆ ಪಾದಾರ್ಪಣೆ ಮಾಡಿದಾಗ ವಿಚಾರವನ್ನು ಗೌಡರಿಂದ ತಿಳಿದು ಉತ್ಸಾಹ, ಸಂತೋಷದಿಂದ ದೇವಿಯವರ ಸೇವೆಯನ್ನು ಮಾಡಲು ಸಿದ್ದರಾಗುತ್ತಾರೆ; ಅಪ್ಪಣೆಯಾದಂತೆ ದೇವರ ಬನವನ್ನು ಸ್ವಚ್ಛಮಾಡಿ ಕೇರಿಯಿಂದ ಬನದವರೆಗೆ ಗುಡಿಸಿ ನೀರು ಹಾಕುವುದು ತಳಿರು ತೋರಣಗಳಿಂದ ಅಲಂಕಾರ ಮಾಡುವುದು ಬನಕ್ಕೆ ಚಪ್ಪರ ಹಾಕುವುದು ಮುಂತಾದ ಕೆಲಸಗಳನ್ನು ಪರಸ್ಪರ ಸಹಕಾರದಿಂದ ಹಾಗೂ ಸಂಭ್ರಮಗಳಿಂದ ಮಾಡುತ್ತಾರೆ ಶ್ರೀ ದೇವಿಯವರ ಅಪೇಕ್ಷೆಯಂತೆ ಪುರೋಹಿತರ ಸಲಹೆಯ ಪ್ರಕಾರ ಮನೆಯಲ್ಲಿ ಸರಳವಾದ ಅಗ್ರಪೂಜೆಯನ್ನು ಮಾಡಿ ಆರತಿ ಮಾಡಿದ ನಂತರ ದೇವರು ದುಂಬಿತ ಹರಿವಾಣವನ್ನು ಈ ವ್ಯವಸ್ಥೆಗೆಲ್ಲ ಕಾರಣ ಕರ್ತರಾದ ಹಲಗೇಗೌಡರ ತಲೆಯ ಮೇಲೆ ಹೊತ್ತು ಮೂಡಣ ದಿಕ್ಕಿನತ್ತ ಹೇಮಾವತಿ ನಡಿಗೆ ಬಿಜಯಂಗೈದು; ಗಂಗಾಸ್ನಾನದಲ್ಲಿ ಪುರೋಹಿತರ ವಿಧಿ ವಿಧಾನಗಳ ಪ್ರಕಾರ ದೇವಿಯವರಿಗೆ ದೈವತ್ವವನ್ನು ಕೊಟ್ಟು ದಶಕುಂಭಗಳನ್ನು ದೇವಿ ಕಲಶವನ್ನು ಸ್ಥಾಪಿಸಿ ವನಿತೆಯರಿಗೆಲ್ಲ ಹೂವಿನ ಕಂಕಣ ಕಟ್ಟಿ, ಮುತ್ತೈದೆಯರಿಂದ ಪಂಚ ಪೂಜೆಯಾದ ಮೇಲೆ ಎಲ್ಲಾ ಮಾನಿನಿಯರಿಗೂ ಮಡಿಲನ್ನು ತುಂಬಿ, ಒಬ್ಬ ಮಾನಿನಿಯ ದೇವಿಕಲಶ ಹತ್ತು ಜನ ವನಿತೆಯರಿಂದ ಪೂರ್ಣಕುಂಭ ಹಾಗೂ ಗೌಡರಿಂದ ಪ್ರತಿ ಮೇಗಳನ್ನಿಟ್ಟು ಹರಿವಾಣ ತಲೆಯ ಮೇಲೆ ಹೊತ್ತು ದಾರಿಯುದ್ದಕ್ಕೂ ಪಕ್ಷಾಮಡಿಯ ಮೇಲೆ ಘಂಟೆಯಿಂದ ಮಂತ್ರ ಘೋಷಣೆ ಮಾಡುತ್ತಾ ಸಿದ್ದಪಡಿಸಲಾಗಿದ್ದ ದೇವರ ಬನಕೆ ತರುತ್ತಾರೆ ಶ್ರೀ ದೇವಿಯವರನ್ನು ಸ್ಥಾಪನೆ ಮಾಡುವ ಜಾಗಕ್ಕೆ ಗೋಮಯ ಪಾದೋದಕಗಳಿಂದ ದೋಷರಹಿತವನ್ನಾಗಿ ಮಾಡಿ ದೇವಿಯ ದಾನ್ಯ ಸ್ತಂಬನದ ಮುಖಾಂತರ ಬಂದಿದ್ದರಿಂದ ಚೀಲದಲ್ಲಿದ್ದ ರಾಗಿಯನ್ನು ಗದ್ದುಗೆಯಂತೆ ಹರಡಿ ಕಲಶ ಹಾಗೂ ಪೂರ್ಣ ಖೊಂಬಗಳನ್ನು ಈ ಗದ್ದುಗೆಯ ಮೇಲೆ ಸ್ಥಾಪಿಸಿ ಹರಿವಾಣವನ್ನು ಪಕ್ಷಕ್ಕೆ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಎಣ್ಣೆ ಮಜ್ಜನ ಮಾಡಿದ್ದರಿಂದ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ ಪ್ರತಿಮೆ ಗಳೊಳಗೆ ಚೀತ್ಕಲೆ ಕಾಣುವಂತೆ ಹೊಳಪು ಹೋಳಿಸಿದಾನಾಂತರ ಗದ್ದುಗೆಯ ಮೇಲೆ ಸ್ಥಾಪನೆ ಮಾಡಿದ ಮೇಲೆ ಮಧ್ಯಕ್ಕೆ ಶ್ರೀ ಉಡಿಶೀಲಮ್ಮ ಎರಡನೇ ಶಕ್ತಿ ಸಂಕೇತ ಮಾರಿಕಾಂಬೆಯನ್ನು ಬಲಭಾಗಕ್ಕೂ ಮತ್ತು ಮೂರನೇ ಶಕ್ತಿ ಸಂಕೇತ ದೇವೀರಮ್ಮನವರನ್ನು ಎಡ ಭಾಗಕ್ಕೂ ಪೂರ್ವಾಭಿಮುಖವಾಗಿ ಸ್ಥಿರಗೊಳಿಸುತ್ತಾರೆ ಎರಡು ಬದಿಗೂ ಕೈ ಎಣ್ಣೆ ದೀಪ ಹಚ್ಚಿಟ್ಟು ಪ್ರಕಾಶಮಾನ ಗೊಳಿಸಿ, ಹೊಳಪುಗೊಳಿಸಿ ಪ್ರತಿಮೆಗಳೊಳಗೆ ಚೀತ್ಕಲೆ ಕಾಣುವಂತೆ ವ್ಯವಸ್ಥೆಯಾಗುತ್ತದೆ ಪೋರೋಹಿತರ ಮಂತ್ರೋಪದೇಶ ಗಳ ಆಗರವಾಗಿ ರುದ್ರ ಹೋಮವಾಗುತ್ತದೆ ನಂತರ ಗಣಪತಿ ಪೂಜೆ, ಕಲಶ,ಕುಂಭಗಳಿಗೆ, ಪೂಜೆಯೊಂದಿಗೆ ದೇವಿಯವರಿಗೆ ನವ ವಿಧಧ ಪುಷ್ಪಗಳಿಂದ ಅಲಂಕರಿಸಿ ದೈವ ಕಲೆಯನ್ನು ತುಂಬಿ ಪೂಜಿತರನ್ನಾಗಿ ಮಾಡಿದ ಮೇಲೆ ಮಹಾಪೂಜೆ, ಮಂಗಳಾರತಿ, ಪಂಚಾಮೃತತಗಳಿಗೆ ಅರ್ಪಣೆ ಹಣ್ಣು ಕಾಯಿ ಬೆಲ್ಲದ ನೈವೇದ್ಯ ಆದ ಮೇಲೆ ಆರು ತೋಳು ಬಲಗಳನ್ನೂ ಸರ್ವಶಕ್ತಿಯನ್ನು ಹೊಂದಿರುವ ಗ್ರಾಮದ ಅಧಿದೇವತೆ ಶ್ರೀ ಗ್ರಾಮದೇವತೆ ಎಂಬ ಒಂದೇ ಅರ್ಥದ ರೂಡಿ ನಾಮದಿಂದ ನಾಮಕರಣ ಮಾಡಲಾಯಿತು; ನೆರದಿದ್ದ ಭಕ್ತ ಸಮೂಹವು ಜನ ಮನದ ಜಯದೇವಿ ಶ್ರೀ ಗ್ರಾಮದೇವತೆ ಎಂಬುದಾಗಿ ಸಾಮೂಹಿಕವಾಗಿ ಜನ ಘೋಷಣೆಮಾಡುತ್ತಾರೆ. ಈ ಪ್ರಕ್ರಿಯೆಗಳೆಲ್ಲ ಮುಗಿದನಂತರ ಭಕ್ತರ ಮನೆ ಗಳಿಂದ ಬಂದಿದ್ದ ತಳಿಗೆ ಪದಾರ್ಥಗಳು( ಅಕ್ಕಿ ಬೆಲ್ಲ) ಬಾಳೆ ಹಣ್ಣು ತೆಂಗಿನ ಕಾಯಿ ಸೇವೆಯನ್ನು ಮಾಡಿ ಎಲ್ಲರಿಗೂ ತೀರ್ಥ, ಪ್ರಸಾದವನ್ನು ಕೊಟ್ಟು ಪುನೀತರನ್ನಾಗಿ ಮಾಡಿದ ಸಂಭಂದ ಗ್ರಾಮದಲ್ಲಿ ಇಂತಹ ಸತ್ಕಾರ್ಯವು ಅನಿರೀಕ್ಷಿತವಾಗಿ ನೆರವೇರಿದ್ದರಿಂದ ನಂಬಿಕೆ, ಭಕ್ತಿ, ಸಂತೋಷವೂ ಭಕ್ತರಲ್ಲಿ ನೆಲೆಯಾಗಿ ಉಳಿದಿದೆ. ಶ್ರೀ ದೇವಿಯವರು ಕಿರು ಧಾನ್ಯದಿಂದ ರಾಗಿಯ ಗದ್ದುಗೆಯ ಮೇಲೆ ಆಸೀನರಾಗಲು ಇಷ್ಟ ಪಟ್ಟಿದ್ದು ಬಹಳ ಮಹತ್ವವನ್ನು ಪಡೆದುಕೊಂಡಿದೆ ರಾಗಿ ಎಂಬ ಸಂಭವನೀಯ ವಾಕ್ಯವು ಭಕ್ತಿಯ ನೆಲೆಗಟ್ಟಿನ ಮೇಲೆ ಬಂದಿರಬಹುದೆಂಬ ನಂಬಿಕೆಯಾಗಿದೆ; ಹೇಗೆಂದರೆ ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಪ್ರಸಾದ ಮಯವಾಗಿ ಸೇವನೆ ಮಾಡುವವರು ಶ್ರೀ ದೇವಿಯವರು ಆಶೀರ್ವಧಿಸಿದಂತೆ. ಭಕ್ತಿವಂತರಾಗಿ ನಿಷ್ಟೆಯಿಂದ ಪೂಜೆಮಾಡುವವರಿಗಾಗಿ ನಂಬಿಕೆಯುಳ್ಳವರಾಗಿ, ಜ್ಞಾನಳ್ಳವರಾಗಿ, ಶಕ್ತಿವಂತರಾಗಿ, ಆರೋಗ್ಯವಂತರಾಗಿ, ಯೋಗವಂತರಾಗಿ, ಗುರು ಹಿರಿಯರಲ್ಲಿ ನಿಷ್ಟಾವಂತರಾಗಿ, ತಂದೆ ತಾಯಿಯವರನ್ನು ಪೂಜಿಸುವವರಾಗಿ, ಹೀಗೆ ಪ್ರತಿ ಭಾವಾರ್ಥದ ಕೊನೆಯಲ್ಲಿ ರಾಗಿ ಎಂದು ಇದರ ಮಹತ್ವವನ್ನು ತಿಳಿಸಿರುವುದರಿಂದ ರಾಗಿಯ ತಳಿಗೆಯನ್ನು ದೇವಿಯವರು ಇಷ್ಟಪಡುವ ಕಾರಣದಿಂದ ಬಂಡಿ ಹಬ್ಬದ ಆಚರಣೆ ದಿನ ಎಡೆಯಾಗಿ ರಾಗಿ ಶಾವಿಗೆಯನ್ನು ತಂದು ಅರ್ಪಣೆ ಮಾಡುತ್ತಿರುವುದು ಪ್ರಸ್ತುತವೆನಿಸಿರುತ್ತೆ. ಈ ಎಲ್ಲ ಪ್ರಕ್ರಿಯೆಗಳು ನೆರೆವೆರಿದ ಮೇಲೆ ದೇವಿಯವರ ಪೂರ್ಣ ಕುಂಭ ಹಾಗೂ ಕಲಶದ ಪವಿತ್ರ ಜಲವನ್ನು ದೇವರ ಬನದ ಸುತ್ತಲೂ ಪ್ರೋಕ್ಷಿಸಿ ದಿಗ್ಬಂದನ ಮಾಡುತ್ತಾರೆ, ನಂತರ ಪ್ರತಿಮೆಗಳಿಗೆ ಅಪಾಯ ಅಪಚಾರಗಳು ಆಗಬಾರದೆಂಬ ಭಾವನೆಯಿಂದ ಕೆಲವು ಭಕ್ತರು ಸ್ವಾಧೀನದಲ್ಲಿದ್ದ ಕಲ್ಲು ಚಪ್ಪಡಿಗಳನ್ನು ತಂದು ಭದ್ರವಾದ ತಾತ್ಕಾಲಿಕ ಗುಡಿಯನ್ನು ಎಲ್ಲರ ಸಹಕಾರದಿಂದ ನಿರ್ಮಾಣ ಮಾಡುತ್ತಾರೆ ಹೀಗೆ ದೇವಿಯವರನ್ನು ಇಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ ಪ್ರಕ್ರಿಯೆಗಳಲ್ಲೆಲ್ಲ ಪೂರ್ಣವಾದಂತಾದ ಮೇಲೆ ಶ್ರೀ ಹಲಗೇಗೌಡರು ಪ್ರತಿ ಶುಕ್ರವಾರ ಪೂಜೆಯನ್ನು ನೆಡಸಿಕೊಂಡು ಬರುತ್ತಿದ್ದರು. ಈ ವ್ಯವಸ್ಥೆಯು ಗ್ರಾಮದಲ್ಲಿ ಆದನಂತರ ಶ್ರೀ ದೇವಿಯವರ ಮಹಿಮೆಯಿಂದ ರೋಗ ರುಜಿನಗಳು ನಿಯಂತ್ರಣಕ್ಕೆ ಬರುತ್ತವೆ; ಜನರಲ್ಲಿ ಆಚಾರ ವಿಚಾರಗಳು ಹೆಚ್ಚಾಗಿ ಬರುತ್ತವೆ, ಕಾಲ ಕಾಲಕ್ಕೆ ಮಳೆಯಾಗುತ್ತಿದ್ದರಿಂದ ಸಮೃದ್ಧಿ ವಾತಾವರಣ ಉಂಟಾಗುತ್ತದೆ ಇದರಿಂದ ನೆಮ್ಮದಿಯ ಬದುಕನ್ನು ನೆಡೆಸುತ್ತಾ ಆಶಾವಾದಿಗಳಾಗಿ ಬಾಳುತ್ತಿರುತ್ತಾರೆ; ಈ ಪ್ರಖ್ಯಾತಿಯು ಸುತ್ತ ಮುತ್ತಲು ಪ್ರದೇಶಗಳಿಗೆ ಪ್ರಚಾರವಾಗ ತೊಡಗಿದಂತೆ,,,

ಕಾಲಾನಂತರದಲ್ಲಿ

ಈ ಪ್ರಾಂತ್ಯವನ್ನು ಆಳುತ್ತಿದ್ದ ಕೆಳದಿಯ ಅಂದರೆ ಶಿವಮೊಗ್ಗದ ಪಾಳೇಗಾರರಿದ್ದ ಶ್ರೀ ಶಿವಪ್ಪ ನಾಯಕನನ್ನು ತನ್ನ ಶತ್ರುಗಳ ನೆಲೆಯನ್ನು ಅರಸುತ್ತಾ ಹಾಗೂ ತನ್ನ ಆಡಳಿತದ ಬಗ್ಗೆ ಪ್ರಜೆಗಳಲ್ಲಿರುವ ಅಭಿಪ್ರಾಯ ಅವರ ಸಮಸ್ಯೆ ತೊಂದರೆಗಳನ್ನು ತಿಳಿಯುವ ಸಂಭಂದವಾಗಿ ನದಿಪಾತ್ರದಲ್ಲಿದ್ದ ಈ ಗ್ರಾಮಕ್ಕೂ ಭೇಟಿಮಾಡುತ್ತಾರೆ: ಇಲ್ಲಿ ಜನರಲ್ಲಿ ಆಚಾರ, ವಿಚಾರ, ಭಕ್ತಿ, ಆನ್ಯೂನತೆ, ಸಮೃದ್ದಿ ಮತ್ತು ರಾಜಭಕ್ತಿ ಇವುಗಳನೆಲ್ಲ ನೋಡಿ ಸಂತೋಷ ಭರಿತನಾಗಿ ತನ್ನ ರಾಜ್ಯಾಡಳಿತದ ಬಗ್ಗೆ ಹೆಮ್ಮೆ ಪಡುತ್ತಾನೆ, ಈ ಎಲ್ಲ ಆದರ್ಶ ಹಾಗೂ ಸಂತೋಷಗಳಿಗೆ ಸಕಾರಣಗಳನ್ನು ತಿಳಿಯುವ ಆಸೆಯಾಗುತ್ತದೆ; ಊರಿನ ಪುರೋಹಿತರನ್ನು ಮತ್ತು ಮುಖಂಡರಾಗಿದ್ದ ಶ್ರೀ ಹಲಗೇಗೌಡರನ್ನು ಕರಸಿಕೊಂಡು ಯೋಗ ಕ್ಷೇಮವನ್ನು ವಿಚಾರಿಸುತ್ತಾನೆ ಮತ್ತು ಜನರಲ್ಲಿ ಕಂಡು ಬರುತ್ತಿರುವ ಈ ಮಡಿವಂತಿಕೆಗೆ ಕಾರಣಗಳನ್ನು ಕೇಳುತ್ತಾನೆ ಶ್ರೀ ಹಲಗೇಗೌಡರು ಹೇಳಿದ್ದೇನೆಂದರೆ, ಶ್ರೀ ಪಾರ್ವತಿ ದೇವಿಯವರ ಕನ್ಯೆರಾದ ಉಡಿಶಿಲಮ್ಮನವರು ಗ್ರಾಮ ದೇವತೆಯಾಗಿ ನೆಲೆಯಾಗಿರುವ ಕಾರಣ ' ಬೇಡಿದ್ದಕೆಲ್ಲ ವರ ಮುಟ್ಟಿದ್ದಕೆಲ್ಲ ಚಿನ್ನ ಎಂಬಂತೆ ಅವರ ಶಕ್ತಿ ಪವಾಡಗಳ ಬಗ್ಗೆ ಸಾಗಿಬಂದ ಸಂಗತಿಗಳನ್ನೆಲ್ಲ ಸವಿಸ್ತಾರವಾಗಿ ತಿಳಿಸುತ್ತಾರೆ ಈ ಮಹಾತ್ಮೆಯನ್ನು ತಿಳಿದ ನಾಯಕನಿಗೂ ನಂಬಿಕೆ ಭಕ್ತಿವುಂಟಾಗಿ ದೇವಿಯವರ ದರ್ಶನ ಮಾಡುವ ಹಂಬಲ ಉಂಟಾಗುತ್ತದೆ; ಭಕ್ತರ ಸಮೇತ ಬಾಣಕ್ಕೆ ಬಂದು ಪೂಜಿಸಿದ್ದ ಪ್ರತಿಮೆಗಳಲ್ಲಿ ಏಕ ಚಿತ್ತದಿಂದ ದೃಷ್ಟಿ ಇಟ್ಟು ಕಾಣುತ್ತಿದ್ದ ಚೀತ್ಕಲೆಯ ಅಂತರಂಗದಿಂದ ಶ್ರೀ ದೇವಿಯವರ ಸುಂದರ ರೂಪವನ್ನು ಕಂಡು ಲೀನರಾಗಿ ಭಾವಪರವಶರಾಗುತ್ತಾರೆ ನಂತರ ಜಾಗೃತಗೊಂಡು ಆರಾಧಕರಿಂದ ಪೂಜೆಯನ್ನು ಮಾಡಿಸಿ ತೀರ್ಥ ಪ್ರಸಾಧವನ್ನು ತೆಗೆದುಕೊಂಡು ತನ್ನನ್ನು ಕಾಡುತ್ತಿದ್ದ ಕೊರತೆಯನ್ನು ನಿವಾರಿಸಲು ತನ್ನ ಮನಿಸ್ಸಿನಲ್ಲೇ ಪ್ರಾರ್ಥನೆ ಮಾಡಿ ಹರಕೆ ಹೊತ್ತು ನಂಬಿಕೆ ಸಂತೋಷದಿಂದ ತಮ್ಮ ಬೇಟಿಗಾಗಿ ಬಂದಿದ್ದ ಪ್ರಜೆಗಳಿಗೆ ಸಾಂತ್ವನ ಹೇಳಿ ಎಲ್ಲರಿಗೂ ಶ್ರೀ ದೇವಿಯವರು ಶ್ರೇಯಸ್ಸನ್ನು ಕೊಡಲಿ ಎಂಬುದಾಗಿ ಹಾರೈಸಿ ಅಲ್ಲಿಂದ ಬೀಳ್ಕೊಂಡು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ ದಾರಿ ಉದ್ದಕ್ಕೂ ಶುಭ ಶಕುನಗಳು ಕಂಡುಬರುತ್ತವೆ ಇದು ದೇವಿಯವರ ದರ್ಶನದ ಪಲ ಎಂಬ ನಂಬಿಕೆಯಿಂದ ತನ್ನ ಕೋಟೆಯನ್ನು ತಲುಪುತ್ತಾನೆ ಆ ಲಾಗಾಯ್ತಿನಿಂದ ಎಲ್ಲಾ ತೊಂದರೆ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಹೀಗಿರುತ್ತಿರುವಾಗ ನಮ್ಮ ಗ್ರಾಮಕ್ಕೆ ಭೇಟಿ ಕೊಟ್ಟು ಹರಕೆ ಹೊತ್ತುಕೊಂಡಿದ್ದರಿಂದ ಫಲವಾಗಿ ೧೩ನೇ ತಿಂಗಳಿಗೆ ಸಂತಾನಹೀನನಾಗಿದ್ದು ನಾಯಕನಿಗೆ ವಂಶೋದ್ದಾರಕನ ಆಗಮನವಾಗುತ್ತದೆ; ಕಳಂಕ ತಪ್ಪಿ ಜನ ನಿಂದನಾ ರಹಿತವಾದ ಕಾರಣ ಆನಂದ ಸಂತೋಷ ಉಂಟಾಗಿ ವಿಜಯೋತ್ಸವ ಆಚರಿಸಿ ಕೋಟೆಯವರಿಗೆಲ್ಲ ಅಣ್ಣ ವಸ್ತ್ರಧಾನ ಮಾಡಿ ಈ ಎಲ್ಲ ಉತ್ಸಾಹಕ್ಕೆ ಕೃಪೆಮಾಡಿದ ಶ್ರೀ ಉಡಿಶೀಲಮ್ಮ ಯಾ ಗ್ರಾಮದೇವತೆಯವರನ್ನು ಹಾದಿ ಹೊಗಳುತ್ತಾನೆ; ಮಗ ಹುಟ್ಟಿದ ನಂತರ ತನ್ನ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಾಣುತ್ತಾನೆ ಈ ಅದೃಷ್ಟದ ವಿಚಾರವನ್ನು ಆಗ ತನ್ನ ಪತ್ನಿಗೆ ಮನವರಿಕೆ ಮಾಡಿ ಕೊಳ್ಳುತ್ತಾನೆ ಮಗುವಿಗೆ ಒಂದು ವರ್ಷ ತುಂಬುವುದರ ಒಳಗಾಗಿ ಹರಕೆ ಮಾಡಿ ಕೊಂಡಿದ್ದರಿಂದ ಒಂದು ಶುಭ ದಿನ ಪತ್ನಿ ಪುತ್ರ ಹಾಗೂ ಪರಿವಾರ ಸಮೇತ ಕುದುರೆ ಸಾರೋಟಿನಲ್ಲಿ ಬಂದು ಇಲ್ಲಿನ ಶ್ರೀ ದೇವಿಯವರ ದರ್ಶನ ಮಾಡಿ ಪ್ರತಿಮೆಗಳಿಗೆ ಕಣ್ಮಣಿ, ಸೀರೆ, ಮುಕುಟಗಳಿಂದ ಅಲಂಕಾರ ಮಾಡಿಸಿ ಹೊವು ಹಾರಗಳನ್ನಿಟ್ಟು ಶೃಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿಸಿ ಪಂಚಾಮೃತ ತಳಿಗೆಯನ್ನು ಅರ್ಪಿಸಿ ಮಹಾ ಮಂಗಳಾರತಿ,ತೀರ್ಥ ಪ್ರಸಾದಗಳನ್ನು, ಪಡೆದುಕೊಂಡು ಕೃತಾರ್ಥರಾಗುತ್ತಾರೆ ಪೂರ್ವೋಚಿತವಾಗಿ ವ್ಯವಸ್ಥೆ ಮಾಡಿದಂತೆ ಕೇರಿಯ ಭಕ್ತ ಸಮುದಾಯಕ್ಕೆ ಪ್ರಸಾದ ವ್ಯವಸ್ಥೆ ನೆಡೆಯುತ್ತದೆ ಈ ಎಲ್ಲಾ ಕಾರ್ಯಗಳು ನೆರೆವೇರಿಸಿ ತನ್ನ ಪ್ರಜೆಗಳ ಪ್ರೀತಿಗೆ ಪಾತ್ರನಾಗಿ ತನ್ನ ಕಳಂಕ ನಿವಾರಣೆ ಹಾಗು ಸಮಸ್ಯೆಗಳು ಬಗೆಹರಿದುಕೊಂಡು ಬರುತಿದ್ದುದ್ದರಿಂದ ಉತ್ಸಾಹಉಳ್ಳವನಾಗಿ ಶ್ರೀ ದೇವಿಯವರಿಗೆ ಸುಂದರ ಹಾಗೂ ಭದ್ರವಾದ ದೇವ ಮಂದಿರವನ್ನು ನಿರ್ಮಿಸಲು ತನ್ನ ಸಿಬ್ಬಂದಿಗೆ ಆದೇಶ ಮಾಡುತ್ತಾನೆ ಮತ್ತು ದೇವಿಯ ಅಭಿಷೇಕ ತಳಿಗೆ ಹಾಗೂ ಪೂಜೆ ಇವುಗಳಿಗೆ ಸರಿಯಾದ ನೀರಿನ ಸೌಕರ್ಯಗಳಿಲ್ಲದ ಕಾರಣ ದೇವಾಲಯದ ಮುಂಭಾಗ ಹಾಗೂ ಈಶಾನ್ಯ ಮೂಲೆಗೆ ಲಗತ್ತಾದಂತೆ ವಿಶಾಲವಾಗಿ ನೀರು ಸಂಗ್ರಹವಾಗುವ ರೀತಿಯಲ್ಲಿ ಹಾಲಿ ಹರಿಯುತ್ತಿದ್ದು ನೀರಿನ ಹಳ್ಳವನ್ನು ಒಳ ಸರಿಸಿ ಒಂದು ಕೆರೆಯನ್ನು ಸಹ ಮಾಡಿಸುವ ಜವಬ್ದಾರಿಯನ್ನು ತನ್ನ ಸಿಬ್ಭಂದಿಯವರಿಗೆ ಆದೇಶಕೊಟ್ಟು ಹೋದ ನಂತರದಲ್ಲಿ ಆಜ್ಞಾಪಿಸಿದ ಕಾಮಗಾರಿಗಳು ಆರು ತಿಂಗಳೊಳಗೆ ಪೂರ್ಣಗೊಂಡು ಸೇವೆಗೆ ಸಿದ್ಧವಾಗುತ್ತದೆ ಹೀಗೆ ಜನ ಹಿತ ಸೇವಾ ಕಾರ್ಯಗಳನ್ನು ಮಾಡಿಸಿದ್ದರಿಂದ ದೇವಿಯವರ ಅನುಗ್ರಹವುಂಟಾಗಿ ಸುಖ ಸಂತೋಷದಿಂದ ಆಡಳಿತ ಮಾಡಿದನೆಂಬ ವಿಚಾರವು ಪ್ರಸ್ತುತವಾಗಿದೆ. ಶ್ರೀ ಗ್ರಾಮದೇವತೆಯವರು ನೆಲೆಯಾದನಂತರದ ದಿನಗಳಲ್ಲಿ ಗ್ರಾಮದಲ್ಲಿ ಸುಭಿಕ್ಷತೆ ಉಂಟಾಗಿದ್ದರು ಸಹ ಜನರಲ್ಲಿ ಮೂಡ ನಂಬಿಕೆಯ ಭದ್ರವಾಗಿ ಬೇರೊರಿದ್ದಿತ್ತು ವೀರಶೈವ ಧರ್ಮದ ಹಾಗೂ ಶರಣರ ತತ್ವ ಉಪದೇಶ ಆದರ್ಶಗಳ ಅರಿವಿಲ್ಲದೆ ಅಜ್ಞಾನ ತಮ್ಮ ಕಷ್ಟ ತೊಂದರೆಗಳ ನಿವಾರಣೆಗಾಗಿ ಪ್ರಾಣಿ ಪಕ್ಷಿಗಳ ಬಲಿಯನ್ನು ಕೊಡುವ ಅನಿಷ್ಟ ಪದ್ಧತಿಯೂ ಆಚರಣೆಯಲ್ಲಿದ್ದಿತ್ತು; ಈ ಕೃತ್ಯವು ದೈವ ಮಾನವರಾಗಿ . ಜನಿಸಿ ಸಮಾಜ ಸುಧಾರಣೆಗೆ ತಮ್ಮನ್ನು ತೊಡಗಿಸಿಕೊಂಡ ಶ್ರೀ ಜಗಜ್ಯೋತಿ ಬಸವಣ್ಣನವರ ಆದರ್ಶ ತತ್ವಗಳಿಗೆ ಕಳಂಕ ಹಾಗೂ ಮಾರಕವಾದ ಹೀನ ಕೃತ್ಯ ಈ ಹಿಂದೆ ವರ್ಷಕ್ಕೊಮ್ಮೆ ಆಚರಿಸುತ್ತಿದ್ದ ಬಂಡಿಹಬ್ಬವನ್ನು ಎರಡು ಜಾತಿಯವರು ಒಟ್ಟಿಗೆ ಕೂಡಿ ಮಾಡುತ್ತಿದ್ದಾಗ ಒಂದು ಘಟನೆ ನೆಡೆಯಿತು................................................

ಸುಮಾರು 70 ವರ್ಷಗಳ ಹಿಂದಿನ ಒಂದು ಪ್ರಸಂಗ ಆ ವರ್ಷ ಬಂಡಿಹಬ್ಬವನ್ನು ಮಾಡುತ್ತಿದ್ದ ಸಮಯದಲ್ಲಿ ಒಂದು ವಿಸ್ಮಯಕರ ಸಂಗತಿ ನೆಡೆಯಿತೆಂಬುದನ್ನು ನಮ್ಮ ಹಿರಿಯರಿಂದ ತಿಳಿದು ಬಂದ ವಿಷಯವೇನೆಂದರೆ 1942 ಇಸವಿಗೆ ಮೊದಲಿನಿಂದಲೂ ವಿದ್ಯುತ್‌ಶಕ್ತಿ ಇಲಾಖೆಯ 4 ಕುಟುಂಬಗಳು ಈ ಗ್ರಾಮದಲ್ಲಿರುವ ಇಲಾಖೆಯ ಬಂಗಲೆಗಳಲ್ಲಿ ವಾಸಿಸುತ್ತಿದ್ದರು, ಇವರಲ್ಲಿ 2 ಕುಟುಂಬ ವೀರಶೈವರು, 2 ಕುಟುಂಬ ವಕ್ಕಲಿಗರು.. ಆ ವರ್ಷದಲ್ಲಿ ಆಚರಣೆ ಮಾಡುತ್ತಿದ್ದ ಬಂಡಿ ಹಬ್ಬದ ವೈಭವವನ್ನು ನೋಡಲು ಹಾಗೂ ಹಣ್ಣು ಕಾಯಿ ಸೇವೆಯನ್ನು ಮಾಡಿಸಲು ಬಂದಿದ್ದರು ಜನ ಸಂದಣಿ ಸ್ವಲ್ಪ ಕಡಿಮೆಯಾದಮೇಲೆ ವಕ್ಕಲಿಗ ಕುಟುಂಬದ ಹೆಣ್ಣು ಮಗಳು ದೇವರ ದರ್ಶನವನ್ನು ಮಾಡಲು ಗುಡಿಯ ಬಾಗಿಲಿಗೆ ಬಂದು ಹಣ್ಣು, ಕಾಯಿ, ಬುತ್ತಿಯನ್ನು ಒಳಕ್ಕೆ ಕೊಟ್ಟು ಬಾಗಿಲಲ್ಲಿ ಭಕ್ತಿಯಿಂದ ಕೈಮುಗಿದುಕೊಂಡು ನಿಂತುಕೊಂಡರು; ಹಣ್ಣು ಕಾಯಿ ಅರ್ಪಣೆ ಮಾಡಿದ ಮೇಲೆ ಮಂಗಳಾರತಿಯನ್ನು ಕೊಡಲು ತಂದಾಗ ಇವರ ಹಿಂಬಾಗದಿಂದ ಕರ್ಕಶವಾದ ಜೀರಲು ಶಬ್ದ ಬರುತ್ತದೆ; ಜಯಮ್ಮನೆಂಬ ಹುಡುಗಿಯೂ ತಿರುಗಿ ನೋಡುತ್ತಾಳೆ ಹರಿಜನ ಮತದ ತಲೆಗಡುಕ ಒಂದು ಕುರಿಯ ತಲೆಯನ್ನು ಕಡಿದು ಕೆಳಕ್ಕೆ ಉರುಳಿಸುತ್ತಾನೆ. ಈ ಕರ್ತವ್ಯವೂ ದೇವರ ಎದುರಿನಲ್ಲಿ ನೆಡದಿತ್ತು ಇನ್ನೂ ನಾಲ್ಕು ಕುರಿಗಳು ವಧೆಯಾಗಲು ಬಂದಿದ್ದವು, ಕಡಿದ ಕುರಿಯ ಚೆಲ್ಲಿದ ರಕ್ತ ಅದು ಒದ್ದಾಡುತ್ತಿದ್ದ ಸ್ಥಿತಿಯನ್ನು ನೋಡಿದ ಈ ಭಕ್ತೆಯು ಮಾಂಸಾಹಾರಿಯಾಗಿದ್ದರು ಸಹ ಮತಿ ಭ್ರಮಣೆ ಯಾದಂತಾಗಿ ಶ್ರೀ ದೇವಿಯವರು ಮೈ ಮೇಲೆ ಆವೇಶವಾಗಿ ಬಂದಂತೆ, ಮೈ ಯನ್ನು ನಡುಗಿಸುತ್ತಾ ಆರ್ಭಟಿಸಿ ನನಗೆ ಕರ್ಪೂರ ಹಚ್ಚಿ ತೀರ್ಥಹಾಕು ಎಂದು ದೊಡ್ಡ ದ್ವನಿಯಲ್ಲಿ ಹೇಳಿದ್ದನ್ನು ನೋಡಿದ ಜನ ಸಮೂಹವು ಈಕೆಯ ಕೆಂಪಾದ ಕಣ್ಣು ಅದುರುತ್ತಿದ್ದ ಮೈಯನ್ನು ನೋಡಿ ಭಯದಿಂದ ಡೀಜ್ಮೂಡರಾಗುತ್ತಾರೆ; ಮತ್ತೆ ಕರ್ಪೂರ ಹಚ್ಚಲಿಲ್ಲ ಎಂದು ಘರ್ಜಿಸಿದಾಗ ಅರ್ಚಕರು ಕೂಡಲೇ ಕರ್ಪೂರದ ತಟ್ಟೆಯನ್ನು ತಂದು ತೀರ್ಥಪ್ರೋಕ್ಷಣೆ ಮಾಡುತ್ತಾರೆ ಆಗ ಹುಡುಗಿಯೂ ತಟ್ಟೆಯನ್ನು ಕೈಗೆ ತೆಗೆದುಕೊಂಡು ಅಹಹಾ ನಾನು ಹಿಂಸಾ ಮಾರ್ಗದವಳಲ್ಲ, ವೀರಶೈವ ಧರ್ಮದ ಉಪದೇಶ ಪಡೆದು ನೆಲೆಸಿರುವ ಕಾರಣ ಯಾವ ಪ್ರಾಣಿಯು ಜೀವವನ್ನು ಕೊಳ್ಳುವವಳು ಅಲ್ಲ ತೆಗೆಯುವವಳು ಅಲ್ಲ ಈ ಗ್ರಾಮದ ಪ್ರತಿಯೊಂದು ಪ್ರಾಣಿಯು ಜೀವನವನ್ನು ರಕ್ಷಿಸುವ ಉದ್ದೇಶದಿಂದ, ಇಲ್ಲಿಗೆ ಬಂದು ನೆಲೆಸಿರುತ್ತೇನೆ ಎಲ್ಲರ 'ರಕ್ಷಾ ದೇವತೆಯಾಗಿರುತ್ತೇನೆಯೇ ಹೊರತು ರಕ್ಕಸಿಯಲ್ಲ ಲಿಂಗವಂತರ ಮನೆಯಲ್ಲಿ ತಂಗಿದ್ದು ಅಹಿಂಸಾ ಧರ್ಮವನ್ನು ಆಚರಿಸಿಕೊಂಡು ಹೋಗುತ್ತಿರುವ ಲಿಂಗವಂತ ವ್ಯಕ್ತಿಯ ಮುಖಾಂತರ ಅಭಿಷೇಕ, ಹೋಮ, ಪೂಜೆಗಳಿಂದ ಸಂಸ್ಕಾರವನ್ನು ಪಡೆದು ಶರಣ ಧರ್ಮದ ಆಚರಣೆಯುಳ್ಳವಳಾಗಿದ್ದೇನೆ ಆದಕಾರಣ ವೀರಶೈವರಾಗಲಿ ಇತರೆ ಯಾವ ತಿನ್ನುಣ್ನುವ ಈ ಮೂಡ ಪದ್ಧತಿಯಿಂದ ಕಳಂಕಿತಳಾಗುತ್ತೇನೆ. ಅಸ್ಪುರ್ಷರ ಸಾಲಿನ ದುಷ್ಟ ದೇವತೆ ಎಂಬ ಭಾವನೆ ನನ್ನ ಭಕ್ತರಲ್ಲಿ ನೆಲೆಯಾಗುತ್ತದೆ, ಇಲ್ಲಿಂದ ಮುಂದಿನ ವರ್ಷಗಳಲ್ಲಿ ಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಮಾಡಿರಿ ವೀರಶೈವರು ಅಹಿಂಸಾ ದರ್ಮದವರಾಗಿರುವುದರಿಂದ ಮತ್ತೆ ೧೦೧ ಮಾರಿಗಳಿಗೆ ಶಾವಿಗೆ ಎಡೆ ಇತ್ತು ಪೂಜೆ ಸಲ್ಲಿಸಬೇಕಾಗಿರುವುದರಿಂದ, ಮೊದಲು ಆಚರಿಸಬೇಕು ನಂತರ ಪರಿಶಿಷ್ಟ ಜಾತಿಯವರು ಮುಂದಿನ ವಾರ ಆಚರಿಸುವುದು ನನಗ ಇಷ್ಟವಾಗುತ್ತದೆ ಏಕೆಂದರೆ ಅವರು ತಿನ್ನುಣ್ನುವ ಜಾತಿ ತಮ್ಮ ಉದರ ಪೋಷಣೆಗಾಗಿ ಮಾಡುವ ಹಿಂಸಾ ಕಾರ್ಯದ ಪಾಪವನ್ನು ಸ್ವಾರ್ಥತೆಯಿಂದ ದೈವದ ಮೇಲೆ ಹೊರಿಸುತ್ತಾರೆ ಇದು ಹೇಯ ಕೃತ್ಯ, ಆದರೂ ದರ್ಮದ ಅರಿವು ಪ್ರಾಣದ ಬೆಲೆಗೊತ್ತಿಲ್ಲದ ಮೌಡ್ಯತೆಯಿಂದ ಕೊಡುವ ಪಾಪದ ಬಲಿಯು ನನ್ನ ಎದುರಿನಲ್ಲಿರುವ ದ್ವಾಮವ್ವ ಎಂಬ ಚೌಡಿಯು ಒಪ್ಪಿಕೊಳ್ಳುತ್ತಾಳೆ ಆಕೆಗೆ ನಿತ್ಯದ ಪೂಜೆ ವಾರದ ಪೂಜೆಗಳಿರುವುದಿಲ್ಲ ಪ್ರಾಣಿಗಳ ಬಲಿಯಿಂದಲೇ ತೃಪ್ತಿ ಪಡುವವಳಾಗಿದ್ದಾಳೆ, ನಾನು ಮಾತ್ರ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ದ್ವೇಷಿಸುತ್ತೇನೆ ಈ ಹಿಂಸಾ ಮಾರ್ಗವನ್ನು ಕೈಬಿಟ್ಟು ನನ್ನನ್ನು ನಿತ್ಯ ಅಲಂಕರಿಸುವ ಶಾಶ್ವತ ವಸ್ತುಗಳು ಬೆಳ್ಳಿಯ ರೂಪಕಗಳು ಕಂಚು, ತಾಮ್ರದ ವಸ್ತುಗಳು ಉಡಿಗೆ ಸಾಧನಗಳು ಹೆಚ್ಚಿನದಾಗಿ ನಂಬಿಕೆ, ಭಕ್ತಿಯಿಂದ ಪೂಜಿಸಿದರೆ ತೃಪ್ತಳಾಗುತ್ತೇನೆ ಎಂಬುದಾಗಿ ದೇವಿಯವರ ಅಪ್ಪಣೆಯಾದಂತೆ ಆ ಹೆಣ್ಣು ಮಗಳ ಬಾಯಿಂದ ಹೋರಟ ಮಾತುಗಳಿಂದ ನೆರದಿದ್ದ ಭಕ್ತ ಸಮೂಹವು ನಂಬಿಕೆ, ಭಯದಿಂದ ಮೂಕ ಪ್ರೇಕ್ಷರಾಗುತ್ತಾರೆ ಎಲ್ಲರ ಸಲಹೆಯಂತೆ ಸನ್ನಿದಿಯಿಂದ ತೀರ್ಥತಂದು ಹೆಂಗಸಿನ ಮೇಲೆ ಪ್ರೋಕ್ಷಣೆ ಮಾಡಿದಾಗ ಮತ್ತು ಮಂಗಳಾರತಿ ಮಾಡಿದ ಮೇಲೆ ಆಕೆಯ ವಾಸ್ತವ ಸ್ಥಿತಿಗೆ ಬರುತ್ತಾಳೆ, ಕೋತೂಹಲಗೊಂಡ ಸಮೂಹದವರು ಯಾಕೆ ಹೀಗೆಲ್ಲ ಮಾತನಾಡಿದೆ ಎಂಬುದಾಗಿ ವಿಚಾರ ಮಾಡಿದಾಗ, ನಾನೇನು ಮಾತನಾಡಿದೆ; ಈ ಬಗ್ಗೆ ಯಾವ ಅರಿವು ಇರಲಿಲ್ಲ ಎಂಬುದಾಗಿ ಹೇಳುತ್ತಾಳೆ, ದೇವಿಯವರು ಈ ಭಕ್ತೇಯ ಮೇಲೆ ಆವೇಶವಾಗಿ ಈ ರೀತಿ ಅಪ್ಪಣೆ ಮಾಡಿದ್ದಾಳೆ ಎಂದು ನಂಬುತ್ತಾರೆ: ನಂತರ ಉಳಿದ ಕುರಿಗಳು ಪುನರ್ಜನ್ಮವನ್ನು ಪಡೆದುಕೊಳ್ಳುತ್ತದೆ; ಶ್ರೀಮತಿ ಜಯಮ್ಮನಿಗೆ ಸನ್ನಿಧಿಯಿಂದ ತಾಂಬೂಲ, ಫಲ, ಪುಷ್ಪಗಳನ್ನು ಕೊಟ್ಟು ಸನ್ಮಾನಿಸಲಾಯಿತು ಅಂದಿದಿಂದ ಆದೇಶವಾದಂತೆ ಬಂಡಿಹಬ್ಬವನ್ನು ಬೇರೆ ಬೇರೆ ವಾರಗಳಲ್ಲಿ ಆಚರಿಸಿಕೊಂಡು ಬರುವುದು ಪದ್ದತಿಯಾಗಿದೆ...........

ಚಿಕ್ಕಮ್ಮನವರ ಆಗಮನ ಈ ಗ್ರಾಮದ ಹರಿಜನ(ಪಂಗಡ) ಜಾತಿಗೆ ಸೇರಿದವನಾದ ಸುಮಾರು 14 ವರ್ಷ ವಯಸ್ಸಿನ ಕಾಳಯ್ಯನೆಂಬ ಹುಡುಗನು ತನ್ನ ಮನೆಯಲ್ಲಿನ ಬಡತನ ಹಾಗೂ ಈತನು ಸೋಮಾರಿತನದ ಬಗ್ಗೆ ಮನೆಯಲ್ಲಿನ ಹಿರಿಯರಿಗೆ ಬೇಸರ ಉಂಟಾಗಿ ಕೆಲಸಕ್ಕೆ ಹೋಗು ಏನಾದರೂ ದುಡಿಮೆ ಮಾಡು ಎಂದು ದಿನವೂ ನಿಂದನೆ ಮಾಡುತ್ತಿದ್ದರು; ನಿತ್ಯವೂ ಹಂಗಿನ ಊಟಕ್ಕಾಗಿ ಬಹಳ ಬೇಸರವುಂಟಾಗಿ ಒಂದು ದಿನ ಮನೆಯನ್ನು ಬಿಟ್ಟು ಹೊರಡುತ್ತಾನೆ; ಗೊತ್ತು ಗುರಿಯಿಲ್ಲದ ದಿಕ್ಕಿನತ್ತ ಹೊರತು ದಾರಿಯಲ್ಲಿ ಸಿಕ್ಕಿದ ಗ್ರಾಮಗಳಲ್ಲಿ ಅವರಿವರ ಮನೆಗಳಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಊರಿಂದ ಊರಿಗೆ ಸವೆದ ಕಾಲುದಾರಿಯನ್ನು ಹಿಡಿದು ಆಳವಿಲ್ಲದ ನದಿ, ಕಣಿವೆಗಳನ್ನು ದಾಟಿ 60 ಮೈಲಿಗಳನ್ನು ಕ್ರಮಿಸಿ ಮಂಜ್ರಾಬಾದ್(ಸಕಲೇಶಪುರ) ಗೆ ಬರುತ್ತಾನೆ ಅಲ್ಲಿ ಸಣ್ಣ ಅಂಗಡಿ ಮುಂದೆ ಕುಳಿತುಕೊಂಡಾಗ ಅಂಗಡಿ ಮಾಲಿಕನು ವಿಚಾರಣೆ ಮಾಡುತ್ತಾನೆ, ತನ್ನ ಪರಿಸ್ಥಿತಿ ಇಲ್ಲಿಗೆ ಬಂದ ಕಾರಣಗಳನ್ನು ತಿಳಿಸುತ್ತಾನೆ. ಅಂಗಡಿಯವನಿಗೆ ಕನಿಕರ ಉಂಟಾಗಿ ತಿನ್ನಲು ಸ್ವಲ್ಪ ಕಾಳುಗಳನ್ನು ಕೊಡುತ್ತಾನೆ ಅದೇ ಸಮಯಕ್ಕೆ ಬಂದು ಕಾಫಿ ಎಸ್ಟೇಟಿನ ರೈತನೊಬ್ಬ ಅದೇ ಅಂಗಡಿಗೆ ಬರುತ್ತಾನೆ ಅವನ ಸಂಗಡ ಈ ಹುಡುಗನನ್ನು ಕಳುಹಿಸಿ ಕೊಡುತ್ತಾನೆ: ಅಲ್ಲಿಂದ ಅದೇ ತಾಲ್ಲೂಕಿಗೆ ಸೇರಿದ ಹಾನಬಾಳು ಪ್ರದೇಶದಲ್ಲಿದ್ದ ಶ್ರೀ ದಗ್ಗಪ್ಪಗೌಡರ ಒಡೆತನದ ಗಿರಿಕನ್ಯೆ ಎಂಬ ಕಾಫಿ ತೋಟಕ್ಕೆ ಬಂದು ಅಲ್ಲಿ ದಿನಗೂಲಿ ಆಳಾಗಿ ಸೇರಿಕೊಂಡು ನಂತರದ ವರ್ಷಗಳಲ್ಲಿ ಈತನ ಅನುಭವ ಕಾರ್ಯದಕ್ಷತೆಗಳ ಮೇಲೆ ಪಟ್ಟಿ ಆಳಾಗಿ ಖಾಯಂ ಗೊಳಿಸುತ್ತಾರೆ' ಈ ಸಂಭಂದ ಕೆಲವು ವರ್ಷಗಳವರೆಗೆ ನಿಯತ್ತಿನಿಂದ ಕೆಲಸ ಮಾಡಿಕೊಂಡು ತನ್ನ ಸಹುದ್ಯೋಗಿಗಳಿಗೆ ಮೆಚ್ಚಿಗೆಯಾಗುತ್ತಾನೆ. ಈ ತೋಟದಲ್ಲಿ ಕಾಳಯ್ಯ ಎಂಬ ಹೆಸರಿನವರು ಮೂರ್ನಾಲ್ಕು ಜನರಿರುತ್ತಾರೆ ಕಾರಣ ಈತನನ್ನು ಗುರುತಿಸಲು ಸಲಿಗೆಯಿಂದ 'ಮೂಡ್ಲಾ' ಎಂಬ ಅಡ್ಡ ಹೆಸರಿನಿಂದ s, ಇದರ ಅರ್ಥ ಮೂಡಣ ಸೀಮೆಯವನು ಎಂಬ ಭಾವನೆ , ದುಗ್ಗಪ್ಪ ಗೌಡರು ತಮ್ಮ ತೋಟದ ಬೆಂಗಾವಲಿಗಾಗಿ ದ್ಯಾಮವ್ವ ಎಂಬ ಚೌಡಿಯನ್ನು ಕರೆತಂದು ತೋಟದ ಮುಖ್ಯ ದ್ವಾರದ ದೇವತಾರೆ ಮರದ ಬುಡದಲ್ಲಿ ನೆಲೆಮಾಡಿರುತ್ತಾಲೆ, ಗೌಡರು ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿ ಮಾಂಸಾಹಾರಿಯಾಗಿದ್ದರಿಂದ ಸ್ವಾರ್ಥತೆಯಿಂದ ಕಾಡುಪ್ರಾಣಿ ಇಲ್ಲವೇ ಸಾಕು ಪ್ರಾಣಿಗಳನ್ನು ಈ ಚೌಡಿಗೆ ಬಲಿಕೊಟ್ಟು ನಂತರ ತಾವು ಸ್ವಾಹಾ ಮಾಡುತ್ತಿದ್ದರು, ಈ ಚೌಡಿಗೆ ಬೇರೆ ಯಾವ ಪೂಜೆ ಪುರಸ್ಕಾರಗಳು ಇರರಿಲ್ಲ . ಬಲಿಯಿಂದಲೇ ಪೋಷಣೆಯಾಗುತ್ತಿತ್ತು ಈ ಚೌಡಿ ಇದ್ದ ಸಂಕೇತ ಕಪ್ಪಾದ ಗುಂಡು ಕಲ್ಲು ಅರಿಶಿಣ, ಕುಂಕುಮ ಲೇಪನ ಮತ್ತು ಬಲಗಡೆಗೆ ಒಂದು ದ್ವಿಶೂಲ ನಿಲ್ಲಿಸಿರುವುದು ಕೆಲವಾರು ವರ್ಷಗಳಲ್ಲಿ ಶ್ರೀ ದುಗ್ಗಪ್ಪ ಗೌಡರು ತಮ್ಮ ತೋಟವನ್ನು ಕಾರಣಾಂತರಗಳಿಂದ 'ಮೆII ಪ್ರಾನ್ಸಿಸ್ ಹಾರ್ಲೆ' ಎಂಬ ಆಂಗ್ಲ ಉದ್ಯಮಿಗೆ ಮಾರಾಟ ಮಾಡುತ್ತಾರೆ ಮೇII ಹಾರ್ಲೆಯವರು ಮೂಡನಂಬಿಕೆಯಿಂದ ಮಾಡುತ್ತಿದ್ದ ಅನಾಚಾರಗಳನೆಲ್ಲ ನಿಲ್ಲಿಸಿ ಬಿಡುತ್ತಾರೆ ಇದರಿಂದ ಚೌಡಿಗೆ ಯಾವ ಪುರಸ್ಕಾರವು ಇಲ್ಲದಂತಾಗುತ್ತದೆ ಕಾರಣ ಈಕೆಗೆ ಬಳಲುವ ಪರಿಸ್ಥಿತಿ ಉಂಟಾಗುತ್ತದೆ, ಈ ಮದ್ಯೆ 'ಮೂಡ್ಲನು' ತನ್ನ ಜೊತೆಗಾರನ ಸಂಗಡ ಮಾತನಾಡುವಾಗಲೆಲ್ಲ, ನಮ್ಮ ಊರಿನ ಶ್ರೀ ಗ್ರಾಮ ದೇವತೆ ಬನದಲ್ಲಿ ನಿರಂತರ ಪ್ರಾಣಿಗಳ ಬಲಿಯು ನಡೆಯುತ್ತಿರುವ ಬಗ್ಗೆ ಹೊಗಳಿಕೆಯ ಮಾತುಗಳಿಂದ ಆಗಿಂದಾಗೆ ಹೇಳುತ್ತಿದ್ದದನ್ನು ಈ ಚೌಡಿಯು ಕೇಳಿಸಿ ಕೊಂಡಿರುತ್ತಾಳೆ ಮತ್ತು ಇಲ್ಲಿಂದ ಹೊರಡಬೇಕೆಂಬ ನೀರಿಕ್ಷೆಯಲ್ಲಿ ಸಮಯ ಕಾಯುತ್ತಿರುತ್ತಾಳೆ. ಈ ಸಮಯ 'ಮೂಡ್ಲಕಾಳನಿಗೆ' ೨೭ ವರ್ಷಗಳು ಕಳೆದಿರುತ್ತದೆ ಸಂಸಾರಿಯಾಗುವ ಹಂಬಲದಿಂದ ಊರಿಗೆ ಹೊರಡುವ ಮನಸ್ಸಾಗುತ್ತದೆ ಕೈಯಲ್ಲಿ ಸ್ವಲ್ಪ ಹಣವನ್ನು ಕೂಡಿಸಿಕೊಂಡು; ಒಂದು ಶುಭದಿನ ಬೆಳಗಿನ ೫ ಘಂಟೆಗೆ ಊರಿಗೆ ಅಭಿಮುಖವಾಗಿ ಹೊರಡುತ್ತಾನೆ. ಈ ಸಮಯವನ್ನು ಕಾಯುತ್ತಿದ್ದ ಚೌಡಿಯು ಈತನ ಬೆನ್ನುಹಿಡಿದು ಮೈತುಂಬಿ ಕೊಳ್ಳುತ್ತಾನೆ ಇದರಿಂದ ಕಾಲವು ಮೂಡ್ಲನಿಗೆ ಪ್ರಯಾಣದ ಆಯಾಸ, ಹಸಿವು, ನೀರಡಿಕೆಗಳು ಕಂಡುಬರುವುದಿಲ್ಲ, ತಾನು ಇಲ್ಲಿಗೆ ಬಂದಾಗ ಇದ್ದ ನೇರದಾರಿಯೂ ಸವೆದು ಉತ್ತಮವಾಗಿದ್ದರಿಂದ ಬಹಳ ಬೇಗ ಊರು ತಲುಪುತ್ತಾನೆ, ಇಲ್ಲಿಗೆ ಬಂದಾಗ ಪದ್ದತಿ ನಂಬಿಕೆಯಂತೆ ದೇವರಿಗೆ ಕೈ ಮುಗಿಯಲು ನಿಲ್ಲುತ್ತಾನೆ, ಈತನ ಏಕಾಂಕತೆಯನ್ನು ತಿಳಿದ ಚೌಡಿಯು ಇಳಿದು ಕೊಳ್ಳುತ್ತಾನೆ, ಈಗ ಹುಡುಗನಿಗೆ ಆಯಾಸ, ದಣಿವು, ಹಸಿವು ಎಲ್ಲವುದರ ಅನುಭವವಾಗುತ್ತದೆ ಮನೆಗೆ ಹೋದ ಮೇಲೆ ಊಟ ಮಾಡಿ ಇದಾವುದರ ಅರಿವೂ ಇಲ್ಲದೆ ನಿದ್ರೆಗೆ ಜಾರುತ್ತಾನೆ, ಸುಖ ನಿದ್ರೆ ಕಳೆದು ಬೆಳಗಿನ ಜಾವ ಅರೆ ನಿದ್ರೆಯಲ್ಲಿದ್ದಾಗ ಯಾರೋ ಕರೆದಂತಾಗುತ್ತದೆ ನಾನು 'ಹಾರ್ಲೆ' ತೋಟದ 'ದ್ಯಾಮವ್ವ(ಚೌಡಿಯು) ನಿನ್ನನ್ನು ಆಶ್ರಯಿಸಿ ಇಲ್ಲಿಗೆ ಬಂದಿದ್ದೇನೆ; ಕಾಫಿ ತೋಟದಲ್ಲಿ ನಾವಿದ್ದ ಸಂಕೇತವಾಗಿ ನಾಳೆ ಬೆಳಿಗ್ಗೆ ನದಿಯಿಂದ ಸವೆದು ಹೊಳಪಾಗಿರುವ ಗುಂಡುಕಲ್ಲಿನ ರೂಪದ ಒಂದು ಕಲ್ಲು ಶಿಲೆಯನ್ನು ತಂದು ಅರಿಶಿಣ, ಕುಂಕುಮ ಲೇಪನ ಮಾಡಿ ಒಂದು ದ್ವಿಶೂಲ ವನ್ನು ತಯಾರಿಸಿ ನನ್ನ ಬಲಕ್ಕೆ ನಿಲ್ಲಿಸಿ ಶ್ರೀ ಗ್ರಾಮದೇವತೆ ದೇವಸ್ಥಾನದ ಮುಂಭಾಗಕ್ಕೆ ದೇವಿಗೆ ಎದುರಾಗಿ ಸ್ಥಾಪನೆ ಮಾಡು ಬಂಡಿಹಬ್ಬದ ದಿನ ಪೂಜೆಯನ್ನು ಮಾಡು' ಇದು ನಿನ್ನ ವಂಶ ಪಾರಂಪರ್ಯವಾಗಿ ನೆಡೆಯಲಿ ಎಂದು ಹೇಳಿದಂತೆ ಕೆಲಸ ಬೆಳಿಗ್ಗೆ ನೆರೆವೀರಿಸಿ ಸ್ಥಾಪನೆ ಗೊಳ್ಳುತ್ತಾಳೆ ಹೀಗೆ ಚೌದಿಯು 'ಮೂಡ್ಲನ ಮೇಲಿಂದ ಇಳಿದ ತಕ್ಷಣ ಗ್ರಾಮದೇವತೆಯವರನ್ನು ದರ್ಶನ ಮಾಡಿ ತನ್ನ ಹಿಂದಿನ ಪರಿಸ್ಥಿತಿಯನ್ನೆಲ್ಲ ಹೇಳಿ ನನ್ನ ನಾಮಧೇಯ ದ್ವ್ಯಾಮವ್ವ ಎಂಬ ಚೌಡಿರೂಪಿಣಿ ನನಗೆ ಯಾವ ತರಹದ ಪೂಜೆ, ಪುರಸ್ಕಾರಗಳು ಗುಡಿ ಗೋಪುರಗಳಿಲ್ಲ ಹಾಗೂ ಇಷ್ಟವಿರುವುದಿಲ್ಲ ಕೆಂಪು ವರ್ಣ, ಅರಿಶಿನ, ಕುಂಕುಮ, ರಕ್ತ ಮಾಂಸ ಪ್ರಿಯವಾದ ವಸ್ತುಗಳು ಈ ಹಿಂದೆ ನಾಗಿದ್ದ ಕಾಫಿ ತೋಟವು ಮೆIIಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋಸಲ ಲಂಗನೆ ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೆನ್ನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಭಂದ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ. ನಾನು ಶೈವ ಧರ್ಮದ ತತ್ವ ಸಿದ್ಧಾಂತ ನಿಯಮಗಳನ್ನು ಮೈ ಗೂಡಿಸಿಕೊಂಡು ವೀರಶೈವರಿಂದ ಪೂಜಿಸಿಕೊಳ್ಳುತ್ತಾ ನೆಲೆಯಾಗಿರುತ್ತಾನೆ, ಈ ಗ್ರಾಮದ ದಲಿತ ವರ್ಗದವರು ತಮ್ಮ ಸ್ವಾರ್ಥ, ಅಜ್ಞಾನ, ಮೂಡನಂಬಿಕೆ, ಪ್ರಾಣಿ ಪಕ್ಷಿಗಳ ಬಲಿಯನ್ನು ನನ್ನ ಬನದಲ್ಲಿ ಕೊಡುತ್ತಿರುವ ಸಂಭಂದ ನನಗೆ ಕಳಂಕ ತರುತ್ತಿದ್ದಾರೆ. ಈ ಗ್ರಾಮದಲ್ಲಿನ ಎಲ್ಲ ಜೀವ ರಾಶಿಗಳ ಬಗ್ಗೆ ದಯೆ ಕರುಣೆಯನ್ನು ಹೊಂದಿರುವ ರಕ್ಷಾ ದೇವತೆಯಾಗಿ ಇಲ್ಲಿಗೆ ಬಂದು ನೆಲೆಸಿರುತ್ತೇನೆ ಅಹಿಂಸಾ ಮಾರ್ಗವನ್ನು ಆರಾಧಿಸುತ್ತಿರುವ ಕಾರಣ ಹಿಂಸೆಯ ಪ್ರಾಣಿಗಳ ಬಳಿಯೂ ಇಷ್ಟವಾಗುವುದಿಲ್ಲ ಆದ್ದರಿಂದ ನೀನು ನನ್ನ ಸಹಚಾರಳಾಗಿದ್ದು ನನ್ನ ಎದುರಿನಲ್ಲೇ ಇರಬೇಕು ಈ ಜಾಗದಲ್ಲಿ ನಿನಗೆ ಯಾವುದೇ ವಿಧವಾದ ಹಕ್ಕು ಬಾಧ್ಯತೆಗಳು ಇರುವುದಿಲ್ಲ ಹಾಗೂ ನಿನ್ನ ಇಚ್ಛೆ ಪ್ರಕಾರ ನಿತ್ಯದ ವಾರದ ಪೂಜೆ ಪುರಸ್ಕಾರಗಳಿಗೆ ಅನರ್ಹಳಾಗಿರುತ್ತಿ ಹರಿಜನ ವ್ಯಕ್ತಿಯ ಮುಖಾಂತರ ಇಲ್ಲಿಗೆ ಬಂದಿರುವುದರಿಂದ, ವರ್ಷಕ್ಕೊಮ್ಮೆ ನೆಡೆಯುವ ಬಂಡಿ ಹಬ್ಬದ ದಿನ ಮಾತ್ರ ಮೂಡ್ಲನಿಂದ ಪೂಜಿಸಿಕೊಂಡು ಅವರು ಕೊಡುವ ಪ್ರ್ರಣಿಗಳ ಬಲಿಯನ್ನು ಪೂರ್ಣವಾಗಿ ನೆನೆ ಅನುಭವಿಸು; ಮತ್ತು ನನ್ನ ಆಜ್ನದಾರಕಳಾಗಿದ್ದು ,ಭಕ್ತ ಸಮೂಹಕ್ಕೆ ಯಾವ ವಿಧವಾದ ಕಷ್ಟ ತೊಂದರೆಗಳನ್ನು ಕೊಡದೆ ಎಚ್ಚರಿಕೆಯಿಂದ ನಡೆದು ಕೊಳ್ಳಬೇಕು ನೀನು ಇಲ್ಲಿಗೆ ಬಂದಿದ್ದರಿಂದ ನನಗೆ ಕಳಂಕ ತಪ್ಪಿದೆ ಒಳ್ಳೆಯದೆಯಾಯಿತು ಈ ದ್ವಾರದ ಮುಖಾಂತರ ಗ್ರಾಮಕ್ಕೆ ಯಾವ ಮಾರಿಯೂ ನುಸಳದಂತೆ ಬೆಂಗಾವಲಾಗಿರು ಎಂದು ಹೇಳಿ ನೆಲಸಲು ಒಪ್ಪಿಗೆ ಕೊಟ್ಟು ಪರಿಶಿಷ್ಟರು ಕೊಡುವ ಪ್ರಾಣಿಗಳ ಬಲಿಯನ್ನು ಪೂರ್ಣವಾಗಿ ಸ್ವೀಕರಿಸುವ ಚಿಕ್ಕಮ್ಮ ಎಂಬ ರೂಡಿ ನಾಮದಿಂದ 'ಚೌಡಿಯು' ಶ್ರೀ ಗ್ರಾಮದೇವತೆಯವರ ಎದುರಿನಲ್ಲಿ ನೆಲೆಯಾಗಿದ್ದಾಳೆ ಈಕೆಯ ಸಂಕೇತ ಹೊಳಪಾದ ಗುಂಡುಕಲ್ಲು, ಅರಿಶಿನ ಕುಂಕುಮ, ಲೇಪಿತ ಬಲಭಾಗದಲ್ಲಿ ದ್ವಿಶೂಲ ದೇವಿಯವರು ದ್ವಾಮವ್ವ ಎಂಬ ಚೌಡಿಯನ್ನು ತನ್ನ ಎದುರಿನಲ್ಲೇ ನೆಲೆ ಮಾಡಿದ ಸಂಭಂದ ರಾತ್ರಿಯಿಡೀ ನೆಡೆದ ಸಂವಾದವು 'ಹಲಗೇಗೌಡರ' ಮಗ 'ಶಿವೇಗೌಡರ' ಸ್ವಪ್ನದಲ್ಲಿ ಎಲ್ಲಾ ಆದೇಶಗಳು ಎದುರಿನಲ್ಲಿ ನೆಡದಂತೆ ಕಾಣಿಸಿಕೊಂಡ ವಿಚಾರವನ್ನು ಬೆಳಿಗ್ಗೆ ಭಕ್ತರಿಗೆ ತಿಳಿಸುತ್ತಾರೆ. ಕಲ್ಲು ಚಪ್ಪಡಿಗಳಿಂದ ಮಂಟಪ ಇವುಗಳು ಚಿಕ್ಕಮ್ಮನ ರೂಪಕಗಳು ಹಾಗೂ ಇರುವಿಕೆಗಳು 'ಶ್ರೀ ಗ್ರಾಮದೇವತೆಯು' ನಮ್ಮ ಗ್ರಾಮದ ವಾಸ್ತು ಪ್ರದಾನವಾದ ಅಂದರೆ ಈಶಾನ್ಯ ಮೂಲೆಯಲ್ಲಿ ಪೂರ್ವಾಭಿ ಮುಖವಾಗಿ ನೆಲೆಯಾಗಿರುವುದರಿಂದ ಶಕ್ತಿ, ಯೋಗ, ಕರಣ ಹಾಗೂ ಆರು ಭುಜ ಬಲಗಳು ಇರುವುದರಿಂದ ಅಧಿಕವಾಗಿ ಕರುಣೆಯನ್ನು ಮೈಗೂಡಿಸಿ ಕೊಂಡಿರುತ್ತಾಳೆ ಎದುರಿನಲ್ಲಿ ದೇವಿಯವರ ಅಭಿಷೇಕ ಹಾಗೂ ಪ್ರಾಣಿ ಪಕ್ಷಿಗಳಿಗೆ ಜೀವನಾಧಾರವಾದ ನೀರಿನ ಕೆರೆ ಮೂರು ರಸ್ತೆಗಳು ಕೂಡುವ ಜಾಗದಲ್ಲಿ ಆಯಸ್ಸು ಆರೋಗ್ಯವನ್ನು ಕೊಡುವ ವಿಶಾಲವಾದ 'ಅಶ್ವಥ' ಮರ ಇರುವುದು ಮತ್ತು ಗ್ರಾಮದ ಪ್ರವೇಶ ದ್ವಾರದಲ್ಲಿರುವುದರಿಂದ, ಈ ಕ್ಷೇತ್ರವು ಕ್ಷೇತ್ರವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿರುತ್ತದೆ ತುಂಬಾ ಪುರಾತನದ್ದಾಗಿದ್ದ 'ಅಶ್ವಥ' ಮರವು ಪ್ರಕೃತಿಯ ಒತ್ತಡದಿಂದ ಬಿದ್ದು ಹೋದ ಪ್ರಯುಕ್ತ ಹಾಲಿ ಬೆಳೆದಿರುವ ಮರವನ್ನು ಗ್ರಾಮದ ಮುಖಂಡರು, ದೇವಿಯ ಪರಮ ಭಕ್ತರೂ ಆಗಿದ್ದ 'ಲಿಂII ಬಿ ಯಳ್ಳಪ್ಪನವರು ಆಚಾರವೆಂಬ ಸಸಿಯನ್ನು ನೆಟ್ಟು ಭಕ್ತಿಯೆಂಬ ನೀರನ್ನೆರೆದು ಬೆಳಸಿ ಚಿರಋಣಿಯಾಗಿದ್ದಾರೆ ಈ ಮರದ ಬುಡದ ಸುತ್ತಲೂ ಲಿಂIIಕುಂಟೇಗೌಡ ರುದ್ರಪ್ಪನವರ ಪುತ್ರ ಹಾಗೂ ಲಿಂII ಆರ.ಸಿದ್ದಲಿಂಗಪ್ಪನವರ ಪುತ್ರರು ಆದ ಶ್ರೀ ಹೆಚ್, ಎಸ್, ಶಿವಾನಂದ ಎಂಬ ಭಕ್ತನಿಗೆ ದೇವಿಯವರ ಪ್ರೇರಣೆಯಾಗಿ ಸುಂದರ ಹಾಗೂ ಸುಭದ್ರವಾದ ಅರಳೀ ಕಟ್ಟೆಯನ್ನು ಕಟ್ಟಿಸಿ ಇದ್ದನ್ನು ತ್ರಿವಿಧ ದಾಸೋಹಿಗಳು ನೆಡೆದಾಡುವ ದೇವರು ಎಂಬ ಹೆಗ್ಗಳಿಕೆಗೆ ಅರ್ಹರಾದ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರ ಅಮೃತ ಹಸ್ತದಿಂದ ಪ್ರಾರಂಭೋತ್ಸವ ಮಾಡಿಸಿ ಗ್ರಾಮದ ಭಕ್ತ ಸಾಮೂಹಕ್ಕೆ ಸಮರ್ಪಣೆಮಾಡಿ ಕೀರ್ತಿವಂತರಾಗಿದ್ದಾರೆ ಇದೆ ಭಕ್ತರು ಅರಳಿ ಮರದ ಪಕ್ಕಕ್ಕೆ ಬೇವಿನ ಸಸಿಯನ್ನು ಬೆಳಸಿ ಕಟ್ಟೆಯ ಮೇಲೆ ನಾಗರ ಕಲ್ಲು ಮೂರ್ತಿಗಳನ್ನು ಸ್ಥಾಪನೆ ಮಾಡಿರುವುದರಿಂದ ಗ್ರಾಮದ ಭಕ್ತ ಕನ್ಯಾಮಣಿಯರ ಹಾಗೂ ಶೋಡಶಿಯರ ಮನಸ್ಸಿನ ಹಂಬಲ ಈಡೇರಿಕೆಗಳಿಗೆ ಚೈತನ್ಯ ಮಾಯವಾಗಿರುತ್ತದೆ; ಮತ್ತು ಇದೆ ಕುಟುಂಬಕ್ಕೆ ಸೇರಿದ ಆರ್. ಸಿದ್ಧಪ್ಪ ಮತ್ತು ಅವರ ಪುತ್ರರುಗಳಿಗೆ ದೇವಿಯ ಪ್ರೇರಣೆಯಾಗಿ ಗ್ರಾಮದ ಹೃದಯ ಭಾಗದಲ್ಲಿರುವ 'ಶ್ರೀ ಬಸವೇಶ್ವರ ಸ್ವಾಮಿ' ದೇವಸ್ಥಾನದ ಮುಂಭಾಗದ ಪ್ರಭಾವಳಿಯ ಮೇಲೆ ಸುಂದರವಾದ ಬೃಹತ್ ಗಾತ್ರದ ಬಸವ ವಿಗ್ರಹವನ್ನು ನಿರ್ಮಾಣ ಮಾಡಿ ಅದಕ್ಕೆ ವಿಧಿ, ವಿಧಾನಗಳ ಪ್ರಕಾರ ಕುಲ ಪುರೋಹಿತರಿಂದ ದೈವಕಳೆಯನ್ನು ತುಂಬಿ ಮುಂಗಾರು ಮಳೆಯ ಆಗಮನ ನೈರುತ್ಯ ಮೂಲೆಗೆ ದೃಷ್ಟಿಯನ್ನು ಮಾಡಿ ಈ ಗ್ರಾಮದ ಸುಭಿಕ್ಷತೆಗೆ ನಾಂದಿಯಾಗುವಂತೆ ಸಮಾಜಕ್ಕೆ ಸಮರ್ಪಣೆ ಮಾಡಿರುತ್ತಾರೆ. ಈ ಸಂಭಂದ ದಾನಿಗಳು ಹಾಗೂ ಭಕ್ತ ಮಹನೀಯರುಗಳು ಗ್ರಾಮದ ವೀರಶೈವ ಸಮಾಜವು ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಈ ಎಲ್ಲ ನೈಸರ್ಗಿಕ ಸಂಪತ್ತುಗಳು ದೇವಿಯವರ ಸಮಾಚ್ಚಯದಲ್ಲಿ ಇರುವುದರಿಂದ ಈ ದೇವ ಬನವು ಪಾಪನಾಶಿನಿ ಎಂಬ ಹೆಗ್ಗಳಿಕೆಗೆ ಅರ್ಹವಾಗಿದೆ ಈ ರೀತಿ ಎಲ್ಲ ಶಕ್ತಿಗಳನ್ನು ಮೈಗೂಡಿಸಿಕೊಂಡಿರುವುದರಿಂದ ಹಾಗೂ ಗ್ರಾಮದ ಪ್ರವೇಶ ದ್ವಾರದಲ್ಲಿ ಪೂರ್ವಾಭಿಮುಖವಾಗಿ ನೆಲೆಯಾಗಿರುವ ಸಂಭಂದ ಜನರು ತಮ್ಮ ಕಾರ್ಯಾರ್ಥವಾಗಿ ಹೊರಗಡೆ ಹೋಗುವಾಗ ಮತ್ತು ಗ್ರಾಮದ ಒಳಕ್ಕೆ ಬರುವಾಗ, ದೇವಿಯವರ ದೇವಾಲಯವಿರುವ ಸ್ಥಳಕ್ಕೆ ಬಂದಾಗ ಮನಸ್ಸಿನ ಮೇಲೆ ಚೈತನ್ಯವುಂಟಾಗಿ ಕೂಡಲೇ ಜಾಗೃತರಾಗಿ ಧೃಡ ಮನಸ್ಸಿನಿಂದ ಕೈ ಮುಗಿಯುತ್ತಾರೆ, ಇಲ್ಲವೇ ಎದೆಯ ಮೇಲೆ ಕೈ ಇಟ್ಟು ಮನಸ್ಸಿನೊಳಗೆ ಭಕ್ತಿಯಿಂದ ವಂದಿಸಿ ಹೋಗುತ್ತಿರುವುದರಿಂದ ಹೋದ ಕಾರ್ಯವು ನಿರ್ವಿಘ್ನವಾಗಿ ನೆರೆªÉÃರುವುದರಿಂದ ನಂಬಿಕೆಯು ದಿನೇ ದಿನೇ ಹೆಚ್ಚಾಗುತ್ತಾ ಬಂದಿರುತ್ತದೆ ಒಂದು ವೇಳೆ ಯಾವುದಾದರೂ ಅಜಾಗರೂಕತೆಯಿಂದ ದೇವಿಯ ಸ್ಮರಣೆ ಮಾಡದೆ ಸನ್ನಿಧಿಯನ್ನು ದಾಟಿ ಹೂಡಾಗ ತಮ್ಮ ಕೆಲಸಗಳು ನೆರವೆರದೇ ತೊಂದರೆಗಳು ಕಂಡು ಬಂದಾಗ ಇದ್ದ ಜಾಗದಿಂದಲೇ ದೇವಿಯವರಿಗೆ ಮನಸ್ಸಿನಲ್ಲಿ ಸ್ಮರಿಸಿ, ಹರಿಸಿಕೊಂಡಾಗ ತೊಂದರೆಗಳು ಕೂಡಲೆ ಬಗೆಹರಿದ ಉದಾಹರಣೆಗಳು ಅನೇಕ ಭಕ್ತರಿಗೆ ಸ್ವಂತ ಅನುಭವವಾಗಿರುವುದರಿಂದ ಸಹಜವಾಗಿರುತ್ತದೆ ಇದೆ ರೀತಿಯಲ್ಲಿ ಭಕ್ತರು ತಮ್ಮ ಮನೆಗಳಲ್ಲಿ ಯಾವುದಾದರೂ ದುಷ್ಟ ಮಾರಿಗಳಿಂದ ಕಷ್ಟ, ತೊಂದರೆಗಳು ಒದಗಿ ಬಂದಾಗ ಮೊಸರನ್ನ ಅಥವಾ ಬೆಲ್ಲದ ಅನ್ನದ ತಳಿಗೆಯನ್ನು ಒಪ್ಪಿಸಿ ಸೇವೆ ಮಾಡುತ್ತೇನೆಂದಾಗಲಿ ಬೆಳ್ಳಿಯ ಮುಖವಾಡಗಳನ್ನು ಧರಿಸಿ ಸುಂದರ ರೂಪದ ಸೇವೆ ಮಾಡುತ್ತೇನೆಂದಾಗಲಿ ಅವರವರ ನಂಬಿಕೆಯಂತೆ ಮನೆಯಲ್ಲಿ ಜ್ಯೋತಿ ಹಚ್ಚಿ ಹರಸಿಕೊಂಡಂತಹ ಭಕ್ತರ ಎಲ್ಲ ಕಷ್ಟ ತೊಂದರೆಗಳಿಗೆ ಪರಿಹಾರದ ಅಪ್ಪಣೆಯಾಗುತ್ತಿರುವುದರಿಂದ; ಈ ಸಂಖ್ಯೆಯು ದಿನೇ ದಿನೇ ಬೆಳೆಯುತ್ತಾ ಬಂದಿರುತ್ತದೆ, ದನೂರ್ಮಾಸದ ಪೂಜಾದಿನಗಳಲ್ಲಿ ಗ್ರಾಮದ ಹೆಣ್ಣು ಮಕ್ಕಳು ಉಷಾ ಕಾಲದಲ್ಲಿ ಪಕ್ಕ ಮಡಿಯಿಂದ ದೇವಿಯ ಸನ್ನಿಧಿಗೆ ಬಂದು ಪ್ರದಕ್ಷಣೆ ಮಾಡಿ ಸ್ವ ಹಸ್ತದಿಂದ ಇಚ್ಛಾಪೂಜೆಯನ್ನು ಸಲ್ಲಿಸಿ ಮನೆಯಲ್ಲಿ ಮೀಸಲು ಪದ್ದತಿಯಿಂದ ತಯಾರಿಸಿದ ಪಂಚಾಮೃತ ತಳಿಗೆ ಒಪ್ಪಿಸಿ 'ಈ ಕಾಯವನ್ನು ಹಣ್ಣು ಮಾಡಿ' ಅಂದರೆ ಹಣ್ಣು ಕಾಯಿ ಪರಿಮಳ ಪುಷ್ಪಗಳನೆಲ್ಲ ಅರ್ಪಿಸಿ ನಂತರ ಮುಂಭಾಗದಲ್ಲಿ ಅಶ್ವಥ ಮರಕ್ಕೆ ಪ್ರದಕ್ಷಣೆ ಮಾಡಿ ಅಲ್ಲಿರುವ ನಾಗರಕಲ್ಲಿಗೆ ಹಾಲನ್ನೆರೆದು ಭಕ್ತಿ, ನಂಬಿಕೆಯಿಂದ ಹೆಣ್ಣುಮಕ್ಕಳಿಗೂ, ವನಿತೆಯರಿಗೂ ದೇವಿಯವರು ಬಹಳ ಬೇಗ ಒಲಿದು ಅವರ ಇಷ್ಟಾರ್ಥಗಳನೆಲ್ಲ ನೆರೆವೆರಿಸುತ್ತಿರುವ ಸಂಭಂದ ವಾರದ ದಿನಗಳ ಸಂದ್ಯಾ ಕಾಲದಲ್ಲಿ ದೇವಿಯವರನ್ನು ತಾವೇ ಸ್ವತಃ ಪೂಜಿಸಿ ತೃಪ್ತಿ ಪಡುತ್ತಿರುವ ಪದ್ದತಿಯು ತುಂಬಾ ಸುದ್ದಿಯಾಗುತ್ತಾ ಬಂದಿದೆ ಗ್ರಾಮದೇವತೆಯವರು ದೂರದೃಷ್ಟಿಹಾಗೂ ತುಂಬಾ ತೀಕ್ಷ್ಣ ಸ್ವಭಾವದ ಸಾಕಾರ ತಾಯಿಯಾಗಿರುವ ಕಾರಣ ತನ್ನ ಭಕ್ತರು ಹೊರಗಡೆ ಯಾವ ಊರಿನಲ್ಲಿರಲಿ ಅವರುಗಳಿಗೆ ತೊಂದರೆಗಳು ಎದುರಾದಾಗ ತಮ್ಮ ಮನಸ್ಸಿನಲ್ಲಿ ಧ್ಯಾನಿಸಿ ಅಲ್ಲಿಂದಲೇ ಹರಕೆ ಹೊತ್ತುಕೊಂಡಾಗ ಅವರ ತೊಂದರೆಗಳಿಗೆಲ್ಲ ಪರಿಹಾರದ ಕೃಪೆಯಾಗಿರುವ ಕಾರಣ ಈ ಭಕ್ತರು ಅಷ್ಟೈಶ್ವರ್ಯವಂತರಾಗಿ ಪ್ರಭಾವ ಶಾಲಿಗಳಾಗಿ ಬಾಳುತ್ತ ಇದ್ದಾರೆಂಬುದನ್ನು ಕೆಲವು ಉದಾಹರಣೆಗಳಿಂದ ಪ್ರಸ್ತಾಪಿಸಲು ಆಸಕ್ತಿವುಳ್ಳವನಾಗಿರುತ್ತೇನೆ. ಶ್ರೀ ದೇವಿಯವರ ಆರಾಧಕರಿಗೆ ವೀರಶೈವ ಧರ್ಮದ ತತ್ವ,ಸಿದ್ಧಾಂತ, ಆದರ್ಶಗಳ ಅರಿವಾಗ ತೊಡಗಿದ ಮೇಲೆ ಹಾಗೂ ದೇವಿಯವರ ಅಪ್ಪಣೆಯಾದಂತೆ ಅಜ್ಞಾನ, ಮೂಢತನದಿಂದ ಕೊಡುತ್ತಿದ್ದ ಪ್ರಾಣಿಗಳ ಬಲಿಯನ್ನು ಖಡ್ಡಾಯವಾಗಿ ನಿಲ್ಲಿಸಲಾಯಿತು, ಆದರೆ ಪರಿಶಿಷ್ಟರು ಮಾತ್ರ ಪ್ರಾಣಿಗಳ ಬಲಿಯನ್ನು ಈ ಬನದಲ್ಲಿ ತಮ್ಮ ಸ್ವಾರ್ಥ ಹಾಗೂ ಮೂಡ ನಂಬಿಕೆಯಿಂದ ಕೊಡುತ್ತಾ ಬಂದಿರುತ್ತಾರೆ ಇದನ್ನು ಸಹಚರಳಾದ ದ್ವ್ಯಾಮವ್ವ/ ಚಿಕ್ಕಮ್ಮ ಎಂಬ ಚೌಡಿಯು ಆರ್ಫಿಸಿಕೊಳ್ಳುತ್ತಾ ನೆಲೆಸಿರುತ್ತಾಳೆ. ವೀರಶೈವರಲ್ಲಿ ಅಹಿಂಸಾ ಧರ್ಮದ ಜಾಗೃತಿಯಾದ ನಂತರ ತಮ್ಮ ತೊಂದರೆ ಕಷ್ಟಗಳು ನಿವಾರಣೆಯಾದ ಸಂಧರ್ಭದಲ್ಲಿ ಹರಿಸಿ ಕೊಂಡಿದ್ದಂತೆ ದೇವಿಯವರಿಗೆ ಬೆಳ್ಳಿಯ ಕಣ್ಮಣಿಗಳು, ತಾಮ್ರದ ಬಿಂದಿಗೆ, ಕಂಚಿನ ದೀಪದ ಕಂಬಗಳು, ಬೆಳ್ಳಿಯ ಮುಖವಾಡಗಳು, ಸೀರೆ, ತಳಿಗೆಗಳನ್ನು ಒಪ್ಪಿಸಿ ಸೇವೆ ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ ಬೆಳ್ಳಿಯ ಕಣ್ಮಣಿಗಳು ಅಗತ್ಯಕ್ಕಿಂತ ಹೆಚ್ಚಾಗಿ ಬಂದಿದ್ದರಿಂದ ಎಲ್ಲವನ್ನೂ ಸೇರಿಸಿ ಚಿನ್ನ-ಬೆಳ್ಳಿ ಅಂಗಡಿಗೆ ಕೊಟ್ಟು ಅವುಗಳ ತೂಕಕ್ಕೆ ಪ್ರತಿಮೆಗಳಿಗೆ ಸಧಾ ಧರಿಸುವ ಬೆಳ್ಳಿಯ ಮುಖವಾಡಗಳನ್ನು ಇತ್ತೀಚಿಗೆ ತಂದು ನಿರಂತರವಾಗಿ ಅಲಂಕರಿಸುತ್ತ ಬಂದಿದೆ. ಇದೆ ಗ್ರಾಮದ ನಂಜೇಗೌಡರ 'ಲಿಂII ಬಸಪ್ಪನವರ ಪುತ್ರ ಶ್ರೀ.. ನಾಗರಾಜಪ್ಪ ಇವರ ಪುತ್ರಿ ಶ್ರೀಮತಿ .ರೂಪ ಎಂಬ ಕನ್ಯಾಮಣಿಗೆ ಒದಗಿ ಬಂದಿದ್ದ ತೊಂದರೆಯೂ 'ಶ್ರೀ ದೇವಿಯವರ' ಕೃಪೆಯಿಂದ ನಿವಾರಣೆಯಾಗಿ ಆಕೆಗೆ ಉತ್ತಮ ದಾಂಪತ್ಯ ಜೀವನ, ಸೇವಾಭಾಗ್ಯ ಮತ್ತು ಸುಖ ಜೀವನಕ್ಕೆ ಪ್ರೇರಣೆಯಾಗಿದ್ದಕ್ಕೆ ಹರಕೆಯ ವಸ್ತುವಾಗಿ ಒಂದು ಜೊತೆ ಬೆಲೆಬಾಳುವ ಕಂಚಿನ ದೀಪದ ಕಂಭಗಳನ್ನು ಸನ್ನಿಧಿಗೆ ಒಪ್ಪಿಸಿ ದೇವಿಯ ಆನುಗ್ರಹದಿಂದ ಸುಖ ಸಂತೋಷದಿಂದ ಬಾಳುತ್ತಿದ್ದಾಳೆ; ಹಾಗೂ ದೇವಮಂದಿರಕ್ಕೆ ನೆನಪಿನ ಕಾಣಿಕೆಯಾಗಿ ಜನೋಪೋಯೋಗಿಕೆಲಸನನು ಮಾಡಿಸುವ ಇಚ್ಛೆಯನ್ನು ಹೊಂದಿರುತ್ತಾಳೆ ಇದೆ ಗ್ರಾಮದ ಮತ್ತೊಬ್ಬ ದಾನಿ ಲಿಂIIಸಿದ್ಧವೀರಪ್ಪನವರ ಪುತ್ರಿ ಶ್ರೀ .ಸಿದ್ದಲಿಂಗಪ್ಪನವರ ಪುತ್ರಿ 'ಶ್ರೀಮತಿ ಶಶಿಕಲಾಎಂಬ ಕನ್ಯಾಮಣಿಗೆ ಶ್ರೀ ದೇವಿಯವರ ಕೃಪೆಯಿಂದ ತನ್ನ ತೊಂದರೆ ಪರಿವಾರವಾದ್ದರಿಂದ ಹರಿಸಿಕೊಂಡಿದ್ದಕ್ಕೆ ಅಭಿಷೇಕಕ್ಕೆ ಬಳಸುವ ಒಂದು ತಾಮ್ರದ ಬಿಂದಿಗೆಯನ್ನು ಸನ್ನಿಧಿಗೆ ಒಪ್ಪಿಸಿ ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾಳೆ. ಇದೇ ಗ್ರಾಮದ ನಂಜೇಗೌಡರ ಲಿಂIIಬಸಪ್ಪ ಇವರ ಪೌತ್ರ ಲಿಂII ಚನ್ನವೀರಪ್ಪ ಮತ್ತು ಗೌರಮ್ಮ ಇವರ ವರ ಪುತ್ರ ಕೊಡುಗೆ ದಾನಿ ಕೋಟಿವೀರ ಶ್ರೀ. ಹೆಚ್. ಎಸ್. ಸಿದ್ದಲಿಂಗಪ್ಪ ಉ ಮೂರ್ತಿ ಎಂಬುವವರು ಶ್ರೀ ಗ್ರಾಮದೇವತೆಯನ್ನು ಧೃಡವಾಗಿ ನಂಬಿ ಪರಮ ಭಕ್ತರಾಗಿರುವ ಸಂಭಂದ ತಮ್ಮ ವೃತ್ತಿಯಲ್ಲಿ ತುಂಬಾ ಯಶಸನ್ನು ಕಂಡು ವಿದ್ಯುತ್ ಕೆಲಸಗಳಗುತ್ತಿಗೆಯಲ್ಲಿ ಹಂತಹಂತವಾಗಿ ಅಭಿವೃದ್ಧಿಯನ್ನು ಹೊಂದಿ ಈಗ ಇದೆ ಇಲಾಖೆಯ ಪ್ರಥಮ ದರ್ಜೆಗುತ್ತಿಗೆದಾರರು ಮತ್ತು ವಿದ್ಯುತ್ ಸಲಕರಣೆಗಳ ಅಂಗಡಿ ಶ್ರೀ ಶಿಸಸಾಯಿ ಎಲೆಕ್ಟ್ರಿಕಲ್ ಎಂಟರ್‌ಪ್ರೈಸಸ್; ದಾಸರಹಳ್ಳಿ -ಬೆಂಗಳೂರು ಎಂಬ ಬೃಹತ್ ಸಂಕೀರ್ಣವನ್ನು ಹೊಂದಿರುತ್ತಾರೆ ಈ ಎಲ್ಲ ವ್ಯವಸ್ಥೆಗೆ ಚೈತನ್ಯ ಹಾಗೂ ಕೃಪೆಯಾಗಿದ್ದು 'ಶ್ರೀ ಗ್ರಾಮದೇವತೆಯವರು ಎಂಬುದಾಗಿ ತಮ್ಮ ಭಕ್ತಿಯ ವಾಣಿಯಿಂದ ಸ್ಮರಿಸಿ ತಮ್ಮ ಭಕ್ತಿಯ ಕಾಣಿಕೆಯಾಗಿ 'ಒಂದು ಕೆಜಿ ತೂಕದ ಬೆಳ್ಳಿಯ ಸ್ವಚ್ಛ, ಸುಂದರ ಮುಖವಾಡಗಳನ್ನು ಸನ್ನಿಧಿಗೆ ಒಪ್ಪಿಸಿ ಅವುಗಳಿಗೆ ಪುರೋಜೀತರಿಂದ ಅಭಿಷೇಕ, ಹೋಮ ಸಂಪ್ರದಯಾಯಕ ಪೂಜೆ ಮುಂತಾದ ಪುಣ್ಯವದನ ಕಾರ್ಯವನ್ನು ಮಾಡಿಸಿ ವಿಧಿ, ವಿಧಾನಗಳ ಪ್ರಕಾರ ದೈವ ಶಕ್ತಿಯನ್ನು ತುಂಬಿ ಪ್ರತಿಮೆಗಳಿಗೆ ಧಾರಣೆ ಮಾಡಿ, ಸಾಕ್ಷಾತ್ಕರಿಸುತ್ತಾರೆ. ಈ ವೈವಸ್ಥೆಯಿಂದ ದೇವಿಯವರ ತೇಜಸ್ಸು ಹಾಗೂ ಸುಂದರವಾದ ಮುಖ ದರ್ಶನ ಭಾಗ್ಯ ಭಕ್ತರಿಗೆ ದೊರೆಯುವಂತೆ ರೂಪಗೊಳಿಸುತ್ತಾರೆ, ಇದೇ ಶುಭದಿನದಂದು ತಾ.೨೨-೦೫-೨೦೦೯, ಶುಕ್ರವಾರ ತೇಜೂರು ಸಿದ್ಧರಾಮೇಶ್ವರ ಮಠದ ಶ್ರೀ ಕಲ್ಯಾಣ ಸ್ವಾಮಿಗಳವರ ದಿವ್ಯ ಪಾದ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ, ಈ ಸಂಭಂದ ಎಲ್ಲ ಭಕ್ತಮಂಡಳಿಯವರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ಶ್ರೀ ಗ್ರಾಮದೇವತೆಯವರ ಹಾಗೂ ಗುರು ಹಿರಿಯರ ಶುಭ ಹಾರೈಕೆಗೆ ಅರ್ಹರಾಗಿರುತ್ತಾರೆ ಮತ್ತು ಇದೆ ದಾನಿಯು ದೇವ ಮಂದಿರವನ್ನು ವಿಶಾಲವಾಗಿ, ಸುಂದರವಾಗಿ ಹೊಸದಾಗಿ ನಿರ್ಮಿಸಲು ಮೂರು ಲಕ್ಷ ರೂಪಾಯಿಗಳನ್ನು ದಾನವಾಗಿ ಕೊಡಲು ಭರವಸೆ ಕೊಟ್ಟಿರುತ್ತಾರೆ, ಕಾರಣ ಈ ಭಕ್ತನು ಧಾನಶೂರ ಹಾಗೂ ಗ್ರಾಮದ ಹೆಮ್ಮೆಯ ಪುತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿರುತ್ತಾರೆ; ವೀರಶೈವ ಸಮಾಜವು ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತದೆ; ಇಂತಹ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಬಂದಿರುವ ಕಾರಣ ಭಕ್ತಿಯ ಕಾಣಿಕೆಗಳು ಹೆಚ್ಚಾಗಿ ದೇವರ ಹುಂಡಿಯನ್ನು ಸೇರುವ ಮುನ್ಸೋಚನೆಗಳು ಕಂಡು ಬಂದಿರುತ್ತದೆ.. ಈ ಗ್ರಾಮದ ಹರಿಜನ ಬಾಂದವರು ಸಹ ಶ್ರೀ ದೇವಿಯವರನ್ನು ಭಕ್ತಿ, ನಂಬಿಕೆಗಳಿಂದ ಆರಾಧಿಸುತ್ತಿದ್ದಾರೆ ಅವರೂ ಸಹ ತಮ್ಮ ಕಷ್ಟ ನಿವಾರಣೆಗಾಗಿ ಹರಕೆಗಳನ್ನು ಹೊತ್ತಂತೆ ದೇವಸ್ಥಾನಕ್ಕೆ ಬಣ್ಣ ಹೊಡೆಸುವುದು, ಹಣ್ಣು ಕಾಯಿ, ಕರ್ಪೂರ ಕೊಟ್ಟು ಪೂಜೆ ಮಾಡಿಸುವ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಶ್ರೀ ಉಡಿಶೀಲಮ್ಮ ಅರ್ಧಾತ್ ಗ್ರಾಮದೇವತೆಯವರು ಈ ಗ್ರಾಮದಲ್ಲಿ ನೆಲೆಯಾಗಲು ಮೂಲ ಕಾರಣರಾದ ಶ್ರೀ ಹಲಗೇಗೌಡರ ಸಂತತಿಯವರಲ್ಲಿ ಹಿರಿಯ ಮಕ್ಕಳೇ ಪಾಳೇಪಟ್ಟಿನ ಸರದಿಯಂತೆ ಪೂಜಾ, ವಿಧಿಗಳನ್ನು ಮಾಡಲು ಹಕ್ಕುದಾರರಾಗಿರುತ್ತಾರೆಂಬುದು ಸಾಗಿಬಂದ ವಿಷಯವಾಗಿದೆ; ಇದೆ ಪದ್ದತಿಯಂತೆ ಹತ್ತಾರು ತಲೆಮಾರಿನವರು ಆದಮೇಲೆ ಈಗಿನ ಹಿಂದೆ ಐದನೇ ತಲೆ ಮಾರಿನ ವಂಶಸ್ಥರಾದ ಶ್ರೀ ನಿಂಗೇಗೌಡರ ಕಾಲದಲ್ಲಿ ಈ ಪೂಜಾರಿಕೆ ಪದ್ಧತಿಯು ವಿಕೇಂದ್ರೀಕರಣಗೊಳ್ಳುತ್ತದೆ, ಅಂದರೆ ಹುಟ್ಟಿದ ಎಲ್ಲ ಗಂಡು ಮಕ್ಕಳಿಗೂ ಪೂಜೆಯ ಜವಾಬ್ದಾರಿ ಬರುತ್ತದೆ, ನಿಂಗೇಗೌಡರಿಗೆ ಮೂರು ಜನ ಗಂಡು ಮಕ್ಕಳುಗಳು ಇರುತ್ತಾರೆ ಕ್ರಮವಾಗಿ 'ಶ್ರೀ ಈರೇಗೌಡ, ಸಿದ್ದೇಗೌಡ ಮತ್ತು ಪುಟ್ಟಸ್ವಾಮಿಗೌಡ ಎಲ್ಲರೂ ಅನ್ಯೋನ್ಯವಾಗಿ ಬಾಳುತ್ತಿರುತ್ತಾರೆ ನಿಂಗೇಗೌಡರು ಮೊದಲು ಇಬ್ಬರು ಮಕ್ಕಳಿಗೆ ಮದುವೆ ವಗೈರೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿ ಕೊಂಡಿರುತ್ತಾರೆ' ಆದರೆ ಅನಾರೋಗ್ಯದಿಂದ ಕೆಲವೇ ಸಮಯದಲ್ಲಿ ವಿಧಿ ವಶರಾಗುತ್ತಾರೆ ಆಗ ಸಂಸಾರದ ಜವಾಬ್ದಾರಿಯೂ 'ಈರೇಗೌಡರ' ಮೇಲೆ ಬರುತ್ತದೆ, ಇವರು ಸ್ವಲ್ಪ ಜಡ ಸ್ವಭಾವದವರು ಎಲ್ಲ ಕೆಲಸಗಳನ್ನು ಎರಡನೇ ಸಿದ್ದೇಗೌಡರು ನಿಭಾಯಿಸಿ ಕೊಂಡು ಹೋಗುತ್ತಿರುತ್ತಾರೆ ಆದರೆ ಮೂರನೇ 'ಪುಟ್ಟಸ್ವಾಮಿಗೌಡ' ಧಾರ್ಮಿಕ ವಿಚಾರದಲ್ಲಿ ತುಂಬಾ ಆಸಕ್ತರಾಗಿದ್ದು ಹೊರ ಸಂಚಾರ ಸ್ವಭಾವ ಉಳ್ಳವರು ಮನೆ ಕೆಲಸಗಳ ಬಗ್ಗೆ ಸ್ವಲ್ಪವೂ ಆಸಕ್ತಿ ವಹಿಸುತ್ತಿರಲಿಲ್ಲ ಈ ಪರಿಸ್ಥಿತಿಯಿಂದ ಸಹೋದರರ ಮದ್ಯೆ ಮನಸ್ಥಾಪಗಳು ಹುಟ್ಟಿ ಕೊಳ್ಳುತ್ತವೆ ಕಾರಣ ಆಸ್ತಿಯನ್ನು ವಿಭಾಗ ಮಾಡಿ ಕೊಳ್ಳುವ ವಿರ್ಧಾರಕ್ಕಾಗಿ ಬರುತ್ತಾರೆ ನಿಂಗೆ ಗೌಡರ ಅನುಭವದಲ್ಲಿದ್ದ ಸ್ವಂತ ಆಸ್ತಿ ಹಾಗೂ ದೇವರ ಕೊಡುಗೆ ಜಮೀನುಗಳನ್ನು ಸಮನಾಗಿ ಮೂರು ಭಾಗಗಳನ್ನಾಗಿ ಮಾಡುತ್ತಾರೆ, ಇದರಲ್ಲಿ 'ಸಿದ್ಧೇಗೌಡರು ಮಾತ್ರ ಒಂದು ಭಾಗದ ಆಸ್ತಿಯನ್ನು ವಹಿಸಿಕೊಂಡು ತಮ್ಮ ವ್ಯವಹಾರವನ್ನು ಬೇರೆ ಮಾಡಿಕೊಳ್ಳುತ್ತಾರೆ ಹಾಗೂ ಒಂದು ವರ್ಷ ಕಾಲ ದೇವರ ಪೂಜೆ ಮಾಡಿಕೊಂಡು ಹೋಗಲು ಒಪ್ಪಿಕೊಂಡಿರುತ್ತಾರೆ ಒಂದನೇ ಈರೇಗೌಡ ಮತ್ತು ಮೂರನೇ ಪುಟ್ಟಸ್ವಾಮಿ ಒಟ್ಟಿಗೆ ಇದ್ದುಕೊಂಡು ಎರಡು ಭಾಗ ಆಸ್ತಿ ಮತ್ತು ಎರಡು ವರ್ಷ ದೇವರ ಪೂಜೆ ಮಾಡಲು ಜವಬ್ದಾರರಾಗುತ್ತಾರೆ; ಪುಟ್ಟಸ್ವಾಮಿಯವರು ಅವಿವಾಹಿತರು ಹಾಗೂ ದೈವ ಭಕ್ತಿ ಉಳ್ಳವರು ಪ್ರತಿ ಶುಕ್ರವಾರ ಶ್ರದ್ದಾ ಭಕ್ತಿಯಿಂದ ಗ್ರಾಮದೇವಟೆಯವರ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದ ಸಂಭಂದ ದೈವ ಪ್ರೇರಿತರಾಗಿ ಕೆಲವು ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಹಂಬಲವುಂಟಾಗಿ ಒಂದು ಶುಭದಿನದಂದು; ಅಣ್ಣನವರ ಒಪ್ಪಿಗೆ ಪಡೆದು ಪಡುವಣ ದಿಕ್ಕಿನತ್ತ ಕಾಲುನಡಿಗೆಯಲ್ಲಿ ಹೋರಾಡುತ್ತಾರೆ ದಾರಿ ಮಧ್ಯೆ ಕೆಲವು ಗ್ರಾಮಗಳಲ್ಲಿ ವಾಸ್ತವ ಮಾಡಿ ತಮ್ಮ ನಿತ್ಯದ ಕಾಯಕಗಳನ್ನು ಪ್ರಸಾದದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾ ಹಳೇಬೀಡು, ಬೇಲೂರು ದರ್ಶನ ಮಾಡಿಕೊಂಡು ಚಿಕ್ಕಮಗಳೂರಿಗೆ ತಲುಪುತ್ತಾರೆ, ಇಲ್ಲಿ ಆಯಾಸ ಪರಿಹರಿಸಿಕೊಂಡು ಇಲ್ಲಿನ ಪುರಜನರ ಸಹಕಾರದಿಂದ ಆರು ಮೈಲಿ ದೂರದಲ್ಲಿರುವ ಶ್ರೀ ನಿರ್ಮಾಣಸ್ವಾಮಿ ಮಠ ಇರುವುದನ್ನು ತಿಳಿದು ಅಲ್ಲಿಗೆ ಪ್ರಯಾಣ ಬೆಳೆಸುತ್ತಾರೆ ಮುಸ್ಸಂಜೆ ವೇಳೆಗೆ ಮಠಕ್ಕೆ ಬಂದು ತಲುಪುತ್ತಾರೆ, ಶ್ರೀ ಮಠದ ಗುರುಗಳನ್ನು ದರ್ಶನ ಮಾಡಿ ತಮ್ಮ ಪರಿಚಯ ಮಾಡಿಕೊಂಡು ಆಶ್ರಯವನ್ನು ಪಡೆಯುತ್ತಾರೆ ನಂತರ ಶಿವ ಪೂಜೆ ಪ್ರಸಾದವಾದ ಮೇಲೆ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ ಮರುದಿನ ಮುಂಜಾನೆ ಎದ್ದು ಶ್ರೀಗಳವರ ಸಲಹೆಯಂತೆ ಸ್ನಾನ, ಪೂಜಾ ವ್ಯವಸ್ಥೆಗಳನ್ನೆಲ್ಲ ಮಾಡಿ ಕೊಡಲೇ ತಮ್ಮ ಸ್ನಾನ ಪೂಜೆ ಮುಗಿಸಿ ಪ್ರಸಾದದ ಸಿದ್ಧತೆಗೆ ತೊಡಗುತ್ತಾರೆ; ಗುರುಗಳವರ ಸ್ನಾನ, ಪೂಜೆ ಮುಗಿಯುವುದರೊರಳಗೆ ಪ್ರಸಾದ ಸಿದ್ಧವಾಗುತ್ತದೆ ಮೊದಲು ಗುರುಗಳಿಗೆ ಲಿಂಗಾರ್ಪಿತವಾದಾನಂತರ ತಾವು ಪ್ರಸಾದ ತೆಗೆದುಕೊಳ್ಳುತ್ತಾರೆ, ಈ ದಿನ ವ್ಯವಸ್ಥೆಯೊಂದ ಗುರುಗಳವರಿಗೆ ಅನುಕೂಲವಾಗಿರುತ್ತದೆ ಕಾರಣ ಮಠದ ಶಿಷ್ಯನಾಗಿ ಕೆಲವುದಿನ ಸೇವೆ ಮಾಡಿ ಕೊಂಡಿರಲು ಆದೇಶಿಸುತ್ತಾರೆ ಇಲ್ಲಿ ಪರಿಸರ, ಪ್ರಕೃತಿ, ಸೌಂದರ್ಯ, ಗುರುಗಳ ಶಿವಪೂಜಾವಿಧಾನ ಶಿಷ್ಯನನ್ನು ಪ್ರಭಾವಿತನನ್ನಾಗಿ ಮಾಡುತ್ತದೆ; ಈತನ ಸೇವೆಯನ್ನು ಗುರುಗಳು ಬಹಳ ಮೆಚ್ಚಿಕೊಂಡಿದ್ದರು, ಇಲ್ಲಿದ್ದ ಕೆಲವು ವರ್ಷಗಳಲ್ಲಿ ಹತ್ತಿರವಿರುವ ಪಂಚಪೀಠಗಳೊಲ್ಲೊಂದಾದ 'ಶ್ರೀ ರಂಭಾಪುರಿ' ಮಠವನ್ನು ದರ್ಶನ ಮಾಡಿ ಬರಬೇಕೆಂದು ಆಕಾಂಕ್ಷೆಯಾಗುತ್ತದೆ; ಗುರುಗಳವರಿಂದ ದಾರಿಯನ್ನು ತಿಳಿದು ಅಪ್ಪಣೆಪಡೆದು ಒಂದು ಶುಭ ದಿನ ಉದಯ ಕಾಲದಲ್ಲಿ ಹೊರಟು; ಇಲ್ಲಿಗೆ ೩೫ ಮೈಲಿ ದೂರದಲ್ಲಿರುವ ಬಾಳೆಹೊನ್ನೂರನ್ನು ಅಪರಾನ ೩ ಘಂಟೆಗೆ ತಲುಪಿ ಗುರುಗಳವಾರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಯಾಸ ಪರಿಹಾರಕ್ಕಾಗಿ ಕೆಲವು ದಿನ ಅಲ್ಲಿದ್ದು ವೀರಶೈವ ಧರ್ಮದ ತತ್ವ, ಸಿದ್ಧಾಂತ, ಶಿವಪೂಜಾ ವಿಧಾನಗಳನ್ನು ಕರಗತ ಮಾಡಿಕೊಂಡು, ಪುನಃ ಅಲ್ಲಿಂದ ಹೊರತು 'ಶ್ರೀ ನಿರ್ವಾಣ'ಸ್ವಾಮಿ ಮಠಕ್ಕೆ ಬಂದು ಅಲ್ಲಿ ಶಿಷ್ಯನಾಗಿ ತಮ್ಮ ಇಳಿವಯಸ್ಸಿನವರಿಗೂ ಸೇವೆ ಮಾಡಿ ಸ್ವಾಮಿಗಳ ಪ್ರೇರಣೆಯಂತೆ ವಿರಕ್ತಾಶ್ರಮ ಧರ್ಮವನ್ನು ಸ್ವೀಕರಿಸಿ ಅಲ್ಲಿಂದ ಬಂದು ಶಿವಲಿಂಗವನ್ನು ತೆಗೆದುಕೊಂಡು ತಾಯ್ನಾಡಿಗೆ ವಾಪಸ್ಸು ಬರುತ್ತಾರೆ ಇಲ್ಲಿಗೆ ಬಂದು ಹಿರಿಯ ಅಣ್ಣನವರಾದ ಈರೇಗೌಡರ ಜೊತೆಗೆ ಸೇರಿಕೊಂಡು ಮನೆಯಲ್ಲಿ 'ಶ್ರೀ ನೀರ್ವಾಣ' ಸ್ವಾಮಿಯವರ ಗದ್ದುಗೆಯನ್ನು ಮಾಡಿ ಮಠದಿಂದ ತಂದಿದ್ದ ನೀರ್ವಾಣ ಸ್ವ್ವಾಮಿ ಹೆಸರಿನ 'ಲಿಂಗವನ್ನು ಸ್ಥಾಪನೆ ಮಾಡಿ ನಿತ್ಯವೂ ಧೃಡ ಭಕ್ತಿಯಿಂದ ಪೂಜೆಯನ್ನು ಮಾಡುತ್ತಾ ವಾರದ ದಿನಗಳಲ್ಲಿ 'ಶ್ರೀ ಗ್ರಾಮದೇವತೆಯನ್ನು' ಪೂಜಿಸುತ್ತಾ ವೈರಾಗಿಯಾಗಿ ಜೀವನವನ್ನು ಕಳೆಯುತ್ತಿರುತ್ತಾರೆ ಹೀಗಿದ್ದಾಗ ಕೆಲವು ವರ್ಷಗಳು ಕಳೆದ ಮೇಲೆ ತಮ್ಮ ಮುಕ್ತಿ ಮಾರ್ಗದ ಅಂತಿಮ ಗೀತೆಯನ್ನು ಹಾಡಿ 'ಲಿಂಗೈಕ್ಯರಾಗುತ್ತಾರೆ'; ನಂತರ ಇವರ ಅಂತಿಮ ವಿಧಿ ವಿಧಾನಗಳೆಲ್ಲಾ 'ಈರೇಗೌಡರೆ' ನಿರ್ವಹಿಸಿದ ಕಾರಣ ಎರಡು ಭಾಗದ ಆಸ್ತಿ ಮತ್ತು ಎರಡು ವರ್ಷಗಳ ದೇವರ ಪೂಜೆಗೆ ಜವಬ್ದಾರರಾಗುತ್ತಾರೆ ಈ ಸಂಭಂದ ಈರೇಗೌಡರ ಮನೆಯಲ್ಲಿ 'ಶ್ರೀ ನೀರ್ವಾಣ'ಸ್ವಾಮಿಯವರ ಮೂರ್ತಿ ಇದ್ದದ್ದು ಸತ್ಯ ಸಂಗತಿಯಾಗಿದೆ. ಶ್ರೀ ಗ್ರಾಮದೇವತೆಯನ್ನು ಈ ಗ್ರಾಮದಲ್ಲಿ ನೆಲೆ ಮಾಡಲು ಕಾರಣರಾಗಿದ್ದ 'ಹಲಗೇಗೌಡರ' ಹಕ್ಕು ಭದ್ಯತೆಗೆ ಸೇರಿದ ದೇವರ ಕೊಡುಗೆ ಜಾಮೀನು ಸರೈನಂ: 23/6 ಅಲ್ಲಿ ಒಟ್ಟೂ 1-16 ಎಕರೆ ಋಷ್ಕಿ ಇದರ ಪೈಕಿ ಪೂರ್ವ ಭಾಗಕ್ಕೆ 16 ಗುಂಟೆಯನ್ನು ದೇವರ ಬನಕ್ಕಾಗಿ ಕಾಯ್ದಿರಿಸಲಾಯಿತು ಉಳಿದ 1-00 ಎಕರೆಯನ್ನು ಇವರ ವಂಶಸ್ತರು ಮೂರು ಭಾಗಗಳಾಗಿ ವಿಂಗಡಿಸಿ ತಮ್ಮ ಮೂರು ಮಕ್ಕಳಿಗೆ ತಲಾ 13 ವರೆ ಗುಂಟೆಯಂತೆ ಹಂಚಿಕೆ ಮಾಡಿದರು ಈರೇಗೌಡರಿಗೆ 2 ಭಾಗದ ಒಟ್ಟೂ 27 ಗುಂಟೆ ಸೇರುತ್ತದೆ, ಈಗ ಅವರ ಪೀಳಿಗೆಯವರಾಗಿರುವ HS. ಸಿದ್ದಲಿಂಗಪ್ಪ ಬಿನ್ ಸಿದ್ದವೀರಪ್ಪ ಇವರಿಗೆ 7ಗುಂಟೆ ಜಮೀನು 6 ತಿಂಗಳ ಕಾಲ ದೇವರ ಪೂಜೆ HS. ಚಂದ್ರಪ್ಪ ಬಿನ್ ಸಿದ್ದಲಿಂಗಪ್ಪ ಉ. ಪುಟ್ಟಸ್ವಾಮಿ ಇವರಿಗೆ 7 ಗುಂಟೆ ಜಮೀನು 6 ತಿಂಗಳ ದೇವರ ಪೂಜೆ; HS. ಬಸವರಾಜಪ್ಪ ಉ ರಾಜ ಇವರಿಗೆ 6 ವರೆ ಗುಂಟೆ ಜಮೀನು 6 ತಿಂಗಳ ಪೂಜೆ ಮತ್ತು HV ಸಿದ್ದಲಿಂಗಪ್ಪ ಬಿನ್ ವೀರಣ್ಣ ಇವರ ಮಗ 'ಅಣ್ಣಪ್ಪ'ನಿಗೆ 6 ವರೆ ಗುಂಟೆ ಜಮೀನು 6 ತಿಂಗಳ ದೇವರ ಪೂಜೆ ಈ ವ್ಯವಸ್ಥೆಯನ್ನು ಸಹೋದರರ ಮದ್ಯೆ ಮಾಡಿಕೊಂಡಿರುವ ಒಳ ಒಪ್ಪಂದದಂತೆ ನೆಡೆದುಕೊಂಡು ಹೋಗುತ್ತಿದ್ದಾರೆ ಎರಡನೇ ಸಹೋದರರಾದ 'ಶ್ರೀ ಸಿದ್ದೇಗೌಡರ' ಪೀಳಿಗೆಯ ಶ್ರೀ HV ಸಿದ್ಧಲಿಂಗಪ್ಪ ಉ ಸ್ವಾಮಿ ಇವರಿಗೆ ೩ವರೆ ಜಮೀನು ೩ ತಿಂಗಳು ದೇವರ ಪೂಜೆ HB ಸಿದ್ದಲಿಂಗಪ್ಪ ಉ ಉದ್ದಾರಣ್ಣ ಬಿನ್ ಸಿದ್ದವೀರಪ್ಪ ಇವರಿಗೆ 3 ವರೆ ಗುಂಟೆ ಜಮೀನು 3 ತಿಂಗಳು ದೇವರ ಪೂಜೆ; ಬಿ. ಬಸಪ್ಪ a/ss ಸಿದ್ದಲಿಂಗಪ್ಪ ಇವರಿಗೆ 3 ಗುಂಟೆ ಜಮೀನು 3 ತಿಂಗಳ ದೇವರ ಸೇವೆ; ಈ ಕ್ರಮದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಅನುಸಾರವಾಗಿ ಹಾಲಿ 8 ಕುಟುಂಬದವರು ದೇವರ ಪೂಜೆಯನ್ನು ಪ್ರತಿ ಶುಕ್ರವಾರ ಸ್ವಲ್ಪವೂ ಚ್ಯುತಿಯಾಗದಂತೆ; ತಮ್ಮ ವಂಶ ಪಾರಂಪರ್ಯವಾಗಿ ನೆಡೆಸಲು ಒಪ್ಪಿಕೊಂಡಿರುವಂತೆ ಇಂದಿನ ದಿನಗಳವರೆಗೂ ಸಾರೋದ್ದಾರವಾಗಿ ನೆರವೇರುತ್ತಾ ಬಂದಿದೆ........................................... ಇದನ್ನು ಬರೆದವರು ಬಿ. ಬಸಪ್ಪ ಮತ್ತು ಅಂತರ್ಜಾಲಕ್ಕೆ ಹಾಕಿದವರು ಚೇತನ್. ಎಸ್ ಹೆಚ್ಚಿನ ಮಾಹಿತಿಗಾಗಿ:9448220251

This article "Hirebelaguli History" is from Wikipedia. The list of its authors can be seen in its historical. Articles copied from Draft Namespace on Wikipedia could be seen on the Draft Namespace of Wikipedia and not main one.